ವಿಧಾನಸಭೆಯ ಉಪಸಭಾಧ್ಯಕ್ಷ ಆನಂದ್ ಮಾಮಿನಿ ನಿಧನ ಪ್ರಯುಕ್ತ ಹಾಗೂ ಶೃದ್ದಾಂಜಲಿ ಸಲ್ಲಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಇಂದಿನ ಪ್ರವಾಸ ರದ್ದಾಗಿದೆ.
ಕಲಬುರಗಿ (ಅ.23): ವಿಧಾನಸಭೆಯ ಉಪಸಭಾಧ್ಯಕ್ಷ ಆನಂದ್ ಮಾಮಿನಿ ನಿಧನ ಪ್ರಯುಕ್ತ ಹಾಗೂ ಶೃದ್ದಾಂಜಲಿ ಸಲ್ಲಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಇಂದಿನ ಪ್ರವಾಸ ರದ್ದಾಗಿದ್ದು, ಇಂದು ಆಳಂದ ಹಾಗೂ ಚಿತ್ತಾಪುರದಲ್ಲಿ ನಡೆಯಬೇಕಿದ್ದ ಸಂಕಲ್ಪ ಯಾತ್ರೆ ಮುಂದೂಡಲಾಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರರು, ವಿಭಾಗೀಯ ಪ್ರಭಾರಿ ಮತ್ತು ಸೇಡಂ ಕ್ಷೇತ್ರದ ಶಾಸಕರಾದ ರಾಜಕುಮಾರ ಪಾಟೀಲ್ ತೇಲ್ಕೂರ ತಿಳಿಸಿದ್ದಾರೆ.
ಕರ್ನಾಟಕ ವಿಧಾನಸಭೆಯ ಉಪ ಸಭಾಧ್ಯಕ್ಷ ಆನಂದ್ ಚಂದ್ರಶೇಖರ್ ಮಾಮಿನಿ ಅವರ ಹಠಾತ್ ನಿಧನ ಆಘಾತ ಉಂಟಾಗಿದ್ದು, ಉಪಸಭಾಪತಿಯಾಗಿದ್ದ ವೇಳೆ ಅವರು ಕಲಾಪದಲ್ಲಿ ಸದನವನ್ನು ನಿರ್ವಾಹಿಸುತ್ತಿದ್ದ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಅವರ ದಿಢೀರ್ ಸಾವು ಕರ್ನಾಟಕದ ಸಂಸದೀಯ ವ್ಯವಸ್ಥೆಗೆ ತುಂಬಾಲಾರದ ನಷ್ಟವಾಗಿದೆ. ಅವರಿಗೆ ಶೃದ್ದಾಂಜಲಿ ಸಲ್ಲಿಸಲು ಮುಖ್ಯಮಂತ್ರಿ ಅವರ ಪ್ರವಾಸ ರದ್ದಾಗಿದೆ.
ರಾಹುಲ್ ಗಾಂಧಿಗೆ ದೇಶಾನೂ ಗೊತ್ತಿಲ್ಲ, ರಾಜ್ಯಾನೂ ಗೊತ್ತಿಲ್ಲ: ಸಿಎಂ ಬೊಮ್ಮಾಯಿ
ಮೃತರ ಆತ್ಮಕ್ಕೆ ಶಾಂತಿ ಕೋರಿ ಸಂಕಲ್ಪ ಯಾತ್ರೆ ಮುಂದೂಡಲಾಗಿದೆ. ಅ. 23ರ ರವಿವಾರ ಇಂದು ಆಳಂದ ಹಾಗೂ ಚಿತ್ತಾಪುರ ದಲ್ಲಿ ನಡೆಬೇಕಿದ್ದ ಬಿಜೆಪಿ ಸಂಕಲ್ಪ ಯಾತ್ರೆ ಮುಂದೂಡಲಾಗಿದೆ. ಬರುವ ನವೆಂಬರ್ 6ರಂದು ನಡೆಯಲಿದೆ ಎಂದು ತೇಲ್ಕೂರ ತಿಳಿಸಿದ್ದಾರೆ. ಸಂಕಲ್ಪ ಯಾತ್ರೆಗೆ ಹಾಗೂ ಆಳಂದದಲ್ಲಿ ಬಸವೇಶ್ವರ ಪುತ್ಥಳಿ ಅನಾವರಣಕ್ಕೆ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿತ್ತು.
ಅರ್ಜಿ ಹಾಕದವರಿಗೂ ಕೆಲ್ಸ ಕೊಟ್ಟಿದ್ದ ಕಾಂಗ್ರೆಸ್: ಸಿಎಂ ಬೊಮ್ಮಾಯಿ
ಈಗ ನ. 6 ರಂದು ನಡೆಯಲಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆನಂದ ಮಾಮನಿ ಅವರು ಕೇವಲ ರಾಜಕೀಯ ಕ್ಷೇತ್ರವಲ್ಲದೆ ಅನೇಕ ಸಮಾಜ ಸೇವೆಯಲ್ಲೂ ಗುರುತಿಸಿಕೊಂಡಿದ್ದರು. ಅವರು ನಿಧನರಾದ ವಿಷಯ ತಿಳಿದು ಅತೀವ ದುಃಖವಾಗಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಿ, ಈ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಕರುಣಿಸಲಿ ಎಂದು ರಾಜಕುಮಾರ ಪಾಟೀಲ್ ದೇವರಲ್ಲಿ ಪ್ರಾರ್ಥಿಸಿದ್ದಾರೆ.