ಜಾತಿಗಣತಿಗಾಗಿ 2014ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಎಚ್. ಕಾಂತರಾಜು ಅಧ್ಯಕ್ಷತೆಯಲ್ಲಿ ಆಯೋಗ ರಚಿಸಿತ್ತು. ಸಿದ್ದರಾಮಯ್ಯ ಅವಧಿ ಮುಗಿದರೂ ವರದಿ ಸಿದ್ದವಾಗಿರಲಿಲ್ಲ. ಎಚ್.ಡಿ. ಕುಮಾರಸ್ವಾಮಿಯವರು ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಆಗಿದ್ದ ಸಂದರ್ಭದಲ್ಲಿ ಕಾಂತರಾಜು ಅವರು ವರದಿಯನ್ನು ಸಲ್ಲಿಸಲು ಸಿದ್ಧತೆ ನಡೆಸಿದ್ದರೂ ಕುಮಾರಸ್ವಾಮಿ ಸ್ವೀಕರಿಸಿರಲಿಲ್ಲ ಎಂಬ ಆರೋಪ ಬಂದಿತ್ತು
ಬೆಂಗಳೂರು(ಅ.15):ಜಾತಿ ಗಣತಿ ವರದಿ ಮಂಡನೆ ಆಗಲಿರುವ ಕಾರಣಕ್ಕೆ ನಿರೀಕ್ಷೆ ಹುಟ್ಟು ಹಾಕಿದ್ದ ಸಚಿವ ಸಂಪುಟ ಸಭೆಯು ಅ.18ರ ಬದಲಿಗೆ ಅ.25ರ ಶುಕ್ರವಾರಕ್ಕೆ ಮುಂದೂಡಿಕೆ ಕಂಡಿದೆ. ಸಿಎಂ ಸಿದ್ದರಾಮಯ್ಯ ಜಾತಿ ಗಣತಿ ವರದಿ ಅನುಷ್ಠಾನದ ಕುರಿತು ಅ.7 ರಂದು ಹಿಂದುಳಿದ ವರ್ಗಗಳ ಸಚಿವರು, ಶಾಸಕರ ಸಭೆ ನಡೆಸಿದ್ದರು.
ಸಭೆ ಬಳಿಕ ಅ.18ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲೇ ಜಾತಿಗಣತಿ ವರದಿಯನ್ನು ಮಂಡಿಸುತ್ತೇವೆ. ಸಂಪುಟ ಸಭೆಯಲ್ಲಿ ಚರ್ಚಿಸಿದ ಬಳಿಕ ವರದಿ ಅನುಷ್ಠಾನದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು. ಅ.17ರಂದೇ ಸಂಪುಟ ಸಭೆ ನಡೆಯಬೇಕು. ಆದರೆ ವಾಲ್ಮೀಕಿ ಜಯಂತಿಯಿಂದಾಗಿ ಅ.18ರಂದು ಸಭೆ ನಡೆಸಲಿದ್ದೇವೆ. ಅಂದೇವರದಿ ಸಂಪುಟದಲ್ಲಿ ಮಂಡಿಸಲಿದ್ದೇವೆ. ಇದು ಬರೀ ಹಿಂದುಳಿದ ವರ್ಗಗಳ ಜಾತಿ ಸಮೀಕ್ಷೆ ಅಲ್ಲ. 7 ಕೋಟಿ ಕನ್ನಡಿಗರ ಸಮೀಕ್ಷೆ ಎಂದು ಹೇಳಿದ್ದರು. ಇದೀಗ ಅ.18 ರಂದು ನಡೆಯಬೇಕಿದ್ದ ಸಂಪುಟ ಸಭೆಯನ್ನು ಅ.25 ರಂದು ನಡೆಯುವಂತೆ ದಿನಾಂಕ ನಿಗದಿಪಡಿಸಿದ್ದು, ಸಭೆ ಸೂಚನಾ ಪತ್ರ ಹೊರಡಿಸಲಾಗಿದೆ. ಜಾತಿಗಣತಿ ಕುರಿತು ಆರೋಪ- ಪ್ರತ್ಯಾರೋಪಗಳು ನಡೆಯುತ್ತಿರುವಾಗಲೇ ಸಚಿವ ಸಂಪುಟ ಸಭೆ ಒಂದು ವಾರಗಳ ಕಾಲ ಮುಂದೂಡಿರುವುದು ತೀವ್ರ ಕುತೂಹಲ ಮೂಡಿಸಿದೆ.
undefined
ಮುಡಾ ಕಳಂಕ ಮರೆಮಾಚಲು ಜಾತಿ ಗಣತಿ ಮುನ್ನಲೆಗೆ ಯತ್ನ: ಸಿ.ಟಿ.ರವಿ ಆರೋಪ
ಹತ್ತು ವರ್ಷಗಳ ಬಳಿಕ ಮಂಡನೆ:
ಜಾತಿಗಣತಿಗಾಗಿ 2014ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಎಚ್. ಕಾಂತರಾಜು ಅಧ್ಯಕ್ಷತೆಯಲ್ಲಿ ಆಯೋಗ ರಚಿಸಿತ್ತು. ಸಿದ್ದರಾಮಯ್ಯ ಅವಧಿ ಮುಗಿದರೂ ವರದಿ ಸಿದ್ದವಾಗಿರಲಿಲ್ಲ. ಎಚ್.ಡಿ. ಕುಮಾರಸ್ವಾಮಿಯವರು ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಆಗಿದ್ದ ಸಂದರ್ಭದಲ್ಲಿ ಕಾಂತರಾಜು ಅವರು ವರದಿಯನ್ನು ಸಲ್ಲಿಸಲು ಸಿದ್ಧತೆ ನಡೆಸಿದ್ದರೂ ಕುಮಾರಸ್ವಾಮಿ ಸ್ವೀಕರಿಸಿರಲಿಲ್ಲ ಎಂಬ ಆರೋಪ ಬಂದಿತ್ತು. ಇತ್ತೀಚೆಗೆ ಜಯಪ್ರಕಾಶ್ ಹೆಗ್ಡೆ ಅವರು ವರದಿ ಸಲ್ಲಿಸಿದ್ದು, ಹತ್ತು ವರ್ಷಗಳ ಬಳಿಕ ಜಾತಿಗಣತಿ ವರದಿ ಮಂಡನೆ ಪ್ರಸ್ತಾಪ ಮುನ್ನೆಲೆಗೆ ಬಂದಿದೆ.