'ಅಲ್ಲಾ ಹು ಅಕ್ಬರ್' ಕೂಗಿದ್ಧ ಮುಸ್ಕಾನ್ ವಿರುದ್ಧ ತನಿಖೆ ಮಾಡಿ: ಸಿಎಂಗೆ ಅನಂತ್ ಕುಮಾರ್ ಹೆಗಡೆ ಪತ್ರ

By Suvarna News  |  First Published Apr 11, 2022, 12:50 PM IST

* 'ಅಲ್ಲಾ ಹು ಅಕ್ಬರ್' ಕೂಗಿದ್ಧ ಮುಸ್ಕಾನ್ ವಿರುದ್ಧ ತನಿಖೆ ಮಾಡಿ:
* ಸಿಎಂಗೆ ಪತ್ರ ಬರೆದ ಸಂಸದ ಅನಂತ್ ಕುಮಾರ್ ಹೆಗಡೆ
* ಜೈ ಶ್ರೀರಾಮಗೆ ಪ್ರತಿಯಾಗಿ ಅಲ್ಲಾ ಹು ಅಕ್ಬರ್ ಎಂದು ಕೂಗಿದ್ದ ಮಂಡ್ಯದ ಮುಸ್ಕಾನ್


ಉತ್ತರ ಕನ್ನಡ, (ಏ.11):  ಹಿಜಾಬ್ ವಿವಾದದ ವೇಳೆ ಕಾಲೇಜಿನ ಮುಂಭಾಗದಲ್ಲಿ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು ಆಕೆಯ ಮುಂದೆ ಜೈ ಶ್ರೀರಾಮ ಘೋಷಣೆ ಕೂಗಿದ್ದಾಗ, ವಿದ್ಯಾರ್ಥಿನಿ ಪ್ರತಿಯಾಗಿ ಅಲ್ಲಾ ಹು ಅಕ್ಬರ್ ಎಂದು ಕೂಗಿದ್ದಳು. ಈ ವಿಷಯ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಭಾರೀ ಚರ್ಚೆಗೆ ಗ್ರಾಸವಾಗಿತ್ತು. 

ಇದೀಗ ಅಲ್ಲಾ ಹೋ ಅಕ್ಬರ್ ಎಂದು ಕೂಗಿದ್ದ ವಿದ್ಯಾರ್ಥಿನಿ ಮುಸ್ಕಾನ್ ಳನ್ನು ತನಿಖೆಗೆ ಒಳಪಡಿಸಬೇಕೆಂದು ಸಿಎಂ ಬಸವರಾಜ್ ಬೊಮ್ಮಾಯಿಅವರಿಗೆ ಸಂಸದ ಅನಂತಕುಮಾರ್ ಹೆಗಡೆ ಪತ್ರ ಬರೆದಿದ್ದಾರೆ.

Latest Videos

undefined

Hijab Row: ಮಂಡ್ಯದ ಮುಸ್ಕಾನ್‌ ಹೊಗಳಿದ್ದ ಖೈದಾ ವಿಡಿಯೋ ತನಿಖೆ: ಸಿಎಂ ಬೊಮ್ಮಾಯಿ

ಹಿಜಾಬ್ (Hijab) ವಿವಾದದಿಂದ ಗುರುತಿಸಿಕೊಂಡಿದ್ದ ಮಂಡ್ಯದ ವಿದ್ಯಾರ್ಥಿನಿ ಬೀಬಿ ಮುಸ್ಕಾನ್‌ ಅವಳನ್ನು ಅಲ್ ಖೈದಾ (Al-Qaeda) ಸಂಘಟನೆಯ ಮುಖ್ಯಸ್ಥ ಆಯಮನ್-ಅಲ್- ಜವಾಹರಿ ಹಾಡಿ ಹೊಗಳಿರುವ ಹಿನ್ನೆಲೆ ಆಕೆಗೆ ನಿಷೇಧಿತ ಸಂಘಟನೆಗಳ ಜತೆಗಿರುವ ಸಂಬಂಧದ ಬಗ್ಗೆ ತನಿಖೆ ನಡೆಸಬೇಕೆಂದು ಉತ್ತರಕನ್ನಡ (Uttarakannada) ಜಿಲ್ಲಾ ಸಂಸದ  (MP) ಅನಂತ ಕುಮಾರ್ ಹೆಗಡೆ ಅವರು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದ್ದಾರೆ.

ಇತ್ತಿಚೆಗೆ ಈ ಯುವತಿಯನ್ನು ಭಾರತದ ಶ್ರೇಷ್ಠ ಮಹಿಳೆ ಎಂದು ಅಲ್ ಖೈದಾ ಭಯೋತ್ಪಾದಕ ಎಂದು ಹೇಳಿದ್ದ. ಇದೀಗ ಕಾಣದ ಕೈಗಳು ಮತ್ತು ನಿಷೇಧಿತ ಮುಸ್ಲಿಂ ಸಂಘಟನೆ ಜೊತೆ ಇರುವ ಸಂಬಂಧದ ಬಗ್ಗೆ ತನಿಖೆ ಮಾಡುವಂತೆ ಅನಂತ್ ಕುಮಾರ್ ಹೆಗಡೆ, ಸಿಎಂಗೆ ಪತ್ರ ಬರೆದಿದ್ದಾರೆ.

ಈ ಹಿಂದೆ ಹಿಜಾಬ್ (Hijab)ವಿಚಾರ ತಾರಕ್ಕಕ್ಕೇರಿದ್ದ ಸಂದರ್ಭದಲ್ಲಿ ಮಂಡ್ಯಾದ ಪಿ.ಇ.ಎಸ್.ಕಾಲೇಜು (College) ವಿದ್ಯಾರ್ಥಿಗಳು ಹಿಜಾಬ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಇದಕ್ಕೆ ಉತ್ತರವಾಗಿ ಬೀಬಿ ಮುಸ್ಕಾನ್ ಎಂಬ ಬುರ್ಖಾಧಾರಿ ವಿದ್ಯಾರ್ಥಿನಿ "ಅಲ್ಲಾಹು ಅಕ್ಬರ್" ಎಂದು ಕೂಗಿದ್ದ  ವೀಡಿಯೋ ಜಗತ್ತಿನೆಲ್ಲೆಡೆ ಪ್ರಮುಖ ಚಾನೆಲ್‌ಗಳಲ್ಲಿ ಪ್ರಸಾರವಾಗಿ ದಿಢೀರ್ ಪ್ರಸಿದ್ಧಿ ಪಡೆದ ಘಟನೆ ನಡೆದಿತ್ತು. ಈ ವಿದ್ಯಾರ್ಥಿನಿಗೆ ಹಲವು ಮುಸ್ಲಿಂ ಸಂಘಟನೆಗಳಿಂದ ಪ್ರಶಂಸೆಯ ನುಡಿಗಳು ಹಾಗೂ ಬಹುಮಾನ ಘೋಷಣೆಯಾಗಿತ್ತು. ಹೀಗಿರುವಾಗ ನಿಷೇಧಿತ ಭಯೋತ್ಪಾದನಾ‌ ಸಂಘಟನೆ ಅಲ್- ಖೈದಾದ (Al-Qaeda) ಮುಖ್ಯಸ್ಥನಾದ ಆಯಮನ್- ಅಲ್- ಜವಾಹರಿ ಇತ್ತೀಚೆಗೆ ಈ ವಿದ್ಯಾರ್ಥಿನಿಯ ಕುರಿತು "ಭಾರತದ ಸರ್ವ ಶ್ರೇಷ್ಠ ಮಹಿಳೆ(Women)" ಎಂದು ಹೊಗಳುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿದೆ. 

ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯ (High Court) ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿ  ತೀರ್ಪು ನೀಡಿದ್ದರೂ, ಹಲವು ರಾಜಕಾರಣಿಗಳು, ಮೂಲಭೂತವಾದಿ ಸಂಘಟನೆಗಳು ಹಾಗೂ ವಿದ್ಯಾರ್ಥಿನಿಯರು ಉಚ್ಛ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಪ್ರತಿಭಟನೆ ನಡೆಸಿದ್ದರು. 

ಹಿಜಾಬ್ (Hijab) ಪ್ರತಿಭಟನೆಯ ಹಿಂದೆ ಕಾಣದ ಕೈಗಳ ಕೈವಾಡವಿದೆ ಎಂದು ಉಚ್ಚ ನ್ಯಾಯಾಲಯ (High Court) ಪೀಠವು ಅಭಿಪ್ರಾಯ ಕೂಡಾ ವ್ಯಕ್ತಪಡಿಸಿತ್ತು. ಈ ಕಾರಣದಿಂದ ಬೀಬಿ ಮುಸ್ಕಾನ್ ವಿದ್ಯಾರ್ಥಿನಿಗೆ ‌ಹಿಜಾಬ್ ಷಡ್ಯಂತ್ರದ ಹಿಂದಿರುವ ಕಾಣದ ಕೈಗಳು ಮತ್ತು ನಿಷೇಧಿತ ಸಂಘಟನೆಗಳೊಂದಿಗೆ ಇರುವ ಸಂಬಂಧದ ಕುರಿತು ಕೂಲಂಕುಷವಾದ ತನಿಖೆ ನಡೆಸಬೇಕೆಂದು ಸಂಸದ ಅನಂತ ಕುಮಾರ್ ಹೆಗಡೆ ಪತ್ರದ ಮೂಲಕ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿ ವಿನಂತಿಸಿಕೊಂಡಿದ್ದಾರೆ.

ಹಿಜಾಬ್‌(Hijab) ಗಲಾಟೆ ವೇಳೆ ‘ಅಲ್ಲಾ ಹು ಅಕ್ಬರ್‌’ ಘೋಷಣೆ ಕೂಗಿದ್ದ ಮಂಡ್ಯದ(Mandya) ಯುವತಿ ಮುಸ್ಕಾನ್‌(Muskan) ಬಗ್ಗೆ ಜಗತ್ತಿನ ಕುಖ್ಯಾತ ಉಗ್ರ ಸಂಘಟನೆ ಅಲ್‌ಖೈದಾ(Al-Qaeda)ಮೆಚ್ಚುಗೆ ವ್ಯಕ್ತ​ಪ​ಡಿ​ಸಿದ ವಿಡಿ​ಯೋಗೆ ಸಂಬಂಧಿ​ಸಿ ತನಿಖೆಗೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ನೆಲದ ಮತ್ತು ಕಾನೂನಿನ ವಿರುದ್ಧ ನಿರಂತರ ಷಡ್ಯಂತ್ರ ನಡೆದಿವೆ. ಈ ಬಗ್ಗೆ ತನಿಖೆಗೆ ಪೊಲೀಸರಿಗೆ(Police) ಸೂಚಿಸಿದ್ದೇನೆ, ವರದಿ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು..

click me!