ಜನಾರ್ದನ ರೆಡ್ಡಿಯವರ ಜನಪ್ರಿಯತೆ ಸಹಿಸದೆ ಯಾರೋ ದುಷ್ಕರ್ಮಿಗಳು ಕುಟೀರಕ್ಕೆ ಬೆಂಕಿ ಹಚ್ಚಿದ್ದಾರೆ ಈ ಬಗ್ಗೆ ತನಿಖೆಯಾಗಿ ಆರೋಪಿಗಳನ್ನು ಬಂಧಿಸಬೇಕು ಎಂದು ಕೊಪ್ಪಳದಲ್ಲಿ ಕೆಆರ್‌ಪಿಪಿ ಪಕ್ಷದದ ರಾಜ್ಯ ಉಪಾಧ್ಯಕ್ಷ ಮನೋಹರಗೌಡ ಹೇರೂರ್ ಆಗ್ರಹಿಸಿದರು.
ಕೊಪ್ಪಳ (ಡಿ.28): ಜನಾರ್ದನ ರೆಡ್ಡಿಯವರ ಜನಪ್ರಿಯತೆ ಸಹಿಸದೆ ಯಾರೋ ದುಷ್ಕರ್ಮಿಗಳು ಕುಟೀರಕ್ಕೆ ಬೆಂಕಿ ಹಚ್ಚಿದ್ದಾರೆ ಈ ಬಗ್ಗೆ ತನಿಖೆಯಾಗಿ ಆರೋಪಿಗಳನ್ನು ಬಂಧಿಸಬೇಕು ಎಂದು ಕೊಪ್ಪಳದಲ್ಲಿ ಕೆಆರ್‌ಪಿಪಿ ಪಕ್ಷದದ ರಾಜ್ಯ ಉಪಾಧ್ಯಕ್ಷ ಮನೋಹರಗೌಡ ಹೇರೂರ್ ಆಗ್ರಹಿಸಿದರು.
ಕೆಆರ್‌ಪಿಪಿ ಪಕ್ಷದ ಸಂಸ್ಥಾಪಕ, ಗಂಗಾವತಿ ಶಾಸಕ ಗಾಲಿ ಜನಾರ್ದನರೆಡ್ಡಿಯವರ ಕುಟೀರಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಪ್ರಕರಣ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರ ಉಪಯೋಗಕ್ಕಾಗಿ ಕುಟೀರ ನಿರ್ಮಾಣ ಮಾಡಿದ್ದರು. ಇದರಲ್ಲಿಯೇ ಜನರ ಕುಂದುಕೊರತೆ ಆಲಿಸುತ್ತಿದ್ದರು. ಜನರ ಸಮಸ್ಯೆಗಳಿಗೆ ಇದೇ ಕುಟೀರದಲ್ಲಿ ಸ್ಪಂದಿಸಿ ಪರಿಹಾರ ನೀಡುತ್ತಿದ್ದರು. ಈ ಹಿಂದೆ ಶ್ರೀರಾಮುಲು ಪಂಪಾಸರೋವರ್ ನವೀಕರಣಕ್ಕಾಗಿ ಬಂದಾಗ ಉಳಿದುಕೊಳ್ಳಲು ಕುಟೀರ ನಿರ್ಮಿಸಿಕೊಂಡಿದ್ದರು. ಇದು ತಾತ್ಕಾಲಿಕ ಕುಟೀರವಾಗಿದೆ. ಇಲ್ಲಿಯೇ ಶಾಸಕ ಜನಾರ್ಧನರಡ್ಡಿಯವರು ಉಳಿದುಕೊಂಡು ಇದ್ದು ಜನರ ಸಮಸ್ಯೆ ಬಗೆಹರಿಸುತ್ತಾರೆ. ಆದರೆ ಶಾಸಕ ಜನಪ್ರಿಯತೆ ಸಹಿಸಲಾರದೆ ದುಷ್ಕರ್ಮಿಗಳು ಕುಟೀರಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಹುಲ್ ಗಾಂಧಿ ಈ ದೇಶದ ಪ್ರಧಾನಿ ಆಗಬೇಕು - ಸಿಎಂ ಸಿದ್ದರಾಮಯ್ಯ
ಈ ಬಾರಿ ಶಾಸಕ ಜನಾರ್ದನರೆಡ್ಡಿಯವರು ಹನುಮಮಾಲೆ ವಿಸರ್ಜನೆ ಕಾರ್ಯಕ್ರಮವನ್ನು ಎಲ್ಲೂ ಸಮಸ್ಯೆಯಾಗದಂತೆ ವ್ಯವಸ್ಥಿತವಾಗಿ ನಡೆಸಿದ್ದಕ್ಕೆ ಬಿಜೆಪಿ ಪಕ್ಷದ ಕೆಲವರು ಕೃತ್ಯ ಎಸಗಿರುವ ಶಂಕೆ ಇದೆ. ಹನುಮ ಹೆಸರು ಹೇಳಿಕೊಂಡು ರಾಜಕೀಯ ಮಾಡಿದವರು. ಈ ಹಿಂದೆ ಅಯ್ಯಪ್ಪ ಸ್ವಾಮೀ ಗಲಾಟೆ ಮಾಡಿರುವುದು ಉದಾಹರಣೆ ಇದೆ. ಜನಾರ್ದನರೆಡ್ಡಿಯವರ ವ್ಯವಸ್ಥಿತ ಕೆಲಸ ಸಹಿಸದೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾದವರ ಪತ್ತೆ ಹಚ್ಚಬೇಕು. ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
ಸಾಫ್ಟ್ ಹಿಂದುತ್ವ ಹಾಗಂದ್ರೆ ಏನು? ನಾವು ಹಿಂದುಗಳಲ್ವಾ? ರಾಮನ ಭಕ್ತರು ಅಲ್ವಾ?: ಸಿಎಂ ಸಿದ್ದರಾಮಯ್ಯ