ಲೋಕಲ್ ಕದನ: ಅಕ್ಕನ ವಿರುದ್ಧ ಗೆದ್ದ ತಂಗಿ, ಪತ್ರಕರ್ತನಿಗೆ ಭರ್ಜರಿ ಗೆಲುವು!

Published : Dec 30, 2020, 11:34 AM ISTUpdated : Dec 30, 2020, 05:29 PM IST
ಲೋಕಲ್ ಕದನ: ಅಕ್ಕನ ವಿರುದ್ಧ ಗೆದ್ದ ತಂಗಿ,  ಪತ್ರಕರ್ತನಿಗೆ ಭರ್ಜರಿ ಗೆಲುವು!

ಸಾರಾಂಶ

ಎರಡು ಹಂತಗಳಲ್ಲಿ 226 ತಾಲೂಕುಗಳ 5,728 ಗ್ರಾ.ಪಂ.ಗಳ 82,616 ಸ್ಥಾನಗಳಿಗೆ ಚುನಾವಣೆ| ಶೇ.80ಕ್ಕೂ ಹೆಚ್ಚು ಮತದಾನ| 2.22 ಲಕ್ಷ ಅಭ್ಯರ್ಥಿಗಳ ಹಣೆಬರಹ| ಅಕ್ಕನ ವಿರುದ್ಧ ಗೆದ್ದ ತಂಗಿ,  ಪತ್ರಕರ್ತನಿಗೆ ಭರ್ಜರಿ ಗೆಲುವು!

ಬೆಂಗಳೂರು(ಡಿ.30): ಭಾರೀ ಕುತೂಹಲ ಮೂಡಿಸಿರುವ ಕರ್ನಾಟಕ ಗ್ರಾಮ ಪಂಚಾಯತ್ ಚುನಾವಣೆಯ ಮತದಾನ ಎಣಿಕೆ ಪ್ರಕ್ರಿಯೆ ಆರಂಭಗೊಂಡಿದೆ. 2.22 ಲಕ್ಷ ಅಭ್ಯರ್ಥಿಗಳ ಹಣೆಬರಹ ಬಹಿರಂಗವಾಗಲಿದೆ.

ಎರಡು ಹಂತಗಳಲ್ಲಿ 226 ತಾಲೂಕುಗಳ 5,728 ಗ್ರಾ.ಪಂ.ಗಳ 82,616 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಶೇ.80ಕ್ಕೂ ಹೆಚ್ಚು ಮತದಾನವಾಗಿತ್ತು. 2,22,814 ಹುರಿಯಾಳುಗಳು ಸ್ಪರ್ಧಿಸಿದ್ದರು. ಈಗಾಗಲೇ 8074 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈಗಾಗಲೇ ಬಹಿರಂಗಗೊಂಡ ಫಲಿತಾಂಶದಲ್ಲಿ ಕಂಡು ಬಂದ ಇಂಟರೆಸ್ಟಿಂಗ್ ವಿಚಾರಗಳು ಇಲ್ಲಿವೆ ನೋಡಿ

ಅಕ್ಕನ ವಿರುದ್ಧ ಗೆದ್ದ ತಂಗಿ

ಮಡಿಕೇರಿಯ ಮೇಕೇರಿ ಗ್ರಾ.ಪಂ. ಬಿಳಿಗೇರಿ 1 ರಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಅಕ್ಕನ ವಿರುದ್ಧವೇ ತಂಗಿ ಗೆಲುವು ಸಾಧಿಸಿದ್ದಾರೆ. ಹೌದು ಬಿಜೆಪಿ ಬೆಂಬಲಿತ ಅಭ್ಯರ್ಥಿ ಬಿ.ಎನ್. ಪುಷ್ಪಾ ಅವರು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಹಾಗೂ ತನ್ನ ಓರೆಗಿತ್ತಿ ಸುಮಾವತಿ ವಿರುದ್ಧಗೆದ್ದಿದ್ದಾರೆ. ಬಿ.ಎನ್. ಪುಷ್ಪಾ 283 ಮತ ಪಡೆದರೆ, ಸುಮಾವತಿಗೆ 80 ಮತ ಲಭಿಸಿದೆ. ಇನ್ನು ಬಿ.ಎನ್. ಪುಷ್ಪಾ ಎರಡನೇ ಬಾರಿಗೆ ಸ್ಪರ್ಧಿಸಿದ್ದರು. ಪುಷ್ಪಾ ಅವರ ಗಂಡನ ಅಣ್ಣನ ಹೆಂಡತಿಯಾಗಿರುವ ಸುಮಾವತಿ. 

 ಪತ್ರಕರ್ತ ಸಂದೇಶ ಭಟ್‌ಗೆ ಭರ್ಜರಿ ಗೆಲುವು

ಶಿರಸಿಯ ಪತ್ರಕರ್ತ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸಂದೇಶ ಭಟ್‌ ಭರ್ಜರಿ ಗೆಲುವು ಸಾಧಿಸಿದ್ದಾರೆ. 262 ಮತಗಳನ್ನು ಪಡೆದು 123ಕ್ಕೂ ಅಧಿಕ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಶಿರಸಿಯ ಕುಳವೆ ಪಂಚಾಯತ್ ಬರೂರ ಗ್ರಾ.ಪಂ.ನಿಂದ ಸಂದೇಶ್ ಸ್ಪರ್ಧಿಸಿದ್ದರು. 

ಲಾಟರಿ ಮೂಲಕ ಗೆಲುವಿನ ನಗೆ ಬೀರಿದ ಅಭ್ಯಥಿ೯

ಸಮಬಲದ ಮತ ಸಿಕ್ಕ ಹಿನ್ನೆಲೆ ಅಭ್ಯರ್ಥಿಯೊಬ್ಬರು ಟಾಸ್ ಮೂಲಕ ಗೆಲುವಿನ ನಗೆ ಬೀರಿದ್ದಾರೆ. ಬಾಗಲಕೋಟೆ ಜಿಲ್ಲೆಯ ಗೊರಬಾಳ ಗ್ರಾಮ ಪಂಚಾಯತಿಯ ಗೋಪಶಾನಿ ಗ್ರಾಮದ ವಾಡ್೯ನ ಮತ ಎಣಿಕೆ ವೇಳೆ ಇಂತಹುದ್ದೊಂದು ಪ್ರಕ್ರಿಯೆ ಜರುಗಿದೆ. ಇಬ್ಬರೂ ಅಭ್ಯರ್ಥಿಗಳಾದ ಮಹಾಂತೇಶ  ಹಾಗೂ ಕಳಕಪ್ಪ ತಲಾ 88 ಮತ ಪಡೆದಿದ್ದರು. ಆದರೆ ಟಾಸ್‌ನಲ್ಲಿ ಮಹಾಂತೇಶ್ ಮೇಲುಗೈ ಸಾಧಿಸಿದ್ದಾರೆ. 

ಸುಮಲತಾ ಬೆಂಬಲಿಗ ಗೆಲುವು: ಮಂಡ್ಯ

ಗ್ರಾಮ ಪಂಚಾಯತಿ ಚುನಾವಣೆ  ಮತ ಎಣಿಕೆಯಲ್ಲಿ ಮಂಡ್ಯ ಜಿಲ್ಲೆ ಮಂಡ್ಯ ತಾಲೂಕು ಬಸರಾಳು ಹೋಬಳಿಯ ಬೆನ್ನಹಟ್ಟಿ ಗ್ರಾಮ ಪಂಚಾಯಿತಿಯ ಚುನಾವಣಾ ಅಭ್ಯರ್ಥಿ ಬಿ.ಎಸ್.ಪ್ರದೀಪ್ ಸಿದ್ದೇಗೌಡ ರವರು ಜಯಶೀಲರಾಗಿದ್ದಾರೆ. ಅಂದು ಸಂಸದರ ಚುನಾವಣೆಯಲ್ಲಿ ಸಂಸದೆ ಸುಮಲತಾ ಅಂಬರೀಷ್ ರವರು  1,25,000 ಮತಗಳಿಂದ ಮುಂಚೂಣಿಯಲ್ಲಿದ್ದರು, ಇಂದು ಸಂಸದರ ಅನುಯಾಯಿಯಾದ ನಾನು ಬೆನ್ನಹಟ್ಟಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 125 ಮತಗಳಿಂದ ಜಯಭೇರಿ ಗಳಿಸಿರುವುದಾಗಿ ಹರ್ಷ ವ್ಯಕ್ತಪಡಿಸಿದ್ದಾರೆ.

ಒಂದು ಮತದಿಂದ ಗೆಲುವು

ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಸುಂಕಾತೊಣ್ಣೂರು ಗ್ರಾಪಂ ವ್ಯಾಪ್ತಿಯ ಕೊಡಗಳ್ಳಿ ವಾರ್ಡ್ ನ ಹೇಮಂತ್ ಕುಮಾರ್ ಮರು ಎಣಿಕೆಯಲ್ಲಿ 1 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಒಂದು ಅಂಚೆ ಮತದಾನ ತಂದಿತು ಜಯ

ಮುದ್ದೇಬಿಹಾಳ ತಾಲೂಕಿನ ಹಿರೇಮುರಾಳ ಪಂಚಾಯಿತಿಯಲ್ಲಿ ಒಂದೇ ಒಂದು  ಅಂಚೆಮತ ವಿಜಯವನ್ನು ತಂದುಕೊಟ್ಟಿದೆ. ಹಿರೇಮುರಾಳ ಪಂಚಾಯತಿಯ ಜಂಗಮುರಾಳ ಗ್ರಾಮದ ಲೋಕೇಶ.ಸಿದ್ದಪ್ಪ ಢವಳಗಿ ಒಂದು ಅಂಚೆಮತದಿಂದ ವಿಜಯಶಾಲಿಯಾಗಿದ್ದಾರೆ.
ಲೋಕೇಶ ಢವಳಗಿ 129 ಮತ ಪಡೆದಿದ್ದು ಇವರಿಗೆ ಮೂರು ಅಂಚೆಮತ ಪಡೆದು ಜಯ ಪಡೆದರೆ ಇವರ ಎದುರಾಳಿ ಹಣಮಂತ ವಾಲಿಕಾರ 128 ಮತ ಪಡೆದು ಕೇವಲ ಒಂದು ಮತದಿಂದ  ಪರಾಭವಗೂಂಡಿದ್ದಾರೆ.

ಸಮಾನ ಮತ, ಚೀಟಿ ಎತ್ತುವ ಮೂಲಕ ಆಯ್ಕೆ

ನಿಡಗುಂದಿ ತಾಲೂಕಿನ ಹೆಬ್ಬಾಳ ಗ್ರಾಪಂ ವ್ಯಾಪ್ತಿಯ ಹೆಬ್ಬಾಳ ಗ್ರಾಮದ ೨ನೇ ವಾರ್ಡ್ ನಲ್ಲಿ ಹಿಂದುಳಿದ ಬ ವರ್ಗ ದಿಂದ ಬಸವರಾಜ ಕಮತಗಿ 398 ಮತ ಪಡೆದು ಆಯ್ಕೆ ಆಗಿದ್ದಾರೆ. ನಂತರ ಸಾಮನ್ಯ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ರಾವುತಪ್ಪ ಆಲೂರು ಹಾಗೂ ಶ್ರೀಶೈಲ ಹಿಪ್ಪರಗಿ ಅವರಿಗೆ 311 ಸಮಾನ ಮತಗಳು ಬಿದ್ದ ಕಾರಣ ಚುನಾವಣಾಧಿಕಾರಿ ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಿದರು. ಇದರಲ್ಲಿ ಶ್ರೀಶೈಲ ಹಿಪ್ಪರಗಿ ಆಯ್ಕೆಯಾದರು ಚುನಾವಣಾಧಿಕಾರಿಗಳು ಘೋಷಿಸಿದರು. ಚೀಟಿ ಎತ್ತುವ ಬದಲು ಮರು ಎಣಿಕೆ ಮಾಡುವಂತೆ ಒತ್ತಾಯಿಸಿದರೂ ಚುನಾವಣಾಧಿಕಾರಿ ಚೀಟಿ ಎತ್ತಿದ್ದು ತಪ್ಪು ಎಂದು ರಾವುತಪ್ಪ ಆಲೂರು ಪರ ಏಜೆಂಟ್ ತಿಳಿಸಿದರು.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ಬಿಜೆಪಿ ಬೆಂಬಲಿತ ತಾಯಿ-ಮಗ

ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಓತಗೇರಿ ಪಂಚಾಯಿತಿಯ ಗೋನಾಳ ಗ್ರಾಮದ ಹನಮವ್ವ ಕುರಿ ಹಾಗೂ ಗೊರಬಾಳ ಪಂಚಾಯಿತಿಯ ತೊಂಡಿಹಾಳ ಗ್ರಾಮದ ದೊಡ್ಡಬಸವ ಕುರಿ ಬಿಜೆಪಿ ಬೆಂಬಲಿತರಾಗಿ ತಾಯಿ ಮಗ ಗೆಲುವು.

ಸ್ವಯಂ ನಿವೃತ್ತಿ ಪಡೆದಿದ್ದ ಎಸ್ ಐಗೆ ಗೆಲುವು

ಭೂತಿಕೆರೆ ಗ್ರಾಮದ ಪಂಚಾಯತಿಯ ಹೊಸೂರುದೊಡ್ಡಿ‌ ಮತಕ್ಷೇತ್ರದಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದ ಸಹಾಯಕ ಸಬ್ ಇನ್ಸ್ಪೆಕ್ಟರ್ ಎಲ್‌.ಪುಟ್ಟಸ್ಚಾಮಿ ಗೆಲುವು ಸಾಧಿಸಿದ್ದಾರೆ. ಬೆಂಗಳೂರಿನ ಸಿಟಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಎ ಎಸ್ ಐಗೆ ಸೇವೆಸಲ್ಲಿಸುತ್ತಿದ್ದ ಪುಟ್ಟ ಸ್ವಾಮಿ ಅವರು, ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿಯೆರ ಸ್ವಯಂ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಇನ್ನು 7 ತಿಂಗಳು ಸೇವಾವಧಿ ಬಾಕಿ ಉಳಿದಿದ್ದು, ಸಬ್ ಇನ್ಸ್‌ಪೆಕ್ಟರ್ ಮುಂಬಡ್ತಿ ಹೊಂದುವರಿದ್ದರು. ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲದಿಂದ ಕಣಕ್ಕೆ ಇಳಿದಿದ್ದ ಪುಟ್ಟಸ್ವಾಮಿ ಅವರು, ಪ್ರತಿ ಸ್ಪರ್ಧಿಗಳಾದ ಬೀರೇಶ್, ನಾಗೇಶ ವಿರುದ್ಧ ಗೆಲುವು ಸಾಧಿಸಿದ್ದಾರೆ.

ಗಂಡ, ಹೆಂಡತಿ ಗೆಲುವು

ಹಾಕತ್ತೂರು ಬಿಳಿಗೇರಿ ವಾರ್ಡ್ ನಂ 2ರಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿದ್ದ ಅಬ್ದುಲ್ ಖಾದರ್ (262) ಮತ ಪಡೆದು ಬಿಜೆಪಿ ಬೆಂಬಲಿತ ಅಭ್ಯರ್ಥಿ ದರ್ಶನ್ (229) ಅವರ ವಿರುದ್ಧ ಗೆಲುವುಸಾಧಿಸಿದ್ದಾರೆ. ಪತ್ನಿ ಶಾಕೀರ  (ಎಂ.ಎ, ಎಂಇಡಿ)  ಪಕ್ಷೇತರವಾಗಿ ಸ್ಪರ್ಧಿಸಿ 220 ಮತ ಪಡೆದು ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಯಂತಿ  130 ವಿರುದ್ಧ ಗೆಲುವು ಸಾಧಿಸಿದ್ದಾರೆ.

ಮಾಜಿ ಶಾಸಕರ ಪುತ್ರನಿಗೆ ಗೆಲವು.

ರಾಣೇಬೆನ್ನೂರ ತಾಲೂಕಿನ ಯಕ್ಲಾಸಪುರ ಗ್ರಾಮದ ನಿವಾಸಿಗಳಾಗಿದ್ದ ದಿ.ಸೋಮಲಿಂಗಪ್ಪ ನಲವಾಗಲ 1978 ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಅದೇ ಹಾದಿಯಲ್ಲಿ ಅವರ ಪುತ್ರ ಉಮೇಶ ಸೋ.ನಲವಾಗಲ ರಾಹುತನಕಟ್ಟಿ ಗ್ರಾಮಪಂಚಾಯತಿಯ ಸದಸ್ಯರಾಗಿ ಬಹುಮತದಿಂದ ಆಯ್ಕೆಯಾಗಿದ್ದಾರೆ. ತಂದೆಯ ಜನಪರ ಕಾರ್ಯಗಳು ಇಂದೂ ನನ್ನ ಗೆಲುವಿಗೆ ಕಾರಣವಾಗಿದೆಯೆಂದು ಅವರು ತಿಳಿಸಿದರು.

ಮಂಗಳಮುಖಿಯ ಗೆಲುವು 

ಹೊಸಪೇಟೆ ತಾಲೂಕಿನ ಕಲ್ಲಹಳ್ಳಿ ಗ್ರಾಪಂಯ ರಾಜಾಪುರದ ಮತ ಕ್ಷೇತ್ರದಿಂದ ಗೆಲುವು ಸಾಧಿಸಿದ ಮಂಗಳ ಮುಖಿ. ಗ್ರಾಪಂ ಸ್ಥಾಪನೆಯಾಗಿ 26 ವರ್ಷಗಳ ನಂತರ ನಡೆದ ಗ್ರಾಪಂ ಚುನಾವಣೆಯಲ್ಲಿ ಗೆಲುವು. ಕಳೆದ 26 ವರ್ಷಗಳಿಂದ ಇಲ್ಲಿ ಅವಿರೋಧ ಆಯ್ಕೆ ನಡೆದಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವರುಣಾ ಜನತೆಯ ಋಣ ತೀರಿಸಲು ಸಾಧ್ಯವಿಲ್ಲ, ಆದರೂ ಶ್ರಮಿಸುವೆ: ಯತೀಂದ್ರ ಸಿದ್ದರಾಮಯ್ಯ
ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ