
ವಿಧಾನಸಭೆ (ಮಾ.11): ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಅವರು ಸಿಎಂರ ಕುರ್ಚಿಯಲ್ಲಿ ಕೂರಲು ಮುಂದಾದಾಗ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಕ್ಷಣ ಕೈ ಅಡ್ಡ ಇಟ್ಟು ಗರುಡಾಚಾರ್‌ರನ್ನು ಪಕ್ಕಕ್ಕೆ ಎಳೆದ ಪ್ರಸಂಗ ಮಂಗಳವಾರ ವಿಧಾನಸಭೆಯಲ್ಲಿ ನಡೆಯಿತು.
ಉದಯ್ ಅವರು ಅರಿವಿಲ್ಲದೆ ಸಿಎಂರ ಕುರ್ಚಿಯಲ್ಲಿ ಕೂರಲು ಮುಂದಾದಾಗ ಸ್ಪೀಕರ್ ಯು.ಟಿ.ಖಾದರ್ ಸೇರಿ ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರು ಕ್ಷಣಕಾಲ ಅಚ್ಚರಿಗೆ ಗುರಿಯಾದರು. ಬಿಜೆಪಿ ಸದಸ್ಯ ಸುನಿಲ್ ಕುಮಾರ್, ‘ಯಾರೋ ಕೂರಬೇಕು ಎಂದುಕೊಂಡಿರುವ ಕುರ್ಚಿಯಲ್ಲಿ ಹೋಗಿ ನೀವು ಕೂರುತ್ತಿದ್ದೀರಲ್ಲಾ?’ ಎಂದು ಉದಯ್, ಶಿವಕುಮಾರ್‌ರನ್ನು ಕಿಚಾಯಿಸಿದರು.
ವಿಧಾನಸಭೆಯಲ್ಲಿ ಸಿಎಂ ಇನ್ನೂ ಆಗಮಿಸದ ಕಾರಣ ಅವರ ಕುರ್ಚಿ ಖಾಲಿ ಇತ್ತು. ಸಿಎಂ ಕುರ್ಚಿ ಪಕ್ಕದಲ್ಲೇ ಇರುವ ತಮ್ಮ ಕುರ್ಚಿಯಲ್ಲಿ ಡಿಸಿಎಂ ಕೂತಿದ್ದರು. ಅವರೊಂದಿಗೆ ಮಾತಾಡಲು ಆಡಳಿಪಕ್ಷದ ಸಾಲಿಗೆ ತೆರಳಿದ ಗರುಡಾಚಾರ್ ಸಿಎಂರ ಕುರ್ಚಿಯಲ್ಲಿ ಕೂರಲು ಮುಂದಾದರು. ತಕ್ಷಣ ಎಚ್ಚೆತ್ತ ಶಿವಕುಮಾರ್, ಗುರುಡಾಚಾರ್‌ರ ಕೈ ಹಿಡಿದು ತಮ್ಮ ಬಲಭಾಗದಲ್ಲಿದ್ದ ಖಾಲಿ ಆಸನದಲ್ಲಿ ಕೂರಿಸಿಕೊಂಡರು. ತಮ್ಮ ತಪ್ಪಿನ ಅರಿವಾಗಿ ತಲೆ ಚಚ್ಚಿಕೊಂಡ ಗರುಡಾಚಾರ್ ಪ್ರತಿಪಕ್ಷ ಸದಸ್ಯರ ಕಡೆಗೆ ಏನೂ ಮಾತನಾಡಬೇಡಿ ಶೂ...! ಶೂ...! ಎಂದು ಬಾಯ್ಮೇಲೆ ಬೆರಳಿಟ್ಟುಕೊಂಡು ಸನ್ನೆ ಮಾಡಿದರು.
ಬಳಿಕ ಪ್ರತಿಪಕ್ಷದ ಸಾಲಿನತ್ತ ಬಂದ ಉದಯ್ ಗರುಡಾಚಾರ್ ಅವರಿಗೆ ಬುದ್ಧಿವಾದ ಹೇಳಿದ ಪ್ರತಿಪಕ್ಷ ನಾಯಕ ಆರ್. ಅಶೋಕ್, ನೀವು ಆ ಸಾಲಿಗೆ ಹೋಗಿದ್ದೇ ತಪ್ಪು. ಹೋಗಿ ಆ ರೀತಿ ಮಾಡೋದಾ? ಎಂದು ಬುದ್ಧಿಮಾತು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ