ಮಾತಾಡುವ ಹಕ್ಕಿರೋದು ರಾಜಕಾರಣಿಗಳಿಗೆ ಮಾತ್ರವಾ?; 'ಪುಡಿ ರಾಜಕಾರಣಿ' ಎಂದ ಬಿಕೆ ಹರಿಪ್ರಸಾದ್ ವಿರುದ್ಧ ಪೇಜಾವರಶ್ರೀ ವಾಗ್ದಾಳಿ

By Ravi JanekalFirst Published Oct 27, 2024, 3:58 PM IST
Highlights

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಬ್ಬ ಮಾಠಾಧಿಪತಿಗೆ ಅಂತಲ್ಲ, ಸಾಮಾನ್ಯ ಪ್ರಜೆಗೂ ಮಾತಾಡುವ ಹಕ್ಕಿದೆ,  ಕಾವಿ ತೆಗೆದಿಟ್ಟು ಬಂದರೆ ಉತ್ತರ ಕೊಡ್ತೇನೆ ಅನ್ನೋದರ ಅರ್ಥವೇನು? ಸಮಾಜದಲ್ಲಿ ಮಾತನಾಡುವ ಹಕ್ಕಿರೋದು ಕೆಲವು ರಾಜಕಾರಣಿಗಳಿಗೆ ಮಾತ್ರವಾ? ಬಿಕೆ ಹರಿಪ್ರಸಾದ್ ವಿರುದ್ಧ ಪೇಜಾವರಶ್ರೀಗಳು ವಾಗ್ದಾಳಿ

ಮಂಗಳೂರು (ಅ.27): ಜಾತಿ ವ್ಯವಸ್ಥೆ ಅನಿಷ್ಟಗಳಿಗೆ ಮೂಲ ಎನ್ನುವವರೇ ಅದನ್ನು ಪೋಷಿಸುತ್ತಿದ್ದಾರೆ. ಒಂದೆಡೆ ನಾವು ಜಾತ್ಯಾತೀತರು ಎನ್ನುತ್ತಾರೆ, ಇನ್ನೊಂದೆಡೆ ಎಲ್ಲ ವಲಯದಲ್ಲೂ ಅದನ್ನು ಪೋಷಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಎಂಎಲ್‌ಸಿ ಬಿಕೆ ಹರಿಪ್ರಸಾದ್ ವಿರುದ್ಧ ಪೇಜಾವರಶ್ರೀಗಳು ವಾಗ್ದಾಳಿ ನಡೆಸಿದರು.

'ಜಾತಿ ಗಣತಿ ವಿಚಾರದಲ್ಲಿ ಸ್ವಾಮೀಜಿ ಪುಡಿ ರಾಜಕಾರಣಿಗಳಂತೆ ಹೇಳಿಕೆ ನೀಡುತ್ತಿದ್ದಾರೆ' ಎಂದಿದ್ದ ಬಿ.ಕೆ.ಹರಿ ಪ್ರಸಾದ್ ಹೇಳಿಕೆ ಪ್ರಸ್ತಾಪಿಸಿ ಇಂದು ಮಂಗಳೂರಿನ ಕುಳಾಯಿ ಚಿತ್ರಾಪುರ ಮಠದಲ್ಲಿ ನಡೆದ ಧರ್ಮಸಭೆ ಉದ್ದೇಶಿಸಿ ಮಾತನಾಡಿದ ಶ್ರೀಗಳು ಬಿಕೆ ಹರಿಪ್ರಸಾದ್ ಹೇಳಿಕೆಗೆ ತಿರುಗೇಟು ನೀಡಿದರು.

Latest Videos

ರಾಮನ ಗುಣಗಳು ಮೈಗೂಡಿಸಿಕೊಂಡು ಪ್ರಜೆಗಳು ರಾಮನಾದ್ರೆ ದೇಶ ರಾಮರಾಜ್ಯ: ಪೇಜಾವರಶ್ರೀ

ನಾವೇನು ಯಾರನ್ನೂ ಕರೆದು ಹೀಗೆ ಮಾಡ್ತಾರೆ ಅಂತ ಹೇಳಿಲ್ಲ. ಲೋಕದ ವ್ಯವಸ್ಥೆಯಲ್ಲಿ ನಮ್ಮಲ್ಲಿ ಬಂದು ನಿಮ್ಮ ಅಭಿಪ್ರಾಯ ಏನು ಅಂತ ಕೇಳಿದಾಗ,. ಜಾತ್ಯಾತೀತ ಅಂತ ಹೇಳಿಕೊಳ್ಳುವಾಗ ಇಲ್ಲಿ ಜಾತಿ ಪಂಗಡಗಳ ಲೆಕ್ಕಾಚಾರ ಯಾಕೆ ಅನ್ನೋದು ನಮ್ಮ ಅಭಿಪ್ರಾಯ. ಹೀಗೆ ಹೇಳಿದ್ದನ್ನ ಪುಡಿ ರಾಜಕಾರಣ ಅಂತಾರೆ, ನಾವು ಹೇಳಿದ್ದು ತಪ್ಪು ಅಂತಾರೆ.  ಹಾಗಾದ್ರೆ ಇದು ಪ್ರಜಾಪ್ರಭುತ್ವ ರಾಷ್ಟ್ರ ಹೌದೋ ಅಲ್ಲವೋ ನೀವೇ ಹೇಳಿ ಎಂದ ಶ್ರೀಗಳು ಮುಂದುವರಿದು, ಹೌದು ಅಂತಾದ್ರೆ ಒಬ್ಬ ಮಾಠಾಧಿಪತಿಗೆ ಅಂತಲ್ಲ, ಸಾಮಾನ್ಯ ಪ್ರಜೆಗೂ ಮಾತಾಡುವ ಹಕ್ಕಿದೆ, ತಮ್ಮ ಅಭಿಪ್ರಾಯ ಹೇಳುವ ಹಕ್ಕಿದೆ. ಹೀಗಿರುವಾಗ ಕಾವಿ ತೆಗೆದಿಟ್ಟು ಬಂದರೆ ಉತ್ತರ ಕೊಡ್ತೇನೆ ಅನ್ನೋದರ ಅರ್ಥವೇನು?

ಲಿಂಗಾಯತ ಸಮಾಜ ಒಂದು ಪಂಥ; ಪ್ರತ್ಯೇಕ ಧರ್ಮ ಅಲ್ಲ: ವೀರಶೈವ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ ಹೇಳಿಕೆ

ಅಂದರೆ ಸಮಾಜದಲ್ಲಿ ಮಾತನಾಡುವ ಹಕ್ಕಿರೋದು ಕೆಲವು ರಾಜಕಾರಣಿಗಳಿಗೆ ಮಾತ್ರವಾ? ಪ್ರಜೆಗಳಿಗೂ ಹಕ್ಕಿಲ್ಲ, ರಾಜಕಾರಣಿಗಳಿಗೆ ಮಾತ್ರ ಹಕ್ಕಿದೆ, ಪ್ರಜಾಪ್ರಭುತ್ವ ಸತ್ತು ಹೋಯ್ತು, ಈಗ ಇರೋದು ರಾಜಕಾರಣಿಗಳ ರಾಜ್ಯ ಅಂತ ಹೇಳಲಿ. ಹಾಗಿಲ್ಲ ಅಂತಾದ್ರೆ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪೀಠಾಧಿಪತಿ ಮಾತ್ರ ಅಲ್ಲ, ಸಾಮಾನ್ಯ ಪ್ರಜೆಗೂ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿರಲೇಬೇಕು ತಾನೇ? ಎಂದು ಪ್ರಶ್ನಿಸಿದರು.

ಇಂತಹ ರಾಜಕಾರಣಿಗಳಿಗೆ ಸದ್ಬುದ್ಧಿ ಕೊಡು ಅಂತಾ ದೇವರಲ್ಲಿ ಕೇಳಿಕೊಳ್ತೇನೆ. ನಮ್ಮ ಪಂಗಡದೊಳಗೆ ಯಾರಿಗೆಲ್ಲ ವೈಮನಸು ಇದೆಯೋ ಅದೆಲ್ಲ ದೂರವಾಗಲಿ ಎಂದ ಶ್ರೀಗಳು.

click me!