Udaipur murder; ಒಳ್ಳೆಯ ಮುಸ್ಲಿಂಮರು ಈಗ್ಯಾಕೆ ಮೌನ ವಹಿಸಿದ್ದೀರಿ: ಸಂಸದ ಸಿಂಹ ಕಿಡಿ

Published : Jun 29, 2022, 02:14 PM ISTUpdated : Jun 29, 2022, 02:28 PM IST
Udaipur murder;  ಒಳ್ಳೆಯ ಮುಸ್ಲಿಂಮರು ಈಗ್ಯಾಕೆ ಮೌನ ವಹಿಸಿದ್ದೀರಿ: ಸಂಸದ ಸಿಂಹ ಕಿಡಿ

ಸಾರಾಂಶ

ನೂಫುರ್ ಶರ್ಮಾ ಬೆಂಬಲಿಸಿದ ಉದಯಪುರ ವ್ಯಕ್ತಿಯ ಹತ್ಯೆಯನ್ನು ಸಂಸದ ಪ್ರತಾಪ್ ಸಿಂಹ ಖಂಡಿಸಿದ್ದಾರೆ. ಈ ಹತ್ಯೆ ಪೈಶಾಚಿಕವಾದ ಕೊಲೆ. ಮುಸ್ಲಿಂ ಮೂಲಭೂತ ವಾದಿಗಳು ದೇಶದ ಶಾಂತಿ ಕೆಡಿಸುವ ಯತ್ನ ಎಂದಿದ್ದಾರೆ.

ಮೈಸೂರು (ಜೂನ್ 29): ನೂಫುರ್ ಶರ್ಮಾ (Nupur Sharma) ಬೆಂಬಲಿಸಿದ ರಾಜಸ್ತಾನದ ಉದಯಪುರ ಜಿಲ್ಲೆಯ  ಹಿಂದೂ ಟೈಲರ್ ( tailor ) ಕನ್ಹಯ್ಯಾ ಲಾಲ್ (Kanhaiya Lal)  ಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ( pratap simha) ಖಂಡನೆ ವ್ಯಕ್ತಪಡಿಸಿದ್ದಾರೆ. ಈ ಹತ್ಯೆ ಪೈಶಾಚಿಕವಾದ ಕೊಲೆ. ಮುಸ್ಲಿಂ ಮೂಲಭೂತ ವಾದಿಗಳು ದೇಶದ ಶಾಂತಿ ಕೆಡಿಸುವ ಯತ್ನವಿದು. 

ದನಗಳ್ಳರಿಗೆ ಎರಡೇಟು ಬಿದ್ದರೆ ಆಕಾಶ ಭೂಮಿ ಒಂದಾಗುವ ರೀತಿ ಬೊಬ್ಬೆ ಹಾಕುವವರು ಈಗ ಎಲ್ಲಿದ್ದಾರೆ? ಈಗ ಏನ್ಮಾಡ್ತಿದ್ದಾರೆ? ಬ್ರದರ್ ಬ್ರದರ್ ಎಂದು ಹೇಳುವ ಕಾಂಗ್ರೆಸ್ ನಾಯಕ ಈಗ ಯಾವ ಬಿಲದಲ್ಲಿ ಅಡಗಿದ್ದಾರೆ. ಟ್ವೀಟ್ ಮಾಡಿ ಮನೆಯೊಳಗೆ ಕುಳಿತರೆ ಮುಗಿತಾ ನಿಮ್ಮ ಕೆಲಸ? ಕರ್ನಾಟಕದಲ್ಲೂ ಕಾಂಗ್ರೆಸ್ ಗೆ ಅಧಿಕಾರ ಕೊಟ್ಟರೆ ರಾಜಸ್ಥಾನದ ಘಟನೆ ಕರ್ನಾಟಕದಲ್ಲೂ ಆಗುತ್ತೆ. ಇದು ರಾಜ್ಯದ ಜನರಿಗೆ ಎಚ್ಚರಿಕೆ ಕರೆ ಗಂಟೆ. ಟಿಪ್ಪು ಸಂತತಿಗಳ ಬಗ್ಗೆ ಮತದಾರರು ಜಾಗೃತರಾಗಿರಬೇಕು ಎಂದು ಸಂಸದ ಪ್ರತಾಪ್ ಸಿಂಹ  ಆಕ್ರೋಶ ವ್ಯಕ್ತಪಡಿಸಿದ್ದಾರೆ.

Udaipur Murder; ಬುದ್ದಿ ಜೀವಿಗಳ ನಾಲಿಗೆಗೆ ಲಕ್ವಾ ಹೊಡೆದಿದೆಯಾ? :ಗೃಹ ಸಚಿವ

ರಾಜಸ್ಥಾನ ಸರಕಾರದ ಮೇಲೆ ನನಗೆ ವಿಶ್ವಾಸವಿಲ್ಲ. ಹಿಂದೂಗಳ ಧ್ವನಿ ಅಡಗಿಸಲು ಈ ಕೃತ್ಯ ನಡೆದಿದೆ. ಈ ಕೃತ್ಯದ ಹಿಂದೆ ಕಾಂಗ್ರೆಸ್ ಇದೆ. ಕಾಂಗ್ರೆಸ್ ನವರ ಮುಸ್ಲಿಂ ಓಲೈಕೆಯಿಂದ ಈ ರೀತಿ ನಡೆಯುತ್ತಿದೆ. ಸಿದ್ದರಾಮಯ್ಯ ಸರ್  ರಾಜಸ್ಥಾನ ಸರಕಾರಕ್ಕೆ ಸ್ವಲ್ಪ ಬುದ್ದಿ ಹೇಳುತ್ತೀರಾ ಸರ್ ಎಂದಿದ್ದಾರೆ.

ಮುಸ್ಲಿಮರೆಲ್ಲಾ ಭಯೋತ್ಪಾದಕರಲ್ಲ. ಆದರೆ, ಭಯೋತ್ಪಾದಕರೆಲ್ಲಾ ಮುಸ್ಲಿಮರು. ಒಳ್ಳೆಯ ಮುಸ್ಲಿಮರು ಯಾಕೆ ಈಗ ಮಾತಾಡ್ತಿಲ್ಲ. ಒಳ್ಳೆಯ ಮುಸ್ಲಿಮರು ಮೌನವಾಗಿ ಇದಕ್ಕೆ ಕುಮ್ಮುಕು ಕೊಡುತ್ತಿದ್ದಾರಾ? ಇನ್ನೂ ನೀವು ಧ್ವನಿ ಎತ್ತದಿದ್ದರೆ ನಿಮ್ಮ ಮೇಲೂ ಅನುಮಾನ ಮೂಡುತ್ತೆ. ಈಗ ಮೌಲ್ವಿಗಳು, ಮುಲ್ಲಾಗಳು ಎಲ್ಲಿ ಹೋಗಿದ್ದಾರೆ. ಈ ಕೊಲೆ   ತಪ್ಪು ಅಂತಾ ಆರೋಪಿಗಳ ವಿರುದ್ಧ ಫತ್ವಾ ಹೊರಡಿಸಲಿ ನೋಡೋಣಾ? ಶುಕ್ರವಾರ ಪ್ರಾರ್ಥನೆಯಾದ ನಂತರ ಕಲ್ಲು ಬಿಸಾಡುವುದು, ಎಳ್ಳಿ ಕೊಡುವುದಷ್ಟೆ ನಿಮ್ಮ ಕೆಲಸವಾ? ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.

Dharwad: ನಾನು ನೂಪುರ್ ಶರ್ಮಾ ಬೆಂಬಲಿಸುತ್ತೇನೆ, ತಾಕತ್ ಇದ್ರೆ ನನ್ನನ್ನ ತಡಿರಿ  

ಇನ್ನು ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್  ಜೊತೆ ಮೈಸೂರು ಸಂಸದರಿಗೆ  ಚರ್ಚೆ ಆಹ್ವಾನ ವಿಚಾರಕ್ಕೆ ಸಂಬಂರ್ಧಿಸಿದಂತೆ ಮಾತನಾಡಿದ ಪ್ರತಾಪ್ ಸಿಂಹ, ನಾನು ಸಿದ್ದರಾಮಯ್ಯ, ಡಾ. ಎಚ್.ಸಿ. ಮಹದೇವಪ್ಪ ಜೊತೆ ಚರ್ಚೆಗೆ ಸಿದ್ಧನಿದ್ದೇನೆ. ವೀರರು ಶೂರರು ಕುದುರೆ ಏರಿ ಯುದ್ದಕ್ಕೆ ಬರುತ್ತಾರೆ. ನೀವು ಯಾಕೆ ಹಂದಿ ಏರಿ ಬರುವುದಕ್ಕೆ ಮುಂದಾಗಿದ್ದಿರಿ? ಗುದ್ದಾಡಿದರೆ ಗಂಧದ ಜೊತೆ ಗುದ್ದಾಡಬೇಕು. ಹಂದಿ ಜೊತೆ ಅಲ್ಲ. ನೀವು ನನ್ನ ಜೊತೆ ಚರ್ಚೆಗೆ ಹಂದಿ ಕಳಿಸಿದ್ದೀರಿ. ಅದಕ್ಕೆ ನಾವು ಹಂದಿ ಹೊಡೆಯುವವರ ಕಳಿಸಿದ್ದೇವೆ. ಹಂದಿ ಹೊಡೆದು ಬಾ ಹೋಗು ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನನ್ನೆ ಕಳುಹಿಸಿದ್ದೆ. ಹೊಡೆದು ಬಂದಿದ್ದಾರೆ. ಡಾ. ಮಹದೇವಪ್ಪ ನಿಮಗೆ ಈಗ ಏನೂ ಕೆಲಸ ಇದೆ ಹೇಳಿ ಸರ್ ? ನೀವು ಯಾಕೆ ಚರ್ಚೆಗೆ ಬರಬಾರದು. ಬನ್ನಿ ಚರ್ಚೆಗೆ, ಮೈಸೂರು - ಬೆಂಗಳೂರು ರಸ್ತೆಗೆ 9 ಪೈಸೆ ನೀವು ಕೊಟ್ಟಿದ್ದರೆ ಬನ್ನಿ ಚರ್ಚೆ ಮಾಡೋಣ. ಖಾಲಿಯಾಗಿ ಕೂತಿದ್ದಿರಿ. ಒಳ್ಳೆ ಚರ್ಚೆ ಮಾಡೋಣಾ ಬನ್ನಿ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ
ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!