ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ನಿರಂತರವಾಗಿ ಸಮರ ಮುಂದುವರಿಯುತ್ತದೆ. ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆಗೆ ಭಂಗ ತರುವವರನ್ನು ಗಡಿಪಾರು ಮಾಡುತ್ತೇವೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಖಡಕ್ ವಾರ್ನಿಂಗ್ ಮಾಡಿದರು.
ಮಂಗಳೂರು (ಜು.22) : ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ನಿರಂತರವಾಗಿ ಸಮರ ಮುಂದುವರಿಯುತ್ತದೆ. ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆಗೆ ಭಂಗ ತರುವವರನ್ನು ಗಡಿಪಾರು ಮಾಡುತ್ತೇವೆ ಎಂದು ಸಮಾಜದಲ್ಲಿ ಅಶಾಂತಿ ಸೃಷ್ಟಿಸುವವರಿಗೆ ಮಂಗಳೂರು ಪೊಲೀಸ್ ಕಮಿಷನರ್ ಖಡಕ್ ವಾರ್ನಿಂಗ್ ಮಾಡಿದರು.
ಭಜರಂಗದಳ ಕಾರ್ಯಕರ್ತರ ಗಡಿಪಾರು ವಿಚಾರದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಬಾಲಚಂದ್ರ, ಗಣೇಶ್ ಅತ್ತಾವರ ಮತ್ತು ಜಯಪ್ರಶಾಂತ್ ರನ್ನು ಗಡಿಪಾರು ಮಾಡುವ ಬಗ್ಗೆ ನೊಟೀಸ್ ನೀಡಿದ್ದೇವೆ. ಬಾಲಚಂದ್ರ ಮತ್ತು ಗಣೇಶ್ ಅತ್ತಾವರ ಮೇಲೆ 5 ಪ್ರಕರಣಗಳಿವೆ. ಜಯಪ್ರಶಾಂತ್ ಮೇಲೆ 7 ಪ್ರಕರಣಗಳು ದಾಖಲಾಗಿವೆ.
ಮಂಗಳೂರಲ್ಲಿ ಮತ್ತೊಂದು ನೈತಿಕ ಪೊಲೀಸ್‌ಗಿರಿ ಪ್ರಕರಣ; ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿ ಮೇಲೆ ಹಲ್ಲೆ
ಈ ಹಿಂದೆಯೇ ಇವರಿಂದ ಷರತ್ತು ಬದ್ಧ ಮುಚ್ಚಳಿಕೆ ಪಡೆದುಕೊಂಡಿತ್ತು. ಹೀಗಿದ್ದರೂ ಮುಚ್ಚಳಿಕೆ ಅವಧಿಯಲ್ಲಿ ಎರಡು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿಯಾಗಿದ್ದಾರೆ. ಮುಚ್ಚಳಿಕೆ ಷರತ್ತುಗಳನ್ನು ಉಲ್ಲಂಘಿಸಿರುವುದರಿಂದ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ ಎನ್ನುವ ಮೂಲಕ ಭಜರಂಗದಳ ಕಾರ್ಯಕರ್ತರ ಗಡಿಪಾರು ನಿಶ್ಚಿತ ಅಂತ ಸಂದೇಶ ರವಾನಿಸಿದರು.
ಇವರುಗಳು ಪುನಃ ಇದೇ ರೀತಿ ಅಪರಾಧ ಕೃತ್ಯಗಳನ್ನು ನಡೆಸುವ ಸಾಧ್ಯತೆ ಇದೆ. ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆಗೆ ಭಂಗ ತರುವ ಗುಪ್ತ ಮಾಹಿತಿ ಇದೆ. ಕಮೀಷನರೇಟ್ ವ್ಯಾಪ್ತಿಯಲ್ಲಿ ಒಟ್ಟು 52 ರೌಡಿ ಅಸಾಮಿಗಳನ್ನು ಗಡಿಪಾರು ಮಾಡಲಾಗಿದೆ. ಪ್ರಸ್ತುತ ವರ್ಷದಲ್ಲಿ 987 ವ್ಯಕ್ತಿಗಳಿಂದ ಮುಚ್ಚಳಿಕೆಯನ್ನು ಪಡೆದುಕೊಳ್ಳಲಾಗಿದೆ. ಕಾನೂನು ಕ್ರಮಗಳ ಪ್ರಕ್ರಿಯೆಯಲ್ಲಿ ಅಪರಾಧ ಹಿನ್ನಲೆ ಮಾತ್ರ ಪರಿಗಣಿಸುತ್ತೇವೆ ಹೊರತು ಯಾವುದೇ ಧರ್ಮ, ಜಾತಿ, ಸಂಘಟನೆ ಅಥವಾ ಪಕ್ಷ ಆಧಾರಿತವಾಗಿ ಕ್ರಮ ಕೈಗೊಳ್ಳುತ್ತಿಲ್ಲ ಎಂದ ಕಮಿಷನರ್ ಮುಂದುವರಿದು ಈ ಕಾನೂನು ಪ್ರಕ್ರಿಯೆಯು ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯ ಸದುದ್ದೇಶದಿಂದ ನಡೆಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
Karnataka Budget 2023: ನೈತಿಕ ಪೊಲೀಸ್‌ಗಿರಿ, ಸುಳ್ಳು ಸುದ್ದಿಗೆ ಗುದ್ದು..!