'ಹೆಬ್ಬಾಳ್ಕರ್‌ ಲಿಂಗಾಯತ ಲೀಡರ್ ಅಂತಾ ಹೇಳೋ ಅವಶ್ಯಕತೆ ಇದೆಯಾ? ಸಂತೋಷ ಲಾಡ್ ಯಾಕೆ ಹಿಂಗಂದ್ರು!

By Ravi JanekalFirst Published Sep 24, 2023, 6:35 PM IST
Highlights

ಮುಂಬರುವ ಲೋಕಸಭಾ ಚುನಾವಣೆಗೆ ನಾನು ಧಾರವಾಡ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ವಿನಯ ಕುಲಕರ್ಣಿ ಸಹೋದರ ವಿಜಯ ಕುಲಕರ್ಣಿ ಹೇಳಿದರು.

ಧಾರವಾಡ (ಸೆ.24): ಮುಂಬರುವ ಲೋಕಸಭಾ ಚುನಾವಣೆಗೆ ನಾನು ಧಾರವಾಡ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ವಿನಯ ಕುಲಕರ್ಣಿ ಸಹೋದರ ವಿಜಯ ಕುಲಕರ್ಣಿ ಹೇಳಿದರು.

ಇಂದು ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಾನು ಕಳೆದ ಮೂವತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ದುಡಿದಿದ್ದೇನೆ. ಹಿಂದೆ ವಿದ್ಯಾರ್ಥಿ ಕಾಂಗ್ರೆಸ್ ನಿಂದ ರಾಜ್ಯ ಉಪಾದ್ಯಕ್ಷನಾಗಿದ್ದೆ, ಯೂಥ್ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿಯಾಗಿದ್ದೆ, ಈಗ ಕೆಪಿಸಿಸಿ ಸದಸ್ಯನಾಗಿದ್ದೇನೆ. ಹೀಗಾಗಿ ನನಗೆ ಲೋಕಸಭಾ ಚುನಾವಣೆಗೆ ಟಿಕೆಟ್ ಸಿಗಲಿದೆ ಎಂದು ನಂಬಿದ್ದೇನೆ. ನಾನು ಪಕ್ಷಕ್ಕಾಗಿ ದುಡಿದಿದ್ದೇನೆ ಹೀಗಾಗಿ ಕೈ ಕಮಾಂಡ್ ಬಳಿ ನಾನು ಟಿಕೆಟ್ ಕೇಳುತ್ತೇನೆ. ಮೊದಲಿಂದಲೂ ನಾನು ಚುನಾವಣೆಗೆ ಸ್ಪರ್ಧಿಸಲು ಪ್ರಯತ್ನಿಸುತ್ತಿದ್ದೇನೆ. ಪ್ರಯತ್ನಿಸುತ್ತಿದ್ದೇನೆ. ನನಗೆ ಈ ಬಾರಿ ಟಿಕೆಟ್ ಸಿಗುವ ನಿರೀಕ್ಷೆಯಿದೆ ಎಂದರು.

Latest Videos

ಲೋಕಸಭಾ ಚುನಾವಣೆ: ಧಾರವಾಡ ಹಿಂದು ಮತಗಳನ್ನು ಸೆಳೆಯಲು ಕಾಂಗ್ರೆಸ್ ಮಾಸ್ಟರ್ ಪ್ಲಾನ್!

ಧಾರವಾಡದದಲ್ಲಿ ಲಿಂಗಾಯತ ಮತಗಳು ಹೆಚ್ಚು ಇರುವ ಹಿನ್ನಲೆಯಲ್ಲಿ ಲಕ್ಷ್ಮಿ ಹೆಬ್ಬಾಳಕರ್ ಅವರ ವೀಕ್ಷಕರಾಗಿ ಆಯ್ಕೆ ಆಗಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ. ಚುನಾವಣೆ ವಿಚಾರವಾಗಿ ಈಗಾಗಲೇ ಹಲವು ಸಭೆಗಳು ನಡೆದಿವೆ. ಅಂತಿಮವಾಗಿ ಹೆಬ್ಬಾಳ್ಕರ್ ಅವರು ಸಭೆ ನಡೆಸುವ ಮೂಲಕ ಯಾರು ಸ್ಪರ್ಧಿಸಲಿದ್ದಾರೆ ಎಂಬುದು ನಿರ್ಧಾರವಾಗಲಿದೆ ಎಂದರು. 

ನಮಗೂ ಬೀದರ್ ಉಸ್ತುವಾರಿ ನೀಡಿದ್ದಾರೆ: ಸಂತೋಷ ಲಾಡ್

ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಲೋಕಸಭಾ ಚುನಾವಣೆಗೆ ಧಾರವಾಡ ಕಾಂಗ್ರೆಸ್ ವೀಕ್ಷಕರನ್ನಾಗಿ ಹೈಕಮಾಂಡ್ ನೇಮಕಗೊಂಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು,  ನಮಗೂ ಬೀದರ್ ಉಸ್ತುವಾರಿ ನೀಡಿದ್ದಾರೆ.  ಲಕ್ಷ್ಮಿ ಹೆಬ್ಬಾಳಕರ್ ಅವರು ಲಿಂಗಾಯತ ಲಿಡರ್ ಎಂದು ಹೇಳುವ ಅವಶ್ಯಕತೆ ಇದೆಯಾ? ಆ ಶಬ್ದ ಯಾಕೆ ಈಗ ಕೇಳ್ತಿದ್ದೀರಿ ಎಂದು ಪ್ರಶ್ನಿಸಿದರು. ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯತ ಮತಗಳು ಹೆಚ್ಚಳವಾಗಿವೆ.ಈ ಹಿನ್ನಲೆಯಲ್ಲಿ ಅವರನ್ನ‌ ಆಯ್ಕೆ ಮಾಡಿರಬಹುದು. 

2024ರ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಪಣ: ವಿಪಕ್ಷ ಸಭೆ ಮುಂದೂಡಿಕೆ

 ಅವರು ಸ್ಥಳಿಯ ಕಾಂಗ್ರೆಸ್ ಮುಖಂಡರುಗಳ ಜೊತೆ ಸಭೆ ಮಾಡಿ ಲೋಕಸಭಾ ಚುನಾವಣೆಗೆ ಯಾರು ಸ್ಪರ್ಧಿಸಬೇಕು ಎಂಬುದು ಗೊತ್ತಾಗುತ್ತದೆ. ಈಗಾಗಲೇ ಲೋಕಸಭಾ ಚುನಾವಣೆಗೆ ಶೀವಲೀಲಾ ಕುಲಕರ್ಣಿ,ವಿಜಯ ಕುಲಕರ್ಣಿ, ವಿನೋದ ಅಸೋಟಿ,ಜಗದೀಶ್ ಶೆಟ್ಡರ್ ಹೆಸರು ಕೇಳಿಬರುತ್ತಿವೆ. ಆದರೆ ಆ ಬಗ್ಗೆ ಈಗಲೇ ಏನು ಹೇಳಲು ಆಗಲ್ಲ. ಧಾರವಾಡಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಬರ್ತಾರೆ. ಅವರು ಸಭೆ ಮಾಡ್ತಾರೆ. ಬಳಿಕ ಒಂದು ಹೆಸರು ಹೇಳ್ತಾರೆ. ಆ ಹೆಸರು ಹೈಕಮಾಂಡಗೆ ಕೊಡ್ತಾರೆ. ಆಗ ಯಾರು ಸ್ಪರ್ಧಿಸ್ತಾರೆ ಎಂಬುದು ಗೊತ್ತಾಗುತ್ತೆ ಮುಂದೆ ನೋಡೋಣ ಎಂದರು. 

click me!