ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಜಿಲ್ಲೆಯಲ್ಲಿ ಚುನಾವಣಾ ಕಾವು ದಿನದಿನಕ್ಕೆ ಏರಿಕೆಯಾಗ್ತಿದೆ. ಈ ಬಾರಿ ಧಾರವಾಡದಲ್ಲಿ ಸಂಸದ ಪ್ರಲ್ಹಾದ್ ಜೋಶಿಯವರನ್ನು ಸೋಲಿಸಲೇಬೇಕೆಂದು ಪಣತೊಟ್ಟಿರುವ ಕಾಂಗ್ರೆಸ್ ಅದಕ್ಕಾಗಿ ಸಭೆ ಮೇಲೆ ಸಭೆ ನಡೆಸಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸುತ್ತಿದೆ.
ಧಾರವಾಡ (ಸೆ.24): ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಜಿಲ್ಲೆಯಲ್ಲಿ ಚುನಾವಣಾ ಕಾವು ದಿನದಿನಕ್ಕೆ ಏರಿಕೆಯಾಗ್ತಿದೆ. ಈ ಬಾರಿ ಧಾರವಾಡದಲ್ಲಿ ಸಂಸದ ಪ್ರಲ್ಹಾದ್ ಜೋಶಿಯವರನ್ನು ಸೋಲಿಸಲೇಬೇಕೆಂದು ಪಣತೊಟ್ಟಿರುವ ಕಾಂಗ್ರೆಸ್ ಅದಕ್ಕಾಗಿ ಸಭೆ ಮೇಲೆ ಸಭೆ ನಡೆಸಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸುತ್ತಿದೆ.
2024ರ ಲೋಕಸಭಾ ಚುನಾವಣೆಗೆ ಜಿಲ್ಲೆಯಲ್ಲಿ ಈಗಿನಿಂದ ರಾಜಕೀಯ ಚಟುವಟಿಕೆ ಚುರುಕುಗೊಂಡಿದ್ದು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿರುದ್ಧ ಯಾರು ಸ್ಪರ್ಧಿಸಬೇಕು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವವರ ಪಟ್ಟಿಯೂ ಬೆಳೆಯುತ್ತಲೇ ಇದೆ.
2024ರ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಪಣ: ವಿಪಕ್ಷ ಸಭೆ ಮುಂದೂಡಿಕೆ
ಇಂದು ಧಾರವಾಡ ಸರ್ಕಿಟ್ ಹೌಸ್ ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸಭೆ ನಡೆಸಿದರು. ಸಭೆಯಲ್ಲಿ ಶಾಸಕ ಎನ್ ಎಚ್ ಕೋನರೆಡ್ಡಿ, ವಿಜಯ ಕುಲಕರ್ಣಿ, ಮೋಹನ್ ನಿಂಬಿಕಾಯಿ,ದೀಪಕ್ ಚಿಂಚೋರೆ ಸಭೆಯಲ್ಲಿ ಭಾಗಿ.
ಈ ಬಾರಿ ಧಾರವಾಡ ಜಿಲ್ಲೆಯ ಹಿಂದು ಮತಗಳನ್ನು ಸೆಳೆಯಲು ಪ್ಲಾನ್ ಮಾಡಿರುವ ಕಾಂಗ್ರೆಸ್ ಪಕ್ಷ ಅದಕ್ಕಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಜಿಲ್ಲೆ ವೀಕ್ಷಕರನ್ನಾಗಿ ನೇಮಕ ಮಾಡಿದೆ. ಇನ್ನೊಂದೆಡೆ ಬಿಜೆಪಿ ಮುಖಂಡರನ್ನು ಸೆಳೆಯಲು ಕೂಡ ಪ್ಲಾನ್ ಸಿದ್ಧಪಡಿಸಿಕೊಂಡಿದೆ.
ಪ್ರಲ್ಹಾದ್ ಜೋಶಿ ವಿರುದ್ಧ ಯಾರು?
ಧಾರವಾಡ ಜಿಲ್ಲೆಯಲ್ಲಿ ಈ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವವರ ಪಟ್ಟಿ ದೊಡ್ಡದಾಗೆ ಇದೆ. ಆದರೆ ಪ್ರಲ್ಹಾದ್ ಜೋಶಿ ವಿರುದ್ಧ ಯಾರು ಸ್ಪರ್ಧಿಸಲಿದ್ದಾರೆ ಎಂಬ ಬಗ್ಗೆ ಇನ್ನೂ ರಹಸ್ಯವಾಗಿದೆ. ವಿಜಯ ಕುಲಕರ್ಣಿ, ಶಿವಲಿಲಾ ಕುಲಣಕರ್ಣಿ, ಜಗದೀಶ ಶೆಟ್ಡರ್ ವಿನೋದ್ ಅಸೋಟಿ ಮುಂತಾದವರು ರೇಸ್ ನಲ್ಲಿರುವ ಅಭ್ಯರ್ಥಿಗಳು. ಆದರೆ ಸಂಸದ ಪ್ರಹ್ಲಾದ ಜೋಶಿ ವಿರುದ್ದ ಮಹಿಳೆಯನ್ನ ಕಣಕ್ಕೆ ಇಳಿಸುವ ಪ್ಲಾನ್ ಮಾಡಿರುವ ಕಾಂಗ್ರೆಸ್ ಸರ್ಕಾರ? ಈ ಬಾರಿ ಶಾಸಕ ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿಯವರನ್ನ ಕಣಕ್ಕಿಳಿಸುವ ಲೆಕ್ಕಾಚಾರವೂ ನಡೆದಿದೆ. ಹೀಗಾಗಿ ಧಾರವಾಡ ಜಿಲ್ಲೆಯಲ್ಲಿ ಪುಲ್ ಆಕ್ಟಿವ್ ಆಗಿರುವ ಶಿವಲೀಲಾಕ ಕುಲಕರ್ಣಿ.
ಇಂದಿನ ಸಭೆಗೆ ಆಗಮಿಸಿದ್ದ ವಿನಯ ಕುಲಕರ್ಣಿ ಸಹೋದರ ವಿಜಯ ಕುಲಕರ್ಣಿ. ಸದ್ಯ ಧಾರವಾಡ ಜಿಲ್ಲೆಯಲ್ಲಿ ಲಿಂಗಾಯತ ಮತಗಳು ಹೆಚ್ಚಳ ಇರುವ ಹಿನ್ನಲೆ ಪ್ರಭಾವಿ ಅಭ್ಯರ್ಥಿಯನ್ನ ಕಣಕ್ಕೆ ಇಳಿಸಲು ಸಜ್ಜಾದ ಕಾಂಗ್ರೆಸ್ ಹೈಕಮಾಂಡ್.
ರಾಜ್ಯ ಸರ್ಕಾರಕ್ಕೆ ಹಿಂದೂ ಚಟುವಟಿಕೆ, ಕಾರ್ಯಕರ್ತರೇ ಟಾರ್ಗೆಟ್: ಜೋಶಿ ಕಿಡಿ
ಲೋಕಸಭಾ ಚುನಾವಣೆ: ಶಾಸಕ ಎನ್ ಎಚ್ ಕೋನರೆಡ್ಡಿ ಹೇಳಿಕೆ
ಇಂದಿನ ಸಭೆಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಟಿಕೆಟ್ ಬಗ್ಗೆ ಚರ್ಚೆ ಆಗಿದೆ. ಲಕ್ಷ್ಮಿಹೆಬ್ಬಾಳಕರ್ ಅವರನ್ನ ವಿಕ್ಷಕರಾಗಿ ಆಯ್ಕೆ ಮಾಡಲಾಗಿದೆ. ಲೋಕಸಭಾ ಚುನಾವಣೆ ತಯಾರಿ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರೊಂದಿಗೆ ಸರ್ಕಿಟ್ ಹೌಸನಲ್ಲಿ ಸಭೆ ಮಾಡಿದ್ದೆವೆ. ಇದಕ್ಕೆ ಪೂರಕವಾಗಿ ದೇಶಕ್ಕೆ ರಾಹುಲ್ ಗಾಂಧಿ ಅವರನ್ನ ಪ್ರಧಾನಿ ಮಾಡಲಾಗುತ್ತೆ. ದೊಡ್ಡ ದಾಪುಗಾಲು ಹಾಕಲು ತಿರ್ಮಾನ ಮಾಡಿದ್ದೇವೆ.ನಾವು ಯುದ್ಧ ಮಾಡಲಿಕ್ಕೆ ಹೊಂಟೇವಿ. ಈಗಾಗಲೇ ಐದು ಜನ ಅಭ್ಯರ್ಥಿಗಳ ಮಧ್ಯೆ ಪೈಪೋಟಿ ಇದೆ. ಯಾರು ಸ್ಪರ್ಧಿಸಬೇಕು ಎಂಬುದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತೆ. ಹೆಬ್ಬಾಳಕರ್ ಅವರು ಬಂದು ಸಭೆ ಮಾಡುತ್ತಾರೆ. ಆ ಬಳಿಕ ಅಭ್ಯರ್ಥಿ ಯಾರು ಎಂಬುದು ಗೊತ್ತಾಗುತ್ತೆ ಎಂದರು.