PSI Recruitment Scam: ಕಲಬುರಗಿಯ ಮತ್ತೊಂದು ಸೆಂಟರ್‌ನಲ್ಲೂ ಅಕ್ರಮ: ಮತ್ತಿಬ್ಬರು ಅರೆಸ್ಟ್

Published : May 03, 2022, 10:02 AM ISTUpdated : May 03, 2022, 10:28 AM IST
PSI Recruitment Scam: ಕಲಬುರಗಿಯ ಮತ್ತೊಂದು ಸೆಂಟರ್‌ನಲ್ಲೂ ಅಕ್ರಮ: ಮತ್ತಿಬ್ಬರು ಅರೆಸ್ಟ್

ಸಾರಾಂಶ

*  ಬಗೆದಷ್ಟು ಬಯಲಾಗುತ್ತಿದೆ ಪಿಎಸ್ಐ ನೇಮಕಾತಿ ಅಕ್ರಮ *  ಕಲಬುರ್ಗಿಯ ಪ್ರತಿಷ್ಠಿತ ಎಂ ಎಸ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಅಕ್ರಮ *  ಎಲ್ಲಾ ಅಕ್ರಮದ ಸೂತ್ರದಾರ ಬಂಧಿತ ಆರ್.ಡಿ ಪಾಟೀಲ್  

ವರದಿ: ವರದಿ ಶರಣಯ್ಯ ಹಿರೇಮಠ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಲಬುರಗಿ

ಕಲಬುರಗಿ(ಮೇ.03): ಪಿಎಸ್ಐ ನೇಮಕಾತಿ ಅಕ್ರಮ(PSI Recruitment Scam) ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿಗೆ(CID) ಬಗೆದಷ್ಟು ಹೊಸ ಹೊಸ ಹಗರಣಗಳು ಹೊರಬರುತ್ತಲೇ ಇವೆ. ಕಲಬುರಗಿಯ ಜ್ಞಾನ ಜ್ಯೋತಿ ಪರೀಕ್ಷಾ ಕೇಂದ್ರ ಮಾತ್ರವಲ್ಲದೇ ಇನ್ನೊಂದು ಪರೀಕ್ಷಾ ಕೇಂದ್ರದಲ್ಲಿ ನಡೆದ ಅಕ್ರಮ ಸಿಐಡಿ ತನಿಖೆ ವೇಳೆ ಅನಾವರಣಗೊಂಡಿದೆ. ಇದರಿಂದಾಗಿ ಪ್ರಕರಣದ ತನಿಖೆಗೆ ಹೊಸ ಆಯಾಮ ಸಿಕ್ಕಂತಾಗಿದೆ. 

ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಕಲಬುರಗಿ(Kalaburagi) ಜಿಲ್ಲೆಯೊಂದರಯೇ ನಿನ್ನೆವರೆಗೆ 26 ಜನ ಸಿಕ್ಕು ಬಿದ್ದಿದ್ದು ಸಿಐಡಿಯಿಂದ ಬಂಧನಕ್ಕೆ ಒಳಗಾಗಿದ್ದಾರೆ. ಎಲ್ಲಾ ಇಪ್ಪತ್ತಾರು ಜನ ಆರೋಪಿಗಳು(Accused) ಬಂಧಿತರಾಗಿರುವುದು(Arrest) ಕಲಬುರಗಿಯ ಜ್ಞಾನ ಜ್ಯೋತಿ ಪರೀಕ್ಷಾ ಕೇಂದ್ರದಲ್ಲಿ ನಡೆದ ಅಕ್ರಮದ ಪಾಲುದಾರಿಕೆಯ ಕಾರಣಕ್ಕಾಗಿ.‌ ಈ ಜ್ಞಾನ ಜ್ಯೋತಿ ಶಾಲೆ ಬಿಜೆಪಿ ಮಹಿಳಾ ಘಟಕದ ಮಾಜಿ ಜಿಲ್ಲಾಧ್ಯಕ್ಷೆ ದಿವ್ಯಾ ಹಾಗರಗಿ ಅವರಿಗೆ ಸೇರಿದ್ದು. ಇದುವರೆಗೆ ಈ ಶಾಲೆಗೆ ಸೀಮಿತವಾಗಿ ನಡೆಯುತ್ತಿದ್ದ ತನಿಖೆ ನಿನ್ನೆ ರಾತ್ರಿಯಿಂದ ಹೊಸ ಮಜಲು ಪಡೆದುಕೊಂಡಿದೆ. ಕಲಬುರಗಿಯ ಇನ್ನೊಂದು ಪರೀಕ್ಷಾ ಕೇಂದ್ರದಲ್ಲಿ ಪಿ.ಎಸ್.ಐ ನೇಮಕಾತಿ ಅಕ್ರಮ ನಡೆದಿರುವುದೇ ಇದಕ್ಕೆ ಕಾರಣ.

PSI Scam: ಹದಿನೆಂಟು ದಿನಗಳಲ್ಲಿ ಸುತ್ತಾಡಿದ್ದು ಎಲ್ಲೆಲ್ಲಿ ? ಆ 18 ದಿವ್ಯ ದಿನಗಳು!

ಹೌದು, ಕಲಬುರಗಿಯ ಇನ್ನೊಂದು ಪ್ರತಿಷ್ಠಿತ ಎಂ.ಎಸ್.ಐ ಕಾಲೇಜು ಪರೀಕ್ಷಾ ಕೇಂದ್ರದಲ್ಲೂ ಪಿ.ಎಸ್.ಐ ಪರೀಕ್ಷೆಯ ಅಕ್ರಮ ನಡೆದಿದೆ. ಈ ಬಗ್ಗೆ ನಡೆಯುತ್ತಿರುವ ಸಿಐಡಿ ತನಿಖೆಯಲ್ಲಿ(Investigation) ಈ ಮಹತ್ವದ ಮಾಹಿತಿ ಬಯಲಾಗಿದೆ. ಈ ಸುಳಿವು ಸಿಕ್ಕಿದ್ದೇ ತಡ ಸಿಐಡಿ ಆ ಬಗೆಗಿನ ತನಿಖೆ ತೀವ್ರಗೊಳಿಸಿ ಇಬ್ಬರನ್ನು ಬಂಧಿಸಿಯೇ ಬಿಟ್ಟಿದ್ದಾರೆ. 

ಇಲ್ಲೂ ಆರ್.ಡಿ ಕಮಾಲ್ !

ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಬಂಧಿತನಾಗಿರುವ ಅಫಜಲಪುರದ ಆರ್ ಡಿ ಪಾಟೀಲ್ ನೇ,  ಎಂ.ಎಸ್.ಐ ಕಾಲೇಜು ಎಕ್ಸಾಂ ಸೆಂಟರ್ ನಲ್ಲಿ ನಡೆದ ಅಕ್ರಮದ ರುವಾರಿ ಎನ್ನಲಾಗಿದೆ. ಆರ್.ಡಿ ಪಾಟೀಲ್ ನ ಜಾಲ ಇ‌ನ್ನಷ್ಟು ಪರೀಕ್ಷಾ ಕೇಂದ್ರಗಳಿಗೂ ವಿಸ್ತರಣೆಯಾಗಿರುವ ಅನುಮಾನಗಳಿದ್ದು, ಸಿಐಡಿ ತನಿಖೆ ತೀವ್ರಗೊಂಡಿದೆ. 
ಕಲಬುರಗಿಯ ಎಂ.ಎಸ್.ಐ ಪರೀಕ್ಷಾ ಕೇಂದ್ರದಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು(CID Police) ಮತ್ತಿಬ್ಬರನ್ನು ಬಂಧಿಸಿದ್ದಾರೆ. ಒಬ್ಬ ಕಲಬುರಗಿಯ ರಾಜಾಪೂರ ಬಡಾವಣೆ ನಿವಾಸಿ ಪ್ರಭು, ಇನ್ನೊಬ್ಬ ಚಂದ್ರಕಾಂತ ಕುಲ್ಕರ್ಣಿ. ಬಂಧಿತ ಪ್ರಭು ಪಿ.ಎಸ್.ಐ ಪರೀಕ್ಷೆ ಬರೆದ ಅಭ್ಯರ್ಥಿಯಾಗಿದ್ದಾನೆ(Candidate). ಇನ್ನೊಬ್ಬ ಬಂಧಿತ ಚಂದ್ರಕಾಂತ ಕುಲ್ಕರ್ಣಿ ಕಿಂಗ್ ಪಿನ್ ಆರ್.ಡಿ ಪಾಟೀಲ್ ನ ಆಡಿಟರ್. 

ಅಕ್ರಮದ ಹಣ ಆಡಿಟ್ ಗೂ ಒಬ್ಬ ಆಡಿಟರ್ ?

ಆರ್.ಡಿ ಪಾಟೀಲ್ ಪಿ.ಎಸ್.ಐ ನೇಮಕಾತಿ ಅಕ್ರಮದ ಮೂಲಕ ಕೋಟಿಗಟ್ಟಲೇ ಹಣ ಸಂಪಾದಿಸಿದ್ದು ಇದರಲ್ಲಿ ಯಾರಿಂದ ಎಷ್ಟು ಬಂತು.? ಯಾರಿಗೆ ಎಷ್ಟು ಹೋಯ್ತು ? ಎನ್ನುವುದರ ಲೆಕ್ಕ ಪತ್ರ ಮಾಡಿಸುವುದಕ್ಕಾಗಿಯೇ ಒಬ್ಬ ಆಡಿಟರ್ ನೇಮಿಸಿಕೊಂಡಿದ್ದ. ಆ ಆಡಿಟರ್ ಚಂದ್ರಕಾಂತ ಕುಲ್ಕರ್ಣಿ ತನ್ನ ಕೆಲಸ ಮಾತ್ರ ಮಾಡದೇ ತನಗೆ ಪರಿಚಿತನಿರುವ ಪ್ರಭು ಎನ್ನುವ ಅಭ್ಯರ್ಥಿಯನ್ನು ಆರ್.ಡಿ ಪಾಟೀಲ್ ಗೆ ಪರಿಚಯ ಮಾಡಿಸಿ ಆತನಿಂದ ಹಣ ಪಡೆದು ಆರ್.ಡಿ ಪಾಟೀಲ್ ಗೆ ಕೊಟ್ಟಿದ್ದ. ಒಟ್ಟಾರೆ ಇಬ್ಬರ ನಡುವೆ ಮಧ್ಯವರ್ತಿಯಾಗಿಯೂ ಕೆಲಸ ಮಾಡಿದ್ದ. ಇದೇ ಕಾರಣಕ್ಕಾಗಿ ಇದೀಗ ಸಿಐಡಿ , ಚಂದ್ರಕಾಂತ ಕುಲ್ಕರ್ಣಿಯನ್ನೂ ವಶಕ್ಕೆ ಪಡೆದುಕೊಂಡಿದೆ. ಈ ಎಂ.ಎಸ್.ಐ. ಕಾಲೇಜು ಸೆಂಟರನಲ್ಲಿಯೇ ಇನ್ನಷ್ಟು ಅಕ್ರಮಗಳು ನಡೆದಿರುವುದು ಸಿಐಡಿ ಗಮನಕ್ಕೆ ಬಂದಿದ್ದು ತನಿಖೆ ತೀವ್ರಗೊಳಿಸಲಾಗಿದೆ. 

ಆರ್.ಡಿ ಜಾಲ, ಇನ್ನೆಷ್ಟು ಕಡೆ ?

ಪಿ.ಎಸ್.ಐ ನೇಮಕಾತಿ ಅಕ್ರಮದಲ್ಲಿ ದಿವ್ಯಾ ಹಾಗರಗಿ ಪಾತ್ರ ಕೇವಲ ತನ್ನ ಜ್ಞಾನ ಜ್ಯೋತಿ ಶಾಲೆಗೆ ಸೀಮಿತವಾಗಿಲ್ಲ ಎನ್ನುವುದು ತನಿಖೆಯಲ್ಲಿ ಬಯಲಾಗುತ್ತಿದೆ. ಆದ್ರೆ ಆರ್.ಡಿ ಪಾಟೀಲ್ ನ ಅಕ್ರಮದ ಜಾಲ ಕಲಬುರಗಿಯ ಇತರ ಪರೀಕ್ಷಾ ಕೇಂದ್ರಗಳಿಗೂ ವಿಸ್ತರಿಸಿರುವ ಮಾಹಿತಿ ತನಿಖೆಯಲ್ಲಿ ಪತ್ತೆಯಾಗಿದೆ. ಕಲಬುರಗಿ ಜಿಲ್ಲೆ ಮಾತ್ರವಲ್ಲದೇ ಇತರ ಜಿಲ್ಲೆಗಳಲ್ಲಿಯೂ ಆರ್.ಡಿ ಪಾಟೀಲ್ ಅಕ್ರಮ ಮಾಡಿರುವುದು ಬೆಳಕಿಗೆ ಬರುತ್ತಿದೆ. ಈ ಬಗ್ಗೆಯೂ ಸಿಐಡಿ ತನಿಖೆ ನಡೆಸುತ್ತಿದೆ. ಒಟ್ಟಾರೆ ಆರ್.ಡಿ ಪಾಟೀಲ್ ನ ಅಕ್ರಮದ ಜಾಲ ಬಗೆದಷ್ಟು ಬಯಲಾಗುತ್ತಲೇ ಇದೆ. 

ಸಿಐಡಿ ಪೊಲೀಸರಿಗೇ ಚಳ್ಳೆ ಹಣ್ಣು ತಿನಿಸಿದ್ದ ಹಾಗರಗಿ: 18 ದಿನದಿಂದ ದಿವ್ಯಾ ಎಲ್ಲಿದ್ರು? ಇಂಚಿಂಚು ಮಾಹಿತಿ ಇಲ್ಲಿದೆ

ಬಂಧಿತರ ಸಂಖ್ಯೆ 28 ಕ್ಕೆ

ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರ್ಗಿ ಒಂದರಲ್ಲೇ ಸಿಐಡಿ ಇದುವರೆಗೂ 28 ಜನ ಆರೋಪಿಗಳನ್ನು ಬಂಧಿಸಿದೆ. ಜ್ಞಾನಜ್ಯೋತಿ ಪರೀಕ್ಷಾ ಕೇಂದ್ರದಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಒಟ್ಟು 26 ಜನರನ್ನು ಬಂಧಿಸಿ ಬಂಧಿಸಲಾಗಿದ್ದು, ಈ ಪೈಕಿ ಆ ಶಾಲೆಯ ಕಾರ್ಯದರ್ಶಿ ದಿವ್ಯಾ ಹಾಗರಗಿ, ಮುಖ್ಯೋಪಾಧ್ಯಾಯ ಕಾಶಿನಾಥ್, ಕಿಂಗ್ಪಿನ್ ಆರ್ ಡಿ ಪಾಟೀಲ್ , ಮಹಾಂತೇಶ ಪಾಟೀಲ್ , ಶಾಲೆಯ ಐವರು ಶಿಕ್ಷಕಿಯರು ಪ್ರಮುಖರಾಗಿದ್ದಾರೆ. ಇದೀಗ ಎಂಎಸ್ಐ ಕಾಲೇಜಿನಲ್ಲಿ ನಡೆದ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಇನ್ನಿಬ್ಬರನ್ನು ಸಿಐಡಿ ಬಂಧಿಸಿದ್ದು, ಈ ಮೂಲಕ ಕಲ್ಬುರ್ಗಿ ಜಿಲ್ಲೆಯೊಂದರಲ್ಲಿಯೇ ಬಂಧಿತರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ. 

ಎಂ.ಎಸ್.ಐ ಕಾಲೇಜು ಸಿಬ್ಬಂದಿಗಳಲ್ಲಿ ನಡುಕ ಶುರು

ಎಂ.ಎಸ್.ಐ ಕಾಲೇಜಿನಲ್ಲೂ(MSI College) ಅಕ್ರಮ ನಡೆದಿರುವುದು ಪತ್ತೆಯಾಗುತ್ತಿದ್ದಂತೆಯೇ ಇದರಲ್ಲಿ ಇನ್ನಷ್ಟು ಜಲ ಸಿಲುಕುವ ಸಾಧ್ಯತೆ ಕಂಡುಬಂದಿದೆ. ಪರಿಕ್ಷಾ ಮೇಲ್ವಿಚಾರಕರ ಸಹಾಯವಿಲ್ಲದೇ ಅಕ್ರಮ ನಡೆಯೋದು ಸಾಧ್ಯವಿಲ್ಲ. ಈ ಬಗ್ಗೆ ಸಿಐಡಿ ತನಿಖೆ ಶುರು ಮಾಡಿದೆ. ಹಾಗಾಗಿ ಈ ಕಾಲೇಜಿನ ಸಿಬ್ಬಂದಿಗಳಲ್ಲಿ ನಡುಕ‌ ಶುರುವಾಗಿದೆ. ಈ ಪ್ರಕರಣದಲ್ಲಿ ಇನ್ನೆಷ್ಟು ಶಿಕ್ಷಕರು, ಅಭ್ಯರ್ಥಿಗಳು, ಮಧ್ಯವರ್ತಿಗಳು, ಕಿಂಗ್ ಪಿನ್ ಗಳು ಜೈಲು ಸೇರ್ತಾರೋ.. ಕಾದು ನೋಡಬೇಕಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ