* ಹರ್ಷನ ಬರ್ಬರ ಹತ್ಯೆ ವ್ಯರ್ಥವಾಗಲು ಬಿಡುವುದಿಲ್ಲ.
* ಈ ತರಹದ ಗೂಂಡಾವರ್ತನೆ ಸಹಿಸುವುದಿಲ್ಲ
* ಸರ್ಕಾರ ಕಣ್ಣುಮುಚ್ಚಿ ಕುಳಿತಿಲ್ಲ. ಕಣ್ಣುಮುಚ್ಚಿ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ
ಶಿವಮೊಗ್ಗ(ಫೆ.24): ಹತ್ಯೆಯಾದ ಬಜರಂಗದಳದ ಕಾರ್ಯಕರ್ತ ಹರ್ಷನ(Harsha) ಪಾರ್ಥಿವ ಶರೀರ ಮೆರವಣಿಗೆ ವೇಳೆ ಒಂದು ಗುಂಪು ಕಟ್ಟಡದ ಮೇಲಿನಿಂದ ಕಲ್ಲು ತೂರಾಟ ನಡೆಸಿದ್ದಲ್ಲದೆ, ಲಾಂಗು, ಮಚ್ಚು ಹಿಡಿದು ಬೆದರಿಕೆ ಹಾಕಿದರು. ಇದಕ್ಕೆ ಮೆರವಣಿಗೆಯಲ್ಲಿದ್ದ ಕಾರ್ಯಕರ್ತರು ಪ್ರಕ್ರಿಯಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ(BY Vijayendra) ವ್ಯಾಖ್ಯಾನಿಸಿದ್ದಾರೆ.
ಗುಂಪೊಂದು ಪ್ರಚೋದನಾಕಾರಿಯಾಗಿ ವರ್ತಿಸಿತ್ತು. ಇದರಿಂದಾಗಿ ಗಲಭೆಯಾಗಿದೆ(Riots). ಇಲ್ಲದೆ ಹೋಗಿದ್ದರೆ ಶಿವಮೊಗ್ಗದಲ್ಲಿ ಈ ರೀತಿ ಘಟನೆ ನಡೆಯುತ್ತಿರಲಿಲ್ಲ ಎಂದು ಹೇಳಿದ್ದಾರೆ. ಮೃತ ಹರ್ಷನ ಕುಟುಂಬಕ್ಕೆ ಸಾಂತ್ವನ ಹೇಳಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಬಜರಂಗದಳ ಕಾರ್ಯಕರ್ತನ ಹರ್ಷನ ಬರ್ಬರ ಹತ್ಯೆ(Murder) ವ್ಯರ್ಥವಾಗಲು ಬಿಡುವುದಿಲ್ಲ. ಈ ತರಹದ ಗೂಂಡಾವರ್ತನೆ ಸಹಿಸುವುದಿಲ್ಲ. ಸರ್ಕಾರ ಕಣ್ಣುಮುಚ್ಚಿ ಕುಳಿತಿಲ್ಲ. ಕಣ್ಣುಮುಚ್ಚಿ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ, ಘಟನೆ ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.
Shivamogga: ಹರ್ಷನ ಹತ್ಯೆಗೆ ಪ್ರಚೋದನೆ ನೀಡಿದವರನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕು: ಸೂಲಿಬೆಲೆ
ಸರ್ಕಾರ ಈಗಾಗಲೇ ಎಲ್ಲ ರೀತಿಯ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಕೃತ್ಯ ನಡೆಸಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮುಖ್ಯಮಂತ್ರಿ ಕೂಡ ಈ ಬಗ್ಗೆ ಭರವಸೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಕೊಲೆಗಡುಕರನ್ನು ಸರ್ಕಾರ ಸುಮ್ಮನೆ ಬಿಡುವುದಿಲ್ಲ ಎಂದರು.
ಇದ್ದ ಒಬ್ಬ ಮಗನನ್ನು ಕಳೆದುಕೊಂಡಿರುವ ಕುಟುಂಬ ದುಃಖದಲ್ಲಿರುವಾಗ ಕಾಂಗ್ರೆಸ್ ಮುಖಂಡರ ನಡವಳಿಕೆ ಖಂಡನೀಯ. ಶಾಂತಿ ಸುವ್ಯವಸ್ಥೆ ಕದಡುವ ಸಂಚನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಹೇಳಿದರು.
ಗಲಭೆಗೆ ಕಾಂಗ್ರೆಸ್ ನೇತೃತ್ವ: ಸಚಿವ ಈಶ್ವರಪ್ಪ
ಶಿವಮೊಗ್ಗ: ಗೂಂಡಾಗಿರಿ ನಡೆಸಲು, ಕಲ್ಲು ಹೊಡೆಯಲು ಕಾಂಗ್ರೆಸ್‌ನವರೇ(Congress) ನೇತೃತ್ವ ವಹಿಸಿದಂತಿದೆ. ಹೀಗಾಗಿ ಕಾಂಗ್ರೆಸ್‌ನವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಕೆ.ಎಸ್.ಈಶ್ವರಪ್ಪ(KS Eshwarappa) ಒತ್ತಾಯಿಸಿದ್ದಾರೆ.
ಗಲಭೆ ಸಂದರ್ಭದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದ ಅವರು, ಹತ್ಯೆಯಾದ ಹರ್ಷನ ಮೃತದೇಹದ ಮೆರವಣಿಗೆ ನೇತೃತ್ವವನ್ನು ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ ವಹಿಸಿದ್ದರು ಎಂದು ಕಾಂಗ್ರೆಸ್ಸಿಗರು ಹೇಳಿದ್ದಾರೆ. ಈ ಆರೋಪ ಸರಿಯಲ್ಲ. ಮೆರವಣಿಗೆ ವೇಳೆ ಅನಾಹುತ ಆಗುವುದನ್ನು ತಪ್ಪಿಸಲು ನಾವಿಬ್ಬರೂ ಅಲ್ಲಿಗೆ ಹೋಗಿದ್ದೆವು. ಗಲಭೆ ಮಾಡಿಸಬೇಕು ಎಂಬ ಮನಃಸ್ಥಿತಿ ನಮಗಿಲ್ಲ ಎಂದರು.
Shivamogga: ಸೂಕ್ಷ್ಮ ಪ್ರದೇಶಗಳಲ್ಲಿ ಡ್ರೋನ್ ಕಣ್ಣು, ಹೈ ಅಲರ್ಟ್
ನಾನೇನು ಕಾಂಗ್ರೆಸ್‌ನಲ್ಲಿರುವ ಮುಸ್ಲಿಮರು(Muslims) ಕೊಲೆ(Murder) ಮಾಡಿದ್ದಾರೆ ಎಂದು ಹೇಳಿದ್ದೇನಾ? ಇಲ್ಲ. ಹರ್ಷನನ್ನು ಕೊಲೆ(Harsha Murder) ಮಾಡಿದವರು ಮುಸ್ಲಿಂ ರೌಡಿಗಳು, ಗೂಂಡಾಗಳು ಎಂದಿದ್ದೇನೆ. ಹತ್ಯೆ ಮಾಡಿದವರನ್ನು ಗೂಂಡಾ ಎಂದು ಕರೆದರೆ ಕಾಂಗ್ರೆಸ್ ನವರಿಗ್ಯಾಕೆ ಸಿಟ್ಟು ಬರಬೇಕು. ಕಾಂಗ್ರೆಸ್‌ನವರಿಗೆ ನನ್ನ ಮೇಲೆ ಆರೋಪ ಮಾಡದಿದ್ದರೆ ತಿಂದ ಅನ್ನ ಕರಗುವುದಿಲ್ಲ. ಹೀಗಾಗಿ ಅವರಿಗೆ ಬೇರೆ ದಾರಿಯೇ ಇಲ್ಲದೆ ಪದೇ ಪದೇ ನನ್ನ ಮೇಲೆ ಆರೋಪ ಮಾಡುತ್ತಾರೆ. ನಾನೆಂತಾ ಪ್ರಚೋದನಕಾರಿ ಹೇಳಿಕೆ ನೀಡಿದ್ದೇನೆ? ನಿಜಕ್ಕೂ ಪ್ರಚೋದನಕಾರಿ ಹೇಳಿಕೆ ನೀಡಿದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಎಂದು ಆರೋಪಿಸಿದರು.
ಕಾಡು ಪ್ರಾಣಿಗಳಿಗೆ ಸಿಂಹ ಕಂಡ್ರೆ ಭಯ, ಕೈ ನಾಯಕರಿಗೆ ಟಾಂಗ್ ಕೊಟ್ಟ ಈಶ್ವರಪ್ಪ
ಬೆಂಗಳೂರು: ಕಾಡು ಪ್ರಾಣಿಗಳಿಗೆ ಸಿಂಹ ಕಂಡ್ರೆ ಭಯ. ಹಾಗಾಗಿ, ಕಾಡು ಪ್ರಾಣಿಗಳು ಸಿಂಹ ಕಂಡು ಹೆದರಿವೆ ಎಂದು ಡಿಕೆಶಿ, ಸಿದ್ದರಾಮಯ್ಯ ಪದೇ ಪದೇ ತನ್ನ ಹೆಸರು ಉಲ್ಲೇಖಿಸಿ ವಾಗ್ದಾಳಿ ನಡೆಸುವ ವಿಚಾರವಾಗಿ ಸಚಿವ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ಕೊಟ್ಟಿದ್ದರು.