ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿತ, ಗಾಯಾಳುಗಳ ಚಿಕಿತ್ಸೆಗೆ ಮಿಂಟೋ ಆಸ್ಪತ್ರೆ ಸಜ್ಜು!

Published : Nov 03, 2026, 12:33 PM IST
Minto hospital Bengaluru preparations

ಸಾರಾಂಶ

Bengaluru minto hospital prepares diwali ದೀಪಾವಳಿ ಹಬ್ಬದಂದು ಪಟಾಕಿ ಸಿಡಿತದಿಂದ ಉಂಟಾಗುವ ಅನಾಹುತಗಳಿಗೆ ಶೀಘ್ರ ಚಿಕಿತ್ಸೆ ನೀಡಲು ಬೆಂಗಳೂರಿನ ಮಿಂಟೋ ಆಸ್ಪತ್ರೆ ಸಜ್ಜಾಗಿದೆ. ಗಾಯಾಳುಗಳಿಗೆ ದಿನದ 24 ಗಂಟೆಯೂ ವಿಶೇಷ ಚಿಕಿತ್ಸೆ ನೀಡಲು ಅಗತ್ಯ ಔಷಧ ಮತ್ತು ಸಿಬ್ಬಂದಿಯನ್ನು ಸಿದ್ಧಪಡಿಸಲಾಗಿದೆ.

ಬೆಂಗಳೂರು (ನ.3): ದೀಪಾವಳಿ ಹಬ್ಬ ಸಮೀಪಿಸಿದೆ. ಹಬ್ಬದಂದು ಮಕ್ಕಳು, ಯುವಕರು ಪಟಾಕಿ ಸಿಡಿತದಿಂದ ಅನಾಹುತ ಉಂಟಾದರೆ ಮಿಂಟೋ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಸೂಕ್ತ, ಶೀಘ್ರವಾಗಿ ಚಿಕಿತ್ಸೆ ಸಿಗುವಂತೆ ಎಲ್ಲ ವ್ಯವಸ್ಥೆಗಳು ಮಾಡಿಕೊಳ್ಳುತ್ತಿದೆ. ಈ ಬಗ್ಗೆ ಮಿಂಟೋ ಆಸ್ಪತ್ರೆ ನಿರ್ದೇಶಕರಾದ ಸುರೇಶ್ ಬಾಬು ಸುದ್ದಿಗೋಷ್ಠಿ ಕರೆದು ಮಹತ್ವದ ಮಾಹಿತಿ ನೀಡಿದ್ದಾರೆ.

ದೀಪಾವಳಿಗೆ ಮಿಂಟೋ ಆಸ್ಪತ್ರೆ ಸಿಬ್ಬಂದಿ ಸಜ್ಜು

ದೀಪಾವಳಿ ಹಬ್ಬದಂದು ಪಟಾಕಿ ಸಿಡಿತದಿಂದ ಮಕ್ಕಳಿಗೆ ಯುವಕರಿಗೆ ಅನಾಹುತವಾದರೆ ಅವರಿಗೆ ಶೀಘ್ರ ಮತ್ತು ಸೂಕ್ತ ಚಿಕಿತ್ಸೆ ನೀಡಲು ಮಿಂಟೋ ಆಸ್ಪತ್ರೆ ಸಿಬ್ಬಂದಿ ಅಗತ್ಯತಯಾರಿ ನಡೆಸಿದ್ದಾರೆ. ಗಾಯಾಳುಗಳಿಗೆ ವಿಶೇಷ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ.

ದೀಪಾವಳಿ ಹಬ್ಬದಂದು ಮಿಂಟೋ ಆಸ್ಪತ್ರೆ ಸಿಬ್ಬಂದಿ ಸೇರಿ ನಾವು ಹೆಚ್ಚುವರಿಯಾಗಿ ಕಾರ್ಯನಿರ್ವಹಿಸುತ್ತೇವೆ. ಪ್ರತಿ ವರ್ಷವೂ ಪಟಾಕಿ ಸಿಡಿತದಿಂದ ನೂರಾರು ಮಕ್ಕಳು ಕಣ್ಣು, ದೇಹದ ಭಾಗಗಳಿಗೆ ಪಟಾಕಿ ಸಿಡಿದು ಗಾಯಾಗೊಳ್ಳುತ್ತಾರೆ. ಅಂತಹವರಿಗೆ ಸೂಕ್ತ ಚಿಕಿತ್ಸೆ ನೀಡಲು ಸಜ್ಜಾಗಿದ್ದೇವೆ ಎಂದು ಸುರೇಶ್ ಬಾಬು ಅವರು ತಿಳಿಸಿದ್ದಾರೆ.

ದೀಪಾವಳಿ ಹಬ್ಬದ ಹೆಚ್ಚಾಗಿ ಪಟಾಕಿ ಸಿಡಿತದಿಂದ ಕಣ್ಣಿಗೆ ಗಾಯ ಮಾಡಿಕೊಂಡವರೇ ಹೆಚ್ಚು ಬರುತ್ತಾರೆ. ಈ ಬಾರಿಯೂ ಅಂತಹ ಯಾವುದೇ ಅನಾಹುತ ನಡೆದ್ರೂ ದಿನದ 24 ಗಂಟೆ ಮಿಂಟೋ ಆಸ್ಪತ್ರೆ ಸೇವೆ ಸಲ್ಲಿಸಲಿದೆ. ಇದಕ್ಕೆ ಬೇಕಾದ ಅಗತ್ಯ ಔಷಧ, ಸಿಬ್ಬಂದಿ ಸೇರಿ ಎಲ್ಲ ರೀತಿಯಲ್ಲೂ ಸಜ್ಜುಗೊಳಿಸಿದ್ದೇವೆ ಎಂದಿದ್ದಾರೆ.

ಪಟಾಕಿ ಸಿಡಿತದಿಂದ ಯಾರಿಗೆ ಹೆಚ್ಚು ಹಾನಿ?

ಇದಕ್ಕೆ ಬೇಕಾದ ಔಷಧಿಗಳನ್ನ ಸಿದ್ದಪಡಿಸಿಕೊಂಡಿದ್ದೇವೆ. ಪಟಾಕಿ ಸಿಡಿತದಿಂದ ಶೇ.38ರಷ್ಟು ಜನ ಕೈಕಾಲು, ಮೈ ಸುಟ್ಟುಕೊಳ್ತಾರೆ, 19% ಜನ ಕಣ್ಣಿಗೆ ಹಾನಿ ಮಾಡಿಕೊಳ್ಳುತ್ತಾರೆ, 2024ರಲ್ಲಿ ಪಟಾಕಿ ಸಿಡಿತದಿಂದ 71 ಜನ ಗಾಯಾಳು ಆಸ್ಪತ್ರೆಗೆ ದಾಖಲಾಗಿದ್ದರು. ಇದು 2025ರಲ್ಲಿ 56 ಚಿಕಿತ್ಸೆಗೆ ದಾಖಲಾಗಿದ್ರು. ಆ ಪೈಕಿ 14 ಜನರಿಗೆ ಅಡ್ಮಿಟ್ ಮಾಡಿ ಚಿಕಿತ್ಸೆ ನೀಡಲಾಗಿತ್ತು. 2025 ರಲ್ಲಿ 25 ಜನ ಪುರುಷರು ಗಾಯಗೊಂಡಿದ್ದರೆ, ನಾಲ್ಕು ಜನ ಮಹಿಳೆಯರಿದ್ದರು. ಅವರೆಲ್ಲರಿಗೂ ಚಿಕಿತ್ಸೆ ನೀಡಲಾಗಿತ್ತು 18 ವರ್ಷದೊಳಗಿನ 6 ಜನ ಹೆಣ್ಣುಮಕ್ಕಳಿಗೆ ಚಿಕಿತ್ಸೆ ನೀಡಲಾಗಿತ್ತು ಎಂದು ಮಾಹಿತಿ ನೀಡಿದರು. ಈ ವೇಳೆ ಆಸ್ಪತ್ರೆಯ ಮೆಡಿಕಲ್ ಸೂಪರಿಡೆಂಟ್ ನಿಶಾತ್ ಸುಲ್ತಾನ್, HOD ಡಾ ಶಶಿಧರ್ ಕೂಡ ಉಪಸ್ತಿತರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನಿಖಿಲ್‌ ಗೌಡ ಹಿಟ್‌ ಅಂಡ್‌ ರನ್‌ ಕೇಸ್‌ ಗೂ ನನಗೂ ಸಂಬಂಧ ಇಲ್ಲ, ಮೊದಲ ಬಾರಿ ಯೂಟ್ಯೂಬರ್‌ ಮಧು ಗೌಡ ರಿಯಾಕ್ಷನ್‌
ನಂದಿನಿ ಹಾಲು, ಮೊಸರಿನ ದರ ಏರಿಕೆಗೆ ಜನಾಕ್ರೋಶ: ಸಿಎಂ ಸೂಚನೆ ಬೆನ್ನಲ್ಲೇ ಮೊಸರಿಗೆ ₹2 ಬೆಲೆ ಇಳಿಸಿದ ಕೆಎಂಎಫ್!