ಜಿಲ್ಲೆಯ ಬೇಲೂರಿನ ಪುಷ್ಪಗಿರಿ ಮಹಾಸಂಸ್ಥಾನ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿಗೆ ಕೊಲೆ ಇದ್ಯಾ ಎಂಬ ಸಂದೇಹ ವ್ಯಕ್ತವಾಗಿದ್ದು, ಇದೀಗ ಬಹಿರಂಗ ವೇದಿಕೆಯಲ್ಲಿ ಪುಷ್ಪಗಿರಿ ಸ್ವಾಮೀಜಿ ಆತಂಕದ ಮಾತುಗಳನ್ನಾಡಿದ್ದಾರೆ.
ಹಾಸನ (ಡಿ.13): ಜಿಲ್ಲೆಯ ಬೇಲೂರಿನ ಪುಷ್ಪಗಿರಿ ಮಹಾಸಂಸ್ಥಾನ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿಗೆ ಕೊಲೆ ಇದ್ಯಾ ಎಂಬ ಸಂದೇಹ ವ್ಯಕ್ತವಾಗಿದ್ದು, ಇದೀಗ ಬಹಿರಂಗ ವೇದಿಕೆಯಲ್ಲಿ ಪುಷ್ಪಗಿರಿ ಸ್ವಾಮೀಜಿ ಆತಂಕದ ಮಾತುಗಳನ್ನಾಡಿದ್ದಾರೆ. ಜೊತೆಗೆ ಮಠವನ್ನೂ ಬಿಟ್ಟುಕೊಡೋ ಮಾತನ್ನೂ ಹೇಳಿದ್ದಾರೆ. ನಮಗೂ ಸಾಕಾಗ್ತಾ ಇದೆ, ಮುಂದೆ ಅದನ್ನ ನೀವೇ ವಹಿಸಿಕೊಂಡು ಹೋಗಿ. ನಮ್ಮದೊಂದು ಸಿದ್ದಾಂತ, ಗುರಿ ಇದೆ. ಪುಷ್ಪಗುರಿ ಯಾವತ್ತಿಗೂ ಜಾತಿಗೆ ವರ್ಗಕ್ಕೆ ಸೀಮಿತವಾಗೋದು ಬೇಡ ಅನ್ನೋದು ನಮ್ಮಉದ್ದೇಶ ಇದೆ . ಸರ್ವ ಜನರೂ ಸುಖದಿಂದ ಇರಬೇಕೆಂದು ಸಾರುತ್ತದೆ. ನಾವು ಜಾತಿಗೆ ಯಾವತ್ತಿಗೂ ಸೀಮಿತವಾಗೋದಿಲ್ಲ ಎಂದು ಸ್ವಾಮೀಜಿ ಹೇಳಿದ್ದಾರೆ.
ನಾವು ಜಾತಿಗೆ ಯಾವತ್ತಿಗೂ ಸೀಮಿತ ಆಗಬೇಕು ಅನ್ನೋದಾದ್ರೆ ಅದನ್ನ ಉಳಿಸಿಕೊಳ್ಳುವಂತಹ ಯೋಗ್ಯತೆ ಈ ಸಮಾಜದವರಿಗೆ ಇಲ್ಲ. ಹಾಗಾಗಿ ಇದನ್ನ ನಾವು ದಿಕ್ಕರಿಸುತ್ತೇವೆ . ಚಂದ್ರಶೇಖರ್ ಅವರು ಹೇಳ್ತಾ ಇದ್ರು 100 ವರ್ಷ ಇರಲಿ ಅಂತಾ. 15 ವರ್ಷಕ್ಕೇ ಸಾಕಾಗಿದೆ, 100 ವರ್ಷಕ್ಕೆ ದೇವರೇ ಬಲ್ಲ. ಬೇಡಪ್ಪ 100 ವರ್ಷ. ಈಗ್ಲೇ ಹೇಳ್ತಾ ಇದ್ದಾರೆ, ರೋಡಲ್ಲಿ ಸಿಗಲಿ ಕೊಚ್ಚಾಕ್ತೀವಿ. ರೋಡಲ್ಲಿ ಸಿಗಲಿ ಕಡಿದಾಕ್ತಿವಿ ಅಂತಾ. ಹಂಗೆಲ್ಲಾ ಕೊಚ್ಕಿಸ್ಕೊಂಡು ಇನ್ನೊಂದು ಆಗೋದಕ್ಕಿಂತ ಭಗವಂತ ಆಯಸ್ಸನ್ನ ಇನ್ನೂ ಕಡಿಮೆ ಮಾಡಿದ್ರೆ ಅಥವಾ ಅವರ ಕೈಯಿಂದ ಹೋಗುವಂತ ಅವಕಾಶ ನಮಗೆ ಸಿಕ್ಕಿದ್ರೆ ಅದೊಂದು ಸ್ವರ್ಗ ಅಂತಾ ಭಾವಿಸುತ್ತೇನೆ. ಯಾಕೆಂದರೆ ವೀರ ಮರಣರಾಗಿ ಸಾಯಬೇಕು ಅಂತಾರೆ ಎಂದು ಹೇಳಿದರು.
ಶಾಸಕ ಯತ್ನಾಳ್ ಅವನತಿ ಆರಂಭವಾಗಿದೆ: ಮಾಜಿ ಸಚಿವ ಮುರುಗೇಶ್ ನಿರಾಣಿ
ಹೆದರಿ ಹಿಂದೆ ಹೋಡೋಗಿ ರಣಹೇಡಿಗಳಾಗೋದಕ್ಕಿಂತ ವೀರ ಧೀರರಾಗಿ ಸಾಯಬೇಕು ಅಂತಾರೆ ಎದುರುಗಡೆ ಕೊಚ್ಚೋ ಪಚ್ಚೋ ಏನಾದ್ರೂ ಆಗಿ ಹೋದ್ರೆ ಇರೋನಮಗೆ ಸ್ವರ್ಗನೇ ಸಿಗುತ್ತೆ. ಯಾಕೆಂದರೆ ನಾವು ಮಾಡಿದ್ದೇವೆ ನಮ್ಮ ಹೆಸರು ಉಳಿದಿದೆ . ಹಾಗಾಗಿ ಮುಂದೆ ನಾವು ಹೆಸರಿಗಾಗಿ ಓಡಾಡೋದು ಏನಿಲ್ಲ ಈವಾಗ ನಾನು ಇದನ್ನ ಸೇವೆ ಅಂತಾ ಭಾವಿಸಿಕೊಂಡಿದ್ದೇನೆ ಎಂದು ನಿನ್ನೆ ರಾತ್ರಿ ಹಳೇಬೀಡು ಪುಷ್ಪಗಿರಿ ಮಠದಲ್ಲಿ ನಡೆದ ಕಡೆ ಕಾರ್ತಿಕ ಜಾತ್ರಾ ಮಹೋತ್ಸವದಲ್ಲಿ ಸಭೆಯಲ್ಲಿ ಯಾರ ಹೆಸರನ್ನೂ ಹೇಳದೇ ಬಹಳ ಆತಂಕದಿಂದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದ್ದಾರೆ.