ಅಯ್ಯೋ...! ಈ ಬಾರಿಯೂ ಶಾಸಕ ಪ್ರದೀಪ್ ಈಶ್ವರ್‌ಗೆ ಮಾತನಾಡಲು ಅವಕಾಶ ಕೊಡದ ಸ್ಪೀಕರ್!

By Sathish Kumar KH  |  First Published Jul 19, 2024, 4:41 PM IST

ಕಳೆದ ವರ್ಷದ ಅಧಿವೇಶನದಲ್ಲಿ ಪ್ರದೀಪ್ ಈಶ್ವರ್‌ಗೆ ತಪ್ಪಾಗಿ ಮಾತನಾಡಿ ಮುಜುಗರಕ್ಕೆ ಒಳಗಾಗಿದ್ದರು.  ಈ ವರ್ಷವೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಪ್ರದೀಪ್ ಈಶ್ವರ್‌ಗೆ ಸ್ಪೀಕರ್ ಯು.ಟಿ. ಖಾದರ್ ಮಾತನಾಡಲು ಬಿಡದೇ ಕೂತ್ಕೊಳಿ ಎಂದು ಕೂರಿಸಿದರು.


ಬೆಂಗಳೂರು (ಜು.19): ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ವಿಧಾನಸಭಾ ಅಧಿವೇಶನದಲ್ಲಿ ಮಾತನಾಡಲು ಸಕ್ಕ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಲು ಆಗಲಿಲ್ಲ. ಜನರ ಬಗ್ಗೆ ಮಾತನಾಡದೇ ಬಿಜೆಪಿ ವಿರುದ್ಧ ಮಾತನಾಡಲು ಮುಂದಾಗಿದ್ದರಿಂದ, ಪ್ರದೀಪ್ ನೀವು ಕುಳಿತುಕೊಳ್ಳಿ ಎಂದು ಮಾತನಾಡಲು ಅವಕಾಶ ಕೊಡದೇ ಸ್ಪೀಕರ್ ಯು.ಟಿ. ಖಾದರ್ ಕೂರಿಸಿದರು.

ರಾಜ್ಯದಲ್ಲಿ 2023ರಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಸಚಿವರನ್ನು ಸೋಲಿಸಿ ಗೆದ್ದು ವಿಧಾನಸೌಧಕ್ಕೆ ಆಗಮಿಸಿದ ಶಾಸಕ ಪ್ರದೀಪ್ ಈಶ್ವರ್ ಮೊದಲ ಬಾರಿ ಅಧಿವೇಶನದಲ್ಲಿ ಮಾತನಾಡುವಾ ತಪ್ಪಾದ ಸಾವಿನ ಬಗ್ಗೆ ತಪ್ಪಾದ ಮಾಹಿತಿ ನೀಡಿದ್ದರಿಂದ ಟ್ರೋಲ್ ಆಗಿದ್ದರು. ಈಗ ಮತ್ತೊಮ್ಮೆ 2024ರ ವಿಧಾನಸಭಾ ಮಳೆಗಾಲದ ಅಧಿವೇಶನಲ್ಲಿ ಮಾತನಾಡುವಾಗಲೂ ಜನರ ಸಮಸ್ಯೆಗಳ ಬಗ್ಗೆ ಮಾತನಾಡದೇ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ಮಾಡಲು ಮುಂದಾಗಿ, ಪುನಃ ಸ್ಪೀಕರ್ ಕೆಂಗಣ್ಣಿಗೆ ಗುರಿಯಾದರು. ನೀವು ಬಿಜೆಪಿ ವಿರುದ್ಧ ಆರೋಪ ಮಾಡುವುದು ಬಿಟ್ಟು ಬೇರೇನಾದರೂ ಮಾತನಾಡಿ, ಇಲ್ಲವೆಂದರೆ ಕೂತ್ಕೊಳಿ ಎಂದು ಹೇಳಿದರು. ಆದರೂ, ಪುನಃ ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರೆಸಿದಾಗ ಮತ್ತೊಬ್ಬ ಶಾಸಕರು ಕೈ ಹಿಡಿದು ಎಳೆದು ಕೂರಿಸಿದರು.

Tap to resize

Latest Videos

ಸಾವಾಗಿಲ್ಲ ಮಾರ್ರೆ ವೀಡಿಯೋ ಟ್ರೋಲ್‌: ಖಡಕ್‌ ತಿರುಗೇಟು ಕೊಟ್ಟ ಶಾಸಕಿ ನಯನಾ ಮೋಟಮ್ಮ

ವಿಧಾನಮಂಡಲ ಅಧಿವೇಶನದಲ್ಲಿ ಶುಕ್ರವಾರ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡುತ್ತಾ ಬಿಜೆಪಿಯಬರು ಹಗರಣ ಮಾಡಿರುವುದು ನಮಗೂ ಗೊತ್ತಿದೆ ಎಂದು ಪೇಪರ್ ಮುದ್ರಣಗಳನ್ನು ತೋರಿಸಿದರು. ಆದರೂ, ಬಿಜೆಪಿ ನಾಯಕರು ತಮ್ಮ ಹಗರಣಗಳು ಎಲ್ಲಿ ಹೊರಗೆ ಬರುತ್ತವೆಯೇ ಎಂಬ ಭಯದಿಂದ ಸದನದ ಚರ್ಚೆ ಹಾಳು ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ಬಣ್ಣ ಹಚ್ಚಿಕೊಳ್ಳದೇ ನಾಟಕ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು. ಆಗ ಸ್ಪೀಕರ್ ಯು.ಟಿ. ಖಾದರ್ ಅವರು ರಾಜ್ಯದಲ್ಲಿ ತೀವ್ರ ಮಳೆ ಆಗುತ್ತಿದ್ದು, ಮಳೆ ಹಾನಿ, ಬೆಳ ಹಾನಿ ಹಾಗೂ ಜನರ ಸಮಸ್ಯೆಗಳ ಬಗ್ಗೆ ಮಾತನಾಡಿ ಎಂದು ಹೇಳಿದರು.

ಈ ವೇಳೆ ಅಧಿವೇಶನದಲ್ಲಿ ಮೇಲೆದ್ದ ಪ್ರದೀಪ್ ಈಶ್ವರ್, ಬಿಜೆಪಿ ಅವಧಿಯಲ್ಲಾದ ಹಗರಣಗಳ ಪಟ್ಟಿಯನ್ನು ಓದಲು ಮುಂದಾದರು. ಈ ವೇಳೆ ಸ್ಪೀಕರ್ ಯು.ಟಿ. ಖಾದರ್ ಅವರು, ಮಳೆ ಹಾನಿ ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಡಬೇಕು. ನೀವು ಬಿಜೆಪಿ ವಿರುದ್ಧ ಬಿಟ್ಟು ಜನರ ಬಗ್ಗೆ ಮಾತನಾಡಿ ಎಂದು ಹೇಳಿದರು. ಆದರೂ ಸ್ಪೀಕರ್ ಕುಳಿತುಕೊಳ್ಳಿ ಎಂಬುದನ್ನು ಕೇಳದ ಶಾಸಕ ಪ್ರದೀಪ್ ಈಶ್ವರ್, ಅಶೋಕ್ ಅಣ್ಣಾ.., ಅಶೋಕ್ ಅಣ್ಣಾ..., ಸ್ವಲ್ಪ ಕೇಳಿ. ಭೋವಿ ನಿಗಮದ ಹಗರಣ ಸೇರಿದಂತೆ ಹಲವು ಹಗರಣಗಳು ನಿಮ್ಮ ಕಾಲದಲ್ಲಿ ನಡೆದಿದೆ. ಅವುಗಳನ್ನು ತನಿಖೆ ಮಾಡಲು ಸಿಬಿಐಗೆ ಕೊಡೋದಾ..? ಕೋವಿಡ್ ಕಾಲದಲ್ಲಿ ಹಣ ದರೋಡೆ ಮಾಡಿದವರು ನೀವು ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಸ್ಪೀಕರ್ ಖಾದರ್ ಕೂತ್ಕೊಳ್ಳಿ ಎಂದು ಹೇಳುತ್ತಿದ್ದರೂ ಅವರ ಮಾತು ಕೇಳದ ಹಿನ್ನೆಲೆಯಲ್ಲಿ ಪ್ರದೀಶ್ ಈಶ್ವರ್‌ಗೆ 'ಏನಾಗಿದೆ ಇವರಿಗೆ, ಕೈಗೆ ಕಬ್ಬಿಣ ಏನಾದರೂ ಕೊಡ್ರಿ, ನಿಮಗೆ ತಲೆ ನಿಯಂತ್ರಣದಲ್ಲಿ ಇಲ್ವಾ?' ಎಂದು ಖಾರವಾಗಿಯೇ ಸ್ಪೀಕರ್‌ ಯು.ಟಿ.ಖಾದರ್ ಆಕ್ರೋಶ ಹೊರ ಹಾಕಿದರು. ಆಗ ಬಿಜೆಪಿ ನಾಯಕರು ಶಾಸಕ ಪ್ರದೀಪ್ ಈಶ್ವರ್ ಹೇಡಿ ಅಲ್ಲಾ, ಪ್ರದೀಪ್ ಈಶ್ವರ್ ಯು ಕೆನ್ ಡು ಇಟ್ ಎಂದು ಲೇವಡಿ ಮಾಡಿದರು. ಈ ವೇಳೆ ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದ ಪ್ರದೀಪ್ ಈಶ್ವರ್‌ನನ್ನು ಶಾಸಕ ನಾರಾಯಣಸ್ವಾಮಿ ಕೈ ಹಿಡಿದೆಳೆದು ಕೂರಿಸಿದರು. ಇನ್ನು ಕುಳಿತುಕೊಂಡ ನಂತರವೂ ಪ್ರದೀಪ್ ಈಶ್ವರ್ ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದರು..

ಜೈಲಿನಲ್ಲಿರೋ ದರ್ಶನ್‌ಗೆ ಕಾಟೇರ ನಮಸ್ಕಾರ; ಮದುವೆಗೆ ಆಶೀರ್ವಾದ ಪಡೆದ ನಿರ್ದೇಶಕ ತರುಣ್ ಸುಧೀರ

ಕಳೆದ ವರ್ಷವೂ ಟ್ರೋಲ್ ಆಗಿದ್ದ ಪ್ರದೀಪ್ ಈಶ್ವರ್ :
ರಾಜ್ಯದಲ್ಲಿ 2023ರಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಸಚಿವರನ್ನು ಸೋಲಿಸಿ ಗೆದ್ದು ವಿಧಾನಸೌಧಕ್ಕೆ ಆಗಮಿಸಿದ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಮೊದಲ ಬಾರಿ ಅಧಿವೇಶನದಲ್ಲಿ ಕೆಎಸ್‌ಆರ್‌ಟಿಸಿ ನೌಕರನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಬಗ್ಗೆ ಮಾತನಾಡುತ್ತಾ ಬಿಜೆಪಿ, ಜೆಡಿಎಸ್ ನಾಯಕರಿಗೆ ಟಾಂಗ್ ಕೊಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದರು. ಕೆಎಸ್‌ಆರ್‌ಟಿಸಿ ಕಂಡಕ್ಟರ್ ಸಾವಿನ ಬಗ್ಗೆ ಇಷ್ಟೊಂದು ಮಾತನಾಡುವ ನೀವು ಬಿಜೆಪಿ, ಜೆಡಿಎಸ್ ನಾಯಕರು ಕೋವಿಡ್ ವೇಳೆ ಸಾವಿರಾರು ಸಾವು ಸಂಭವಿಸಿದೆ ಅವರಿಗೆ ನ್ಯಾಯ ಬೇಡ್ವಾ ಎಂದರು. ಇದಕ್ಕೆ ಪ್ರತಿಕ್ರಿಯೆ ಸ್ಪೀಕರ್ ಅಲ್ಲಿ ಸಾವಾಗಿಲ್ಲ ಮಾರ್ರೆ,  ತಿದ್ದುವ ಪ್ರಯತ್ನ ಮಾಡಿದ್ದರು. ಆಗ, ನೀವು ಕೂತ್ಕೊಳಿ, ಕೂತ್ಕೊಳಿ ಎಂದು ಹೇಳಿ ಪ್ರದೀಶ್ ಈಶ್ವರ್ ಅವರನ್ನು ಕೂಡಿಸಿದ್ದರು.

click me!