ಕೆಳದಿ ವಿವಿಯಿಂದ ಬಿಎಸ್‌ ಯಡಿಯೂರಪ್ಪಗೆ ಇಂದು ಗೌರವ ಡಾಕ್ಟರೇಟ್ ಪ್ರದಾನ

By Kannadaprabha NewsFirst Published Jul 21, 2023, 7:49 AM IST
Highlights

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯವು ಈ ಬಾರಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಗೌರವ ಡಾಕ್ಟರೇಟ್‌ ಘೋಷಿ​ಸಿ​ದೆ.

ಶಿವಮೊಗ್ಗ (ಜು.21) :  ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯವು ಈ ಬಾರಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಗೌರವ ಡಾಕ್ಟರೇಟ್‌ ಘೋಷಿ​ಸಿ​ದೆ.

ಕೃಷಿ ಮತ್ತು ತೋಟಗಾರಿಗೆ ವಿ.ವಿ.ಯ 8ನೇ ಘಟಿಕೋತ್ಸವ(8th Convocation of VV for Agriculture and Horticulture) ಜು.21ರಂದು ಇರುವಕ್ಕಿಯಲ್ಲಿರುವ ವಿ.ವಿ. ಮುಖ್ಯ ಆವರಣದಲ್ಲಿ ನಡೆಯಲಿದ್ದು, ಕೃಷಿ, ತೋಟಗಾರಿಕೆ, ಅರಣ್ಯ ವಿಭಾಗದಲ್ಲಿ 409 ವಿದ್ಯಾರ್ಥಿಗಳಿಗೆ ಹಾಗೂ 101 ಸ್ಮಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ. 23 ವಿದ್ಯಾರ್ಥಿಗಳು ಪಿಎಚ್‌.ಡಿ ಪದವಿ ಪಡೆಯುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಗೌರವ ಡಾಕ್ಟರೇಟ್‌ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವಿವಿಯ ಕುಲಪತಿ ಡಾ. ಆರ್‌.ಸಿ ಜಗದೀಶ್‌ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬಿ.ಎಸ್.ಯಡಿಯೂರಪ್ಪ ಮಾಜಿ ಸಿಎಂ ಮಾತ್ರವಲ್ಲ, ನಾಳೆಯಿಂದ ಡಾಕ್ಟರ್‌ ಆಗಲಿದ್ದಾರೆ

ಬಿ.ಎಸ್‌. ಯಡಿಯೂರಪ್ಪ(BS Yadiyurappa) ಅವರು ರಾಜ್ಯ ಕಂಡ ಧೀಮಂತ ರಾಜಕಾರಣಿ. ರೈತನಾಯಕರೂ ಕೂಡ. ಇವರು ಪ್ರತ್ಯೇಕ ಕೃಷಿ ಬಜೆಟ್‌ ಮಂಡಿಸಿ ದೇಶಕ್ಕೆ ಮಾದರಿಯಾದವರು. ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಕ್ಷೇತ್ರದಲ್ಲಿ ವಿನೂತನ ಯೋಜನೆಗಳನ್ನು ಸಾಕಾರಗೊಳಿಸಿದ ಬಹುಮುಖಿ ಚಿಂತಕ. ಮಲೆನಾಡಿನಲ್ಲಿ ಕೃಷಿ, ಶಿಕ್ಷಣ, ಸಂಶೋಧನೆ, ವಿಸ್ತರಣೆಯ ಅಗತ್ಯತೆ ಮನಗಂಡು ಕೃಷಿ ವಿ.ವಿ.ಯು ಈ ಬಾರಿ ಅವರಿಗೆ ಗೌರವ ಡಾಕ್ಟರೇಟ್‌ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವ ಡಾ. ಕೆ.ಸಿ. ಶಶಿಧರ್‌, ವಿಸ್ತರಣಾ ನಿರ್ದೇಶಕ ಡಾ. ಗುರುಮೂರ್ತಿ ಇದ್ದರು.

ಮುರುಘಾ ಮಠ ಶ್ರೀ ಅಭಿನಂದನೆ

ಆನಂದಪುರ: ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್‌ ನೀಡುತ್ತಿರು​ವುದು ಅರ್ಥಪೂರ್ಣವಾಗಿದೆ ಎಂದು ಮುರುಘಾ ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಅಭಿನಂದಿಸಿದ್ದಾರೆ.

ರೈತರಿಗೆ ಅನುಕೂಲ ಆಗುವಂತೆ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವುದರೊಂದಿಗೆ ರೈತ ನಾಯಕನಾಗಿ ರಾಜ್ಯದ ಮುಖ್ಯಮಂತ್ರಿ ಆಗಿ​ದ್ದಾಗ ಕೃಷಿ ರೈತರಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಆ ಮೂಲಕ ರೈತರ ಕೃಷಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಿದಂತಹ ಧೀಮಂತ ನಾಯಕ. ಅವರು ಮುಖ್ಯಮಂತ್ರಿ ಆಗಿದ್ದಾಗ ಇರುವಕ್ಕಿ ವಿಶ್ವವಿದ್ಯಾನಿಲಯಕ್ಕೆ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡಿದಂತಹ ಹಿರಿಮೆ ಇವರದು. ಇವರನ್ನು ಕೃಷಿ ವಿಶ್ವವಿದ್ಯಾನಿಲಯದ 8ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಗೌರವ ಡಾಕ್ಟರೇಟ್‌ ನೀಡುತ್ತಿರುವುದು ತುಂಬಾ ಸಂತೋಷ ತಂದಿದೆ ಎಂದು ನುಡಿ​ದಿ​ದ್ದಾರೆ.

Kuvempu Airport: ಶಿವಮೊಗ್ಗ ಏರ್‌ಪೋರ್ಟ್‌ ಗೆ ಕುವೆಂಪು ಹೆಸರು: ಸಂಪುಟ ಸಭೆ ನಿರ್ಧಾರ

click me!