* ಪಿಎಸ್‌ಐ ಅಕ್ರಮದಲ್ಲಿ ಬಂಧಿತ ಎಂಜಿನಿಯರ್ ಈತ
* ಮದುವೆ ದಿನ ದಾಳಿ ಬೆದರಿಕೆಗೆ ಹೆದರಿ ಶರಣಾದ ಮಂಜುನಾಥ್
* ಸಿಐಡಿ ವಿಚಾರಣೆಯಲ್ಲಿ ಸತ್ಯಾಂಶ ಬಯಲು
ಕಲಬುರಗಿ(ಮೇ.03): ಪಿಎಸ್‌ಐ ನೇಮಕಾತಿ ಪರೀಕ್ಷೆ ಹಗರಣದಲ್ಲಿ ಬ್ಲೂಟೂತ್ ತಜ್ಞ ಎಂದೇ ಕರೆಯಲ್ಪಡುವ ಇಲ್ಲಿನ ಅಮರ್ಜಾ ನೀರಾವರಿ ಯೋಜನೆಯ ಕಿರಿಯ ಎಂಜಿನಿಯರ್(JE) ಮಂಜುನಾಥ್ ಮೇಳಕುಂದಿ(Manjunath Melakundi) 3 ಕೋಟಿಗೂ ಹೆಚ್ಚು ವೆಚ್ಚ ಮಾಡಿ ಕಲಬುರಗಿಯ(Kalanuragi) ಜಯನಗರದಲ್ಲಿ ಐಷಾರಾಮಿ ಮನೆಕಟ್ಟುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
ಅಫಜಲ್ಪುರದ ಮೇಳಕುಂದಾ ಮೂಲದ ಮಂಜುನಾಥ್ನದ್ದು ಗೌರವಸ್ಥ ಕುಟುಂಬ, ಇವರ ತಂದೆ ವಿಶ್ವನಾಥ್ ನಿವೃತ್ತ ಎಎಸ್‌ಐ. ಚಿಕ್ಕ ವಯಸ್ಸಿನಲ್ಲಿಯೇ ನೀರಾವರಿ ಇಲಾಖೆಯಲ್ಲಿ ಜೆಇ ಹುದ್ದೆ ಅಲಂಕರಿಸಿರುವ ಮಂಜುನಾಥ್ ವೈಭವದ ಬದುಕು ಕಟ್ಟಿಕೊಳ್ಳಬೇಕೆಂಬ ಹಂಬಲದಿಂದ ಹಣದ ಹಿಂದೆ ಬಿದ್ದು, ಅಕ್ರಮಗಳ(Scam) ರೂವಾರಿಯಾದನೆಂಬ ವಿಚಾರ ಸಿಐಡಿ(CID) ವಿಚಾರಣೆಯಲ್ಲಿ ಬಯಲಾಗಿದೆ.
PSI Recruitment Scam ಕಲಬುರಗಿಯ ಮತ್ತೊಂದು ಸೆಂಟರ್‌ನಲ್ಲೂ ಅಕ್ರಮ!
ಮಂಜುನಾಥ್ ಅಂದುಕೊಂಡಂತೆ ನಡೆದಿದ್ದರೆ ತಾನು ನಿರ್ಮಿಸುತ್ತಿರುವ ಭವ್ಯ ಮನೆಯ ಒಳಡಿಸೈನ್ (ಇಂಟಿರೀಯರ್), ಪೀಠೋಪಕರಣಗಳಿಗಾಗಿ ಹಾಂಗ್‌ಕಾಂಗ್(HongKong), ಚೈನಾಗೆ(China) ತೆರಳುವವನಿದ್ದನಂತೆ. ಅಷ್ಟರಲ್ಲಾಗಲೇ ಪಿಎಸ್‌ಐ ಪರೀಕ್ಷೆ ಅಕ್ರಮ(PSI Recruitment Scam) ಬಹಿರಂಗಗೊಂಡು ಎಲ್ಲವೂ ಬದಲಾಯಿತು. 21 ದಿನ ಕಾಲ ತಲೆಮೆರೆಸಿಕೊಂಡಿದ್ದ ಮಂಜುನಾಥ್ ಕೊನೆಗೆ ಭಾನುವಾರ ಸಿಐಡಿ ಕಚೇರಿಗೆ ಬಂದು ಶರಣಾಗಬೇಕಾಯಿತು.
ಕೆಲ ವರ್ಷಗಳ ಹಿಂದೆಯಷ್ಟೇ ಸೇವೆಗೆ ಸೇರಿಕೊಂಡಿದ್ದರೂ ಇಷ್ಟೊಂದು ಐಷಾರಾಮಿ ಮನೆ ನಿರ್ಮಿಸುತ್ತಿರುವುದು ಸಿಐಡಿ ಪೊಲೀಸರಿಗೆ ಅಚ್ಚರಿ ಮೂಡಿಸಿದೆ. ಪರೀಕ್ಷೆ ಅಕ್ರಮದಲ್ಲಿ ಸಂಪಾದಿಸಿದ ಹಣವನ್ನೇ ಇದಕ್ಕಾಗಿ ಬಳಸಿದ್ದಾನಾ ಎಂಬ ಕುರಿತು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಮದುವೆ ದಿನ ದಾಳಿ ಬೆದರಿಕೆಗೆ ಹೆದರಿ ಶರಣಾದ ಮಂಜುನಾಥ್!
ಪಿಎಸ್‌ಐ ಪರೀಕ್ಷೆ ಅಕ್ರಮ ಬಹಿರಂಗವಾದ ಬಳಿಕ 21 ದಿನ ತಲೆಮರೆಸಿಕೊಂಡಿದ್ದ ಆರೋಪಿ ಮಂಜುನಾಥ್ ದಿಢೀರ್ ಶರಣಾಗುವ ಹಿಂದೆ ಸಿಐಡಿ ಪೊಲೀಸರ ಧಮಕಿ ಕೆಲಸ ಮಾಡಿದೆ. ಮಂಜುನಾಥ್ ಶರಣಾಗದೇ ಹೋದರೆ ಆತನ ಕುಟುಂಬದಲ್ಲಿ ನಡೆಯಬೇಕಿದ್ದ ಮದುವೆ ದಿನದಂದೇ ಹಲವರನ್ನು ವಿಚಾರಣೆಗೆ ಕರೆದೊಯ್ಯುವುದಾಗಿ ಸಿಐಡಿ ಪೊಲೀಸರು ಎಚ್ಚರಿಸಿದ್ದರು. ಇದರಿಂದ ಹೆದರಿ ಮಂಜುನಾಥ್ ತಾನಾಗಿಯೇ ಬಂದು ಶರಣಾಗಿದ್ದಾನೆ ಎನ್ನಲಾಗಿದೆ.
PSI ನೇಮಕಾತಿ ಹಗರಣ: ಬಂಧಿತ ಉದ್ಯಮಿ ಕಾಶಿನಾಥ್ ಕಾಟೇಗಾಂವ್‌ಗೂ ಕಾಂಗ್ರೆಸ್ ನಂಟು
ಮಂಜುನಾಥ್ ಮನೆಯಲ್ಲಿ ಆತನ ಚಿಕ್ಕಪ್ಪನ ಮದುವೆ(Marriage) ನಿಶ್ಚಯವಾಗಿತ್ತು, ವಾರದೊಳಗೆ ಮದುವೆ ಇರೋದು ಗಮನಕ್ಕೆ ಬಂದಾಗ ಸಿಐಡಿ ತಂಡ ಮನೆಗೆ ತೆರಳಿತ್ತು. ಮಂಜುನಾಥ ತಾನಾಗಿಯೇ ಬಂದು ಶರಣಾಗದೇ ಹೋದಲ್ಲಿ ಮದುವೆ ದಿನವೇ ಕಾರ್ಯಾಚರಣೆ ನಡೆಸಿ ಹಲವರನ್ನು ವಿಚಾರಣೆಗೆ ಕರೆದೊಯ್ಯುತ್ತೇವೆಂಬ ಎಚ್ಚರಿಕೆ ನೀಡಿತ್ತು. ತಲೆಮರೆಸಿಕೊಂಡು ಓಡಾಡುತ್ತಿದ್ದ ಮಂಜುನಾಥ್ ದೂರವಾಣಿ ಮೂಲಕ ಸಂಪರ್ಕಕ್ಕೆ ಬಂದಾಗ ಈ ವಿಚಾರವನ್ನು ತಂದೆ ವಿಶ್ವನಾಥ್ ತಿಳಿಸಿದ್ದಾರೆ. ಒಂದು ವೇಳೆ ನೀನು ಶರಣಾಗದಿದ್ದರೆ ನಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ಇದರಿಂದ ಮಂಜುನಾಥ್ ಪೊಲೀಸರಿಗೆ ಶರಣಾಗಲು ನಿರ್ಧರಿಸಿದ ಎನ್ನಲಾಗಿದೆ.