ಬಿಜೆಪಿ ಪ್ರಚಾರ ಮೆರವಣಿಗೆಯಲ್ಲಿ ಝಣಝಣ ಕಾಂಚಾಣ!

By Web Desk  |  First Published Nov 1, 2018, 5:52 PM IST

ಜಮಖಂಡಿ ಬಿಜೆಪಿ ಪ್ರಚಾರ ಮೆರವಣಿಗೆಯಲ್ಲಿ ಝಣಝಣ ಕಾಂಚಾಣ! ಕೈಯಲ್ಲಿ ಹಣ ಹಿಡಿದೇ ಭಜ೯ರಿ ಸ್ಟೆಪ್ ಹಾಕಿದ ಕಾರ್ಯಕರ್ತ! ಬಿಜೆಪಿ ಭಾವುಟ ಹಿಡಿದು ಕುಣಿಯುತ್ತಿದ್ದ ಕಾರ್ಯಕರ್ತರು! ಮಾಜಿ ಸಿಎಂ ಜಗದೀಶ್ ಶೆಟ್ಟರ್, ಪ್ರಹ್ಲಾದ ಜೋಷಿ ನೇತೃತ್ವದಲ್ಲಿ ನಡೆದ ಮೆರವಣಿಗೆ! ಬಿಜೆಪಿ ಅಭ್ಯಥಿ೯ ಶ್ರೀಕಾಂತ ಕುಲಕಣಿ೯ ಪರ ಬಹಿರಂಗ ಪ್ರಚಾರದ ಮೆರವಣಿಗೆ


ಮಲ್ಲಿಕಾರ್ಜುನ ಹೊಸಮನಿ

ಜಮಖಂಡಿ(ನ.1): ಜಮಖಂಡಿ ಉಪ ಚುನಾವಣೆಯ ಬಿಜೆಪಿ ಪ್ರಚಾರ ಮೆರವಣಿಗೆಯಲ್ಲಿ ಪಕ್ಷದ ಕಾರ್ಯಕರ್ತರು ಹಣದ ಪ್ರದರ್ಶನ ಮಾಡಿರುವ ಘಟನೆ ನಡೆದಿದೆ. ಮೆರವಣಿಗೆಯಲ್ಲಿ ಕೈಯಲ್ಲಿ ಹಣ ಹಿಡಿದು ಕಾರ್ಯಕರ್ತನೋರ್ವ ಭಜ೯ರಿ ಸ್ಟೆಪ್ ಹಾಕುತ್ತಿದ್ದ ದೃಶ್ಯ ಕಂಡು ಬಂದಿದೆ.

Tap to resize

Latest Videos

ದಾರಿಯುದ್ದಕ್ಕೂ ಕಾರ್ಯಕರ್ತ ಹಣ ತೋರಿಸುತ್ತಾ ಡ್ಯಾನ್ಸ್ ಮಾಡಿದ್ದು, ನಬಿಜೆಪಿಗೆ ತೀವ್ರ ಮುಜುಗರ ಎದುರಾಗಿದೆ. ಬಿಜೆಪಿ ಭಾವುಟ ಹಿಡಿದು ಕುಣಿಯುತ್ತಿದ್ದ ಕಾರ್ಯಕರ್ತ, ಜೊತೆಗೆ ಹಣವನ್ನೂ ಪ್ರದರ್ಶನ ಮಾಡಿದ್ದಾನೆ.

"

ನಗರದ ಹಳೇ ತಹಶೀಲ್ದಾರ ಕಚೇರಿಯಿಂದ ಬಸವ ಭವನದವರೆಗೆ ನಡೆದ ಮೆರವಣಿಗೆಯಲ್ಲಿ ಈ ಘಟನೆ ನಡೆದಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್, ಪ್ರಹ್ಲಾದ ಜೋಷಿ ನೇತೃತ್ವದಲ್ಲಿ ಈ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.
 

click me!