ಗೃಹಲಕ್ಷ್ಮೀ ಯೋಜನೆಯ 2,000 ರೂ. ಬಿಡುಗಡೆ ಕುರಿತು ಬಿಗ್ ಅಪ್ಡೇಟ್ ಕೊಟ್ಟ ಡಿಸಿಎಂ ಡಿ.ಕೆ. ಶಿವಕುಮಾರ್

By Sathish Kumar KH  |  First Published Aug 5, 2024, 4:35 PM IST

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗೃಹಲಕ್ಷ್ಮೀ ಯೋಜನೆಯ 2,000 ರೂ. ಹಣ ಬಿಡಗಡೆ ಬಗ್ಗೆ ಬಿಗ್ ಅಪ್ಡೇಟ್ ಮಾಹಿತಿಯನ್ನು ನೀಡಿದ್ದಾರೆ.


ಮಂಡ್ಯ (ಆ.05): ಕಾಂಗ್ರೆಸ್ ಜನಾಂದೋಲನ ಸಭೆಯಲ್ಲಿ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ 2,000 ರೂ. ಹಣ ಬರ್ತಿದೆಯಾ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕೇಳಿದರು. ಇದಕ್ಕೆ ಬರ್ತಿಲ್ಲಾ.. ಬರ್ತಿಲ್ಲಾ ಎಂದು ಹೇಳಿದರು. ಈ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್ 2 ತಿಂಗಳಿಂದ ಹಣ ಬಿಡುಗಡೆಯಾಗಿಲ್ಲ ಎನ್ನುತ್ತಲೇ ದೊಡ್ಡ ಅಪ್ಡೇಟ್ ಮಾಹಿತಿ ನೀಡಿದ್ದಾರೆ.

ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಮಂಗಳವಾರ ನಡೆದ ಜನಾಂದೋಲನ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಷಣ ಮಾಡುತ್ತಾ, ಬಡವರ ಪರವಾಗಿರುವ ಕಾಂಗ್ರೆಸ್ ಅಧಿಕಾರದಲ್ಲಿದೆ. ಬೆಲೆ ಏರಿಕೆಯಿಂದ ಬಡವರು ತತ್ತರಿಸಿದ್ದರು. ಈ ವೇಳೆ ಪಂಚ ಗ್ಯಾರಂಟಿ ಕೊಟ್ಟ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಗೃಹಲಕ್ಷ್ಮೀ ಯೋಜನೆಯ 2 ಸಾವಿರ ಬರ್ತಿದೆಯೋ? ಇಲ್ವೋ? ಎಂದು ಪ್ರಶ್ನೆ ಮಾಡಿದರು. ಆಗ ವೇದಿಕೆ ಮುಂಭಾಗ ನೆರೆದಿದ್ದ ಮಹಿಳೆಯರು ಬರ್ತಿಲ್ಲ, ಬರ್ತಿಲ್ಲ ಎಂದು ಕೂಗಿದ್ದಾರೆ. ಇದರಿಂದ ಪೇಚಿಗೆ ಸಿಲುಕಿದಂತಾದ ಡಿಕೆಶಿ ಬರುತ್ತೆ ಬರುತ್ತೆ ಕಾಯುತ್ತಿರಿ. ಕಳೆದ ಒಂದು, ಎರಡು ತಿಂಗಳದ್ದು ಮಾತ್ರ ಬಂದಿಲ್ಲ. ಅನುದಾನ ಬಿಡುಗಡೆಯಾಗಿದೆ, ಶೀಘ್ರವೇ ನಿಮ್ಮ ಖಾತೆಗೆ ಹಣ ಬರಲಿದೆ ಎಂದು ದೊಡ್ಡ ಮಾಹಿತಿ ನೀಡಿದರು.

Tap to resize

Latest Videos

ಜೈಲಿಗೆ ಕಳುಹಿದ ಎಚ್‌ಡಿಕೆ ಜೊತೆ ಬಿಎಸ್‌ವೈ ಪಾದಯಾತ್ರೆ: ಸಚಿವ ಚಲುವರಾಯಸ್ವಾಮಿ

ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿ ನಮ್ಮ ಸರ್ಕಾರದ ಗ್ಯಾರಂಟಿ ನಿಲ್ಲಸಬೇಕೆಂದು ಪ್ರಯತ್ನ ಮಾಡುತ್ತಿವೆ. 10 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ತೆಗೆಯುವುದಾಗಿ ಹೆಚ್.ಡಿ. ಕುಮಾರಸ್ವಾಮಿ ಹೇಳುತ್ತಾರೆ. ಬ್ರಿಟಿಷರ ಕೈಲೇ ಕಾಂಗ್ರೆಸ್ ಮುಗಿಸಲು ಆಗಲಿಲ್ಲ. ಕುಮಾರಸ್ವಾಮಿ ಕೈಯಲ್ಲಿ ಆಗುತ್ತಾ? ನಮ್ಮದು 10 ತಿಂಗಳ‌ ಸರ್ಕಾರ ಅಲ್ಲ ಕುಮಾರಣ್ಣ, ನಮ್ಮದು 10 ವರ್ಷದ ಸರ್ಕಾರ. ನಿಮ್ಮ ಹಣೆಬರಹದಲ್ಲಿ ಕಾಂಗ್ರೆಸ್ ಸರ್ಕಾರದ ಒಂದೇ ಒಂದು ಕಾರ್ಯಕ್ರಮ ನಿಲ್ಲಿಸಲು ಆಗಲ್ಲ. ನಾವು ಭಾವನೆ ಮೇಲೆ ರಾಜಕಾರಣ ಮಾಡಲ್ಲ, ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ ಎಂದು ತಿರುಗೇಟು ನೀಡಿದರು.

ನಿಮ್ಮೊಂದಿಗೆ ಮುಸ್ಲಿಮರು ಇಲ್ಲ ಎಂದಿದ್ರೆ ನೀವು MLA ಆಗ್ತಿರಲಿಲ್ಲ, ನಿಮ್ಮ‌ ತಂದೆ ಮುಖ್ಯಮಂತ್ರಿ ಆಗ್ತಿರಲಿಲ್ಲ. ಈಗ ಮುಸ್ಲಿಮರಿಗೆ ಓಟ್ ಹಾಕಿಲ್ಲ ಅಂತಾ ಧಮ್ಕಿ ಹಾಕ್ತಾರೆ. ನಿಮ್ಮ‌ ತಂದೆ ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೀನಿ ಎಂದಿದ್ದು ನೆನೆಸಿಕೊಳ್ಳಿ ಕುಮಾರಸ್ವಾಮಿ. ಸರ್ವಧರ್ಮದ ಶಾಂತಿಯ ತೋಟ ಭಾರತ. ನೀನು ಬಿಜೆಪಿಗೆ ಹೋಗಿ ಮಂತ್ರಿಯಾದ ತಕ್ಷಣ ಯಾರನ್ನು ಸಂವಿಧಾನದಿಂದ ಓಡಿಸಲು ಆಗಲ್ಲ. ನಿನ್ನ ಧಮ್ಕಿಗೆ ಮುಸಲ್ಮಾನರು ಹೆದರಲ್ಲ. ಪೆನ್ ಡ್ರೈವ್ ವಿಚಾರದಲ್ಲಿ ನಾವ್ಯಾರು ಬಂದಿರಲಿಲ್ಲ. ಮಹಾನಾಯಕ ಪೆನ್ ಡ್ರೈವ್ ಹಂಚಿದ್ದು ಎಂದಿದ್ದೆ. ಅದಕ್ಕೆ‌ ಸ್ಟಿಕ್ ಆನ್ ಆಗಬೇಕಿತ್ತು. ನೀನು ಸಿಎಂ ಆಗಿದ್ದಾಗ ಡಿ.ಕೆ.ಶಿವಕುಮಾರ್ ಅಪ್ಪ ಅಮ್ಮನಿಗೆ ಹುಟ್ಟಿಲ್ಲ‌‌ ಎಂದಾಗಲೇ ಹೆದರಿಲ್ಲ. ಸಾತನೂರಿಗೆ ಬಂದು ಕ್ಷಮೆ‌‌ ಕೇಳಿದ್ದೆ. ದೊಡ್ಡ ಆಲದಹಳ್ಳಿ ಕೆಂಪೇಗೌಡನ ಮಗ ಯಾರಿಗೂ ಹೆದರುವ ಮಗ ಅಲ್ಲ. ನನ್ನ ಅಜ್ಜಯ್ಯನ ಸುದ್ದಿ ನಿಮಗೆ ಬೇಡ ಎಂದು ಕಿಡಿಕಾರಿದರು.

ಮಾಜಿ ಪ್ರಧಾನಿ ದೇವೇಗೌಡರ ಹೆಸರಲ್ಲಿ ತುಂಡು ಆಸ್ತಿಯಿಲ್ಲ, ಸ್ವಂತ ಮನೆಯೂ ಇಲ್ಲ; ಹೆಚ್.ಡಿ. ಕುಮಾರಸ್ವಾಮಿ

ಯಡಿಯೂರಪ್ಪನನ್ನು ಜೈಲಿಗೆ ಹಾಕಿಸಿದ್ದು ಯಾರು‌? ಧರ್ಮಸ್ಥಳ ಶ್ರೀ ಮಂಜುನಾಥ ಸನ್ನಿಧಿಯಲ್ಲಿ ಯಾಕೆ ಆಣೆ ಪ್ರಮಾಣ ಮಾಡಲು ಹೋಗಿದ್ರಿ? ಎಲ್ಲವೂ ರಾಜ್ಯದ ಜನರಿಗೆ ಗೊತ್ತಿದೆ. ತಿಮ್ಮಪ್ಪನ ಕಾಸು ಬಿಡಲ್ಲ, ಮಂಜುನಾಥನ ಬಿಡಲ್ಲ. ಮಂಜುನಾಥ ಸ್ವಾಮಿ ಸಹವಾಸಕ್ಕೆ ಹೋಗ ಬೇಡ. ನನ್ನ ಅಧ್ಯಕ್ಷತೆಯಲ್ಲಿ 136 ಸೀಟ್ ಬಂತು. ನಿನ್ನ ಅಧ್ಯಕ್ಷತೆಯಲ್ಲಿ ಎಷ್ಟು ಬಂತು ಬರೀ 19 ಸೀಟು. ಈಗ 2 ಸೀಟು ಗೆದ್ದು ಬಿಜೆಪಿ ಬ್ಲಾಕ್ ಮೇಲ್ ಮಾಡ್ತಿದ್ದೀಯಾ. ರೇವಣ್ಣಂದು ಬೇರೆ ಕುಟುಂಬ ಅಂತಾ ಅಂದು, ಈಗ ನನ್ನ ಕುಟುಂಬದ ಮರ್ಯಾದೆ ತೆಗೆದ ಅಂತಾ ಪ್ರೀತಮ್‌ಗೆ ಹೇಳ್ತೀಯಾ? ಪ್ರಜ್ವಲ್‌ಗೆ ಟಿಕೆಟ್ ಕೊಡಬೇಡಿ ಎಂದು ದೇವರಾಜೇಗೌಡ ಕೈಲಿ ಪತ್ರ ಬರೆಸಿದ್ದು ಯಾರು? ಸ್ವಂತ ಅಣ್ಣ, ಅಣ್ಣನ ಮಗನನ್ನೇ ಅವನು ಸಹಿಸಲ್ಲ. ಇನ್ನು ನನ್ನ ಏಳಿಗೆ ಸಹಿಸುತ್ತಾನ? ನೀನು 10,000 ಜನರಿಗೆ ಕೆಲಸ‌ ಕೊಡುವ ಕಾರ್ಖಾನೆ ತಂದರೆ ನನ್ನ ಬೆಂಬಲ ಇರುತ್ತದೆ‌ ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್ ಸಮಾಜ‌ ಒಡೆಯುವ ಕೆಲಸ‌ ಮಾಡುತ್ತದೆ. ಆದರೆ, ಕಾಂಗ್ರೆಸ್ ಸಮಾಜ ಜೋಡಿಸುವ ಕೆಲಸ ಮಾಡುತ್ತದೆ. ಕುಮಾರಸ್ವಾಮಿ ಪಾದಯಾತ್ರೆ ಬೇಡ ಎಂದು ಹೇಳಿ ಮತ್ತೆ ಯಾಕೆ ಒಪ್ಪಿಕೊಂಡೆ‌ ಹೇಳು. ಸಿದ್ದರಾಮಯ್ಯ ಏನು ಮಾಡಬಾರದ ತಪ್ಪು ಮಾಡಿದ್ದಾರೆ. ಸಿದ್ದರಾಮಯ್ಯ ಕಳ್ಳತನ‌ ಮಾಡಿದ್ದಾರಾ?, ಸರ್ಕಾರದ ಜಮೀನು ಒಡೆದಿದ್ದಾರ? ಅಣ್ಣನ ಸೈಟು ಕೊಟ್ಟಿದ್ದರೂ, ಸರ್ಕಾರ ಪಡೆದು ಬೇರೆ ಜಾಗ ಕೊಟ್ಟಿದೆ ತಪ್ಪೇನಿದೆ ಎಂದು ಕುಮಾರಸ್ವಾಮಿ ವಿರುದ್ಧ ಆಕ್ರೋಶ ಹೊರಹಾಕಿದರು.

click me!