ರೋಹಿಣಿ ಸಿಂಧೂರಿಗೆ 41 ಕೋಟಿ ಅಲ್ಲದೇ ಬೇರೊಂದು ಲೆಕ್ಕ ಕೇಳಿದ ಸಿಂಹ

By Suvarna News  |  First Published Jun 1, 2021, 4:53 PM IST

* ರೋಹಿಣಿ ಸಿಂಧೂರಿ ಹಾಗೂ ಪ್ರತಾಪ್ ಸಿಂಹ ನಡುವೆ ಮುಂದುವರೆದ ಜಟಾಪಟಿ
* 41 ಕೋಟಿ ರೂ. ಲೆಕ್ಕಕ್ಕೆ ಸಂಸದ ಪ್ರತಾಪ್ ಸಿಂಗ ಗರಂ
*ರೋಹಿಣಿ ಸಿಂಧೂರಿಗೆ ಬೇರೊಂದು ಲೆಕ್ಕ ಕೇಳಿದ ಸಿಂಹ


ಮೈಸೂರು, (ಜೂನ್.01): ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಸಂಸದ ಪ್ರತಾಪ್ ಸಿಂಹ ನಡುವಿನ ಜಟಾಪಟಿ ಮುಂದುವರೆದಿದೆ.

 ಕೊರೋನಾ ನಿರ್ವಹಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ನೀಡಿರುವ ಲೆಕ್ಕದ ಬಗ್ಗೆ ಸಂಸದ ಪ್ರತಾಪ್ ಸಿಂಹ  ಆಕ್ಷೇಪ‌ ವ್ಯಕ್ತಪಡಿಸಿದ್ದು, ಸಿಮ್ಮಿಂಗ್ ಪೂಲ್ ಲೆಕ್ಕ ಎಲ್ಲಿ? ಎಂದು ಪ್ರಶ್ನಿಸಿದ್ದಾರೆ.

Latest Videos

undefined

ಪ್ರತಾಪ್ ಸಿಂಹ VS ರೋಹಿಣಿ ಸಿಂಧೂರಿ ಪತ್ರ ಸಮರ: 41 ಕೋಟಿ ರೂ ಲೆಕ್ಕ ಕೊಟ್ಟ ಡೀಸಿ

ಪ್ರತಾಪ್ ಸಿಂಹ ಅವರು ಕೇಳಿದ್ದ 41 ಕೋಟಿ ರೂ. ಲೆಕ್ಕವನ್ನು ರೋಹಿಣಿ ಸಿಂಧೂರಿ ಪ್ರೆಸ್‌ ನೋಟ್ ಮೂಲಕ ಬಹಿರಂಗವಾಗಿ ಬಿಚ್ಚಿಟ್ಟಿದ್ದಾರೆ.

ಇದೀಗ ಈ ಬಗ್ಗೆ ಇಂದು (ಮಂಗಳವಾರ) ಮೈಸೂರಿನ ಕೆ.ಆರ್ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಹಳ ಲೆಕ್ಕ ಕೇಳಿದ್ದೆ, ಎಲ್ಲದಕ್ಕೂ ಲೆಕ್ಕ ಕೊಟ್ಟಿದ್ದಾರಾ?. ಆದರೆ ಯಾವುದೋ 2, 4, 5 ಅಂತ ರೌಂಡ್ ಫಿಗರ್ ಲೆಕ್ಕ ಕೊಡುವುದಲ್ಲ. ಲೆಕ್ಕ ಕೊಡುವುದಾದರೆ ವಸ್ತು ಹಾಗೂ ಖರ್ಚಿನ ಲೆಕ್ಕ ಕೊಡಲಿ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ವಾಗ್ದಾಳಿ ನಡೆಸಿದರು.

ಅಲ್ಲದೇ, ಸ್ಟೆಪ್‌ಡೌನ್ ಆಸ್ಪತ್ರೆಗಳ ಬಗ್ಗೆಯೂ ನಾನು ಕೇಳಿದ್ದೆ, ಅದಕ್ಕೆ ಉತ್ತರ ಕೊಟ್ಟಿದ್ದಾರಾ?. ಸ್ವಿಮ್ಮಿಂಗ್ ಪೂಲ್ ಲೆಕ್ಕ ಕೇಳಿದ್ದೆ, ಅದಕ್ಕೆ ಕೊಟ್ಟಿದ್ದಾರಾ?. ಸುಮ್ಮನೆ ಹೋಟೆಲ್‌ಗಳಿಗೆ 4 ಕೋಟಿ ರೂ. ಅಂತ ಬರೆಯೋದಲ್ಲ. ಯಾವುದಕ್ಕೆ ಎಷ್ಟು ಅಂತ ಬಿಲ್ ಕೊಡಬೇಕಲ್ವಾ. ಅಭಿರಾಂ ಶಂಕರ್ ಇದ್ದಾಗ ಅವರ ಬಳಿ ಲೆಕ್ಕವನ್ನೇ ಕೇಳಿಲ್ಲ. ಅವರ ಬಳಿ ಪಾರದರ್ಶಕತೆ ಇತ್ತು ಅದಕ್ಕೆ ಕೇಳಲಿಲ್ಲ. ಆದರೆ ಈಗಿನ ಜಿಲ್ಲಾಧಿಕಾರಿಗಳ ಬಳಿ ಪಾರದರ್ಶಕತೆ ಕಾಣುತ್ತಿಲ್ಲ. ಹೀಗಾಗಿ ಲೆಕ್ಕ ಕೇಳುತ್ತಿದ್ದೇನೆ ಎಂದರು.

ನಾನು ಇನ್ನು ಮುಂದೆ ಯಾರ ಬಗ್ಗೆ ಮಾತಾಡಲ್ಲ. ನನಗೆ ನೀಡಿರುವ ಜವಾಬ್ದಾರಿ ನಾನು ನಿಭಾಹಿಸುತ್ತೇನೆ. ವ್ಯಾಕ್ಸಿನ್ ಜವಾಬ್ದಾರಿಯನ್ನು ನನ್ನ ಮೇಲೆ ಎಳೆದುಕೊಂಡೆ ಮಾಡುತ್ತೇನೆ. ನನ್ನ‌ ಕೆಲಸಕ್ಕೆ ಬೆರಳು ತೋರಿಸಿ ಯಾರೂ ಮಾತನಾಡಬಾರದು ಅಷ್ಟೇ ಎಂದು ತಮ್ಮ ವಿರುದ್ಧ ಬೊಟ್ಟು ಮಾಡಿ ಮಾತನಾಡುವ ಸ್ಥಳೀಯ ಜನಪ್ರತಿನಿಧಿಗಳಿಗೆ ಟಾಂಗ್ ಕೊಟ್ಟರು.

click me!