ಟಿಕೆಟ್ ಪಡೆಯದೆ ಪ್ರಯಾಣ ಮಾಡ್ತಿದ್ದವರಿಗೆ BMTC ಶಾಕ್ ನೀಡಿದೆ. ಇದರ ಜೊತೆಗೆ ಮಹಿಳೆಯರಿಗೆ ಮೀಸಲಾದ ಸೀಟ್ ನಲ್ಲಿ ಕೂತು ಪ್ರಯಾಣಿಸುವವರಿಗೂ ದಂಡ ವಿಧಿಸಿದೆ. 7 ಲಕ್ಷ ರೂ ಸಂಗ್ರಹ ಮಾಡಿದೆ.
ಬೆಂಗಳೂರು (ಡಿ.13): ಟಿಕೆಟ್ ಪಡೆಯದೆ ಪ್ರಯಾಣ ಮಾಡ್ತಿದ್ದವರಿಗೆ BMTC ಶಾಕ್ ನೀಡಿದೆ. ಇದರ ಜೊತೆಗೆ ಮಹಿಳೆಯರಿಗೆ ಮೀಸಲಾದ ಸೀಟ್ ನಲ್ಲಿ ಕೂತು ಪ್ರಯಾಣಿಸುವವರಿಗೂ ದಂಡ ವಿಧಿಸಿದೆ. ಟಿಕೆಟ್ ರಹಿತ ಆಸಾಮಿಗಳಿಗೆ ದಂಡ ವಿಧಿಸಿದ BMTC ನವೆಂಬರ್ ನಲ್ಲಿ ವಿಧಿಸಿದ ದಂಡದಿಂದ ಬೊಕ್ಕಸಕ್ಕೆ 6,68,610 ರೂ ಬಂದಿದೆ. ಮಹಿಳಾ ಪ್ರಯಾಣಿಕರಲ್ಲಿ ಮೀಸಲಿರಿಸಿದ್ದ ಸೀಟ್ ನಲ್ಲಿ ಪ್ರಯಾಣಿಸಿದ್ದ 438 ಪುರುಷರಿಗೂ ದಂಡ ಹಾಕಲಾಗಿದೆ. 16,421ಟ್ರಿಪ್ ಗಳಲ್ಲಿ ಚೆಕ್ಕಿಂಗ್ ಇನ್ಸ್ಪೆಕ್ಟರ್ ಗಳು ತಪಾಸಣೆ ಮಾಡಿದ್ದು, ಈ ವೇಳೆ 3,767ಮಂದಿ ಟಿಕೆಟ್ ರಹಿತ ಪ್ರಯಾಣ ಮಾಡಿರುವುದು ಪತ್ತೆಯಾಗಿದೆ.
ಇದೇ ವೇಳೆ ಬೇಜವಾಬ್ದಾರಿ 1,062 ನಿರ್ವಾಹಕರ ವಿರುದ್ಧವೂ ನಿಗಮ ದಂಡಾಸ್ತ್ರ ಪ್ರಯೋಗ ಮಾಡಿದೆ. ಮಹಿಳಾ ಸೀಟ್ ನಲ್ಲಿ ಕುಳಿತ ಪ್ರಯಾಣಿಕರಿಂದ 43,800ರೂ ದಂಡ ವಸೂಲಿ ಮಾಡಲಾಗಿದೆ. ಮೋಟಾರು ವಾಹನ ಕಾಯ್ದೆ 1988ರ ಕಾಲಂ 177&94 ರ ಅನ್ವಯದಂತೆ ದಂಡ ಹಾಕಲಾಗಿದೆ. ಈ ಮೂಲಕ ನವೆಂಬರ್ ತಿಂಗಳಲ್ಲಿ ಬಿಎಂಟಿಸಿ ಬೊಕ್ಕಸಕ್ಕೆ ಒಟ್ಟು 7,12,410 ರೂ ದಂಡ ಸಂಗ್ರಹವಾಗಿದೆ.
undefined
‘ಶಕ್ತಿ’ ಪ್ರಯಾಣಿಕರಿಗೆ ಸ್ಮಾರ್ಟ್‌ಕಾರ್ಡ್ ನೀಡಿಕೆಗೆ ಗ್ರಹಣ
ಶಕ್ತಿ ಯೋಜನೆ ಎಫೆಕ್ಟ್: ಸಾರಿಗೆ ನಿಗಮಗಳ ಟ್ರಿಪ್ ಹೆಚ್ಚಳ
ಶಕ್ತಿ ಯೋಜನೆ ಜಾರಿ ನಂತರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಲ್ಲಿ ಪ್ರತಿದಿನದ ಟ್ರಿಪ್‌ಗಳ (ಸುತ್ತುವಳಿ) ಸಂಖ್ಯೆಯಲ್ಲಿ ಹೆಚ್ಚಳ ಮಾಡಲಾಗಿದೆ. ನಾಲ್ಕೂ ನಿಗಮಗಳಲ್ಲಿ ಒಟ್ಟಾರೆ ಕಳೆದ ಆರೇಳು ತಿಂಗಳಿನಿಂದೀಚೆಗೆ ನಿತ್ಯ 6,349 ಟ್ರಿಪ್‌ಗಳನ್ನು ಹೆಚ್ಚುವರಿಯಾಗಿ ಸೃಜಿಸಲಾಗಿದೆ.
ಶಕ್ತಿ ಯೋಜನೆ ಜಾರಿಗೂ ಮುನ್ನ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಿಂದ ಪ್ರತಿನಿತ್ಯ 1.40 ಲಕ್ಷಕ್ಕೂ ಹೆಚ್ಚಿನ ಟ್ರಿಪ್‌ಗಳನ್ನು ಮಾಡಲಾಗುತ್ತಿತ್ತು. ಅದರಲ್ಲಿ ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿಯಿಂದಲೇ 1 ಲಕ್ಷಕ್ಕೂ ಹೆಚ್ಚಿನ ಟ್ರಿಪ್‌ಗಳಿದ್ದವು. ಆದರೆ, ಶಕ್ತಿ ಯೋಜನೆ ಜಾರಿ ನಂತರ ಪ್ರತಿನಿತ್ಯ ಪ್ರಯಾಣಿಕರ ಸಂಖ್ಯೆಯಲ್ಲಿ ಬರೋಬ್ಬರಿ 20ರಿಂದ 25 ಲಕ್ಷ ಹೆಚ್ಚಳವಾಗುವಂತಾಗಿದೆ. ಈ ಹಿಂದೆ ನಿತ್ಯ 80ರಿಂದ 85 ಲಕ್ಷವಿದ್ದ ಪ್ರಯಾಣಿಕರ ಸಂಖ್ಯೆ ಸದ್ಯ 1.10 ಕೋಟಿಗೆ ತಲುಪಿದೆ. ಹೀಗಾಗಿ ಎಲ್ಲ ನಾಲ್ಕೂ ನಿಗಮಗಳ ಟ್ರಿಪ್‌ಗಳ ಸಂಖ್ಯೆಯಲ್ಲಿ ಏರಿಕೆ ಮಾಡಿಕೊಂಡಿವೆ. ಅದರಲ್ಲೂ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವ ಮಾರ್ಗಗಳಿಗೆ ಬಸ್‌ಗಳು ಹೆಚ್ಚಿನ ಬಾರಿ ಸಂಚರಿಸುವಂತೆ ಮಾಡಲಾಗಿದೆ.
ತೆಲಂಗಾಣದಲ್ಲಿ ಮಹಿಳೆಯರ ಫ್ರೀ ಬಸ್ ಪ್ರಯಾಣಕ್ಕೆ ಚಾಲನೆ, 10 ಲಕ್ಷದ ಆರೋಗ್ಯ ವಿಮೆ
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಿಗಮಗಳ ಲೆಕ್ಕದಂತೆ ಕಳೆದ ಐದಾರು ತಿಂಗಳಿನಿಂದೀಚೆಗೆ ಒಟ್ಟು 6,349 ಟ್ರಿಪ್‌ಗಳನ್ನು ಹೆಚ್ಚಳ ಮಾಡಲಾಗಿದೆ. ಅದರಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು ಉಳಿದ ಮೂರು ನಿಗಮಗಳಿಗಿಂತ ಹೆಚ್ಚಿನ ಟ್ರಿಪ್‌ಗಳನ್ನು ಸೃಜಿಸಿದೆ. ಅದರಂತೆ ಕೆಕೆಆರ್‌ಟಿಸಿ 2,530 ಟ್ರಿಪ್‌ಗಳ ಸಂಖ್ಯೆ ಹೆಚ್ಚಿಸಿದೆ. ಅದೇ ರೀತಿ ಕೆಎಸ್ಸಾರ್ಟಿಸಿ 1,699, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ 1,114 ಹಾಗೂ ಬಿಎಂಟಿಸಿ 1,006 ಟ್ರಿಪ್‌ಗಳನ್ನು ಹೆಚ್ಚಿಸಿದೆ.