ಕರವೇ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರ ಕ್ರಮವೇ ಸರಿಯಾಗಿದೆ: ಗೃಹ ಸಚಿವ ಪರಮೇಶ್ವರ

Published : Dec 28, 2023, 03:56 PM ISTUpdated : Dec 28, 2023, 04:00 PM IST
ಕರವೇ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರ ಕ್ರಮವೇ ಸರಿಯಾಗಿದೆ: ಗೃಹ ಸಚಿವ ಪರಮೇಶ್ವರ

ಸಾರಾಂಶ

ನಮ್ಮ ಸರ್ಕಾರವು ಕನ್ನಡದ ಪರವಾಗಿ ಎಲ್ಲ ರೀತಿಯ ತೀರ್ಮಾನಗಳನ್ನು ತೆಗೆದುಕೊಳ್ಳುವ ಕೆಲಸವನ್ನು ಹಿಂದೆಯೂ ಮಾಡಿದೆ. ಪ್ರತಿಭಟನೆ ಹೆಸರಲ್ಲಿ ಕಾನೂನು ಕೈಗೆತ್ತಿಕೊಳ್ಳುವುದನ್ನು ಸಹಿಸುವುದಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು‌.

ಬೆಂಗಳೂರು (ಡಿ.28): ನಮ್ಮ ಸರ್ಕಾರವು ಕನ್ನಡದ ಪರವಾಗಿ ಎಲ್ಲ ರೀತಿಯ ತೀರ್ಮಾನಗಳನ್ನು ತೆಗೆದುಕೊಳ್ಳುವ ಕೆಲಸವನ್ನು ಹಿಂದೆಯೂ ಮಾಡಿದೆ,‌ ಅದಕ್ಕೆ‌ ಈಗಲೂ ಬದ್ಧವಾಗಿದೆ. ಪ್ರತಿಭಟನೆ ಹೆಸರಲ್ಲಿ ಕಾನೂನು ಕೈಗೆತ್ತಿಕೊಳ್ಳುವುದನ್ನು ಸಹಿಸುವುದಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು‌.

ಗುರುವಾರ ಬೆಳಗ್ಗೆ ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮದವರ ಜತೆ ಮಾತನಾಡಿದ ಅವರು, ಯಾವುದೇ ರೀತಿಯ ಸಮಸ್ಯೆಗಳಿದ್ದರೆ ಸರ್ಕಾರಕ್ಕೆ ಒತ್ತಾಯಿಸಲಿ. ಇದಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಕಾಶವಿದೆ. ಪ್ರತಿಭಟನೆ ಹೆಸರಲ್ಲಿ ಅಂಗಡಿ, ಶಾಪಿಂಗ್‌ಗಳ ಮೇಲೆ ದಾಳಿ‌ ಮಾಡಿ, ಸಾರ್ವಜನಿಕರ ಆಸ್ತಿ ಹಾನಿ ಮಾಡುವುದು ಸರಿಯಲ್ಲ ಎಂದರು.

ಚುನಾವಣೆಯಲ್ಲಿ ನಿಮಗೆ ಶಕ್ತಿ ತುಂಬಿದ್ದೆವು, ಈಗ ಕ್ರಮ ಕೈಗೊಳ್ಳಿ ಅಂತೀರಿ: ಸಿಎಂ ವಿರುದ್ಧ ಕರವೇ ನಾರಾಯಣ ಗೌಡ ಆಕ್ರೋಶ!

ಬರುಗೂರ ರಾಮಚಂದ್ರಪ್ಪ ಅವರು ಸಹ ಕನ್ನಡ ಕಡ್ಡಾಯಕ್ಕೆ ಆಗ್ರಹಿಸಿದ್ದಾರೆ. ನಾವು ಸಹ ಕೆಲವು ಸಮಯದಲ್ಲಿ ಬಿಬಿಎಂಪಿ ಮೂಲಕ ಸೂಚನೆ ನೀಡಿದೆ. ಕರವೇ ಅನ್ನು ಪೊಲೀಸರು ಸರಿಯಾಗಿ ನಡೆಸಿಕೊಂಡಿಲ್ಲ ಎಂದಿದ್ದಾರೆ. ಹೇಗೆ ನಡೆಸಿಕೊಳ್ಳಬೇಕು.? ಪ್ರತಿಭಟನೆ ಮಾಡುತ್ತಿದ್ದರೆ, ಅರ್ಧಗಂಟೆ ಸಮಯ ಕೊಡುತ್ತಾರೆ. ಅದಾದ ನಂತರ ಏನು ಮಾಡಬೇಕು. ಅದನ್ನು ಪೊಲೀಸರು ಮಾಡಿದ್ದಾರೆ. ನಾಮಫಲಕ ವಿಚಾರಕ್ಕೆ ಒತ್ತಾಯ ಪೂರ್ವಕವಾಗಿ ಅಂಗಡಿ, ಶಾಪಿಂಗ್ ಮಾಲ್‌ಗಳ ಮೇಲೆ ದಾಳಿ ಮಾಡುವ ಅವಶ್ಯಕತೆ ಇರಲಿಲ್ಲ. ಈ ಬಗ್ಗೆ ಸರ್ಕಾರ ಅಥವಾ ಬಿಬಿಎಂಪಿಯವರಿಗೆ ಒತ್ತಾಯಿಸಬೇಕಿತ್ತು. ಕಾನೂನು ಕೈಗೆತ್ತಿಕೊಳ್ಳಬೇಕಿರಲಿಲ್ಲ ಎಂದು ಹೇಳಿದರು.

ಪ್ರತಿಭಟನೆಯ ಸಂದರ್ಭದಲ್ಲಿ ವ್ಯಾಪರಸ್ಥರು ಪೊಲೀಸರ ರಕ್ಷಣೆ ಕೋರಿದ್ದಾರೆ. ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದನ್ನು ಪೊಲೀಸರು ಕಣ್ಣಾರೆ ನೋಡಿಕೊಂಡು, ಸುಮ್ಮನಿರಬೇಕು ಎಂದು ಬಯಸುವುದು ತಪ್ಪು. ಕಾನೂನು ಸುವಸ್ಥೆಯನ್ನು ಕಾಪಾಡುವ ಕೆಲಸವನ್ನು ಪೊಲೀಸರು ಮಾಡಿದ್ದಾರೆ. ಇಂತಹ ಘಟನೆಗಳು‌ ಮರುಕಳಿಸಬಾರದು ಎಂದರು.

Narayana Gowda: ಕರವೇ ನಾರಾಯಣ ಗೌಡರ ಮೊದಲ ಪ್ರತಿಭಟನೆ ಪ್ರಾರಂಭವಾಗಿದ್ದು ಹೇಗೆ? ಹಿಂದಿ ಭಾಷಿಕರನ್ನು ಕಂಡ್ರೆ ಆಗುವುದಿಲ್ವಾ ?

ಬೆಂಗಳೂರು ಮಹಾನಗರ ವಿಶ್ವದಲ್ಲೇ ಉತ್ತಮ‌ ನಗರ ಎಂದು ಖ್ಯಾತಿಯಾಗಿದೆ. ಈ ಬಗ್ಗೆ ನಮಗೆ ಹೆಮ್ಮೆ ಇರಬೇಕು. ದಾಂಧಲೆ ನಡೆಸಿದರೆ ಹೇಗೆ? ಹೊರರಾಜ್ಯ, ಹೊರದೇಶದಿಂದ ನಗರಕ್ಕೆ ಬರುವ ಜನರಿಗೆ ಯಾವ ಸಂದೇಶ ನೀಡಬೇಕು. ಇದಕ್ಕಾಗಿ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡೆಲಿವರಿ ಬಾಯ್ಸ್‌ಗೆ ಲಿಫ್ಟ್ ಬಳಸಬೇಡಿ ಎಂದ ಮೇಘನಾ ಫುಡ್ಸ್; ಪೋಸ್ಟರ್ ವೈರಲ್‌ ಆಗ್ತಿದ್ದಂತೆ ಕ್ಷಮೆಯಾಚನೆ
ದರ್ಶನ್ ಗ್ಯಾಂಗ್‌ನಿಂದ ಕೊಲೆಗೀಡಾದ ರೇಣುಕಾಸ್ವಾಮಿಗೆ ಸತ್ತಮೇಲೂ ನೆಮ್ಮದಿಯಿಲ್ಲ! ಸಮಾಧಿ ಧ್ವಂಸಗೈದ ಡೆವಿಲ್ ಗ್ಯಾಂಗ್‌!