PSI Recruitment Scam: ಪರೀಕ್ಷೆ ಹಾಜರಾಗದಿದ್ದರೂ ಪಿಎಸ್‌ಐ ಆಗಿ ನೇಮಕ?

By Girish GoudarFirst Published May 3, 2022, 8:38 AM IST
Highlights

*  ಶಂಕೆ ಮೂಡಿಸಿದ ವಾಟ್ಸಾಪ್‌ ಮೆಸೇಜ್‌?
*  ಎಸಿಪಿಗೆ 22.50 ಲಕ್ಷ ರು.: ಹಣದ ಲೆಕ್ಕ ತೋರಿಸಿದ ‘ಅಕ್ರಮ’ ಅಭ್ಯರ್ಥಿ?
*  ಅ. 3, 2021 ರಂದು ನಡೆದಿದ್ದ ಲಿಖಿತ ಪರೀಕ್ಷೆ
 

ಆನಂದ್‌ ಎಂ. ಸೌದಿ

ಯಾದಗಿರಿ(ಮೇ.03): ಪಿಎಸ್‌ಐ ಅಕ್ರಮದಲ್ಲಿ (PSI Recruitment Scam) ಬಗೆದಷ್ಟೂ ಬಯಲಾಗುತ್ತಿರುವ ಅಂಶಗಳು ಸಿಐಡಿ(CID) ತಂಡವನ್ನೇ ಅಚ್ಚರಿಗೊಳಿಸಿದಂತಿದೆ. ನೊಂದ ಅಭ್ಯರ್ಥಿಗಳು ಸಿಐಡಿ ಹಾಗೂ ಗೃಹ ಸಚಿವರಿಗೆ ನೀಡಿದ್ದಾರೆನ್ನಲಾದ ದಾಖಲೆಗಳ ಪೈಕಿ, ಕೆಲವು ಸುಳಿವುಗಳು ಖಾಕಿಪಡೆಯತ್ತಲೂ ಬೊಟ್ಟು ಮಾಡಿ ತೋರಿಸುತ್ತಿವೆ.

Latest Videos

ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ಹಾಗೂ ಸಿಐಡಿ ಅಧಿಕಾರಿಗಳಿಗೆ ಈ ಬಗ್ಗೆ ಗೌಪ್ಯವಾಗಿ ದೂರು ನೀಡಿದ ಕೆಲವರು, ಪರೀಕ್ಷೆಗೆ ಹಾಜರಾಗದಿದ್ದರೂ ಪಿಎಸೈ ಆಗಿ ಆಯ್ಕೆಯಾದ ಅಭ್ಯರ್ಥಿಯೊಬ್ಬನ ಬಗ್ಗೆ ಮಾಹಿತಿ ನೀಡಿದ್ದಲ್ಲದೆ, ಇದೇ ಅಭ್ಯರ್ಥಿ ಎಸಿಪಿ ಒಬ್ಬರಿಗೆ 22.50 ಲಕ್ಷ ರು.ಗಳ ಹಣ ನೀಡಿರುವುದಾಗಿ ಇನ್ಸಪೆಕ್ಟರ್‌ ಒಬ್ಬರಿಗೆ ವಾಟ್ಸಾಪ್‌ ಸಂದೇಶ ಕಳುಹಿಸಿದ್ದ ಎನ್ನಲಾದ ಸ್ಕ್ರೀನ್‌ ಶಾಟ್‌ ನೀಡಿದ್ದಾರೆ.

Karnataka Politics: ಕುಂಬಳಕಾಯಿ ಕಳ್ಳ ಅಂದ್ರೆ ಅಶ್ವತ್ಥ್‌ ಯಾಕೆ ಹೆಗಲು ಮುಟ್ಟಿಕೊಳ್ತಾರೆ?: ಡಿಕೆಶಿ ಪ್ರಶ್ನೆ

ಇನ್ಸಪೆಕ್ಟರ್‌ ಒಬ್ಬರಿಗೆ ಕಳುಹಿಸಿದಲಾದ ಇಂತಹ ವಾಟ್ಸಾಪ್‌ ಸಂದೇಶದಲ್ಲಿ ಯಾರಾರ‍ಯರಿಗೆ, ಎಷ್ಟೆಷ್ಟುಹಣ ನೀಡಿದ್ದೇನೆ ಎನ್ನುವುದನ್ನು ಹೆಸರುಗಳ ಸಮೇತ ಉಲ್ಲೇಖಿಸಿರುವ ಆತನನ್ನು ವಿಚಾರಣೆ ನಡೆಸಬೇಕೆಂದು ಕೋರಿದ್ದಾರೆ. ಏಪ್ರೀಲ್‌ 24, 2021 ರಂದು ವಾಟ್ಸಾಪ್‌(WhatsApp) ಸಂದೇಶದಲ್ಲಿ ಈ ವಿವರಗಳಿದ್ದು, ಇದನ್ನು ಇತ್ತೀಚೆಗೆ ಗೃಹ ಸಚಿವರಿಗೆ ಕಳುಹಿಸಿ ತನಿಖೆಗೆ ಆಗ್ರಹಿಸಿದ್ದಾರೆ.

ಅಕ್ಟೋಬರ್‌ 3, 2021 ರಂದು ಲಿಖಿತ ಪರೀಕ್ಷೆ ನಡೆದಿವೆ. ಅಧಿಸೂಚನೆ ಪ್ರಕಟಿಸಿದ ನಂತರ ಹಾಗೂ ಪರೀಕ್ಷೆಗೆ ಮೂರ್ನಾಲ್ಕು ತಿಂಗಳು ಮುಂಚೆಯೇ ಇಂತಹ ಡೀಲ್‌ ನಡೆದಿದ್ದವೇ ಎನ್ನುವ ಸಂಶಯ ಕಾಡುತ್ತಿದೆ. ಅಲ್ಲದೆ, ಸದರಿ ಅಭ್ಯರ್ಥಿ ಪರೀಕ್ಷೆಗೂ ಕೂಡದೇ ಪಿಎಸ್‌ಐ ಪರೀಕ್ಷೆ ಪಾಸ್‌ ಮಾಡಿದ್ದಾನೆಂದು ಸಚಿವರಿಗೆ ದೂರಿರುವ ನೊಂದ ಅಭ್ಯರ್ಥಿಗಳು, ಈ ಎಲ್ಲದರ ವಿಚಾರಣೆ ನಡೆಸಬೇಕು, ಲಕ್ಷಾಂತರ ರುಪಾಯಿಗಳ ಹಣದ ಅವ್ಯವಹಾರ ಯಾವ ಕಾರಣಕ್ಕಾಗಿ ನಡೆಯಿತು ? ಎಸಿಪಿ ಹಾಗೂ ಇನ್ಸಪೆಕ್ಟರ್‌ ಹೆಸರುಗಳ ಬರೆದಿರುವ ಇಲ್ಲಿ ನೈಜ ಚಿತ್ರಣ ಹೊರಬರಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಎಸಿಪಿಗೆ(ACP) 22 ಲಕ್ಷ 50 ಸಾವಿರ ಕೊಡಬೇಕು ಎನ್ನುವುದು ಸೇರಿದಂತೆ, ಏಳೆಂಟು ಜನರ ಹೆಸರುಗಳ ಬರೆದು 6 ಲಕ್ಷ, 3 ಲಕ್ಷ, 2 ಲಕ್ಷ, 13 ಲಕ್ಷ, 7.5 ಲಕ್ಷ, 3 ಲಕ್ಷ ಹಾಗೂ 16 ಲಕ್ಷ ರು.ಗಳ ಲೆಕ್ಕಪತ್ರ ತೋರಿಸಿದಂತಿದೆ.
 

click me!