ಮುಸ್ಲಿಂರಿಗೆ ಕಿರುಕುಳ: ಗನ್‌ಮ್ಯಾನ್‌ ವಾಪಸ್‌ ಮಾಡಿದ ಮಾಣಿಪ್ಪಾಡಿ

By Govindaraj SFirst Published Jun 28, 2022, 5:00 AM IST
Highlights

ರಾಜ್ಯದಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡುತ್ತಿರುವ ಕಿರುಕುಳವನ್ನು ವಿರೋಧಿಸಿ ಸರ್ಕಾರ ತನಗೆ ನೀಡಿದ ಗನ್‌ ಮ್ಯಾನ್‌ ಹಾಗೂ ಇತರ ಸೌಲಭ್ಯಗಳನ್ನು ವಾಪಸ್‌ ಪಡೆಯುವುದಾಗಿ ಬಿಜೆಪಿ ರಾಜ್ಯ ಜಂಟಿ ವಕ್ತಾರ ಅನ್ವರ್‌ ಮಾಣಿಪ್ಪಾಡಿ ಘೋಷಿಸಿದ್ದಾರೆ.

ಮಂಗಳೂರು (ಜೂ.28): ನಾಲ್ಕು ಲಕ್ಷ ಕೋಟಿ ರು. ಮೌಲ್ಯದ ವಕ್ಫ್ ಆಸ್ತಿ ರಕ್ಷಣೆಗೆ ರಾಜ್ಯ ಸರ್ಕಾರ ವಿಫಲವಾಗಿರುವುದು, ಅಲ್ಪಸಂಖ್ಯಾತರ ಇಲಾಖೆ, ವಕ್ಫ್ ಬೋರ್ಡ್‌ನ ಅವ್ಯವಹಾರಗಳ ಬಗ್ಗೆ ಕ್ರಮ ಕೈಗೊಳ್ಳದಿರುವುದು, ರಾಜ್ಯದಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡುತ್ತಿರುವ ಕಿರುಕುಳವನ್ನು ವಿರೋಧಿಸಿ ಸರ್ಕಾರ ತನಗೆ ನೀಡಿದ ಗನ್‌ ಮ್ಯಾನ್‌ ಹಾಗೂ ಇತರ ಸೌಲಭ್ಯಗಳನ್ನು ವಾಪಸ್‌ ಪಡೆಯುವುದಾಗಿ ಬಿಜೆಪಿ ರಾಜ್ಯ ಜಂಟಿ ವಕ್ತಾರ ಅನ್ವರ್‌ ಮಾಣಿಪ್ಪಾಡಿ ಘೋಷಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷಗಳಲ್ಲಿ 3 ಬಾರಿ ನನ್ನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆದಿದೆ. ಆದರೆ ಮುಸ್ಲಿಂ ಸಮುದಾಯದ ವಿರುದ್ಧ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ಪ್ರತಿಭಟನಾರ್ಥವಾಗಿ ಗನ್‌ ಮ್ಯಾನ್‌ ಸೌಲಭ್ಯವನ್ನು ವಾಪಸ್‌ ಪಡೆಯುತ್ತಿರುವುದಾಗಿ ಹೇಳಿದರು.

Latest Videos

ಕೊಪ್ಪಳದಲ್ಲಿ ಸಿದ್ದು-ಡಿಕೆಶಿ: ಮದ್ವೆ ಕಾರ್ಯಕ್ರಮದ ಮಧ್ಯೆ ಟಿಕೆಟ್ ಫೈಟ್

ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ನನಗೆ ಭರವಸೆಯಿದೆ. ಆದರೆ ಅವರು ಹೇಳಿದ ಮೌಲ್ಯಗಳನ್ನು ರಾಜ್ಯ ಸರ್ಕಾರ ಪಾಲನೆ ಮಾಡುತ್ತಿಲ್ಲ. ಮುಸ್ಲಿಮರ ಮೇಲೆ ರಾಜ್ಯದಲ್ಲಿ ದಬ್ಬಾಳಿಕೆ ಹೆಚ್ಚಿದೆ. ಹಲಾಲ್‌, ಜಾತ್ರೆಗಳಲ್ಲಿ ಮುಸ್ಲಿಮರಿಗೆ ನಿಷೇಧ ಇತ್ಯಾದಿ ನಡೆದರೂ ಸರ್ಕಾರ ಇದ್ದೂ ಇಲ್ಲದಂತಿತ್ತು. ಅಕಾರಣವಾಗಿ ಮುಸ್ಲಿಮರನ್ನು ಪ್ರತ್ಯೇಕಗೊಳಿಸಿ ಸಂವಿಧಾನದ ಹಕ್ಕನ್ನೇ ಕಸಿಯುತ್ತಿದ್ದಾರೆ ಎಂದರು.

ವರದಿ ಜಾರಿ ಇಲ್ಲ: 10 ವರ್ಷಗಳ ಹಿಂದೆ 2.30 ಲಕ್ಷ ಕೋಟಿ ರು. ವಕ್ಫ್ ಆಸ್ತಿ ಹಗರಣದ ಕುರಿತು ಸಮಗ್ರ ದಾಖಲೆಗಳುಳ್ಳ ವರದಿಯನ್ನು ಆಗಿನ ಬಿಜೆಪಿ ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದೆ. ವಿರೋಧ ವ್ಯಕ್ತವಾಗಿದ್ದರಿಂದ ಆಗ ವಿಧಾನ ಮಂಡಲದಲ್ಲಿ ಮಂಡನೆಯಾಗಿರಲಿಲ್ಲ. ನಂತರ ಬಂದ ಕಾಂಗ್ರೆಸ್‌ ಅವಧಿಯಲ್ಲೂ ಮಂಡನೆಯಾಗಲಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಮಣ್ಣು ಸಂರಕ್ಷಣಾ ಅಭಿಯಾನದಲ್ಲೂ ಗುಂಗು ಹಿಡಿಸಿದ ಸುದೀಪ್ ಅಭಿನಯದ ರಾರಾ ರಕ್ಕಮ್ಮ ಸಾಂಗ್!

ಪುರಾವೆ ನೀಡಿದರೂ ಕ್ರಮ ಇಲ್ಲ: ಬಸವರಾಜ ಬೊಮ್ಮಾಯಿ ಅಧಿಕಾರಕ್ಕೆ ಬಂದ ಬಳಿಕ ಅಲ್ಪ ಸಂಖ್ಯಾತರ ಇಲಾಖೆಯಲ್ಲಿ ನಡೆಯುತ್ತಿದ್ದ ಭಾರೀ ಭ್ರಷ್ಟಾಚಾರದ ಬಗ್ಗೆ ದಾಖಲೆ ಸಮೇತ ಮಾಹಿತಿ ನೀಡಿದ್ದೆ. ಈಗಿನ ವಕ್ಫ್ ಬೋರ್ಡ್‌ ಅಧ್ಯಕ್ಷರ ಅವಧಿಯಲ್ಲಿ ಭಾರೀ ಅವ್ಯವಹಾರ ನಡೆಯುತ್ತಿದ್ದರೂ ಸರ್ಕಾರ ಮಾತ್ರ ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ ಎಂದು ಅನ್ವರ್‌ ಮಾಣಿಪ್ಪಾಡಿ ಹೇಳಿದರು.

click me!