ರಾಜ್ಯ ಸರ್ಕಾರದ ವಿರುದ್ಧ ತಿರುಗಿಬಿದ್ದ ಮಾಜಿ ಸಚಿವ; ಎಲ್ಲರೂ ಲೈನ್‌ಗೆ ಬರ್ತಾರೆ ಕಾದು ನೋಡಿ ಎಂದ ಹೆಚ್‌ಡಿ ರೇವಣ್ಣ!

By Ravi JanekalFirst Published Oct 14, 2024, 8:41 PM IST
Highlights

ಪೊಲೀಸ್ ಅಧಿಕಾರಿಗಳನ್ನು ಇಟ್ಟುಕೊಂಡು ನೀವು ನನ್ನನ್ನು ಹೆದರಿಸುತ್ತೇವೆ ಅಂದುಕೊಂಡಿದ್ರೆ ಅದು ಹಗಲುಗನಸು ಅಂತ ತಿಳ್ಕೊಳ್ಳಿ. ಮುಂದೆ ಒಂದಲ್ಲೊಂದು ದಿನ ರಿವರ್ಸ್ ಹೊಡೆಯುವ ಕಾಲ ಬರುತ್ತೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಎಚ್‌ಡಿ ರೇವಣ್ಣ ವಾಗ್ದಾಳಿ ನಡೆಸಿದರು.

ಹಾಸನ (ಅ.14): ಪೊಲೀಸ್ ಅಧಿಕಾರಿಗಳನ್ನು ಇಟ್ಟುಕೊಂಡು ನೀವು ನನ್ನನ್ನು ಹೆದರಿಸುತ್ತೇವೆ ಅಂದುಕೊಂಡಿದ್ರೆ ಅದು ಹಗಲುಗನಸು ಅಂತ ತಿಳ್ಕೊಳ್ಳಿ. ಮುಂದೆ ಒಂದಲ್ಲೊಂದು ದಿನ ರಿವರ್ಸ್ ಹೊಡೆಯುವ ಕಾಲ ಬರುತ್ತೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಎಚ್‌ಡಿ ರೇವಣ್ಣ ವಾಗ್ದಾಳಿ ನಡೆಸಿದರು.

ಇಂದು ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಬಿದರಕ್ಕ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರಾರು ಏನೇನು ಮಾಡಿದ್ದಾರೆ, ಯಾರಾರು ನಮ್ಮ ತಂದೆ-ತಾಯಿಗೆ ಕಣ್ಣೀರು ಹಾಕಿಸಿದ್ದಾರೆ, ಅವರು ಇವತ್ತು ಅನುಭವಿಸುತ್ತಿದ್ದಾರೆ. ಮುಂದೆ ಒಬ್ಬೊಬ್ಬರಾಗಿ ಲೈನ್‌ನಲ್ಲಿ ನಿಲ್ತಾರೆ. ಕೆಲವೇ ದಿನಗಳಲ್ಲಿ ಕೆಲವು ರಾಜಕೀಯ ಮುಖಂಡರು ಸಾಲಾಗಿ ನಿಲ್ಲುವ ಕಾಲ ಬರುತ್ತೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

Latest Videos

ಬಳ್ಳಾರಿಯಲ್ಲಿ ಲೂಟಿ ಆಗ್ತಿತ್ತು, ನಾವು ಪಾದಯಾತ್ರೆ ಮಾಡಿದ ಬಳಿಕ ಈಗ ಎಲ್ಲವೂ ಶಾಂತಿ ಇದೆ: ಡಿಕೆ ಶಿವಕುಮಾರ

ಕುಮಾರಣ್ಣರ ವಿರುದ್ಧ ಹತ್ತು ವರ್ಷದ ಹಿಂದಿನ ಕೇಸ್ ಇವತ್ತು ಓಪನ್ ಮಾಡಿಸಿದ್ದಾರೆ. ಕುಮಾರಣ್ಣ ಅವರು ಅಧಿಕಾರದಲ್ಲಿದ್ದಾಗ ಅದನ್ನು ಕ್ಲೋಸ್ ಮಾಡಿಸಬಹುದಿತ್ತು. ಆದರೆ ಕುಮಾರಣ್ಣ ಅಂತಹ ಪಾಪದ ಕೆಲಸ ಮಾಡುವುದಿಲ್ಲ. ಈ ರಾಜ್ಯಕ್ಕೆ ಕುಮಾರಣ್ಣನ ಕೊಡುಗೆ ಇದೆ. ಕುಮಾರಣ್ಣ ನಲವತ್ತು ಜನ ಇಂಜಿನಿಯರ್‌ಗಳಿಗೆ ಅವರು ಪ್ರಮೋಷನ್ ಕೊಟ್ಟರು. 2019 ಬಂದಾಗ ಖಾಯಂ ಮಾಡಿದ್ದು ಕುಮಾರಣ್ಣನೇ. ಇವತ್ತು ಆ ಇಂಜಿನಿಯರ್‌ಗಳಿಗೆ ಹತ್ತು ಕೋಟಿ, ಹದಿನೈದು ಕೋಟಿ ವ್ಯಾಪಾರ ನಡೆಸುತ್ತಿದ್ದಾರೆ. ಯಾರಾದರೂ ಇಂಜಿನಿಯರ್‌ಗಳು ಹೇಳಲಿ ಕುಮಾರಣ್ಣ, ರೇವಣ್ಣ ಐದು ರೂಪಾಯಿ ಆದ್ರೂ ತಿಂದವ್ರೆ ಅಂತ. ಅಂತಾ ಆರೋಪ ಮಾಡಿದ್ರೆ ನಾನು ರಾಜಕೀಯ ಬಿಟ್ಟು ಹೋಗ್ತಿನಿ. ಆದರೆ ಇವತ್ತು ಯಾವ ಮಟ್ಟಕ್ಕೆ ಕಾಂಗ್ರೆಸ್ ಸರ್ಕಾರ ಇಳಿದಿದೆ ಅಂದ್ರೆ ಭ್ರಷ್ಟಾಚಾರ, ನಿವೇಶನ ಹಗಣದಲ್ಲಿ ಆರೋಪಿಗಳಾದ್ರೂ ಅಧಿಕಾರಕ್ಕೆ ಗೂಟ ಬಡಿದುಕೊಂಡು ಕೂತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.  

ತಪ್ಪು ಮಾಡಿಲ್ಲ ಎಂದರೆ ನಿವೇಶನ ವಾಪಸ್ ಕೊಟ್ಟಿದ್ದು ಯಾಕೆ? ಸಿದ್ದರಾಮಯ್ಯ, ಖರ್ಗೆಗೆ ಯತ್ನಾಳ್ ಪ್ರಶ್ನೆ

ಈ ಹಿಂದೆ ಬಿಜೆಪಿ ಸರ್ಕಾರಕ್ಕೆ ನಲ್ವತ್ತು ಪರ್ಸೆಂಟ್ ಸರ್ಕಾರ ಅಂದೋರು ಇವರೇ. ಈ ಜಿಲ್ಲೆಯೊಳಗೆ ಲೋಕೋಪಯೋಗಿ ಇಲಾಖೆ ಒಳಗೆ 400 ಕೋಟಿ ಬಿಲ್ ಬಾಕಿ ಇದೆ. ಬಿಲ್ ತಗೊಬೇಕಾದ್ರೆ 40% ದುಡ್ಡು ಕೊಡಬೇಕು. ಈ ಸರ್ಕಾರಕ್ಕೆ ನಾಚಿಕೆಯಾಗಬೇಕು, ಮಾನ, ಮರ್ಯಾದೆ ಇದೆಯ? ತಾವು ಸತ್ಯಹರಿಶ್ಚಂದ್ರರರ ತುಂಡುಗಳೆಂಬಂತೆ ಮಾತಾಡ್ತಾರೆ. ವಾಸ್ತವವಾಗಿ ಕಾಂಗ್ರೆಸ್‌ನಂತ ಭ್ರಷ್ಟ ಸರ್ಕಾರ ಎಲ್ಲೂ ಇಲ್ಲ. ನಾನು ಈ ನಾಲ್ಕೈದು ತಿಂಗಳು ಸುಮ್ಮನಿದ್ದೆ, ಇನ್ಮುಂದೆ ಇವರ ಬಂಡವಾಳ ಎಳೆ ಎಳೆಯಾಗಿ ಬಿಡಿಸುವ ಕಾಲ ಬರುತ್ತೆ. ಮುಂದಿನ ದಿನಗಳಲ್ಲಿ ವಿಧಾನಸಭೆ ಇರಲಿ, ಸಾರ್ವಜನಿಕವಾಗಿ ಈ ಸರ್ಕಾರದಲ್ಲಿ ಏನೇನು ನಡೆಯುತ್ತಿದೆ ಅನ್ನೋದನ್ನು ಎಳೆಎಳೆಯಾಗಿ ಬಿಚ್ಚಿಡುತ್ತೇನೆ ಎನ್ನುವ ಮೂಲಕ ರಾಜ್ಯ ಸರ್ಕಾರದ ಇನ್ನಷ್ಟು ಹಗರಣಗಳನ್ನು ಬಯಲಿಗೆಳೆಯುವ ಸುಳಿವು ನೀಡಿದರು.

click me!