ಟಾಕ್ಸಿಕ್ ಚಿತ್ರತಂಡ ಸೇರಿ 3 ಸಂಸ್ಥೆಗಳ ಮೇಲೆ ಎಫ್‌ಐಆರ್ ದಾಖಲಿಸಿದ ಅರಣ್ಯ ಇಲಾಖೆ!

By Sathish Kumar KH  |  First Published Nov 12, 2024, 5:57 PM IST

ಟಾಕ್ಸಿಕ್ ಸಿನಿಮಾ ಸೆಟ್ ನಿರ್ಮಾಣಕ್ಕೆ ಮರಗಳನ್ನು ಕಡಿದ ಆರೋಪದ ಮೇಲೆ ಅರಣ್ಯ ಇಲಾಖೆ ಎಫ್‌ಐಆರ್ ದಾಖಲಿಸಿದೆ. ಕೆವಿನ್ ಸಂಸ್ಥೆ, ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್, ಹಾಗೂ ಹೆಚ್‌ಎಂಟಿ ಜನರಲ್ ಮ್ಯಾನೇಜರ್ ವಿರುದ್ಧ ಪ್ರಕರಣ ದಾಖಲಾಗಿದೆ. ಮರಗಳನ್ನು ಕಡಿದಿರುವುದು ದೃಢಪಟ್ಟಿದ್ದು, ತನಿಖೆ ಮುಂದುವರೆದಿದೆ.


ಬೆಂಗಳೂರು (ನ.12): ಟಾಕ್ಸಿಕ್ ಸಿನಿಮಾ ಸೆಟ್ ಗೆ ಮರಗಳನ್ನು ಕಡಿದ ಆರೋಪಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯಿಂದ ಎಫ್ ಐಆರ್ ದಾಖಲು ಮಾಡಲಾಗಿದೆ. ಕೆವಿನ್ ಸಂಸ್ಥೆ, ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್, ಹೆಚ್ ಎಂಟಿ ಜನರಲ್ ಮ್ಯಾನೇಜರ್ ವಿರುದ್ಧ ಎಫ್ ಐಆರ್ ದಾಖಲು ಮಾಡಲಾಗಿದೆ. 

ಇನ್ನು ನ್ಯಾಯಾಲಯದ ಆದೇಶ ಪಡೆದು ಎಫ್ ಐಆರ್ ದಾಖಲಿಸಿದ ಅರಣ್ಯ ಇಲಾಖೆ. ಪೀಣ್ಯ ಪ್ಲಾಂಟೇಶನ್ ಸರ್ವೆ ನಂಬರ್ 2, ಮೀಸಲು ಅರಣ್ಯ ಪ್ರದೇಶದಲ್ಲಿ ಮರ ಕಡಿದ ಆರೋಪ ಮಾಡಲಾಗಿದೆ. 1963ರ ಕರ್ನಾಟಕ ಅರಣ್ಯ ಕಾಯ್ದೆ ಉಲ್ಲಂಘನೆ ಅಡಿ ಬೆಂಗಳೂರು ವಲಯ ಅರಣ್ಯಾಧಿಕಾರಿಗಳಿಂದ ನವೆಂಬರ್ 9ರಂದೇ ಎಫ್ ಐಆರ್ ದಾಖಲಿಸಲಾಗಿದೆ. 

Latest Videos

undefined

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು, ಯಶ್ ನಟನೆಯ ಟಾಕ್ಸಿಕ್ ಚಿತ್ರ ತಂಡ ಸೆಟ್ ಹಾಕಿದ ಜಾಗದಲ್ಲಿ ಕಾಡು ಇತ್ತು. ಅಲ್ಲಿನ ಮರಗಳನ್ನು ಕಡಿದ ಆರೋಪ ಚಿತ್ರತಂಡದ ಮೇಲೆ ಬಂದಿತ್ತು. ನಮ್ಮ ಅಧಿಕಾರಿಗಳು ತನಿಖೆ ಮಾಡಿದ್ದರು. ಮರ ಕಡಿದಿದ್ದು ಸಾಬೀತಾಗಿದೆ. ಹೀಗಾಗಿ ಎಫ್ಐಆರ್ ದಾಖಲಿಸಲಾಗಿದೆ. ಯಾರು ಮರ ಕಡದಿದ್ದು ಯಾರು ಅಂತ ಗೊತ್ತಿಲ್ಲ. ತನಿಖೆ ನಡೆಯುತ್ತಿದೆ, ಪೂರ್ಣ ಆದಮೇಲೆ ಮಾಹಿತಿ ಸಿಗುತ್ತದೆ. ಎಷ್ಟು ಮರ ಅಂತ ಮಾಹಿತಿ ಇಲ್ಲ ಎಂದು ಹೇಳಿದರು.

ಇದನ್ನೂ ಓದಿ: ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ಸಿನಿಮಾಗೆ ಶಾಕ್ ಕೊಟ್ಟ ಸಚಿವ ಖಂಡ್ರೆ; ಅರಣ್ಯ ಅಪರಾಧ ಕೇಸ್ ರಿಜಿಸ್ಟರ್!

ಇಲ್ಲಿ ಟಾಕ್ಸಿಕ್ ಚಿತ್ರತಂಡವೇ ಮರ ಕಡೆದಿದೆ ಅಂತ ಹೇಳಲು ಬರಲ್ಲ. ತನಿಖೆಯಿಂದ ಎಲ್ಲಾ ಹೊರಗೆ ಬರಬೇಕು. ಯಾರು ಮರ ಕಡಿದಿದ್ದಾರೆ ಅಂತ ಗೊತ್ತಾಗಿಲ್ಲ. ಚಿತ್ರ ಬಿಡುಗಡೆಗೆ ಯಾವುದೇ ತೊಂದರೆ ಇಲ್ಲ. ಚಿತ್ರತಂಡದವರು ಮರ ಕಡಿದರಾ.? ಎಚ್ಎಂಟಿ ಅವರು ಕಡಿದಿದ್ದಾರಾ ಎಲ್ಲವೂ ತನಿಖೆಯಿಂದ ಗೊತ್ತಾಗಬೇಕು. ಸ್ಯಾಟಲೈಟ್ ಇಮೇಜ್ ನೋಡಿದ ಮೇಲೆ ಸಾಕಷ್ಟು ಮರ ಕಡಿದಿರೋದು ಇದೆ. ಸಂಖ್ಯೆ ಎಷ್ಟು? ಅನ್ನೋ ಮಾಹಿತಿ ಸಿಗಬೇಕಿದೆ ಎಂದು ಮಾಧ್ಯಮಗಳಿಗೆ ತಿಳಿಸಿದರು.

ರಾಜ್ಯದ ಐಎಫ್‌ಎಸ್ ಅಧಿಕಾರಿಗಳಿಗೆ ನೋಟೀಸ್ ನೀಡಿದ ವಿಚಾರದ ಬಗ್ಗೆ ಮಾತನಾಡಿ, ಅಂದಿನ ಹಿರಿಯ ಅಧಿಕಾರಿಗಳಿಗೆ ಅರಣ್ಯ ಕಾಯ್ದೆ ಗೊತ್ತಿದೆ. ಆದರೂ, ಕೆಲವು ಅಧಿಕಾರಿಗಳು ಸುಪ್ರೀಂ ಕೋರ್ಟ್‌ಗೆ ತಪ್ಪು ಮಾಹಿತಿ ನೀಡಿದ್ದಾರೆ. ಯಾರನ್ನು ಕೇಳಿ ತಪ್ಪು ಮಾಹಿತಿ ‌ನೀಡಿದ್ದಾರೆ. ಐಎ ಹಾಕಿದ್ದಾರೆ, ಅಲ್ಲಿ ಅರಣ್ಯ ಇಲ್ಲ ಅಂತ ಬಿಂಬಿಸಿದ್ದಾರೆ. ಅಧಿಕಾರಗಳು ಇನ್ನೂ ಉತ್ತರ ನೀಡಿಲ್ಲ. ಇನ್ನು ಮರ ಕಡಿದವರ ಮೇಲೆ ಎಫ್ ಐಆರ್  ಆಗಿದೆ. ತನಿಖೆ ನಡೆಯುತ್ತಿದೆ, ತನಿಖೆ ಬಳಿಕ‌ ಚಾರ್ಜ್ ಶೀಟ್ ಆಗಲಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಆಗಲಿದೆ ಎಂದು ಹೇಳಿದರು.

click me!