ರ‍್ಯಾಪಿಡೋ ಪ್ರಯಾಣದಲ್ಲಿ ಬೆಂಗಳೂರು ಮಹಿಳೆಗೆ ಲೈಂಗಿಕ ಕಿರುಕುಳ, ಭಯಾನಕ ಘಟನೆ ಬಹಿರಂಗ!

Published : Dec 18, 2023, 09:40 PM IST
ರ‍್ಯಾಪಿಡೋ ಪ್ರಯಾಣದಲ್ಲಿ ಬೆಂಗಳೂರು ಮಹಿಳೆಗೆ ಲೈಂಗಿಕ ಕಿರುಕುಳ, ಭಯಾನಕ ಘಟನೆ ಬಹಿರಂಗ!

ಸಾರಾಂಶ

ರ‍್ಯಾಪಿಡೋ ಬುಕ್ ಮಾಡಿ ಕಚೇರಿಯಿಂದ ಮನೆಗೆ ತೆರಳಿದ ಬೆಂಗಳೂರಿನ ಮಹಿಳೆ ಅಸಹಾಯಕಳಾಗಿ ಲೈಂಗಿಕ ಕಿರುಕುಳ ಎದುರಿಸಿದ ಘಟನೆ ನಡೆದಿದೆ. ಸಂಪೂರ್ಣ ಪ್ರಯಾಣದಲ್ಲಿ ಮಹಿಳೆ ಎದುರಿಸಿದ ಕಹಿ ಘಟನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. 

ಬೆಂಗಳೂರು(ಡಿ.18) ಮಹಿಳೆಯರ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಪ್ರಯಾಣ ಎಷ್ಟು ಸುರಕ್ಷಿತ ಅನ್ನೋ ಪ್ರಶ್ನೆ ಎದುರಾಗಿದೆ. ಕಾರಣ ಬೆಂಗಳೂರಿನಲ್ಲಿ ರ‍್ಯಾಪಿಡೋ ಮೂಲಕ ತೆರಳಿದ ಮಹಿಳೆ ಸಂಪೂರ್ಣ ಪ್ರಯಾಣದಲ್ಲಿ ಲೈಂಗಿಕ ಕಿರುಕುಳ ಎದುರಿಸಿದ ಘಟನೆ ನಡೆದಿದೆ. ಲೈಂಗಿಕ ಕಿರುಕುಳದಿಂದ ಭಯಭೀತಳಾದ ಮಹಿಳೆ, ಸಂಪೂರ್ಣ ಪ್ರಯಾಣದಲ್ಲಿ ಅತ್ತ ಪ್ರತಿಭಟಿಸಲು ಸಾಧ್ಯವಾಗದೇ, ಇತ್ತ ಕಿರುಚಾಡಿ ಸಹಾಯ ಕೋರಲು ಸಾಧ್ಯವಾಗದೇ ಮೌನವಾಗಿ ಎಲ್ಲವನ್ನೂ ಸಹಿಸಿಕೊಂಡಿದ್ದಾಳೆ. ಶನಿವಾರ ರಾತ್ರಿ ಕೊರಮಂಗಲದ ಆಸುಪಾಸಿನಲ್ಲಿ ಈ ಘಟನೆ ನಡಿದಿದೆ.

ಬೆಂಗಳೂರಿನಲ್ಲಿನ ಬೈಕ್ ಟ್ಯಾಕ್ಸಿ ಸೇವೆ ನೀಡುವ ರ‍್ಯಾಪಿಡೋ ಬೈಕ್ ಮೂಲಕ ಹಲವರು ದಿನಚರಿ ಒಗ್ಗಿಕೊಂಡಿದೆ. ಹೀಗೆ ಕಚೇರಿ ಕೆಲಸ ಮುಗಿಸಿದ ಮಹಿಳೆ, ತನ್ನ ಫ್ಯಾಕ್ಟರಿಯಿಂದ ಕೋರಮಂಗಲದಲ್ಲಿರುವ ಮನೆಗೆ ತೆರಳಲು ರ‍್ಯಾಪಿಡೋ ಬೈಕ್ ಬುಕ್ ಮಾಡಿದ್ದಾಳೆ. ರಾತ್ರಿ 8.30ರ ವೇಳೆಗೆ ಬೈಕ್ ಆಗಮಿಸಿದೆ. ಚಾಲಕಿ ಡ್ರೈವರ್ ತನ್ನ ಮೊಬೈಲ್ ಬ್ಯಾಟರಿ ಲೋ ಇದೆ, ಈಗ ಸ್ವಿಚ್ ಆಫ್ ಆಗಲಿದೆ. ಹೀಗಾಗಿ ನಿಮ್ಮ ಮೊಬೈಲ್ ನೀಡಿ ಗೂಗಲ್ ಮ್ಯಾಪ್ ಹಾಕುತ್ತೇನೆ ಎಂದು ಮಹಿಳೆಯಿಂದಲೇ ಮೊಬೈಲ್ ಪಡೆದಿದ್ದಾನೆ.

ಬೆಂಗಳೂರಲ್ಲಿ ರಾಪಿಡೋ ಹತ್ತಿದ ಯುವತಿಗೆ ಲೈಂಗಿಕ ಕಿರುಕುಳ, ವಿರೋಧಿಸಿದ್ದಕ್ಕೆ ಹೊರದಬ್ಬಿದ ಚಾಲಕ!

ಪ್ರಯಾಣ ಆರಂಭಗೊಂಡ ಬೆನ್ನಲ್ಲೇ ಮಹಿಳೆ ಜೊತೆ ಮಾತುಕತೆ ಆರಂಭಿಸಿದ್ದಾನೆ. ಕುಟುಂಬ ಸೇರಿದಂತೆ ಇತರ ಕೆಲ ಪ್ರಶ್ನೆಗಳನ್ನು ಕೇಳಿದ್ದಾನೆ. ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿದ ಡ್ರೈವರ್ ಪೆಟ್ರೋಲ್ ಹಾಕುವುದಿದೆ ಎಂದಿದ್ದಾನೆ. ಬಳಿಕ ಪೆಟ್ರೋಲ್ ಟ್ಯಾಂಕ್ ಕೀ ಹಿಂದಿನ ಸೀಟಿನ ಬಳಿ ಇದೆ ಎಂದು ನೇರವಾಗಿ ಮಹಿಳೆಯ ತೊಡೆಗೆ ಕೈಹಾಕಿದ್ದಾನೆ. ಒಂದಲ್ಲ ಎರಡು ಬಾರಿ ಹೀಗೆ ಮಾಡಿದ್ದಾನೆ. ಏಕಾಏಕಿ ಅಸಭ್ಯವಾಗಿ ಕೈಹಾಕಿದ ಕಾರಣ ಮಹಿಳೆ ಬೆಚ್ಚಿ ಬಿದ್ದಿದ್ದಾಳೆ.

ಪ್ರಯಾಣ ಮುಂದುವರಿಸುತ್ತಿದ್ದಂತೆ ಉದ್ದೇಶಪೂರ್ವಕವಾಗಿ ಕೊಂಚ ಹಿಂದೆ ಕುಳಿತಿದ್ದಾನೆ. ಮಹಿಳೆಗೆ ತಾಗಿಕೊಂಡು ಕೂತು ಕೈಹಾಕಲು ಆರಂಭಿಸಿದ್ದಾನೆ. 20 ನಿಮಿಷ ಇದೇ ರೀತಿ ಮಾಡಿದ್ದಾನೆ. ಹೆಚ್ಚಿನ ಜನರು ಇಲ್ಲದ ರಸ್ತೆಯಲ್ಲಿ ಸಾಗುವ ಮೂಲಕ ಈತ ನನ್ನ ದೇಹಕ್ಕೆ ಕೈಹಾಕುವುದು, ಅಸಭ್ಯವಾಗಿ ವರ್ತಿಸಲು ಆರಂಭಿಸಿದ್ದಾನೆ. ನನಗೆ ಪ್ರತಿಭಟಿಸಲು ಸಾಧ್ಯವಾಗಿಲ್ಲ. ಕಾರಣ ಅತೀವ ಭಯದಿಂದ ನಾನು ಸುರಕ್ಷಿತವಾಗಿ ಮನ ಸೇರಿದರೆ ಸಾಕು ಎಂದು ಪ್ರಾರ್ಥಿಸುತ್ತಿದ್ದೆ ಎಂದು ಮಹಿಳೆ ರೆಡಿಟ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡಿದ್ದಾರೆ.

ಈಜಿಪುರ ಬಳಿ ಬಂದಾಗ ಕೊಂಚ ಸಮಾಧಾನವಾಯಿತು. ಬಳಿಕ ಕೆಲ ನಿಮಿಷಗಳಲ್ಲಿ ನಿಗದಿತ ಸ್ಥಳ ತಲುಪಿದೆ. ಫೋನ್ ವಾಪಸ್ ಕೇಳಿ ಮರು ಮಾತನಾಡದೇ ಮನೆ ಸೇರಿಕೊಂಡೆ ಎಂದು ಮಹಿಳೆ ಹೇಳಿದ್ದಾಳೆ. ಈ ಕುರಿತು ರ‍್ಯಾಪಿಡೋ ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸಿದ್ದಾಳೆ. ರ‍್ಯಾಪಿಡೋ ಸಂಸ್ಛೆ ಆರೋಪಿಯನ್ನು ಅಮಾನತು ಮಾಡಿದೆ. 

ಮಣಿಪುರ ಯುವತಿಗೆ ರ‍್ಯಾಪಿಡೋ ಬೈಕ್‌ ಚಾಲಕನಿಂದ ಆಶ್ಲೀಲ ಮೆಸೇಜ್‌: ನಿರ್ಜನ ಪ್ರದೇಶದಲ್ಲಿ ಲೈಂಗಿಕ ಕಿರುಕುಳ ಆರೋಪ

ಮಹಿಳೆಯರು ಟ್ಯಾಕ್ಸಿ  ಪ್ರಯಾಣದಲ್ಲಿ ಪದೇ ಪದೇ ಈ ರೀತಿಯ ಘಟನೆಗಳು ನಡೆಯುತ್ತಿದೆ. ಹೀಗಾಗಿ ಅಮಾನತು ಶಿಕ್ಷೆಯಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಕಾನೂನು ಪ್ರಕಾರ ಕಠಿಣ ಶಿಕ್ಷೆಆಗಬೇಕು. ಮುಂದೆ ಆತ ಜೈಲಿನಲ್ಲೇ ಕೊಳೆಯಬೇಕು. ಇದು ಇತರ ಕಿರುಕುಳ ನೀಡುವ ಆರೋಪಿಗಳಿಗೆ ಎಚ್ಚರಿಕೆಯಾಗಬೇಕು. ಈ ರೀತಿಯ ಕಟ್ಟುನಿಟ್ಟಿನ ಕ್ರಮ ಅಗತ್ಯವಿದೆ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Bengaluru New Year 2026: ಎಂಜಿ ರೋಡ್ ಬಿಟ್ಟು ಕೋರಮಂಗಲಕ್ಕೆ ಜನಸಾಗರ; ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮಹಿಳೆ ಜೊತೆ ಟೋಯಿಂಗ್ ಚಾಲಕನ ಕಿರಿಕ್!
ಬೆಂಗಳೂರು ಹೊಸವರ್ಷ ಸಂಭ್ರಮದಲ್ಲಿ ನಶೆ ಏರಿದ ಮಹಿಳೆಯರಿಗೆ ರಾತ್ರಿ ಇಡಿ ಉಚಿತ ಡ್ರಾಪ್