ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (ಬಿಐಎಎಲ್) ತನ್ನ ಎಲ್ಲಾ ವಿಮಾನಯಾನ ಸಂಸ್ಥೆಗಳಲ್ಲಿ ಕನ್ನಡದಲ್ಲಿ ಕಡ್ಡಾಯವಾಗಿ ವಿಮಾನ ಘೋಷಣೆ ಮಾಡುವಂತೆ ಒತ್ತಾಯಿಸಿತ್ತು.
ಬೆಂಗಳೂರು (ನ.12): ಕನ್ನಡದಲ್ಲಿ ಕನ್ನಡಿಗರೇ ಕನ್ನಡ ಮಾತನಾಡಲು, ಕನ್ನಡದಲ್ಲಿ ವ್ಯವಹರಿಸಲು ಮುಜುಗರ ಪಡುತ್ತಿರುವಾಗ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆ ಲುಫ್ತಾನ್ಸ ತನ್ನ ವಿಮಾನದಲ್ಲಿ ಕನ್ನಡದಲ್ಲಿ ಅನೌನ್ಸ್‌ಮೆಂಟ್ ಕೊಡಲು ಆರಂಭ ಮಾಡಿದೆ. ಇದಕ್ಕೆ ಪ್ರಯಾಣಿಕರು ಹಾಗೂ ನೆಟ್ಟಿಗರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಿಂದ ಜರ್ಮನಿಯ ಮ್ಯೂನಿಚ್‌ಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಪ್ರಕಟಣೆಯ ಸಮಯದಲ್ಲಿ ಲುಫ್ತಾನ್ಸ ವಿಮಾನದಲ್ಲಿ ಕನ್ನಡದ ಬಳಕೆ ಮಾಡುತ್ತರುವುದನ್ನು ಹೈಲೈಟ್ ಮಾಡಿದ್ದಾರೆ. ಹೆಚ್ಚಿನ ಭಾರತೀಯ ವಿಮಾನಯಾನ ಸಂಸ್ಥೆಗಳು ಫ್ಲೈಟ್ ಘೋಷಣೆ ಮಾಡುವಾಗ ಹಿಂದಿ ಮತ್ತು ಇಂಗ್ಲಿಷ್ ಅನ್ನು ಮಾತ್ರ ಆಯ್ಕೆ ಮಾಡುತ್ತಿದ್ದರೂ, ಸ್ಥಳೀಯ ಭಾಷೆಗೆ ಗೌರವ ನೀಡುವ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಯ ಪ್ರಯತ್ನ ಶ್ಲಾಘನೀಯ ಎಂದು ಪ್ರಯಾಣಿಕರೊಬ್ಬರು ಬರೆದುಕೊಂಡಿದ್ದಾರೆ.
ಪ್ರಯಾಣಿಕನ ಎಕ್ಸ್ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮತ್ತೊಮ್ಮೆ ಭಾಷಾ ಚರ್ಚೆಗೆ ನಾಂದಿ ಹಾಡಿದೆ. ಪ್ರಸನ್ನ ಎಂಬ ಪ್ರಯಾಣಿಕರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು "BLR-MUC ವಿಮಾನದಲ್ಲಿ ಟೇಕ್-ಆಫ್-ಪ್ರೀ-ಟೇಕ್ ಆಫ್ ಪ್ಯಾಸೆಂಜರ್ ಘೋಷಣೆಯನ್ನು ಕನ್ನಡದಲ್ಲಿ ಮಾಡಿದ್ದಕ್ಕಾಗಿ @lufthansa ಅವರಿಗೆ ಕ್ರೆಡಿಟ್ ಕೊಡುತ್ತೇನೆ" ಎಂದು ಬರೆದಿದ್ದಾರೆ.
ಸ್ಥಳೀಯತೆಗೆ ಆದ್ಯತೆ ನೀಡುವ ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳನ್ನು ಶ್ಲಾಘಿಸುವ ಪೋಸ್ಟ್‌ಗೆ ಅನೇಕ ಪ್ರತಿಕ್ರಿಯೆಗಳು ಬಂದವು. ಭಾರತದಲ್ಲಿನ ಎಲ್ಲಾ ಅಧಿಕೃತ ಭಾಷೆಗಳನ್ನು ಹೇರುವ ಬದಲು ಸಮಾನವಾಗಿ ಪರಿಗಣಿಸಬೇಕು ಎಂದು ಒಬ್ಬ ಬಳಕೆದಾರರು ಹೇಳಿದ್ದಾರೆ. 'ಇದನ್ನು ಅವರು ಬಹಳ ವರ್ಷಗಳ ಹಿಂದಿನಿಂದಲೇ ಮಾಡುತ್ತಲೇ ಬಂದಿದ್ದಾರೆ. ಒಂದು ಒಕ್ಕೂಟವು @EUCouncil @EU_Commission @Europarl_EN ಇಂಥ ಕೆಲಸ ಮಾಡಿದಾಗ ಇದು ಸಂಭವಿಸುತ್ತದೆ, ಅಲ್ಲಿ ಎಲ್ಲಾ ಭಾಷೆಗಳನ್ನು ಸಮಾನವಾಗಿ ಪರಿಗಣಿಸಲಾಗುತ್ತದೆ. ಉತ್ತಮ ನೀತಿಗಳನ್ನು ಎಲ್ಲಾ ಕ್ಷೇತ್ರಗಳಲ್ಲಿ ಸಾಗಿಸಲಾಗುತ್ತದೆ' ಎಂದು ಬರೆದಿದ್ದಾರೆ.
undefined
ಇನ್ನೊಬ್ಬ ಯೂಸರ್ ಭಾರತದ ಏರ್‌ಲೈನ್ಸ್‌ಅನ್ನು ಟ್ಯಾಗ್ ಮಾಡಿದ್ದಾರೆ. 'ವಿದೇಶದ ಲುಫ್ತಾನ್ಸ ಏರ್‌ಲೈನ್ಸ್‌ನಿಂದ ನೀವು ಕಲಿತುಕೊಳ್ಳಿ. ಕನ್ನಡದಲ್ಲಿ ಹೇಗೆ ಅವರು ಘೋಷಣೆ ಮಾಡುತ್ತಾರೆ ಅನ್ನೋದನ್ನು ನೋಡಿದೆ. ಅದರೊಂದಿಗೆ ವಿಮಾನದಲ್ಲಿ ಕನ್ನಡ ಶಬ್ದಗಳನ್ನು ಎಷ್ಟು ಉತ್ತಮವಾಗಿ ಪ್ರದರ್ಶನ ಮಾಡಿದ್ದಾರೆ. ಆ ಮೂಲಕ ತನ್ನ ಗ್ರಾಹಕರನ್ನು ತೃಪ್ತಿ ಪಡಿಸಿದ್ದಾರೆ. ನೀವು ಇದೇ ಮಾರ್ಗದಲ್ಲಿ ಬನ್ನಿ' ಎಂದು ಹೇಳಿದ್ದಾರೆ.
ಭಾಷಾ ಆಧಾರಿತ ಸಂಸ್ಥೆಯಾಗಿರುವಕನ್ನಡ ಸಾಹಿತ್ಯ ಪರಿಷತ್ತು,ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ (BIAL) ಹಾಗೂ ಬೆಂಗಳೂರಲ್ಲಿ ನಿಲ್ಲುವ ಅಂತಾರಾಷ್ಟ್ರೀಯ ವಿಮಾನಗಳು ಕನ್ನಡದಲ್ಲಿ ವಿಮಾನ ಘೋಷಣೆಗಳನ್ನು ಮಾಡುವಂತೆ ಒತ್ತಾಯಿಸಿತ್ತು.
'ಕುಕ್ಕೆ ಸುಬ್ರಹ್ಮಣ್ಯ ರೋಡ್‌ನಲ್ಲಿ ಭಾರೀ ನಿಧಿ..' ಗುಂಡಿ ತೋಡಲು ಇಳಿದ ರಾಜ್ಯ ಸರ್ಕಾರಕ್ಕೆ ಮಂಗಳಾರತಿ!
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕನ್ನಡಕ್ಕೆ ಆದ್ಯತೆ ನೀಡುವಂತೆ ಕೆಎಸ್‌ಪಿ ಅಧ್ಯಕ್ಷ ಮಹೇಶ್ ಜೋಶಿ ಅಧಿಕಾರಿಗಳಿಗೆ ಸೂಚಿಸಿದ್ದರು.“ಅವರಿಗೆ (BIAL) ಎಲ್ಲಾ ಸೈನ್‌ಬೋರ್ಡ್‌ಗಳಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡುವಂತೆ ಹೇಳಿದ್ದೇನೆ, ಅದನ್ನು ಮೇಲ್ಭಾಗದಲ್ಲಿ ಇರಿಸಿ, ನಂತರ ಇತರ ಭಾಷೆಗಳನ್ನು ಅನುಸರಿಸಿ. ಅವರು ಮನವಿಗೆ ತ್ವರಿತವಾಗಿ ಸ್ಪಂದಿಸಿದರು ಮತ್ತು ಕನ್ನಡ ಭಾಷೆಯನ್ನು ಉತ್ತೇಜಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುವುದಾಗಿ ಹೇಳಿದ್ದಾರೆ' ಎಂದಿದ್ದರು.
ಕೈಯಲ್ಲಿ ಕೊಡಲಿ ಹಿಡಿದು 'ಕಿಲ್ಲರ್' ಆದ ಜ್ಯೋತಿ ರೈ, ಬ್ಯೂಟಿ ಲುಕ್‌ಗೆ ಫ್ಯಾನ್ಸ್ ಬೋಲ್ಡ್!
ಈ ಬಗ್ಗೆ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪತ್ರ ಬರೆಯುವುದಾಗಿಯೂ ಜೋಶಿ ಹೇಳಿದ್ದರು “ಕೆಲವು ಅನುಮತಿಗಳನ್ನು ನಾಗರಿಕ ವಿಮಾನಯಾನ ಸಚಿವಾಲಯವು ನೀಡಬೇಕಾಗಿದೆ ಮತ್ತು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕನ್ನಡ ಭಾಷೆಯನ್ನು ಉತ್ತೇಜಿಸಲು ವಿನಂತಿಸಿ ನಾನು ಅವರಿಗೆ ವೈಯಕ್ತಿಕವಾಗಿ ಪತ್ರ ಬರೆಯುತ್ತೇನೆ. ಅಂತರಾಷ್ಟ್ರೀಯ ಪ್ರಯಾಣಿಕರು ಬೆಂಗಳೂರಿಗೆ ಬಂದಿಳಿದಾಗ ಅವರನ್ನು ಸ್ಥಳೀಯ ಸಂಸ್ಕೃತಿಯೊಂದಿಗೆ ಸ್ವಾಗತಿಸಬೇಕು ಎಂದು ಅವರು ಹೇಳಿದ್ದರು.