ನಿನಗೆ ತಾಕತ್ತು, ಧಮ್ಮು ಇದ್ದರೇ ಸಿಎಂರನ್ನ ಜೈಲಿಗೆ ಕಳುಹಿಸು ನೋಡೋಣ, ಬಿಜೆಪಿ ಶಾಸಕನಿಗೆ ಲಕ್ಷ್ಮಣ್ ಚಾಲೆಂಜ್

By Suvarna News  |  First Published Aug 17, 2024, 6:13 PM IST

ಚಾಮುಂಡಿ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ರಾಜಕೀಯ ಪಕ್ಷಗಳಿಂದ ವಿರೋಧ ವ್ಯಕ್ತವಾಗುತ್ತಿದ್ದು, ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಅವರು ಶಾಸಕ ಶ್ರೀವತ್ಸ ಅವರಿಗೆ ಏಕವಚನದಲ್ಲಿ ಚಾಲೆಂಜ್ ಮಾಡಿದ್ದಾರೆ.


 ಮೈಸೂರು (ಆ.17): ಮೈಸೂರಿನ ಚಾಮುಂಡಿಬೆಟ್ಟದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನವು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದೆ. ಚಾಮುಂಡೇಶ್ವರಿದೇವಿ ಪ್ರಾಧಿಕಾರ ರಚನೆಗೆ ಈ ಹಿಂದೆ ಸ್ವಾಗತಿಸಿದ್ದವರು ಈಗ ಏಕೆ ವಿರೋಧ ವ್ಯಕ್ತಪಡಿಸುತ್ತಿದ್ದೀರಿ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಕಿಡಿಕಾರಿದರು.

ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾಮುಂಡಿಬೆಟ್ಟವು ಅರಣ್ಯ ಇಲಾಖೆ, ಗ್ರಾಮ ಪಂಚಾಯತಿ, ಪ್ರವಾಸೋದ್ಯಮ ಇಲಾಖೆಗಳ ವ್ಯಾಪ್ತಿಗೆ ಒಳಪಟ್ಟಿದೆ. ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಡಿ ಚಾಮುಂಡಿಬೆಟ್ಟದ ಸಮಗ್ರ ಅಭಿವೃದ್ಧಿಗಾಗಿ ಒಟ್ಟು 45.7 ಕೋಟಿ ರು. ಬಿಡುಗಡೆ ಮಾಡಿದೆ ಎಂದು ಹೇಳಿದರು.

Tap to resize

Latest Videos

undefined

ಕುರಿ ಹೊಲಸು ತಿನ್ನಲ್ಲ ಕುರುಬ ತಪ್ಪು ಮಾಡಲ್ಲ: ಸಿಎಂ ಬೆನ್ನಿಗೆ ನಿಂತ ಸ್ವಾಮೀಜಿ!

ಶ್ರೀ ಚಾಮುಂಡೇಶ್ವರಿದೇವಿ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ರಾಜ್ಯ ಸರ್ಕಾರ ಮುಂದಾಗಿದೆ‌. ಈ ಸಂಬಂಧ ಕಳೆದ ಜುಲೈ 1 ರಂದು ಗೆಜೆಟ್ ನಲ್ಲಿ ಆದೇಶ ಪ್ರಕಟಿಸಿದೆ. ಇದಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ‌. ಇದರ ಬೆನ್ನಲ್ಲೇ ಬಿಜೆಪಿ, ಜೆಡಿಎಸ್ ನಾಯಕರು ಹೇಳಿಕೆಗಳನ್ನು ‌ನೀಡುವ ಮೂಲಕ ಆಧಾರ ರಹಿತ ಆರೋಪ ಮಾಡಿದ್ದಾರೆ ಎಂದು ಅವರು ಕಿಡಿಕಾರಿದರು.

ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಲೆಲ್ಲ ರಾಜಮನೆತನವನ್ನು ಕೆಣಕುತ್ತಾರೆಂದು ಎಚ್. ವಿಶ್ವನಾಥ್ ಹೇಳಿಕೆ ‌ನೀಡಿರುವುದು ಖಂಡನಿಯ. ಶಾಸಕರಾದ ಜಿ.ಟಿ. ದೇವೇಗೌಡ, ಎಚ್. ವಿಶ್ವನಾಥ್ ಅವರು ಈ ಹಿಂದೆ ಚಾಮುಂಡೇಶ್ವರಿ ಪ್ರಾಧಿಕಾರ ರಚನೆ ಸ್ವಾಗತಾರ್ಹ ಎಂದಿದ್ದರು. ಆದರೆ, ಈಗ ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತಿರುವುದು ಸರಿಯಲ್ಲ ಎಂದು ಅವರು ಖಂಡಿಸಿದರು.

ಟಿಬಿ ಡ್ಯಾಂನಲ್ಲಿ 68 ಟಿಎಂಸಿ ನೀರು ಉಳಿಸಿದ ತಜ್ಞ ಕನ್ಹಯ್ಯಾ ನಾಯ್ಡು, 3 ರಾಜ್ಯದ ಸಮಸ್ಯೆ ಸುಖಾಂತ್ಯ

ಪ್ರಾಧಿಕಾರ ರಚನೆ ಮಾಡಿದರೆ ಏನೆಲ್ಲಾ ಅನುಕೂಲವಾಗಲಿದೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕಿದೆ. ಪ್ರಾಧಿಕಾರ ರಚನೆ ಆದರೆ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿರುತ್ತಾರೆ. ಮುಜರಾಯಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ‌. ಮೈಸೂರಿನ ರಾಜವಂಶಸ್ಥರು ಶಾಶ್ವತ ಸದಸ್ಯರಾಗಿರುತ್ತಾರೆ. ಪ್ರಾಧಿಕಾರಕ್ಕೆ ಯಾವುದೇ ಸದಸ್ಯರನ್ನು ನಾಮ ನಿರ್ದೇಶನ ಮಾಡುವುದಿಲ್ಲ. ಯಾವುದೇ ಜನಪ್ರತಿನಿಧಿಗಳನ್ನು ನೇಮಿಸುವುದಿಲ್ಲ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.

ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಲು ಚಾಮುಂಡಿಬೆಟ್ಟ ಪ್ರಾಧಿಕಾರ ರಚನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ಸ್ವಾಗತಿಸಿದ್ದವರು ಈಗ ಏಕೆ ವಿರೋಧ ವ್ಯಕ್ತಪಡಿಸುತ್ತಿದ್ದೀರಿ? ಚಾಮುಂಡಿಬೆಟ್ಟ ಮೈಸೂರು ರಾಜಮನೆತನಕ್ಕೆ ಸೇರಿದೆ ಎಂದು ಪ್ರಮೋದಾದೇವಿ ಒಡೆಯರ್ ‌ನೀಡಿರುವ ಹೇಳಿಕೆಯಲ್ಲೂ ಸ್ಪಷ್ಟತೆಯಿಲ್ಲ. ಆದ್ದರಿಂದ ಪ್ರಾಧಿಕಾರ ರಚನೆಗೆ ನ್ಯಾಯಾಲಯ ನೀಡಿರುವ ತಡೆಯಾಜ್ಞೆಯನ್ನು ಶೀಘ್ರದಲ್ಲೇ ತೆರವುಗೊಳಿಸುತ್ತೇವೆ.

ತಾಕತ್ತು, ಧಮ್ಮು ಇದ್ದರೇ ಸಿದ್ದರಾಮಯ್ಯ ಜೈಲಿಗೆ ಕಳುಹಿಸಿ ನೋಡೋಣ: ಬಿಜೆಪಿ, ಜೆಡಿಎಸ್ ನಾಯಕರು ಸಿದ್ದರಾಮಯ್ಯ ಅವರನ್ನು ಸಾಕಷ್ಟು ಟೀಕೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ನಾವು ಸುಮ್ಮನೆ ಕುಳಿತಿದ್ದೇವೆ. ನಿನ್ನೆ- ಮೊನ್ನೆ ಗೆದ್ದಂತಹ ಶಾಸಕ ಶ್ರೀವತ್ಸ, ಸಿದ್ದರಾಮಯ್ಯ ಅವರನ್ನು ಜೈಲಿನಲ್ಲಿ ಕುಳಿತು ಅಧಿಕಾರ ಮಾಡುತ್ತಾರೆ ಎಂದಿದ್ದಾರೆ. ನಿನಗೆ ತಾಕತ್ತು, ಧಮ್ಮು ಇದ್ದರೇ ಸಿದ್ದರಾಮಯ್ಯ ಅವರನ್ನು ಜೈಲಿಗೆ ಕಳುಹಿಸಿ ನೋಡೋಣ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ವಾಗ್ದಾಳಿ ನಡೆಸಿದರು.

ರಾಜಕೀಯ ತೆವಲಿಗೋಸ್ಕರ ಈ ರೀತಿ ಮಾತನಾಡೋದಲ್ಲ. ಕೆಲವು ಬಿಜೆಪಿಯವರು ಇದನ್ನೇ ಟ್ರೋಲ್ ಮಾಡುತ್ತಾರೆ. ಈ ರೀತಿ ಟ್ರೋಲ್ ಮಾಡೋರಿಗೆ ಯಾವುದರಲ್ಲಿ ಹೊಡಿಯಬೇಕು. ಈ ರೀತಿಯಾದ ಟ್ರೋಲ್ ಮಾಡುವವರ ವಿರುದ್ಧ ಸೈಬರ್ ಕ್ರೈಮ್ ಗೆ ದೂರು ಕೊಡುತ್ತೇವೆ ಎಂದರು.

click me!