
ಬೆಂಗಳೂರು (ಮಾ.04): ರಾಜ್ಯದ ಗುತ್ತಿಗೆದಾರರಿಗೆ ಪಾವತಿ ಮಾಡಬೇಕಾದ ಬಾಕಿ ಬಿಲ್ ಹಣದಲ್ಲಿ ಬಿಜೆಪಿ ಅವಧಿಯದ್ದೇ ಹೆಚ್ಚಾಗಿದೆ. ಸರ್ಕಾರದಲ್ಲಿ ಹಣ ಇಲ್ಲದಿದ್ದರೂ ಟೆಂಟರ್ ಕರೆದು ಕೆಲಸ ಮಾಡಿಸಿದ್ದಾರೆ. ಇದರಿಂದ ನೀವು ಕೆಲಸ ಮಾಡಿದ್ದು, ಒಂದೇ ಬಾರಿಗೆ ಬಿಲ್ ಪಾವತಿಗಾಗಿ ಕೇಳುತ್ತಿದ್ದೀರಿ. ಆದರೆ, ನಿಮಗೆ ಹಣ ಕೊಡಲು ನಾನು ದುಡ್ಡು ಪ್ರಿಂಟ್ ಮಾಡ್ಲಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು PWD ಸಚಿವರಿಗೆ ಹೇಳಿದ್ದೀನಿ. ಅವರು ಏನೂ ಹೇಳ್ತಾರೆ ಕೇಳಿಕೊಂಡು ಬಂದು ಹೇಳಲು ಹೇಳಿದ್ದೇನೆ. ರಾಜ್ಯದಲ್ಲಿ ಭ್ರಷ್ಟಾಚಾರ ನಿಲ್ಲಿಸಲು ಹೇಳಿದ್ದೀರಿ. ಅದೇ ರೀತಿ ಪ್ರಮುಖ ಬೇಡಿಕೆ ಇಟ್ಟಿದ್ದೀರಿ ಕೂಡ. ಕೆಂಪಣ್ಣ ಅವರೊಂದಿಗೆ ನಮ್ಮ ಸರ್ಕಾರ ಬಂದ ಮೇಲೆ 4-5 ಬಾರೀ ಸಭೆ ಮಾಡಿದ್ದೀವಿ. ಬಾಕಿ ಬಿಲ್ ಕೊಡಬೇಕು ಅಂತ ಹೇಳಿದ್ದೀರಿ. ಆದರೆ, ಈ ಹಿಂದೆ ನಮ್ಮ ಸರ್ಕಾರ ಇದ್ದಾಗ ಯಾವುದೇ ಬಾಕಿ ಬಿಲ್ ಉಳಿಸಿಕೊಂಡಿರಲಿಲ್ಲ. ಬಿಜೆಪಿ ಕಾಲದಲ್ಲಿ ಬಾಕಿ ಬಿಲ್ ಹೆಚ್ಚಿದೆ. ಸರ್ಕಾರದಲ್ಲಿ ಹಣ ಇಲ್ಲದೇ ಟೆಂಡರ್ ಕರೆದಿದ್ದಾರೆ. ನೀವು ಕೆಲಸ ಮಾಡಿದ್ದೀರಿ, ಹಾಗಂತ ಒಂದೇ ಬಾರಿ ಬಿಲ್ ಬಿಡುಗಡೆ ಮಾಡಿ ಅಂತ ಹೇಳಿದ್ದೀರಿ. ಆದರೆ, ನಿಮಗೆ ಹಣ ಕೊಡಲು ನಾನು ದುಡ್ಡು ಪ್ರಿಂಟ್ ಮಾಡ್ಲಾ ಎಂದು ಪ್ರಶ್ನಿಸಿದ್ದಾರೆ.
ಸರ್ಕಾರದ ವರದಿಗೂ ಮುನ್ನವೇ ಬಿಜೆಪಿಯ ಖಾಸಗಿ ಎಫ್‌ಎಸ್‌ಎಲ್ ವರದಿ, ಪ್ರಿಯಾಂಕ್ ಖರ್ಗೆ ಕೆಂಡಾಮಂಡಲ
ಗುತ್ತಿಗೆದಾರರಿಗೆ ಒಂದೇ ಸಾರಿ ಬಿಲ್ ಕೊಡೋಕೆ ಬರೋದಿಲ್ಲ. ಹಂತ ಹಂತವಾಗಿ ಬಿಲ್ ಕ್ಲಿಯರ್ ಮಾಡ್ತೇವೆ. ಕೇಂದ್ರ ಸರ್ಕಾರದಿಂದ ಭದ್ರಾ ಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿ ರೂ. ಕೊಡ್ತೇನೆ ಅಂತ ಹೇಳಿತ್ತು. ಆದರೆ, ಇದುವರೆಗೆ ಒಂದು ರೂಪಾಯಿ ಕೂಡ ಕೇಂದ್ರ ಸರ್ಕಾರ ಕೊಟ್ಟಿಲ್ಲ. ನಮಗೆ ಕೊಡಬೇಕಾದ ತೆರಿಗೆಯ ಪಾಲನ್ನು ಕೇಂದ್ರ ಸರ್ಕಾರ ಸರಿಯಾಗಿ ಕೊಡ್ತಿಲ್ಲ. ಹೀಗಾಗಿ ನಮ್ಮ ಸರ್ಕಾರದ ಮೇಲೆ ಗುತ್ತಿಗೆದಾರರು ತಪ್ಪು ತಿಳ್ಕೋಬಾರದು. ಎಲ್ಲವನ್ನೂ ನಾನು, ಡಿಸಿಎಂ ಸಚಿವರು ಕೂತು ಮಾತನಾಡಿದ ಬಳಿಕ ಬಗೆಹರಿಸುತ್ತೇವೆ ಎಂದು ತಿಳಿಸಿದರು.
ಗುತ್ತಿಗೆದಾರರಿಂದ 5 ಪೈಸೆ ಕಮಿಷನ್ ಪಡೆದಿದ್ರೂ ರಾಜಕೀಯ ನಿವೃತ್ತಿ ಕೊಡ್ತೀನಿ:
ನಾವು ಕಳೆದ ಅವಧಿಯಲ್ಲಿ 2018ರವರಗೆ ಅಧಿಕಾರ ಮಾಡಿದ್ದೇವೆ. ಆದರೆ, ಯಾವುದಾದ್ರೂ ಕಂಟ್ರ್ಯಾಕ್ಟರ್ ನಿಂದ 5 ಪೈಸೆ ಪಡೆದಿದ್ರೆ ನಾನು ರಾಜಕೀಯ ನಿವೃತ್ತಿ ಪಡೆದುಕೊಳ್ತೆನೆ. ಈಗ ನೀವು ಭ್ರಷ್ಟಾಚಾರ ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದೀರಿ. ಹಂದ ಹಂತವಾಗಿ ಭ್ರಷ್ಟಾಚಾರವನ್ನೂ ನಿರ್ಮೂಲನೆ ಮಾಡುತ್ತೇವೆ. ಗುತ್ತಿಗೆದಾರರು ಕೂಡ ನಮ್ಮ ಜೊತೆ ಕೈ ಜೋಡಿಸಿದರೆ ಸಮಸ್ಯೆ ಬಗೆಹರಿಸುತ್ತೇನೆ. 4 ಸಾವಿರ ಕೋಟಿ ರೂ. ಲೋಕೋಪಯೋಗಿ ಇಲಾಖೆಗೆ ಮಂಜೂರು ಮಾಡಿದ್ದೇನೆ. ಇದರಲ್ಲಿ ಯಾವುದಕ್ಕೂ ಕೋಡು ಪ್ಯಾಕೇಜ್ ಸಿಸ್ಟಮ್ ಫಾಲೋ ಮಾಡಿಲ್ಲ. ಯಾಕೆಂದರೆ, ಸಣ್ಣ ಗುತ್ತಿಗೆದಾರರಿಗೆ ಅನುಕೂಲ ಆಗಲಿ ಅಂತ ಹಾಗೆ ಮಾಡಿದ್ದೇನೆ. ಬೇರೆ ಬೇರೆ ರಾಜ್ಯಗಳಿಂದ ಗುತ್ತಿಗೆದಾರರು ನಮ್ಮಲ್ಲಿ ಕೆಲಸ ಮಾಡೋಕೆ ಬಂದಿದ್ದಾರೆ. ಇನ್ಮುಂದೆ ಪ್ಯಾಕೇಜ್ ಸಿಸ್ಟಮ್ ಅನ್ನು ಹಂತ ಹಂತವಾಗಿ ಕಡಿಮೆ ಮಾಡಲು ಸೂಚನೆ ಕೊಟ್ಟಿದ್ದೇನೆ. ಜೊತೆಗೆ ನಮ್ಮ ರಾಜ್ಯದ ಗುತ್ತಿಗೆದಾರರಿಗೆ ಗುತ್ತಿಗೆಯಲ್ಲಿ ಆಧ್ಯತೆ ಸಿಗುವಂತೆ ಮಾಡುತ್ತೇನೆ ಎಂದು ಹೇಳಿದರು.
ತುಮಕೂರಿಗೂ ಮೆಟ್ರೋ ವಿಸ್ತರಣೆ ಟೆಂಡರ್, ಬಿಡ್ ಸಲ್ಲಿಸಲು ಏ.2 ಕೊನೆಯ ದಿನ
ಕಳೆದ ಸರ್ಕಾರದ ಮೇಲಿದ್ದ ಶೇ.40 ಕಮಿಷನ್ ಆರೋಪದ ಬಗ್ಗೆ ನಮ್ಮ ಸರ್ಕಾರ ತನಿಖೆ ನಡೆಸುತ್ತಿದೆ. ಏನಾದರೂ ಇದ್ರೆ ಆ ಕಮಿಷನ್ ಮುಂದೆ ಮಾಹಿತಿ ನೀಡಿ. ಯಾರಾದರೂ ಕಮಿಷನ್ ಗೆ ಡಿಮ್ಯಾಂಡ್ ಮಾಡಿದ್ರೆ. ನಾಗಮೋಹನ್ ದಾಸ್ ಕಮಿಟಿಗೆ ದೂರು ಕೊಡಬೇಕು. ಮುಲಾಜಿಲ್ಲದೆ ದೋಷಾರೋಪಣ ಪಟ್ಟಿಯನ್ನು ಗುತ್ತಿಗೆದಾರರು ಸಲ್ಲಿಸಬೇಕು. ನಾವು ಒಟ್ಟಾಗಿ ಭ್ರಷ್ಟಾಚಾರವನ್ನು ಕೊನೆಗಾಣಿಸಬೇಕು. ಒಟ್ಟಾಗಿ ಕೆಲಸ ಮಾಡಬೇಕು. ನೀವೆಲ್ಲಾ ಕೈ ಜೋಡಿಸಿದರೆ ಮಾತ್ರ ಭ್ರಷ್ಟಾಚಾರ ತೊಲಗಿಸಬಹುದು ಎಂದು ಮಾಹಿತಿ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ