ಬೆಂಗಳೂರು-ಮಂಗಳೂರು ಸಂಪರ್ಕ ಕಡಿತ, ಪರ್ಯಾಯವಾಗಿರುವ ಈ ಮಾರ್ಗಗಳ ಬಗ್ಗೆ ನಿಮಗೆ ಗೊತ್ತೇ?

Published : Jul 19, 2024, 05:23 PM ISTUpdated : Jul 20, 2024, 02:34 PM IST
ಬೆಂಗಳೂರು-ಮಂಗಳೂರು ಸಂಪರ್ಕ ಕಡಿತ, ಪರ್ಯಾಯವಾಗಿರುವ ಈ ಮಾರ್ಗಗಳ ಬಗ್ಗೆ ನಿಮಗೆ ಗೊತ್ತೇ?

ಸಾರಾಂಶ

ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟ್‌ ರಾಷ್ಟ್ರೀಯ ಹೆದ್ದಾರಿ  75  ಮತ್ತು ಕೊಡಗು ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 275 ಕೂಡ ಬಂದ್  ಮಾಡಲಾಗಿದೆ. ಹೀಗಾಗಿ ಪರ್ಯಾಯ ಸಂಪರ್ಕದ ಮಾಹಿತಿ ಇಲ್ಲಿ ನೀಡಲಾಗಿದೆ.

ಬೆಂಗಳೂರು (ಜು.19): ಕರಾವಳಿ, ಮಲೆನಾಡು ಭಾಗದಲ್ಲಿ ವಿಪರೀತ ಮಳೆ ಹಿನ್ನೆಲೆ, ಗುಡ್ಡಕುಸಿತ, ಭೂಕುಸಿತ ಸಂಭವಿಸಿರುವ ಹಿನ್ನೆಲೆ ಕರಾವಳಿ ಭಾಗಗಳಿಗೆ ಬೆಂಗಳೂರಿನಿಂದ ಸಂಪರ್ಕ ಕಡಿತಗೊಂಡಿದೆ. ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟ್‌ ರಾಷ್ಟ್ರೀಯ ಹೆದ್ದಾರಿ  75  ಮತ್ತು ಕೊಡಗು ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 275 ಕೂಡ ಬಂದ್  ಮಾಡಲಾಗಿದೆ. 

ಬಸ್‌ ಸಂಚಾರ ಸ್ಥಗಿತಗೊಂಡಿದ್ದು, ಹೆಚ್ಚುವರಿ ರೈಲು ಸಂಚಾರಕ್ಕೆ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ. ಹಗಲಿನ ಹೊತ್ತಿನಲ್ಲಿ ಕೆಲ ಮಾರ್ಗಗಳಲ್ಲಿ ಸ್ವಂತ ವಾಹನ ಇರುವವರು ಸಂಚಾರ ನಡೆಸಲು ಇಲ್ಲಿ ಕೆಲವು ಪರ್ಯಾಯ ಮಾರ್ಗಗಳ ಪಟ್ಟಿ ನೀಡಲಾಗಿದೆ.

ವರುಣಾರ್ಭಟಕ್ಕೆ ಬೆಂಗಳೂರಿನ ಸಂಪರ್ಕ ಕಡಿದುಕೊಂಡ ಮಂಗಳೂರು, ಯಾರ್ ಕೇಳ್ತಾರೆ ಪ್ರಯಾಣಿಕರ ಗೋಳು?

ಬೆಂಗಳೂರಿನಿಂದ ಮಂಗಳೂರಿಗೆ ಇರುವ ಮಾರ್ಗಗಳ ಪಟ್ಟಿ:

  • ಬೆಂಗಳೂರು- ಹಾಸನ- ಚಿಕ್ಕಮಗಳೂರು- ಶೃಂಗೇರಿ- ಕಾರ್ಕಳ- ಮಂಗಳೂರು (ಹೆಚ್ಚುವರಿ 80 ಕಿಮೀ ಪ್ರಯಾಣಿಸಬೇಕು)
  • ಬೆಂಗಳೂರು- ಹಾಸನ- ಚಾರ್ಮಾಡಿ ಘಾಟ್- ಮಂಗಳೂರು (ಕಷ್ಟಕರ ಪ್ರಯಾಣ, ಟ್ರಾಫಿಕ್ ಜಾಮ್)
  • ಬೆಂಗಳೂರು- ಹಾಸನ- ಬಿಸಿಲೆ ಘಾಟ್- ಮಂಗಳೂರು (ಅಪಾಯಕಾರಿ ಪ್ರಯಾಣ)
  • ಬೆಂಗಳೂರು - ಮೈಸೂರು - ಮಡಿಕೇರಿ - ಮಂಗಳೂರು (ರಾತ್ರಿ ಬಂದ್)
  • ಬೆಂಗಳೂರು- ಹಾಸನ- ಶಿರಾಡಿಘಾಟ್- ಮಂಗಳೂರು (ಸಂಪೂರ್ಣ ಬಂದ್)
  • ಇನ್ನು ಆಗುಂಬೆ ಘಾಟ್‌ ಮೂಲಕ ಉಡುಪಿಗೆ ಸಂಪರ್ಕ ಪಡೆದು ಮಂಗಳೂರು ಪ್ರವೇಶಿಸಬಹುದು.

 ಸಂಸದ ಚೌಟ ಪತ್ರಕ್ಕೆ ಸ್ಪಂದನೆ, ರಸ್ತೆ ಸಂಪರ್ಕ ಕಡಿತ ಬೆನ್ನಲ್ಲೇ ಬೆಂಗಳೂರು-ಮಂಗಳೂರು ಹೆಚ್ಚುವರಿ ರೈಲು ಸಂಚಾರ!

ಬೆಂಗಳೂರಿನಿಂದ ಉಡುಪಿಗೆ ಇರುವ ಮಾರ್ಗಗಳ ಪಟ್ಟಿ:

  • ಬೆಂಗಳೂರು- ಹಾಸನ- ಬೇಲೂರು- ಆಲ್ದೂರು- ಬಾಳೆಹನ್ನೂರು- ಆಗುಂಬೆ- ಉಡುಪಿ
  • ಬೆಂಗಳೂರು- ಚನ್ನರಾಯಪಟ್ಟಣ- ಕಡೂರು- ತರೀಕೆರೆ- ಉಂಬಳೆಬೈಲ್- ಆಗುಂಬೆ- ಉಡುಪಿ
  • ಬೆಂಗಳೂರು- ಹಿರಿಯೂರು- ಹೊಸದುರ್ಗ- ಅಜ್ಜಂಪುರ- ತರೀಕೆರೆ- ಉಂಬಳೆಬೈಲು- ಆಗುಂಬೆ- ಉಡುಪಿ
  • ಬೆಂಗಳೂರು- ಹಿರಿಯೂರು- ಹೊಸದುರ್ಗ- ಅಜ್ಜಂಪುರ- ತರೀಕೆರೆ- ಎನ್ ಆರ್ ಪುರ- ಕೊಪ್ಪ- ಆಗುಂಬೆ- ಉಡುಪಿ
  • ಬೆಂಗಳೂರು- ಹುಳಿಯಾರ್- ಹೊಸದುರ್ಗ- ಅಜ್ಜಂಪುರ- ತರೀಕೆರೆ- ಉಂಬಳೆಬೈಲು- ಆಗುಂಬೆ- ಉಡುಪಿ
  • ಬೆಂಗಳೂರು- ಹುಳಿಯಾರ್- ಹೊಸದುರ್ಗ- ಅಜ್ಜಂಪುರ- ತರೀಕೆರೆ- ಎನ್ ಆರ್ ಪುರ- ಕೊಪ್ಪ- ಆಗುಂಬೆ- ಉಡುಪಿ

ವಿಶೇಷ ರೈಲುಗಳ ವಿವರ:

  • ಜು. 19ರಂದು ರೈಲು ಸಂಖ್ಯೆ 06547 ಎಸ್‌ಬಿಸಿ ಬೆಂಗಳೂರಿನಿಂದ ಹೊರಡಲಿದೆ.
  • ಜು.20ರಂದು ರೈಲು ಸಂಖ್ಯೆ 06548 ಮಂಗಳೂರು ಜಂಕ್ಷನ್‌ನಿಂದ ಯಶವಂತಪುರಕ್ಕೆ ತೆರಳಲಿದೆ.
  • ಜು.21 ಹಾಗೂ 22ರಂದು ರೈಲು ಸಂಖ್ಯೆ 06549 ಯಶವಂತಪುರದಿಂದ ಮಂಗಳೂರು ಜಂಕ್ಷನ್‌ಗೆ ಬರಲಿದೆ.
  • ಜು.21 ಹಾಗೂ 22 ರಂದು ರೈಲು ಸಂಖ್ಯೆ 06550 ಮಂಗಳೂರು ಜಂಕ್ಷನ್‌ನಿಂದ ಯಶವಂತಪುರಕ್ಕೆ ತೆರಳಲಿದೆ.

ರೈಲು ಸಂಚಾರವೂ ಸುಲಭವಲ್ಲ: ಇನ್ನು ಹೆಚ್ಚುವರಿ ರೈಲು ಬಿಟ್ಟರೂ ಕರಾವಳಿಗೆ ರೈಲು ಸಂಚಾರ ಸುಲಭವಲ್ಲ. ಸಕಲೇಶಪುರದಿಂದ ಹೊರಟು ಕುಕ್ಕೆಸುಬ್ರಹ್ಮಣ್ಯ ದಾಟಬೇಕಾದರೆ ಅದು ಜೀವ ಕೈನಲ್ಲಿ ಹಿಡಿದೇ ಸಾಗಬೇಕು ಏಕೆಂದರೆ ಗುಂಡ್ಯ ಬಳಿ ಮಳೆ ಅವಾಂತರದಿಂದ ಗುಡ್ಡ ಕುಸಿಯವುದು ಸಾಮಾನ್ಯವಾಗಿದೆ. ಒಂದು ವೇಳೆ ರೈಲು ಹಳಿಯ ಮೇಲೆ ಗುಡ್ಡ ಕುಸಿದರೆ, ಕಲ್ಲುಬಂಡೆ ನಿಂತರೆ ಅಲ್ಲೂ ಸಂಚಾರ  ಬಂದ್ ಆಗಲಿದೆ. ಇನ್ನು ವಿಮಾನ ಸಂಚಾರ ಕೂಡ ಬಡವರಿಗಲ್ಲ. ಆದರೆ ಪ್ರತೀಕೂಲ ಹವಾಮಾನ ಎದುರಾದರೆ ವಿಮಾನ ಕೂಡ ರದ್ದಾಗುವ ಸಾಧ್ಯತೆ ಹೆಚ್ಚಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿದ್ಯಾರ್ಥಿಗಳ ಬೇಸಿಗೆ ರಜಾ ಮಜಾ ಕಟ್‌ ಮಾಡದಂತೆ ಕರ್ನಾಟಕದ ಶಾಲೆಗಳಿಗೆ CBSE ಖಡಕ್‌ ಸೂಚನೆ!
Urdu Invitation Row: ನಾವು ಯಾರನ್ನೂ ಓಲೈಕೆ ಮಾಡೋಲ್ಲ, ಪ್ರತಿಭಟನೆ ಮಾಡೋದು ವಿಪಕ್ಷಗಳ ಚಾಳಿ ಎಂದ ಸಿಎಂ