ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ ಅನುಮತಿ ನೀಡಿದ ರಾಜ್ಯಪಾಲರ ವಿರುದ್ಧ ವಾಟಾಳ್ ನಾಗರಾಜ್ ಕೆಂಡ!

By Ravi Janekal  |  First Published Aug 17, 2024, 5:19 PM IST

ರಾಜ್ಯಪಾಲರು ಸಂವಿಧಾನ ರಕ್ಷಣೆಗೆ ಇರೋದು. ಇಲ್ಲಿವರೆಗೆ ಕರ್ನಾಟಕದ ನಮ್ಮ ರಾಜ್ಯಪಾಲರ ಬಗ್ಗೆ ಬಹಳ ಗೌರವ ಇದೆ. ಆದರೆ ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ಕೊಟ್ಟ ವ್ಯಕ್ತಿಯ ಹಿನ್ನೆಲೆ ತಿಳಿಯದೇ ಪ್ರಾಸಿಕ್ಯೂಷನ್‌ಗೆ ಕುರುಡಾಗಿ ಅನುಮತಿ ನೀಡಿದ್ದಾರೆ ಎಂದು ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.


ಬೆಂಗಳೂರು (ಆ.16): ರಾಜ್ಯಪಾಲರು ಸಂವಿಧಾನ ರಕ್ಷಣೆಗೆ ಇರೋದು. ಇಲ್ಲಿವರೆಗೆ ಕರ್ನಾಟಕದ ನಮ್ಮ ರಾಜ್ಯಪಾಲರ ಬಗ್ಗೆ ಬಹಳ ಗೌರವ ಇದೆ. ಆದರೆ ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ಕೊಟ್ಟ ವ್ಯಕ್ತಿಯ ಹಿನ್ನೆಲೆ ತಿಳಿಯದೇ ಪ್ರಾಸಿಕ್ಯೂಷನ್‌ಗೆ ಕುರುಡಾಗಿ ಅನುಮತಿ ನೀಡಿದ್ದಾರೆ ಎಂದು ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.

ಮುಡಾ ಹಗರಣ ಸಂಬಂಧ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ವಿಚಾರವಾಗಿ ಇಂದು ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲಿ ರಾಜ್ಯಪಾಲರು ಮಹಾರಾಷ್ಟ್ರ, ಕೇರಳ, ತೆಲಂಗಾಣದ ರೀತಿ ಇರಲಿಲ್ಲ ಎಂದರು.

Tap to resize

Latest Videos

ಸಿಎಂ ಗೆ ನೋಟಿಸ್ ಕೊಡೊದು ಪ್ರಜಾಪ್ರಭುತ್ವ ಅಲ್ಲ; ರಾಜ್ಯಪಾಲರಿಗೆ ಹೋರಾಟದ ಎಚ್ಚರಿಕೆ ನೀಡಿದ ವಾಟಾಳ್!

ಸಿಎಂ ಸಿದ್ದರಾಮಯ್ಯ ಮೇಲೆ ಬಿಜೆಪಿ ಜೆಡಿಎಸ್ ಪ್ರಮಾಣಿಕ ಹೋರಾಟ ಮಾಡ್ತಿಲ್ಲ. ಸಿದ್ದರಾಮಯ್ಯ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಹಾಗೆ ನೋಡಿದರೆ ಕಾಂಗ್ರೆಸ್‌ನಲ್ಲೂ ಭ್ರಷ್ಟರಿದ್ದಾರೆ, ಬಿಜೆಪಿಯಲ್ಲೂ, ಜೆಡಿಎಸ್‌ನಲ್ಲೂ ಭ್ರಷ್ಟರಿದ್ದಾರೆ. ಮುಡಾ ಹಗರಣದಲ್ಲಿ ಸೈಟ್ ಹಂಚಿಕೆಯಲ್ಲಿ ಅಕ್ರಮ ಆಗಿದ್ರೆ ನಿವೃತ್ತ ನ್ಯಾಯಾಧೀಶರ ಮೂಲಕ ತನಿಖೆಗೆ ತೀರ್ಮಾನ ಆಗಿದೆ. ನಿವೃತ್ತ ನ್ಯಾಯಾಧೀಶರ ವರದಿ ಬರುವ ತನಕ ಕಾಯಬೇಕಿತ್ತು. ಆದರೆ ತರಾತುರಿಯಲ್ಲಿ ದೆಹಲಿಯ ನಾಯಕರು ರಾಜ್ಯಪಾಲರ ಹೆಗಲಮೇಲೆ ಕೂತು ಇವತ್ತೇ ಆದೇಶ ಮಾಡುವಂತೆ ಮಾಡಿದ್ದಾರೆ. ರಾಜ್ಯಪಾಲರನ್ನ ಗುಲಾಮರನ್ನಾಗಿ ಮಾಡಿದ್ದಾರೆ. ರಾಜಭವನ ರಾಜಕಾರಣದ ಕಚೇರಿಯಂತಾಗಿದೆ. ಇಂತಹ ಪರಿಸ್ಥಿತಿ ಎಂದು ಬಂದಿರಲಿಲ್ಲ ಎಂದು ಹರಿಹಾಯ್ದರು.

ರಾಜ್ಯಪಾಲರಿಗೆ ದೂರು ಕೊಡೋದೇ ದೊಡ್ಡದು ಅಂತಾ ಆಗಿದೆ. ದೂರು ಕೊಡುವ ವ್ಯಕ್ತಿಯ ಹಿನ್ನೆಲೆ ಏನು? ಯಾಕೆ ದೂರು ಕೊಟ್ಟ ಎಂಬ ಬಗ್ಗೆ ಪರಿಶೀಲನೆ ಮಾಡಬೇಕು. ಅದ್ಯಾವುದನ್ನೂ ಮಾಡದೇ ನೇರವಾಗಿ ಕುರುಡು ರಾಜ್ಯಪಾಲರ ರೀತಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಖಂಡನೀಯ. ಈ ರೀತಿ ಹಿಂದೆ ಯಾವತ್ತು ರಾಜ್ಯಪಾಲರು ನಡೆದುಕೊಂಡಿರಲಿಲ್ಲ ಎಂದರು.

ತಪ್ಪು ಮಾಡಿಲ್ಲ ಎಂಬ ವಿಶ್ವಾಸ ಇದ್ರೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆಗೆ ಸಹಕರಿಸಲಿ: ಸಂಸದ ಯದುವೀರ್ ಒಡೆಯರ್

ಇದೇ ವೇಳೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಹರಿಹಾಯ್ದ ವಾಟಾಳ್ ನಾಗರಾಜ್ ಅವರು, ಯಡಿಯೂರಪ್ಪ ಜೈಲಿಗೆ ಹೋಗಿ ಬಂದರೂ ಇನ್ನೂ ಬುದ್ಧಿ ಬಂದಿಲ್ಲ. ಯಡಿಯೂರಪ್ಪ ಜನ್ಮ ದಿನಕ್ಕೆ ಸಿದ್ದರಾಮಯ್ಯ ಹೋದಾಗ ವಿವಾದ ಆಗಿತ್ತು. ರಾಜಕಾರಣ ಬೇರೆ, ವೈಯಕ್ತಿಕ ಸಂಬಂಧ ಬೇರೆ ಅಂತ ಸಿದ್ದರಾಮಯ್ಯ ಹೇಳಿದ್ರು. ಸಿದ್ದರಾಮಯ್ಯ ಯಾವತ್ತೂ ದ್ವೇಷ ರಾಜಕಾರಣ ಮಾಡಿದವರಲ್ಲ. ರಾಜ್ಯಪಾಲರ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದರೂ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಬಾರದು.  ನಾವು ಮುಂದಿನ ದಿನಗಳಲ್ಲಿ 'ರಾಜಭವನ ಉಳಿಸಿ' ಅಂತಾ ತೀವ್ರ ಹೋರಾಟ ಮಾಡುವುದು ಅನಿವಾರ್ಯವಾಗಬಹುದು ಎಂದು ಎಚ್ಚರಿಕೆ ನೀಡಿದರು.

click me!