ವಕ್ಫ್ ನೋಟಿಸ್ ಬಂದರೆ ರೈತರು ಆತಂಕ ಪಡಬಾರದು. ಧೈರ್ಯದಿಂದಿರಿ, ನಾವು ನಿಮ್ಮೊಂದಿಗೆ ಇದ್ದೇವೆ ಕಾನೂನು ಹೋರಾಟ ಮಾಡೋಣ. ಯಾರಿಗಾದರೂ ನೋಟಿಸ್ ಬಂದರೆ ನಮ್ಮ ಕಚೇರಿಗೆ ಬರಬಹುದು.
ವಿಜಯಪುರ (ಅ.27): ರೈತರ ಪಹಣಿಯಲ್ಲಿ ವಕ್ಫ್ ಹೆಸರು ಹಾಕಲು ಸೂಚಿಸಿದ್ದಾರೆ. ಸಚಿವ ಜಮೀರ್ ಅಹ್ಮದ್ ಕೋಮು ಗಲಭೆ ಎಬ್ಬಿಸಲು ಈ ರೀತಿ ಮಾಡುತ್ತಿದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎಲ್ಲವೂ ವಕ್ಫ್ ಅಸ್ತಿ ಅಂತಾರೆ, ಹಾಗದ್ರೆ ಹಿಂದೂಗಳು ಎಲ್ಲಿ ಹೋಗಬೇಕು? ಹೊನವಾಡದಲ್ಲಿ 1200 ಎಕರೆ ವಕ್ಫ್ ಬೋರ್ಡ ಗೆ ಸೇರ್ಪಡೆ ಅಗಿದೆ. ಎಂಬಿ ಪಾಟೀಲ್ ಕೇವಲ ಹತ್ತು ಎಕರೆ ಅಂತಾರೆ ಎಂಬಿ ಪಾಟೀಲ್ರೇ ಯಾಕೆ ಸುಳ್ಳು ಹೇಳ್ತಿದ್ದೀರಿ? ಅಲ್ಪಸಂಖ್ಯಾತರ ಮತ ಒಲೈಕೆಗೆ ರೈತರನ್ನು ಬಲಿಕೊಡ್ತೀರ? ಅಧಿಕಾರಕ್ಕಾಗಿ ನೀವು ಈ ನಾಡಿನ ರೈತರನ್ನು ಅವರು ತಲತಲಾಂತರದಿಂದ ಕೃಷಿ ಮಾಡಿಕೊಂಡು ಬಂದಿರುವ ಭೂಮಿಯನ್ನು ಕಿತ್ತುಕೊಳ್ಳುವವರ ಪರ ಮಾತನಾಡುತ್ತಿದ್ದೀರಿ. ನಾವು ಕೈಕಟ್ಟಿ ಕೂಡುವುದಿಲ್ಲ. ರೈತರ ಜೊತೆ ನಾವಿದ್ದೇವೆ. ಇದರ ವಿರುದ್ಧ ನಾನು ರೈತರೊಂದಿಗೆ ಸೇರಿ ಕಾನೂನು ಹೋರಾಟ ಮಾಡುತ್ತೇವೆ ಎಂದು ಸಚಿವ ಎಂಬಿ ಪಾಟೀಲ್ ವಿರುದ್ಧ ಕಿಡಿಕಾರಿದರು.
undefined
ಮುಸ್ಲಿಮರು ನಮ್ಮ ಮುಂದೆ ಕಣ್ಣುಬಿಟ್ಟೋರು, ಈ ಮಕ್ಕಳಿಗೆ ದೇಶದ ಮೇಲೆ ಯಾವುದೇ ಅಧಿಕಾರ ಇಲ್ಲ: ಯತ್ನಾಳ್
ರಾಜ್ಯದ ಯಾವುದೇ ಮೂಲೆಯಲ್ಲಿ ರೈತರ ಜಮೀನಿನಲ್ಲಿ ವಕ್ಫ್ ಬೋರ್ಡ್ ಹೆಸರು ಕೂತಿದ್ದರೆ ರೈತರು ನಮ್ಮ ಬಳಿ ಬರಲಿ. ನಮ್ಮ ಶಾಸಕರ ಕಚೇರಿಗೆ ಬಂದು ದಾಖಲಾತಿ ನೀಡಿದ್ರೆ ಅವರ ಪರವಾಗಿ ನಾವು ಕಾನೂನು ಹೋರಾಟ ಮಾಡಲು ಸಿದ್ಧವಿದ್ದೇವೆ. ವಕ್ಫ್ ಕುತಂತ್ರದ ವಿರುದ್ಧ ರೈತರು ಎದೆಗುಂದಬಾರದು ಅವರೊಂದಿಗೆ ನಾವು ಇದ್ದೇವೆ. ವಕ್ಪ್ ಮಂಡಳಿಯವರು ದೇವಸ್ಥಾನಕ್ಕೆ ಕೂಡಾ ನೋಟಿಸ್ ನೀಡುತ್ತಿದ್ದಾರೆ. ಈ ವಕ್ಫ್ ಬೋರ್ಡ್ ಯಾವಾಗ ಹುಟ್ಟಿದ್ದು? ಹಿಂದೂ ದೇವಸ್ಥಾನಗಳು ಸಾವಿರಾರು ವರ್ಷಗಳಿಂದ ಇಲ್ಲಿವೆ. ಹಿಂದೂ ದೇವಸ್ಥಾನಗಳ ಆಸ್ತಿ ವಕ್ಫ್ ಆಸ್ತಿ ಆಗಿದ್ದು ಯಾವಾಗ? ಇದು ಹೀಗೆ ಮುಂದುವರಿದರೆ ದೇಶದಲ್ಲಿ ವಕ್ಫ್ ಕಾನೂನು ವಿರುದ್ಧ ಹೋರಾಟ ನಡೆಯುವುದು ನಿಶ್ಚಿತ ಎಂದರು.
'ವಕ್ಫ್ ಆಸ್ತಿ ಯತ್ನಾಳ್ ಅಪ್ಪಂದು ಅಲ್ಲ..'; ಸಚಿವ ಜಮೀರ್ ಹೇಳಿಕೆಗೆ ಯತ್ನಾಳ್ ತಿರುಗೇಟು
ವಿಜಯಪುರ ರೈತರಿಗೆ ವಕ್ಪ್ ನೋಟಿಸ್ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಯತ್ನಾಳ್ ಅವರು, ರೈತರು ಆತಂಕ ಪಡಬಾರದು. ಧೈರ್ಯದಿಂದಿರಿ, ನಾವು ನಿಮ್ಮೊಂದಿಗೆ ಇದ್ದೇವೆ ಕಾನೂನು ಹೋರಾಟ ಮಾಡೋಣ. ಯಾರಿಗಾದರೂ ನೋಟಿಸ್ ಬಂದರೆ ನಮ್ಮ ಕಚೇರಿಗೆ ಬರಬಹುದು. ವಿಜಯಪುರ ಜಿಲ್ಲೆ ಮಾತ್ರವಲ್ಲ ರಾಜ್ಯದ ಯಾವುದೇ ಮೂಲೆಯ ರೈತರು ಆದರೂ ಸರಿ ನಮ್ಮ ಕಚೇರಿ ಸಂಪರ್ಕಿಸಿ. ನಾವು ಇದರ ವಿರುದ್ಧ ಕಾನೂನು ಹೋರಾಟಕ್ಕೆ ವಕೀಲರ ತಂಡ ಮಾಡುತ್ತೇವೆ. ರಾಜ್ಯಾದ್ಯಂತ ಪ್ರವಾಸ ಮಾಡಿ ರೈತರಿಗೆ ಜಾಗೃತಿ ಮೂಡಿಸುತ್ತೇವೆ. ಸಚಿವ ಜಮೀರ್ ಪ್ರವಾಸ ಮಾಡಿದ ಜಿಲ್ಲೆಗಳಲ್ಲಿ ಕಾರ್ಯಕ್ರಮ ಮಾಡುತ್ತೇವೆ. ವಕ್ಪ್ ಕಾನೂನು ವಿರುದ್ಧ ಹೋರಾಟ ಮಾಡಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರು ಯಾವುದೇ ವಕ್ಫ್ ಆಸ್ತಿ ಆಗಿಲ್ಲ ಅಂತಾರೆ. ಆದರೆ ವಕ್ಫ್ ಅಧಿಕಾರಿಗಳು ರೈತರಿಗೆ ನೋಟಿಸ್ ನೀಡುತ್ತಾರೆ. ವಕ್ಫ್ ಕಾನೂನು ನೆಹರು ಮಾಡಿರುವ ದೊಡ್ಡ ತಪ್ಪು ಕರ್ನಾಟಕದಲ್ಲಿ ಮತ್ತೊಂದು ಪಾಕಿಸ್ತಾನ ನಿರ್ಮಾಣ ಮಾಡಲು ವಕ್ಫ್ ಕೆಲಸ ಮಾಡ್ತಿದೆ ಅನಿಸುತ್ತಿದೆ ಇದರ ವಿರುದ್ಧ ಹಿಂದೂಗಳು ಈಗಿನಿಂದಲೇ ಎಚ್ಚೆತ್ತುಕೊಳ್ಳಬೇಕು ಎಂದರು.