Corona Crisis: 2 ವಾರದ ಬಳಿಕ ಕರ್ನಾಟಕದಲ್ಲಿ ಶೂನ್ಯ ಕೊರೋನಾ ಸಾವು

By Govindaraj S  |  First Published Aug 16, 2022, 3:30 AM IST

ರಾಜ್ಯದಲ್ಲಿ ಎರಡು ವಾರದ ಬಳಿಕ ಕೊರೋನಾ ಸೋಂಕಿತರ ಸಾವು ಶೂನ್ಯ ದಾಖಲಾಗಿದೆ. ಸೋಮವಾರ 1,206 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 1653 ಮಂದಿ ಗುಣಮುಖರಾಗಿದ್ದಾರೆ. 12 ಸಾವಿರ ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ.9.6ರಷ್ಟು ದಾಖಲಾಗಿದೆ.


ಬೆಂಗಳೂರು (ಆ.16): ರಾಜ್ಯದಲ್ಲಿ ಎರಡು ವಾರದ ಬಳಿಕ ಕೊರೋನಾ ಸೋಂಕಿತರ ಸಾವು ಶೂನ್ಯ ದಾಖಲಾಗಿದೆ. ಸೋಮವಾರ 1,206 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 1653 ಮಂದಿ ಗುಣಮುಖರಾಗಿದ್ದಾರೆ. 12 ಸಾವಿರ ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ.9.6ರಷ್ಟು ದಾಖಲಾಗಿದೆ. ಭಾನುವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳನ್ನು 17 ಸಾವಿರ ಕಡಿಮೆ ನಡೆಸಲಾಗಿದೆ. ಹೀಗಾಗಿ, ಹೊಸ ಪ್ರಕರಣಗಳು 631 ಇಳಿಕೆಯಾಗಿವೆ. 

(ಭಾನುವಾರ 1837 ಪ್ರಕರಣ, ಮೂರು ಸಾವು ಸಂಭವಿಸಿತ್ತು.) ಸದ್ಯ ಸಕ್ರಿಯ ಸೋಂಕಿತರ ಸಂಖ್ಯೆ 10475ಕ್ಕೆ ಏರಿಕೆಯಾಗಿವೆ. ಈ ಹಿಂದೆ ಆಗಸ್ಟ್‌ 2 ರಂದು ಶೂನ್ಯ ಪ್ರಕರಣಗಳು ವರದಿಯಾಗಿದ್ದು, ಬಳಿಕ ಏರಿಕೆಯಾಗುತ್ತಾ ಸಾಗಿ ಒಂದೇ ದಿನ ಆರು ಮಂದಿ ಸಾವಿಗೀಡಾಗಿದ್ದರು. ಕಳೆದ ಒಂದು ವಾರದಿಂದ ಸರಾಸರಿ ಮೂರು ಮಂದಿ ಸಾವಿಗೀಡಾಗಿದ್ದಾರೆ. ಸದ್ಯ ಶೂನ್ಯಕ್ಕಿಳಿಕೆಯಾಗಿರುವುದು ಸಮಾಧಾಕರ ಅಂಶ. ಇನ್ನು ಸೋಂಕು ಪರೀಕ್ಷೆ ಅರ್ಧಕ್ಕರ್ಧದಷ್ಟು ತಗ್ಗಿದ ಹಿನ್ನೆಲೆ ಹೊಸ ಪ್ರಕರಣಗಳು ಕೂಡ ಕಡಿಮೆಯಾಗಿವೆ.

Tap to resize

Latest Videos

undefined

Corona Crisis: ಕರ್ನಾಟಕದಲ್ಲಿ 1837 ಜನಕ್ಕೆ ಕೊರೋನಾ: 3 ಸಾವು

93ಕ್ಕಿಳಿದ ಸಕ್ರಿಯ ಪ್ರಕರಣ: ಚಾಮರಾಜನಗರ ಜಿಲ್ಲೆಯಲ್ಲಿ ಸೋಮವಾರ ಹೊಸದಾಗಿ 10 ಮಂದಿಗೆ ಕೋವಿಡ್‌ ಇರುವುದು ದೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 93ಕ್ಕೆ ಇಳಿದಿದೆ. ಸೋಮವಾರ 8 ಮಂದಿಯನ್ನು ಹೋಂ ಐಸೋಲೆಷನ್‌ಗೆ ಕಳುಹಿಸಿದ್ದು ಒಟ್ಟು 87 ಮಂದಿ ಹೋಂ ಐಸೋಲೆಷನ್‌ನಲ್ಲಿದ್ದಾರೆ. 6 ಮಂದಿ ಕೋವಿಡ್‌ ಕೇರ್‌ ಸೆಂಟರಿನಲ್ಲಿ ಆರೈಕೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಡಳಿತ ತನ್ನ ಬುಲೆಟಿನ್‌ನಲ್ಲಿ ತಿಳಿಸಿದೆ. ಭಾನುವಾರ ಒಟ್ಟು 140 ಮಂದಿಗೆ ಕೋವಿಡ್‌ ಪರೀಕ್ಷೆ ನಡೆಸಿದ್ದು, 310 ಮಂದಿ ಪ್ರಾಥಮಿಕ, ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ. ಸೋಮವಾರ 24 ಮಂದಿ ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಬುಲೆಟಿನ್‌ ತಿಳಿಸಿದೆ.

ದ.ಕ.ದಲ್ಲಿ 10 ಮಂದಿಗೆ ಕೊರೋನಾ: ಜಿಲ್ಲೆಯಲ್ಲಿ ಸೋಮವಾರ 10 ಕೊರೋನಾ ಪಾಸಿಟಿವ್‌ ಪ್ರಕರಣ ಪತ್ತೆಯಾಗಿದ್ದು, 9 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ 76 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯ ಪಾಸಿಟಿವಿಟಿ ದರ ಶೇ.2.36 ರಷ್ಟಿದೆ. ಜಿಲ್ಲೆಯಲ್ಲಿ ಈಗ ಒಟ್ಟು ಸೋಂಕಿತರ ಸಂಖ್ಯೆ1,36,445ಕ್ಕೆ ಏರಿಕೆಯಾಗಿದೆ. 1,34,512 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೆ ಒಟ್ಟು 1,857 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಎಲ್ಲಿ ಎಷ್ಟು ಕೇಸ್‌?: ಸೋಮವಾರದ ಹೊಸ ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿ 870 ಪತ್ತೆಯಾಗಿವೆ. ಉಳಿದಂತೆ ಅತಿ ಹೆಚ್ಚು ಮೈಸೂರು 60, ಚಿಕ್ಕಮಗಳೂರು 42, ಬಳ್ಳಾರಿ 38, ಬೆಳಗಾವಿ 33 ಮಂದಿಗೆ ಸೋಂಕು ತಗುಲಿದೆ. 15 ಜಿಲ್ಲೆಗಳಲ್ಲಿ ಬೆರಳೆಣಿಕೆ, ವಿಜಯಪುರ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣಗಳು ವರದಿಯಾಗಿವೆ.

Corona Crisis: ಕೋವಿಡ್‌ ಸೋಂಕಿತರ ಸಾವು ಹೆಚ್ಚಳ: ಆತಂಕ

ಕೋವಿಡ್‌ಗೆ ಮೊದಲ ಲಸಿಕೆ ಕಂಡುಹಿಡಿದ ಫೈಜರ್‌ ಸಿಇಒಗೆ ಕೊರೋನಾ: ಕೋವಿಡ್‌ಗೆ ವಿಶ್ವದಲ್ಲೇ ಮೊದಲ ಲಸಿಕೆ ಕಂಡುಹಿಡಿದು ಅಮೆರಿಕ ಮೂಲದ ಫೈಜರ್‌ ಕಂಪನಿಯ ಸಿಇಒ ಇದೀಗ ಕೋವಿಡ್‌ಗೆ ತುತ್ತಾಗಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಕಂಪನಿಯ ಸಿಇಒ ಆಲ್ಬರ್ಚ್‌ ಬೌರ್ಲಾ, ಸೌಮ್ಯ ಪ್ರಮಾಣದ ಸೋಂಕು ಕಾಣಿಸಿಕೊಂಡಿದೆ. ಚೇತರಿಕೆ ಆಗುವವರೆಗೂ ಪ್ರತ್ಯೇಕವಾಗಿರಲಿದ್ದೇನೆ ಎಂದು ತಿಳಿಸಿದ್ದಾರೆ. ಈಗಾಗಲೇ ಸೋಂಕಿನ ವಿರುದ್ಧ 4 ಡೋಸ್‌ ಲಸಿಕೆ ಪಡೆದುಕೊಂಡಿದ್ದ ಆಲ್ಬರ್ಚ್‌ ಇದೀಗ ಸೋಂಕಿನ ವಿರುದ್ಧ ಕಂಪನಿ ಅಭಿವೃದ್ಧಿಪಡಿಸಿರುವ ಪ್ಯಾಕ್ಸೋವಿಡ್‌ ಮಾತ್ರೆ ಸೇವನೆ ಆರಂಭಿಸಿರುವುದಾಗಿ ತಿಳಿಸಿದ್ದಾರೆ.

click me!