* ಕಲಬುರಗಿಗೆ ತಂಡ ರವಾನೆ
* ಪೊಲೀಸರ ಕೈವಾಡ ಬಗ್ಗೆಯೂ ತನಿಖೆ
* 545 ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಪರೀಕ್ಷೆಯಲ್ಲಿ ಗೋಲ್‌ಮಾಲ್ ಪ್ರಕರಣ
ಬೆಂಗಳೂರು(ಏ.11): ಪೊಲೀಸ್ ಇಲಾಖೆಯ 545 ಸಬ್ ಇನ್ಸ್‌ಪೆಕ್ಟರ್(PSI) ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ಹೇಳಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಪಿಎಸ್‌ಐ ಹುದ್ದೆಗಳಿಗೆ ಪರೀಕ್ಷೆ ನಡೆದು ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿಯೂ ಪ್ರಕಟವಾಗಿದೆ. ಈ ನಡುವೆ ಪರೀಕ್ಷೆಯಲ್ಲಿ ಸಾಕಷ್ಟುಅಕ್ರಮ ನಡೆದಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ಕಲಬುರಗಿಯ ಚೌಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಸಹ ದಾಖಲಾಗಿದೆ. ಕಲಬುರಗಿ(Kalaburagi) ಜ್ಞಾನಜ್ಯೋತಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿರುವ ಅನುಮಾನವಿದೆ. ಹೀಗಾಗಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ. ಈಗಾಗಲೇ ಸಿಐಡಿ ತಂಡವನ್ನು ಕಲಬುರಗಿಗೆ ಕಳುಹಿಸಲಾಗಿದೆ ಎಂದರು.
PSI Recruitment Scam: ನೊಂದ ಅಭ್ಯರ್ಥಿಗಳಿಂದ ಕಾನೂನು ಸಮರಕ್ಕೆ ಸಿದ್ಧತೆ
ಪಿಎಸ್‌ಐ ಪರೀಕ್ಷೆ ಬರೆದಿದ್ದ ವೀರೇಶ್ ಎಂಬ ಅಭ್ಯರ್ಥಿ 21 ಪ್ರಶ್ನೆಗಳಿಗೆ ಉತ್ತರಿಸಿದ್ದಾನೆ. ಆದರೆ, ಒಎಂಆರ್ ಶೀಟ್‌ನಲ್ಲಿ ಆತನಿಗೆ ನೂರು ಅಂಕ ಬಂದಿದೆ. ಹೀಗಾಗಿ ಅಕ್ರಮದ ಅನುಮಾನ ಬಂದಿದ್ದು, ಪೂರಕ ಸಾಕ್ಷ್ಯವೂ ಸಿಕ್ಕಿದೆ. ಹೀಗಾಗಿ ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಕಷ್ಟಪಟ್ಟು ಓದಿದ ಪ್ರತಿಭಾವಂತರಿಗೆ ಅನ್ಯಾಯವಾಗಬಾರದು. ಹೀಗಾಗಿ ಪರೀಕ್ಷಾ ಅಕ್ರಮದ ಆರೋಪದ ಸತ್ಯಾಸತ್ಯತೆ ಹೊರಗೆಡವಲು ಸಮಗ್ರ ತನಿಖೆಗಾಗಿ ಸಿಐಡಿಗೆ ವಹಿಸಲಾಗಿದೆ ಎಂದು ಹೇಳಿದರು.
ಆದ್ಯತೆ ಮೇರೆಗೆ ಸಿಐಡಿ ತನಿಖೆ(CID Investigation) ನಡೆಯಲಿದೆ. ಈ ಅಕ್ರಮದ ಹಿಂದೆ ಯಾರಿದ್ದಾರೆ? ಪೊಲೀಸರ ಕೈವಾಡವೂ ಇದೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಯಲಿದೆ. 545 ಹುದ್ದೆಗಳಿಗೆ ಸುಮಾರು 52 ಸಾವಿರದಷ್ಟು ಅಭ್ಯರ್ಥಿಗಳು(Candidates) ಪರೀಕ್ಷೆ(Examination) ಬರೆದಿದ್ದಾರೆ. ಪ್ರತಿಭಾವಂತರಿಗೆ ಅನ್ಯಾಯವಾಗಬಾರದು ಎಂಬ ಕಾರಣಕ್ಕೆ ಅಕ್ರಮದ ಬಗ್ಗೆ ತನಿಖೆ ನಡೆಸಲು ಸಿಐಡಿಗೆ ವಹಿಸಲಾಗಿದೆ ಎಂದರು.
ಅಕ್ರಮದ ಬಗ್ಗೆ ‘ಕನ್ನಡಪ್ರಭ’ ಸರಣಿ ವರದಿ
545 ಪಿಎಸ್‌ಐ ಹುದ್ದೆಗಳ ನೇಮಕಾತಿ(Recruitment) ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ‘ಕನ್ನಡಪ್ರಭ’ ಸರಣಿ ವರದಿ ಪ್ರಕಟಿಸಿ ರಾಜ್ಯ ಸರ್ಕಾರದ ಗಮನ ಸೆಳೆದಿತ್ತು. ಇತ್ತೀಚೆಗೆ ನಡೆದ ಅಧಿವೇಶನದಲ್ಲಿ ವಿರೋಧ ಪಕ್ಷಗಳು ಅಕ್ರಮ ಕುರಿತ ವರದಿ ಪ್ರಸ್ತಾಪಿಸಿ ತನಿಖೆಗೆ ಆಗ್ರಹಿಸಿದ್ದವು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದೆ.
PSI ನೇಮಕಾತಿ ಆದೇಶಕ್ಕೆ ತಾತ್ಕಾಲಿಕ ತಡೆ
ಎಲ್ಲರಿಗಿಂತ ಮೊದಲೇ ತಿಳಿಯುವುದು ಇಲ್ಲೇ..
ಪಿಎಸ್‌ಐ ಹುದ್ದೆಗಳ ನೇಮಕದಲ್ಲಿ ಅಕ್ರಮ ನಡೆದಿದೆ ಎಂದು ಕನ್ನಡಪ್ರಭ(Kannada Prabha) ಸರಣಿ ವರದಿಗಳನ್ನು ಪ್ರಕಟಿಸಿತ್ತು.
ತನಿಖೆಗೆ ಮುನ್ನವೇ ಎಳ್ಳು ನೀರು ಬಿಟ್ರಾ ಗೃಹ ಸಚಿವ ಜ್ಞಾನೇಂದ್ರ?
ಯಾದಗಿರಿ: 545 ಪಿಎಸೈ ನೇಮಕಾತಿ(PSI Recruitment) ಪರೀಕ್ಷೆಯಲ್ಲಿನ ಅಕ್ರಮ ಆರೋಪಗಳಿಗೆ ಸಂಬಂಧಿಸಿದಂತೆ, ನೊಂದ ಅಭ್ಯರ್ಥಿಗಳು(Candidates) ನೀಡಿದ ದಾಖಲೆಗಳ ದೂರಿನ ಆಧಾರದ ಮೇಲೆ ಸಮಿತಿ ರಚಿಸಿ ತನಿಖೆ ನಡೆಸಲು ಹಿಂದೇಟು ಹಾಕುತ್ತಿರುವಂತಿರುವ ಗೃಹ ಇಲಾಖೆ, ಅದ್ಯಾವುದೋ ಒತ್ತಡಕ್ಕೆ ಮಣಿದಂತಿದ್ದು ನೂರಾರು ಕೋಟ್ಯಂತರ ರುಪಾಯಿಗಳ ಹಗರಣಕ್ಕೆ ತೇಪೆ ಸಾರಿಸಿ, ಎಳ್ಳು ನೀರು ಬಿಡುವ ತಯ್ಯಾರಿಯಲ್ಲಿದ್ದಂತಿದೆ.
ಜ.19ರಂದು ಬಿಡುಗಡೆಯಾದ, 545 ಪಿಎಸೈ ನೇಮಕಾತಿ ತಾತ್ಕಾಲಿಕ ಆಯ್ಕೆ ಪಟ್ಟಿ ವಿಚಾರಕ್ಕೆ ಸಂಬಂಧಿಸಿದಂತೆ, ಮೂಡಿಬಂದ ಅನೇಕ ಆರೋಪಗಳಿಗೆ ಉತ್ತರಿಸಬೇಕಾದ ಗೃಹ ಸಚಿವ ಅರಗ ಜ್ಞಾನೇಂದ್ರ(Araga Jnanendra), ಈ ಕುರಿತು ಕೇಳಿಬರುತ್ತಿರುವ ಆರೋಪಗಳೆಲ್ಲವೂ ಸುಳ್ಳು ಎಂದು ತನಿಖೆ(Investigation) ನಡೆಸದೇ ತೇಪೆ ಸಾರಿಸುತ್ತಿರುವುದು ಸಾಕಷ್ಟು ಅನುಮಾನಗಳ ಮೂಡಿಸಿತ್ತು. ಸದ್ಯ ಎಸ್‌ಐ ನೇಮಕ ಪರೀಕ್ಷೆ ಅಕ್ರಮ ಸಿಐಡಿಗೆ ವಹಿಸಿದೆ ರಾಜ್ಯ ಸರ್ಕಾರ.