ವಾಯು ವಜ್ರ ಎಸಿ ಬಸ್ ಪಾಸ್ ದರ ಇಳಿಸಿ ಆದೇಶ ಹೊರಡಿಸಿದ BMTC| ಮಾಸಿಕ ಪಾಸು ಮತ್ತು ದಿನದ ಪಾಸುಗಳ ದರವನ್ನ ಶೇ. 20ರಷ್ಟು ಇಳಿಸಿ ಆದೇಶ| 2363 ರೂಪಾಯಿ ಇದ್ದ ಮಾಸಿಕ ಪಾಸು 2000 ಕ್ಕೆ ಇಳಿಸಿದ BMTC
ಬೆಂಗಳೂರು(ಡಿ.30): ಬಿಎಂಟಿಸಿ ಮಹತ್ವದ ಆದೇಶವನ್ನು ಹೊರಡಿಸಿದ್ದು, ವಾಯು ವಜ್ರ ಎಸಿ ಬಸ್ ಪಾಸ್ ದರ ಇಳಿಸಿದೆ. ಮಾಸಿಕ ಪಾಸು ಮತ್ತು ದಿನದ ಪಾಸುಗಳ ದರವನ್ನ ಶೇ. 20ರಷ್ಟು ಇಳಿಸಿ ಆದೇಶ ಹೊರಡಿಸಿದೆ.
ಈ ಮೂಲಕ BMTC, 2363 ರೂಪಾಯಿ ಇದ್ದ ಮಾಸಿಕ ಪಾಸು 2000 ಕ್ಕೆ ಇಳಿಸಿದೆ. ಅಲ್ಲದೇ 147 ರೂಪಾಯಿ ಇದ್ದ ದಿನದ ಪಾಸ್ ಅನ್ನು 120 ರೂಪಾಯಿಗೆ ಇಳಿಕೆ ಮಾಡಿದೆ.
ಇಷ್ಟೇ ಅಲ್ಲದೇ ಸಾಮಾನ್ಯ ಎಸಿ ಬಸ್ಸುಗಳ ಮಾಸಿಕ ಪಾಸ್ ಹೊಂದಿರುವರು, ಹಿರಿಯ ನಾಗರಿಕರ ಸಾಮಾನ್ಯ ಮಾಸಿಕ ಪಾಸುದಾರರು ಭಾನುವಾರಗಳಂದು ವಾಯು ವಜ್ರದಲ್ಲಿ ಸಂಚರಿಸಲು ಅವಕಾಶ ನೀಡಿದೆ.
ಜನವರಿ 4 ರಿಂದ 12 ಹೊಸ ಮಾರ್ಗಗಳಲ್ಲಿ 81 ಎಸಿ ಬಸ್ಸುಗಳ ಸಂಚಾರ ಆರಂಭಿಸುವುದಾಗಿ BMTC ಪ್ರಕಟಿಸಿದೆ.