ಸಾವರ್ಕರ್‌ ವಿರೋಧಿಗಳಿಗೆ ಚಾಟಿಯೇಟು ಬೀಸಿದ ಬಿ.ಎಲ್‌.ಸಂತೋಷ್‌

By Govindaraj SFirst Published Aug 16, 2022, 4:45 AM IST
Highlights

ಯಾರು ಹೆಸರು ಹೇಳಲು ಯೋಗ್ಯತೆ ಇಲ್ಲದಂತಹ ವಂಶದಲ್ಲಿ ಹುಟ್ಟಿದ್ದಾರೋ ಅಂತವರು ಸಾವರ್ಕರ್‌ ಬಗ್ಗೆ ಮಾತನಾಡುತ್ತಾರೆ. ಹಿಂದಿನ 4 ತಲೆಮಾರು ಹಾಗೂ ಮುಂದಿನ 25 ತಲೆಮಾರಿನ ಜನರಿಗೆ ವೀರ ಸಾವರ್ಕರ್‌ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ.

ಚಿಕ್ಕಬಳ್ಳಾಪುರ (ಆ.16): ಯಾರು ಹೆಸರು ಹೇಳಲು ಯೋಗ್ಯತೆ ಇಲ್ಲದಂತಹ ವಂಶದಲ್ಲಿ ಹುಟ್ಟಿದ್ದಾರೋ ಅಂತವರು ಸಾವರ್ಕರ್‌ ಬಗ್ಗೆ ಮಾತನಾಡುತ್ತಾರೆ. ಹಿಂದಿನ 4 ತಲೆಮಾರು ಹಾಗೂ ಮುಂದಿನ 25 ತಲೆಮಾರಿನ ಜನರಿಗೆ ವೀರ ಸಾವರ್ಕರ್‌ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರು ಸಾವರ್ಕರ್‌ ಟೀಕಾಕಾರಿಗೆ ಮಾರ್ಮಿಕವಾಗಿ ಚಾಟಿಯೇಟು ಬೀಸಿದ್ದಾರೆ. 

ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥದಲ್ಲಿ ಸ್ವಾತಂತ್ರ್ಯ ಅಮೃತೋತ್ಸವದ ಪ್ರಯುಕ್ತಾ ಜಿಲ್ಲೆಯ ವಿದುರಾಶ್ವಥ ಬಳಿ ‘ಸಮೃದ್ಧ ಭಾರತ ಎನ್ಜಿಒ ಸಂಸ್ಥೆ ರೈಡ್‌ ಫಾರ್‌ ನೇಷನ್‌’ ಎಂಬ ಬೈಕ್‌ ರಾರ‍ಯಲಿಗೆ ಚಾಲನೆ ನೀಡಿ ಮಾತನಾಡಿದರು. ಸಾವರ್ಕರ್‌ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ. ಯಾರು ಹೆಸರು ಹೇಳಲು ಯೋಗ್ಯತೆ ಇಲ್ಲದಂತಹ ವಂಶದಲ್ಲಿ ಹುಟ್ಟಿದ್ದಾರೋ ಅಂತವರು ಸಾವರ್ಕರ್‌ ಬಗ್ಗೆ ಮಾತನಾಡುತ್ತಾರೆ. 

ಕಾರ್ಯಕರ್ತರು ಕಣ್ಣೀರು ಹಾಕ್ತಿದ್ದಾರೆ; ಚಿಂತನ ಮಂಥನ ಸಭೆಯಲ್ಲಿ BL Santhosh ಆಕ್ರೋಶ

ಹಿಂದಿನ ನಾಲ್ಕು ತಲೆಮಾರು ಮುಂದಿನ 25 ತಲೆಮಾರಿನ ಜನರಿಗೆ ಸಾವರ್ಕರ್‌ ಬಗ್ಗೆ ಮಾತನಾಡಲು ಯೋಗ್ಯತೆ ಇರಲ್ಲ. ಅಂಥವರು ಸಾವರ್ಕರ್‌ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು. ಕಷ್ಟಪಟ್ಟು ದೀರ್ಘಕಾಲಿಕ ಹೋರಾಟದಿಂದ ಹಾಗೂ ತ್ಯಾಗ, ಬಲಿದಾನದಿಂದ ಬಂದ ದೇಶದ ಸ್ವಾತಂತ್ರ್ಯವನ್ನು ಪಡೆದಿದ್ದು ಪ್ರತಿಯೊಬ್ಬ ಭಾರತೀಯ ಕೂಡ ಆ ಸ್ವಾತಂತ್ರ್ಯಕ್ಕೆ ಪಾತ್ರರಾಗುವ ರೀತಿಯಲ್ಲಿ ನಡೆದುಕೊಳ್ಳಬೇಕಿದೆ ಎಂದರು. ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಇದ್ದರು.

ಸುಧಾಕರ್‌ ದೇವರು ಮೆಚ್ಚುವ ಕಾರ್ಯ ಮಾಡಿದ್ದಾರೆ: ಪ್ರತಿಯೊಬ್ಬ ಮನುಷ್ಯನಿಗೂ ಅನ್ನ, ಶಿಕ್ಷಣ, ಆರೋಗ್ಯ, ವಸತಿ ಮೂಲಭೂತವಾಗಿ ತೀರಾ ಅಗತ್ಯವಾಗಿ ಬೇಕಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇತಂಹ ಆರೋಗ್ಯ ಮೇಳ ಆಯೋಜಿಸುವಂತೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌, ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಅವರಲ್ಲಿ ಮನವಿ ಮಾಡಿದರು. ನಗರದ ಹೊರ ವಲಯದ ಎಸ್‌ಜೆಸಿಐಟಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಬೃಹತ್‌ ಆರೋಗ್ಯ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ವೈದ್ಯರು ದೇವರಿಗೆ ಸಮಾನ, ಆದರೆ ಇತಂಹ ಆರೋಗ್ಯ ಶಿಬಿರ ಆಯೋಜನೆ ಮೂಲಕ ಸಚಿವ ಸುಧಾಕರ್‌, ಜನ, ಮತದಾರಗಿಂತ ದೇವರು ಮೆಚ್ಚುವ ಕೆಲಸ ಮಾಡಿದ್ದಾರೆಂದು ಬಣ್ಣಿಸಿದರು.

ಸರ್ಕಾರವನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ಯುವ ಕೆಲಸವನ್ನು ಈ ಆರೋಗ್ಯ ಶಿಬಿರದ ಮೂಲಕ ಸಚಿವ ಡಾ.ಕೆ.ಸುಧಾಕರ್‌ ಮಾಡಿದ್ದಾರೆ. ಪ್ರಜಾಭುತ್ವದ ವ್ಯವಸ್ಥೆಯಲ್ಲಿ ಸರ್ಕಾರಗಳೆಂದರೆ ಕೇವಲ ಕಟ್ಟಡಗಳಿಗೆ ಮಾತ್ರ ಸೀಮಿತ ಎನ್ನುವ ಆರೋಪ ಇದೆ. ಆದರೆ ಕೆಲವರ ಸಾರಥ್ಯದಲ್ಲಿ ಸರ್ಕಾರವನ್ನು ಜನರ ಮನೆ ಬಾಲಿಗೆ ತೆಗೆದುಕೊಂಡು ಹೋಗುವ ಕೆಲಸ ಆಗುತ್ತದೆ ಎಂಬುದಕ್ಕೆ ಈ ಶಿಬಿರ ಸಾಕ್ಷಿ. ಯಾರು ಆಸ್ಪತ್ರೆ ಮುಖ ನೋಡಿಲ್ಲ. ಅವರಿಗೆ ಇತಂಹ ಶಿಬಿರಗಳಿಂದ ಪ್ರಯೋಜ ಆಗುತ್ತದೆಂದರು.

ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ: ಚಿಕ್ಕಬಳ್ಳಾಪುರದಲ್ಲಿ ಬೃಹತ್‌ ಆರೋಗ್ಯ ಮೇಳದಂತೆ ಇನ್ನೂ ಹೆಚ್ಚಿನ ಜನರನ್ನು ಸೇರಿಸಿ ಪ್ರತಿ ಜಿಲ್ಲೆಯಲ್ಲಿ ಇತಂಹ ಆರೋಗ್ಯ ಮೇಳಗಳು ಆಗಬೇಕೆಂದ ಅವರು, ದೇಶದಲ್ಲಿ 70 ವರ್ಷ ಆಡಳಿತ ನಡೆಸಿದವರು ಸಮಾಜದ ಕಟ್ಟಕಡೆಯ ಮನುಷ್ಯನ ಆರೋಗ್ಯದ ಬಗ್ಗೆ ಗಮನ ಹರಿಸಿಲ್ಲ. ಆ ಕಾರಣಕ್ಕಾಗಿ ಇಂದು ಬೃಹತ್‌ ಆರೋಗ್ಯ ಮೇಳ ನಡೆಸುವ ಪರಿಸ್ಥಿತಿ ಒದಗಿ ಬಂದಿದೆ. ಆರೋಗ್ಯ ಮೇಳ ಜಾಗತಿಕ ದಾಖಲೆ ಆಗಬಾರದಾಗಿತ್ತು. ಆದರೆ ಅದಕ್ಕೆ ಕಾರಣ 70 ವರ್ಷದ ಆಡಳಿತವೇ ಕಾರಣ ಎಂದು ಪರೋಕ್ಷವಾಗಿ ಕಾಂಗ್ರೆಸ್‌ ವಿರುದ್ದ ವಾಗ್ದಾಳಿ ನಡೆಸಿದರು. 

ಮಿಂಚೇರಿ ಬೆಟ್ಟ ಪರಿಸರ ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿ: ಸಚಿವ ಬಿ. ಶ್ರೀರಾಮುಲು

ಕೊರೋನಾ ಸಂದರ್ಭದಲ್ಲಿ ದೇಶದಲ್ಲಿ ವೈದ್ಯರು, ದಾದರಿಯರು ಏನೆಂದು ತೋರಿಸಿದ್ದಾರೆ. ಸರ್ಕಾರಗಳು ತಮ್ಮ ನಡೆಯಲ್ಲಿ ಕರ್ತವ್ಯ ಬದ್ದತೆನ್ನು ತೋರಿ ನಡೆಯಬೇಕಿದೆ. ದೇಶದಲ್ಲಿ ಕೊರೋನಾ ನಿಯಂತ್ರಣಕ್ಕೆ 200 ಕೋಟಿ ಲಸಿಕೆ ನೀಡಲಾಗಿದೆ. ಆದರೆ ಯಾರೊಬ್ಬರು ಲಸಿಕೆಗೆ ಲಂಚ ಕೊಟ್ಟಿಲ್ಲ. ಡಿಜಿಟಲೀಕರಣ ಬಳಿಕ ದೇಶ ಬದಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಜಾಗತಿಕವಾಗಿ ದೇಶ, ಸಮಾಜದ ಪರ ಕಳಕಳಿಯ ಪ್ರದರ್ಶನ ಆಗುತ್ತಿದೆ ಇದು ಒಳ್ಳೆಯ ಬೆಳವಣಿಗೆ, ಸರ್ಕಾರಗಳು ಎಲ್ಲವನ್ನು ಮಾಡಲು ಅಸಾಧ್ಯ. ಆದರೆ ಎಲ್ಲಕ್ಕೂ ಪೂರಕವಾಗಿ ನಿಲ್ಲುತ್ತದೆಯೆಂದರು.

click me!