ಬೆಂಗಳೂರು: ಬ್ರಾಹ್ಮಣ ಮಹಾಸಭಾ ಹೆಲ್ತ್‌ಕಾರ್ಡ್‌ ಬಿಡುಗಡೆ

By Kannadaprabha NewsFirst Published Jul 26, 2021, 2:35 PM IST
Highlights

* ಯುನೈಟೆಡ್‌ ಆಸ್ಪತ್ರೆಯ ವತಿಯಿಂದ ಹೊರತಂದ ಹೆಲ್ತ್‌ಕಾರ್ಡ್‌
* ಆರೋಗ್ಯದ ಹಲವಾರು ಅವಶ್ಯಕತೆಯನ್ನು ಅತಿ ಕಡಿಮೆ ವೆಚ್ಚದಲ್ಲಿ ಪೂರೈಸಿಕೊಳ್ಳಬಹುದು
* ಯುನೈಟೆಡ್‌ ಆಸ್ಪತ್ರೆಯ ವತಿಯಿಂದ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ 
 

ಬೆಂಗಳೂರು(ಜು.26): ಅಖಿಲ ಕರ್ನಾಟಕ ಮಹಾಸಭಾದ ಸದಸ್ಯರುಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಇಂದು(ಸೋಮವಾರ) ಮಹಾಸಭಾದ ಅಧ್ಯಕ್ಷ ಅಶೋಕ್‌ ಹಾರ್ನಳ್ಳಿ ಯುನೈಟೆಡ್‌ ಆಸ್ಪತ್ರೆಯ ವತಿಯಿಂದ ಸದಸ್ಯರುಗಳಿಗೆ ವಿಶೇಷವಾಗಿ ಹೊರತಂದಿರುವ ಯುನೈಟೆಡ್‌ ಆಸ್ಪತ್ರೆ ಹೆಲ್ತ್‌ಕಾರ್ಡನ್ನು ಬಿಡುಗಡೆಗೊಳಿಸಿದ್ದಾರೆ. 

ಇಂದು(ಸೋಮವಾರ) ನಗರದ ಎನ್‌ಆರ್‌ ಕಾಲೋನಿಯ ರಾಮ ಮಂದಿರ ಕಲ್ಯಾಣ ಮಂಟದಲ್ಲಿ ಯುನೈಟೆಡ್‌ ಆಸ್ಪತ್ರೆಯ ವತಿಯಿಂದ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಈ ಹೆಲ್ತ್‌ಕಾರ್ಡ್‌ ಸೌಲಭ್ಯವನ್ನು ಬ್ರಾಹ್ಮಣ ಮಹಾಸಭಾದ ಸದಸ್ಯರುಗಳಿಗೆ ಬಿಡುಗಡೆ ಮಾಡಲಾಯಿತು. 

'ಸ್ವಾಮೀಜಿಗಳಿಂದ BSY ಭೇಟಿ ಬ್ರಾಹ್ಮಣ್ಯವನ್ನು ಬಲಗೊಳಿಸುತ್ತದೆ'

ಈ ಸಂದರ್ಭದಲ್ಲಿ ಮಾತನಾಡಿದ ಯುನೈಟೆಡ್‌ ಆಸ್ಪತ್ರೆಯ ಸಂಸ್ಥಾಪಕ ಅಧ್ಯಕ್ಷ ಡಾ. ವಿಕ್ರಮ್‌ ಸಿದ್ದಾರೆಡ್ಡಿ, ಈ ಹೆಲ್ತ್‌ಕಾರ್ಡ್‌ ಮೂಲಕ ಸದಸ್ಯರು ಹಾಗೂ ಅವರ ಕುಟುಂಬದವರು ತಮ್ಮ ಆರೋಗ್ಯದ ಹಲವಾರು ಅವಶ್ಯಕತೆಯನ್ನು ಅತಿಕಡಿಮೆ ವೆಚ್ಚದಲ್ಲಿ ಪೂರೈಸಿಕೊಳ್ಳಬಹುದಾಗಿದೆ. ಇಸಿಜಿ, ಎಕ್ಸ್‌ರೇ, ಸಿಟಿ ಸ್ಕ್ಯಾನ್‌, ಲ್ಯಾಬೋರೇಟರಿ ಪರೀಕ್ಷೆಗಳು ಮತ್ತು ಸೂಪರ್‌ ಸ್ಪೆಷಾಲಿಟಿ ಕನ್ಸ್‌ಲ್ಟೇಶನ್‌ನ್ನು ಇದರಲ್ಲಿ ಪಡೆದುಕೊಳ್ಳಬಹುದಾಗಿದೆ ಎಂದುನ ತಿಳಿಸಿದ್ದಾರೆ. 

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ (ಕರ್ನಾಟಕ ಸರ್ಕಾರ) ಅಧ್ಯಕ್ಷರಾದ ಶ್ರೀ ಹೆಚ್.ಎಸ್.ಸಚ್ಚಿದಾನಂದಮೂರ್ತಿ, ಯುನೈಟೆಡ್‌ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ಶಾಂತಕುಮಾರ್‌ಮುರುಡಾ ಉಪಸ್ಥಿತರಿದ್ದರು.
 

click me!