ನಾಯಿ ಮರಿಯೊಂದು ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಹತ್ತಿಸಲಾಗಿದೆ. ನಾಯಿ ಮರಿ ತೀವ್ರ ನೋವಿನಿಂದ ಕೂಗುತ್ತಿದ್ದರೆ, ಬೈಕ್ ಹತ್ತಿಸಿದವರು ದೂರದಲ್ಲಿ ನೋಡುತ್ತಾ ನಿಂತಿದ್ದಾರೆ. ಈ ವಿಡಿಯೋವನ್ನು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮಕ್ಕೆ ಆಗ್ರಹಿಸಲಾಗಿದೆ
ಬೆಂಗಳೂರು(ಆ.05) ನಾಯಿ ಮರಿಯೊಂದು ನಿಧಾನವಾಗಿ ರಸ್ತೆ ದಾಟುತ್ತಿತ್ತು. ಆದರೆ ಒಂದೇ ಬೈಕ್‌ನಲ್ಲಿ ಮೂವರು ಕುಳಿತುಕೊಂಡು ಉಭಯ ಕುಶಲೋಪರಿ ಮಾತನಾಡುತ್ತಾ ಸಾಗುತ್ತಿದ್ದ ಸವಾರರು ಈ ನಾಯಿ ಮರಿ ಮೇಲೆ ಬೈಕ್ ಹತ್ತಿಸಿದ್ದಾರೆ. ದೈತ್ಯ ಬೈಕ್, ಜೊತೆಗೆ ತ್ರಿಬಲ್ ರೈಡರ್ಸ್. ಪರಿಣಾಮ ನಾಯಿ ಸಂಪೂರ್ಣವಾಗಿ ಅಪ್ಪಚ್ಚಿಯಾದ ಘಟನೆ ಬೆಂಗಳೂರಿನ ಹೊರವಲಯದ ವರ್ತೂರಿನಲ್ಲಿ ನಡೆದಿದೆ. ನಾಯಿ ಮರಿ ಮೇಲೆ ಬೈಕ್ ಹತ್ತಿಸಿ ಕೆಲ ದೂರದಲ್ಲಿ ನಿಂತ ಸಾವರರು ದೂರದಲ್ಲೇ ನಿಂತು ನೋಡಿದ್ದಾರೆ. ಇದು ನೆಟ್ಟಿಗರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ.
ಈ ವಿಡಿಯೋವನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಇಷ್ಟೇ ಅಲ್ಲ ಬೆಂಗಳೂರು ಸಿಟಿ ಪೊಲೀಸರಿಗೆ ಟ್ಯಾಗ್ ಮಾಡಲಾಗಿದೆ. ಈ ವಿಡಿಯೋಗೆ ಪ್ರತಿಕ್ರಿಸಿರುವ ಬೆಂಗಳೂರು ಸಿಟಿ ಪೊಲೀಸರು, ವರ್ತೂರು ಪೊಲೀಸರು ಈ ಪ್ರಕರಣದ ಕುರಿತು ಗಮನಹರಿಸುವಂತೆ ಸೂಚಿಸಿದ್ದರೆ. ಇದೀಗ ನಾಯಿ ಮರಿ ಮೇಲೆ ಬೈಕ್ ಹತ್ತಿಸಿಕೊಂದವರಿಗೆ ಹುಡುಕಾಟ ಆರಂಭಗೊಂಡಿದೆ.
ವಯನಾಡಿನ ಮಣ್ಣಿನಡಿ ಹೂತು ಹೋಗಿದ್ದ ಒಡತಿ ಮೃತದೇಹದ ಸುಳಿವು ನೀಡಿದ ನಾಯಿ!
ಒಂದೆಡೆ ಬೈಕ್‌ನಲ್ಲಿ ತ್ರಿಬಲ್ ರೈಡಿಂಗ್, ಮತ್ತೊಂದೆಡೆ ಮೂವರು ಹೆಲ್ಮೆಟ್ ಧರಿಸಿಲ್ಲ. ಜೊತೆಗೆ ನಾಯಿ ಮರಿ ಮೇಲೆ ಬೈಕ್ ಹತ್ತಿಸಿದ್ದಾರೆ. ಹೀಗಾಗಿ ಹಲವು ಮೋಟಾರು ವಾಯನ ನಿಯಮದ ಉಲ್ಲಂಘನೆಯಾಗಿದೆ. ಜೊತೆಗೆ ನಾಯಿ ಮರಿಯೊಂದು ಬೈಕ್‌ನಡಿ ಸಿಲುಕಿ ಒದ್ದಾಡುವ ಪರಿಸ್ಥಿತಿಯೂ ಎದುರಾಗಿದೆ.
Brutal on roads, came under wheels pic.twitter.com/PugXKeY7Tm
— NaNu Watching (@Namma_watching)
ತ್ರಿಬಲ್ ರೈಡರ್ಸ್ ಬೈಕ್ ಮೂಲಕ ಸಾಗುತ್ತಿರುವ ವೇಳೆ ನಾಯಿ ಮರಿ ರಸ್ತೆ ದಾಟಿದೆ. ಬೈಕ್‌ನಲ್ಲಿ ಮೂವರಿದ್ದ ಕಾರಣ ರೈಡರ್‌ಗೆ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಇಷ್ಟೇ ಅಲ್ಲ ಈ ಮೂವರು ಮಾತನಾಡುತ್ತಾ ಸಾಗಿದ ಕಾರಣ ನಾಯಿ ಮರಿ ಸಾಗಿ ಬಂದ ವಿಚಾರವೇ ಗೊತ್ತಾಗಿಲ್ಲ. ಬೈಕ್ ಅಡಿ ಸಿಲುಕಿಕೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡಿದ್ದಾರೆ. ಬಳಿಕ ಕೆಲ ದೂರದಲ್ಲಿ ಬೈಕ್ ನಿಲ್ಲಿಸಿದ್ದಾರೆ.
ವಯನಾಡಿನಲ್ಲಿ 6 ದಿನಗಳ ಬಳಿಕ ಮಾಲೀಕನ ಪತ್ತೆ ಹಚ್ಚಿದ ನಾಯಿ, ಹೃದಯಸ್ಪರ್ಶಿ ವಿಡಿಯೋ!
ತಿರುಗಿ ನೋಡಿ ಏನು ಮಾಡದೇ ಅಲ್ಲೆ ನಿಂತಿದ್ದಾರೆ. ಅಷ್ಟರಲ್ಲಿ ಅದೇ ದಾರಿಯಲ್ಲಿ ಸಾಗಿ ಬಂದವರು ನಾಯಿ ಮರಿಯನ್ನು ಎತ್ತಿ ಬದಿಗೆ ಸರಿಸಿದ್ದಾರೆ. ಇಷ್ಟಾದರೂ ಈ ಮೂವರು ನಾಯಿ ಮರಿ ಪಕ್ಕ ಬಂದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಹರಿದಾಡುತ್ತಿದ್ದಂತೆ ಆಕ್ರೋಶಗಳು ಹೆಚ್ಚಾಗಿದೆ.