ಶಿರಾಡಿ ಘಾಟ್‌ನಲ್ಲಿ ಮತ್ತೆ ಭೂಕುಸಿತ: ಬೆಂಗಳೂರು-ಮಂಗಳೂರು ರೈಲು ಸಂಚಾರ ಮತ್ತೆ ಅನಿರ್ದಿಷ್ಟಾವಧಿ ರದ್ದು!

Published : Aug 17, 2024, 06:42 PM IST
ಶಿರಾಡಿ ಘಾಟ್‌ನಲ್ಲಿ ಮತ್ತೆ ಭೂಕುಸಿತ: ಬೆಂಗಳೂರು-ಮಂಗಳೂರು ರೈಲು ಸಂಚಾರ ಮತ್ತೆ ಅನಿರ್ದಿಷ್ಟಾವಧಿ ರದ್ದು!

ಸಾರಾಂಶ

ಸಕಲೇಶಪುರ ತಾಲೂಕಿನ ಆಚಂಗಿ ಬಳಿ ಶಿರಾಡಿ ಘಾಟ್‌ ಸಮೀಪ ಶುಕ್ರವಾರ ರೈಲ್ವೆ ಹಳಿ ಮೇಲೆ ಮತ್ತೆ ಗುಡ್ಡ ಕುಸಿದ ಪರಿಣಾಮ ಬೆಂಗಳೂರು-ಮಂಗಳೂರು ನಡುವಿನ ರೈಲು ಸಂಚಾರ ಅನಿರ್ದಿಷ್ಟಾವಧಿಗೆ ಸ್ಥಗಿತಗೊಂಡಿದೆ. 

ಹಾಸನ (ಆ.17): ಜಿಲ್ಲೆಯ ಸಕಲೇಶಪುರ ತಾಲೂಕಿನ ಆಚಂಗಿ ಬಳಿ ಶಿರಾಡಿ ಘಾಟ್‌ ಸಮೀಪ ಶುಕ್ರವಾರ ರೈಲ್ವೆ ಹಳಿ ಮೇಲೆ ಮತ್ತೆ ಗುಡ್ಡ ಕುಸಿದಿದ್ದು, ಬೆಂಗಳೂರು-ಮಂಗಳೂರು ನಡುವೆ ರೈಲು ಸಂಚಾರವನ್ನು ಅನಿರ್ದಿಷ್ಟಾವಧಿವರೆಗೆ ರದ್ದುಗೊಳಿಸಲಾಗಿದೆ.

ವಾರದ ಹಿಂದೆ ಭೂಕುಸಿತ ಸಂಭವಿಸಿದ ಪ್ರದೇಶವ್ಯಾಪ್ತಿಯಲ್ಲೇ ಮತ್ತೆ ಹಳಿಗಳ ಮೇಲೆ ಗುಡ್ಡ ಕುಸಿದಿದ್ದು, ಬೆಂಗಳೂರಿನಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಗೋಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲನ್ನು ಬಾಳ್ಳುಪೇಟೆ ಬಳಿ, ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಕಾರವಾರ ಎಕ್ಸ್‌ಪ್ರೆಸ್ ರೈಲನ್ನು ಸಕಲೇಶಪುರ ರೈಲ್ವೆ ನಿಲ್ದಾಣದಲ್ಲಿ ತಡೆಹಿಡಿಯಲಾಗಿದೆ. ಪ್ರಯಾಣಿಕರನ್ನು ಬಸ್‌ಗಳ ಮೂಲಕ ನಿಗದಿತ ಸ್ಥಳಗಳಿಗೆ ಕಳುಹಿಸಿಕೊಡಲಾಗಿದೆ.

ನಿನಗೆ ತಾಕತ್ತು, ಧಮ್ಮು ಇದ್ದರೇ ಸಿಎಂರನ್ನ ಜೈಲಿಗೆ ಕಳುಹಿಸು ನೋಡೋಣ, ಬಿಜೆಪಿ ಶಾಸಕನಿಗೆ ಲಕ್ಷ್ಮಣ್ ಚಾಲೆಂಜ್

ಗುಡ್ಡ ಕುಸಿತ ಪ್ರದೇಶದಲ್ಲಿ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಕಾರ್ಯಾಚರಣೆ ಇನ್ನೂ ಎರಡು ದಿನಗಳ ಕಾಲ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಭೂಕುಸಿತ ಸಂಭವಿಸಿರುವ ಪ್ರದೇಶದಲ್ಲಿ ಅಂತರ್ಜಲ ಉಕ್ಕುತ್ತಿರುವುದರಿಂದ ಮತ್ತಷ್ಟು ಭೂಕುಸಿತದ ಭಯ ಕಾಡುತ್ತಿದೆ. ಇದರಿಂದಾಗಿ ಅನಿರ್ದಿಷ್ಟಾವಧಿಯವರೆಗೆ ಈ ಮಾರ್ಗದ ಎಲ್ಲ ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ.

ಆಚಂಗಿಯಲ್ಲಿ ಗುಡ್ಡ ಕುಸಿದ ಪರಿಣಾಮ ಆ.11ರಿಂದ 14ರವರೆಗೆ ಈ ಮಾರ್ಗದಲ್ಲಿ ರೈಲುಗಳ ಸಂಚಾರ ಬಂದ್‌ ಆಗಿತ್ತು. ಸಂಚಾರ ಆರಂಭಿಸಿದ ಒಂದು ದಿನದಲ್ಲೆ ಮತ್ತೆ ಭೂಕುಸಿತದಿಂದ ಸಂಚಾರ ತಡೆಹಿಡಿಯಲಾಗಿದೆ.

ಬಾಂಗ್ಲಾದಲ್ಲಿ ಅರಾಜಕತೆ: ಕೊಡಗಿನ ಕಾಫಿ ತೋಟಕ್ಕೆ ಅಸ್ಸಾಂ ಕಾರ್ಮಿಕರ ನೆಪದಲ್ಲಿ ಬಾಂಗ್ಲಾದವರು ನುಸುಳಿರುವ ಶಂಕೆ!

ಪರ್ಯಾಯ ವ್ಯವಸ್ಥೆ: ಹಳಿಯ ಮೇಲೆ ಭೂಕುಸಿತದಿಂದ ತಡೆಹಿಡಿಯಲಾಗಿರುವ ರೈಲು ಪ್ರಯಾಣಿಕರಿಗೆ ಹಾಸನ ಹಾಗೂ ಸಕಲೇಶಪುರ ಡಿಪೋಗಳಿಗೆ ಸೇರಿದ ಬಸ್‌ಗಳ ಮೂಲಕ ನಿಗದಿತ ಸ್ಥಳಗಳಿಗೆ ಕಳುಹಿಸಿಕೊಡಲಾಯಿತು.

ತಿಂಗಳಲ್ಲಿ 15ದಿನ ಸಂಚಾರವಿಲ್ಲ: ಶಿರಾಡಿಘಾಟ್‌ನಲ್ಲಿ ರೈಲ್ವೆ ಹಳಿಯ ತಳಪಾಯ ಕುಸಿದಿದ್ದರಿಂದ ಜುಲೈ 27ರಿಂದ ಆಗಸ್ಟ್ 8ರವರೆಗೆ ಸಂಚಾರ ತಡೆಹಿಡಿಯಲಾಗಿದ್ದು ಅಗಸ್ಟ್ ೮ರಿಂದ ಸಂಚಾರ ಆರಂಭಿಸಲಾಗಿತ್ತು. ಆಗಸ್ಟ್  11ರಂದು ಆಚಂಗಿ ಸಮೀಪ ಹಳಿಯ ಮೇಲೆ ಗುಡ್ಡ ಕುಸಿತ ಸಂಬಂಧಿಸಿದ್ದರಿಂದ ಮತ್ತೆ ರೈಲು ಸಂಚಾರ ಬಂದ್ ಮಾಡಲಾಗಿದ್ದು ಆಗಸ್ಟ್ 14ರಂದು ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ರೈಲುಗಳು ಸಂಚಾರ ಆರಂಭಿಸಿದ ಒಂದು ದಿನದಲ್ಲೆ ಮತ್ತೆ ಭೂಕುಸಿತದಿದ್ದ ಸಂಚಾರ ತಡೆಹಿಡಿಯಲಾಗಿದೆ.

ಇನ್ನು ಮಳೆಯಿಂದ ಕರಾವಳಿಯನ್ನು ಸಂಪರ್ಕಿಸುವ ರಸ್ತೆ ಮಾರ್ಗ ಕೂಡ ಸಂಪೂರ್ಣ ಹದಗೆಟ್ಟಿತ್ತು. ಕೆಲವೆಡೆ ರಾತ್ರಿ ಸಂಚಾರವನ್ನು ಕೂಡ ನಿರ್ಬಂಧಿಸಲಾಗಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

CM Siddaramaiahಗೆ ಈಶ್ವರಪ್ಪ ವಾರ್ನಿಂಗ್: ಭಗವದ್ಗೀತೆ ಓದಲಿ, ತಾಕತ್ತಿದ್ದರೆ ಕುರಾನ್ ಬಗ್ಗೆ ಮಾತನಾಲಿ
ಸಿಎಂ ಸಿದ್ದರಾಮಯ್ಯಗೆ ಸುಪ್ರೀಂಕೋರ್ಟ್‌ ನೋಟೀಸ್: ವರುಣಾ ಕ್ಷೇತ್ರದ ಆಯ್ಕೆ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ