ರಾಜಸ್ಥಾನದ ಉದಯಪುರದಲ್ಲಿ ನೂಪುರ್ ಶರ್ಮಾ ಬೆಂಬಲಿಗನನ್ನ ಶಿರಚ್ಚೇದ ಮಾಡಿ ಕೊಲೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಬಿಡುಗಡೆ ಮಾಡಿದ ಮುಸ್ಲಿಂ ಯುವಕರನ್ನ ಎನ್ ಕೌಂಟರ್ ಮಾಡಿ ಎಂದು ಪ್ರಮೋದ್ ಮುತಾಲಿಕ್ ಕೇಂದ್ರ ಸರಕಾರಕ್ಕೆ ಒತ್ತಾಯ ಮಾಡಿದರು.
ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ
ಧಾರವಾಡ (ಜೂ.29): ರಾಜಸ್ಥಾನದ ಉದಯಪುರದಲ್ಲಿ ನೂಪುರ್ ಶರ್ಮಾ ಬೆಂಬಲಿಗನನ್ನ ಶಿರಚ್ಚೇದ ಮಾಡಿ ಕೊಲೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಬಿಡುಗಡೆ ಮಾಡಿದ ಮುಸ್ಲಿಂ ಯುವಕರನ್ನ ಎನ್ ಕೌಂಟರ್ ಮಾಡಿ ಎಂದು ಪ್ರಮೋದ್ ಮುತಾಲಿಕ್ ಕೇಂದ್ರ ಸರಕಾರಕ್ಕೆ ಒತ್ತಾಯ ಮಾಡಿದರು. ಇದೊಂದು ತಾಲಿಬಾನ್ ಕೃತ್ಯ, ಐಸಿಸ್ ಮಾನಸೀಕತೆ ಇದೆ ಅಪ್ಘಾನಿಸ್ತಾನದಲ್ಲಿ ರುಂಡಗಳನ್ನ ಕತ್ತರಿಸುವ ಕೆಲಸ ನಡೆಯುತ್ತಿದೆ ಅದೆ ಮಾದರಿಯಲ್ಲಿ ನಡೆದ ಭಯೋತ್ಪಾದಕತೆ ಗಟನೆ ಇದು ಪ್ರಧಾನಿ ಮೋದಿ ಅವರಿಗೆ ಇದೆ ಗತಿಯಾಗಲಿದೆ. ಇದೆ ಮಾದರಿಯಲ್ಲಿ ನಿಮ್ಮನ್ನು ಕೊಲೆ ಮಾಡಲಾಗುತ್ತೆ ಎಂದು ವಿಡಿಯೋ ಹರಿಬಿಟ್ಟಿದ್ದಾರೆ.
ಕೇಂದ್ರ ಸರಕಾರ ಕೂಡಲೆ ಮದ್ಯ ಪ್ರವೇಶ ಮಾಡಬೇಕು. ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರವಿದೆ ಕಾಂಗ್ರೆಸ್‌ನವರೆ ಈ ರೀತಿ ರಾಕ್ಷಿಸಿ ಪ್ರವೃತ್ತಿ ಬೆಳಿಸಿದ್ದಿರಿ. ಮುಸ್ಲಿಂ ವೋಟಿಗಾಗಿ ರಾಕ್ಷಸರನ್ನ ಬೆಳಸಿದ್ದಿರಿ, ಐಪಿಸಿ ಸೆಕ್ಷನ್ ಹಾಕುವ ಅವಶ್ಯಕತೆ ಇಲ್ಲ, ಇವರಿಗೆ ಟೆರೆರಿಸ್ಟ್ ಆ್ಯಕ್ಟ್ ಕೇಸ್ ಹಾಕಬೇಕು. ಒಂದೇ ತಿಂಗಳಲ್ಲಿ ಅವರಿಬ್ಬರಿಗೆ ಗಲ್ಲು ಶಿಕ್ಷೆ ಕೊಡಬೇಕು ಇಲ್ಲದಿದ್ದರೆ ಎನ್‌ಕೌಂಟರ್ ಮಾಡಿ ಬಿಸಾಕಬೇಕು ಎಂದು ಹೇಳಿದರು. ಐಪಿಸಿಯಲ್ಲಿರುವ ಎಲ್ಲ ಸೆಕ್ಷನ್ ಹಾಕಿದರೂ ಕೋರ್ಟ್ ಬೇಲ್ ಕೊಡುತ್ತೆ. ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಕೋರರು ಬೇಲ್ ಮೇಲೆ ಬಿಡುಗಡೆಯಾಗಿದ್ದಾರೆ. ಕೋರ್ಟಿನ ಭಯ ಇಲ್ಲ, ಸರಕಾರದ ಭಯ ಇಲ್ಲ.
ಉದಯಪುರ ಟೈಲರ್ ಹತ್ಯೆ ಭಯೋತ್ಪಾದಕ ಘಟನೆ ಎಂದ ಕೇಂದ್ರ, NIA ತಂಡ ರವಾನೆ!
ಸಾಮಾನ್ಯ ಟೈಲರ್‌ನ್ನ ಕೊಲೆ ಮಾಡಿದ್ದು ಖಂಡನಿಯವಾಗಿದೆ. ನೂಪುರ್ ಶರ್ಮಾ ಬೆಂಬಲವಾಗಿ ಡಿಪಿ ಹಾಕಿದ್ದ ಅದಕ್ಕೆ ಈ ರೀತಿ ಮಾಡಿದ್ದಾರೆ. ತಾಲಿಬಾನ್ ಅಲ್ಲ ಇದು, ನಮಗೆ ಬೇರೆ ಮಾರ್ಗ. ಇಲ್ಲ ಎನ್‌ಕೌಂಟರ್ ಮಾಡಬೇಕು ಇವರನ್ನ ಹದ್ದು ಬಸ್ತನಲ್ಲಿಡಿ ಇಲ್ಲದಿದ್ದರೆ ಹಿಂದೂ ಸಮುದಾಯ ಎದ್ದು ನಿಂತ್ರೆ ಕಥೆನೆ ಬೇರೆಯಾಗುತ್ತೆ ಎಂದರು. ಹಿಂದೂಗಳು ಬೆನ್ನ ಹತ್ತಿದ್ರೆ ಸಮುದ್ರಕ್ಕೆ ಹಾರಬೇಕು. ಇಲ್ಲ ಪಾಕಿಸ್ತಾನಕ್ಕೆ ಹೊಗಬೇಕು ಹುಷಾರ್..! ಇವರಿಬ್ಬರ ಹಿಂದೆ ಮೌಲ್ವಿಗಳಿದ್ದು, ಯಾವುದೋ ಸಂಘಟನೆ ಇದೆ ಇಲ್ಲದಿದ್ದರೆ ಮುಸಲ್ಮಾನ ಸಮಾಜ ಈ ಘಟನೆಯನ್ನ ವಿರೋಧಿಸಬೇಕು, ಅವರಿಬ್ಬರ ಮನೆಗೆ ಬೆಂಕಿ ಹಚ್ಚಬೇಕು ಇಲ್ಲದಿದ್ದರೆ ನೀವು ಉಳಿದ ಮುಸಲ್ಮಾನರು ಈ ಘಟನೆಗೆ ಸಾಥ್ ಕೊಟ್ಟಂಗಾಗುತ್ತೆ.
ಉದಯಪುರ ಹತ್ಯೆ ಖಂಡಿಸಿದ ಮುಸ್ಲಿಂ ಧರ್ಮಗುರುಗಳು, ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹ!
ಸಿದ್ದರಾಮಯ್ಯ, ಕುಮಾರಸ್ವಾಮಿ, ಬುದ್ದಿ ಜೀವಿಗಳು ಬಾಯಿ ಬಿಟ್ಟು ಮಾತನಾಡಬೇಕು. ಕಲ್ಲಂಗಡಿ ಹಣ್ಣು ಒಡೆದಿದಕ್ಕೆ ದೊಡ್ಡದಾಗಿ ಹಬ್ಬಿಸಿದ್ರಿ ಇವಾಗ ಕಣೈಲಾಲ್ ಗೆ 25 ಲಕ್ಷ ಕಳಿಸಿ ಕುಮಾರಸ್ವಾಮಿ ಅವರೆ ನೋಡೋಣ. ಕಾಂಗ್ರೆಸ್ ಜೆಡಿಎಸ್‌ನವರು ಮುಸ್ಲಿಂ ಮತಗಳಿಗಾಗಿ ರಕ್ಷಣೆ ಮಾಡ್ತಾ ಇದಿರಿ. ಮುಸ್ಲಿಂ ಸಮುದಾಯಕ್ಕೆ ಸಪೊರ್ಟ್ ಮಾಡಿದ್ರೆ ನೀವೆ ಕೊಲೆ ಗಡುಕರಾಗ್ತಿರಾ. ಅಧಿಕಾರದ ದಾಹಕ್ಕಾಗಿ ಅವರನ್ನ ಬೆಳಸ್ತಾ ಇದಿರಿ ಎಂದರು. ಇಂದು ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ಕೊಟ್ಟಿದ್ದೇನೆ. ಜಿಲ್ಲಾಧಿಕಾರಿ ಕಚೇರಿ ಎದುರು ನಾನು ಕಣೈ , ನಾನು ನೂಪುರ್ ಶರ್ಮಾಗೆ ಬೆಂಬಲಿಸುತ್ತೆನೆ ತಾಕತ್ತ್ ಇದ್ರೆ ನನ್ನನ್ನ ತಡಿರಿ ಎಂದು ಪ್ರಮೋದ್ ಮುತಾಲಿಕ್ ಸವಾಲು ಹಾಕಿದ್ದಾರೆ.