ಹಾಲಿನ ದರ ಏರಿಕೆ ಬೆನ್ನಲ್ಲೇ ಹೋಟೆಲ್ ಉತ್ಪನ್ನಗಳ ಬೆಲೆ ಹೆಚ್ಚಿಸಲು ಮಾಲೀಕರ ಸಂಘ ಚಿಂತನೆ!

By Ravi JanekalFirst Published Jul 22, 2023, 10:08 AM IST
Highlights

ಕೆಎಂಎಫ್ ಪದಾಧಿಕಾರಿಗಳೊಂದಿಗೆ ಸಿಎಂ ಸಭೆ ನಡೆಸಿ ಹಾಲಿನ ದರ ಹೆಚ್ಚಳ ಮಾಡಿರುವ ಸರ್ಕಾರ. ಆಗಸ್ಟ್‌ 1ರಿಂದಲೇ ಲೀಟರ್ ಹಾಲಿಗೆ 3ರೂ. ಏರಿಕೆ ಆಗಲಿದ್ದು. ಹೊಟೇಲ್ ಉತ್ಪನ್ನಗಳ ಮೇಲೂ ಬಿಸಿ ತಟ್ಟಲಿದೆ.

ಬೆಂಗಳೂರು (ಜು.22) : ಕೆಎಂಎಫ್ ಪದಾಧಿಕಾರಿಗಳೊಂದಿಗೆ ಸಿಎಂ ಸಭೆ ನಡೆಸಿ ಹಾಲಿನ ದರ ಹೆಚ್ಚಳ ಮಾಡಿರುವ ಸರ್ಕಾರ. ಆಗಸ್ಟ್‌ 1ರಿಂದಲೇ ಲೀಟರ್ ಹಾಲಿಗೆ 3ರೂ. ಏರಿಕೆ ಆಗಲಿದ್ದು. ಹೊಟೇಲ್ ಉತ್ಪನ್ನಗಳ ಮೇಲೂ ಬಿಸಿ ತಟ್ಟಲಿದೆ.

ಹಾಲಿನ ದರ ಏರಿಕೆ ಮಾಡಿರುವ ಬೆನ್ನಲ್ಲೇ ರಾಜ್ಯ ಹೋಟೆಲ್ ಮಾಲೀಕರ ಸಂಘ ಈಗಾಗಲೇ ಚರ್ಚೆ ನಡೆಸಿದ್ದು ಹಾಲಿನ ದರ ಏರಿಕೆಯಾದರೆ ಹೋಟೆಲ್ ಉತ್ಪನ್ನಗಳ ಬೆಲೆಯೂ ಹೆಚ್ಚಿಸಲು ಚಿಂತನೆ ನಡೆಸಿದ್ದಾರೆ. ಈ ಹಿಂದೆ ವಿದ್ಯುತ್ ದರ ಏರಿಕೆ, ದಿನಸಿ, ತರಕಾರಿ ಬೆಲೆ ಏರಿಕೆ  ಸಂದರ್ಭದಲ್ಲಿ ಬೆಲೆ ಏರಿಕೆ ಬಗ್ಗೆ ಚಿಂತಿಸಿದ್ದ ಹೋಟೆಲ್ ಮಾಲಿಕರು. ಆಗ ಹಾಲಿನ ದರ ಏರಿಕೆಯ ಬಳಿಕ ಒಮ್ಮಗೇ ದರ ಹೆಚ್ಚಳ ಮಾಡುತ್ತೇವೆ ಎಂದಿದ್ದ ಹೋಟೆಲ್ ಉದ್ಯಮಿಗಳು. 

ಇದೀಗ ನಂದಿನಿ ಹಾಲಿನ ದರ ಏರಿಕೆ ಹಿನ್ನಲೆ. ಹೋಟೆಲ್ ಉತ್ಪನ್ನಗಳಾದ ಟೀ, ಕಾಫಿ, ಮಿಲ್ಕ್  ಬೆಲೆ ಏರಿಕೆ ಮಾಡುವುದು ಬಹುತೇಕ ಖಚಿತವಾಗಿದ್ದು ಗ್ರಾಹಕರ ನಾಲಗೆ ಇನ್ನಷ್ಟು ಸುಡಲಿದೆ. ಈಗಾಗಲೇ ಟೀ, ಕಾಫಿ ಬೆಲೆ 10-15ರೂ. ಹೆಚ್ಚಳವಾಗಿದೆ ಇದೀಗ ಹಾಲಿನ ಬೆಲೆ ಹೆಚ್ಚಳದಿಂದ ಇನ್ನಷ್ಟು ಹೆಚ್ಚಳ ಮಾಡುತ್ತಾರಾ. ಗ್ರಾಹಕರನ್ನು ಚಿಂತೆಗೀಡುಮಾಡಿದೆ.

ರಾಜ್ಯದ ಜನತೆಗೆ ಮತ್ತೊಂದು ಶಾಕ್‌: ಏರಿಕೆಯಾಗುತ್ತಾ ಹಾಲಿನ ದರ..?

click me!