Aero India-2023: ನಾಲ್ಕು ದಿನ ಬೆಂಗಳೂರಿನ ಪ್ರಮುಖ ರಸ್ತೆಗಳು ಬಂದ್‌: ಮಾರ್ಗ ಬದಲಾವಣೆ ವಿವರ ಇಲ್ಲಿದೆ

Published : Feb 11, 2023, 11:20 AM ISTUpdated : Feb 11, 2023, 11:25 AM IST
Aero India-2023: ನಾಲ್ಕು ದಿನ ಬೆಂಗಳೂರಿನ ಪ್ರಮುಖ ರಸ್ತೆಗಳು ಬಂದ್‌: ಮಾರ್ಗ ಬದಲಾವಣೆ ವಿವರ ಇಲ್ಲಿದೆ

ಸಾರಾಂಶ

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಫೆ.13 ರಿಂದ ಫೆ.17ರವರೆಗೆ ನಡೆಯುತ್ತಿರುವ ಏರೋ ಇಂಡಿಯಾ ಶೋ-2023ರ ಅಂಗವಾಗಿ ವಾಹನಗಳ ಸಂಚಾರ ಮಾರ್ಗವನ್ನು ಬದಲಾವಣೆ ಮಾಡಿ ಸಂಚಾರಿ ಪೊಲೀಸ್‌ ಇಲಾಖೆಯು ಆದೇಶವನ್ನು ಹೊರಡಿಸಿದೆ. 

ಬೆಂಗಳೂರು (ಫೆ.11): ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಫೆ.13 ರಿಂದ ಫೆ.17ರವರೆಗೆ ನಡೆಯುತ್ತಿರುವ ಏರೋ ಇಂಡಿಯಾ ಶೋ-2023ರ ಅಂಗವಾಗಿ ವಾಹನಗಳ ಸಂಚಾರ ಮಾರ್ಗವನ್ನು ಬದಲಾವಣೆ ಮಾಡಿ ಸಂಚಾರಿ ಪೊಲೀಸ್‌ ಇಲಾಖೆಯು ಆದೇಶವನ್ನು ಹೊರಡಿಸಿದೆ. 

ಹೌದು ಬೆಂಗಳೂರಿನಲ್ಲಿ ನಡೆಯುವ ವೈಮಾನಿಕ ಪ್ರದರ್ಶನವು ಅಂತಾರಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಯನ್ನು ಹೊಂದಿದೆ. ಪ್ರತಿಬಾರಿಯೂ ವಿಜೃಂಭಣೆಯಿಂದ ಏರೋ ಶೋಗೆ ಈ ಬಾರಿ ಹೆಚ್ಚಿನ ಆದ್ಯತೆಯೂ ಸಿಕ್ಕಿದೆ. ಇದಕ್ಕೆ ಕಾರಣವೆಂದರೆ ಇದೇ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಜಿ-೨೦ ಶೃಂಗಸಭೆಯೂ ನಡೆಯುತ್ತಿರುವುದು ಇದಕ್ಕೆ ಏರ್‌ ಶೋಗೆ ಹೆಚ್ಚಿನ ಪ್ರಾಮುಖ್ಯತೆ ಸಿಗಲು ಮತ್ತೊಂದು ಕಾರಣವಾಗಿದೆ. ಹೀಗಾಗಿ, ವಾಹನ ಸಂಚಾರಕ್ಕೆ ಸಮಸ್ಯೆ ಆಗಲಿರುವ ಹಿನ್ನೆಲೆಯಲ್ಲಿ ಭಾರಿ ವಾಹನಗಳು ಹಾಗೂ ಬಸ್‌ಗಳು ಸೇರಿದಂತೆ ಕೆಲವೊಂದು ವಾಹನಗಳ ಸಂಚಾರವನ್ನು ನಿಷೇಧಿಸಿ ಮಾರ್ಗ ಬದಲಾವಣೆ ಮಾಡಲಾಗಿದೆ.

ಏರೋ ಶೋ ಹಿನ್ನೆಲೆಯಲ್ಲಿ ನಗರದ ಹಲವು ರಸ್ತೆಗಳಲ್ಲಿ ಮಾರ್ಗಬದಲಾವಣೆ ಹಾಗು ಸಂಚಾರ ನಿಷೇಧ ಮಾಡಲಾಗಿದೆ. ಲಾರಿ ಟ್ರಕ್ , ಖಾಸಗಿ ಬಸ್ , ಭಾರಿ ಮತ್ತು ಮಧ್ಯಮ ಸರಕು ಸಾಗಣೆ ವಾಹನ ಹಾಗು ಟ್ರ್ಯಾಕ್ಟರ್ ಸಂಚಾರ ನಿಷೇಧವನ್ನು ಮಾಡಲಾಗಿದೆ. ನಗರ ಸಂಚಾರ ಪೊಲೀಸರು ವೈಮಾನಿಕ ಪ್ರದರ್ಶನದ ದಿನಗಳಲ್ಲಿ ಬೆಳಗ್ಗೆ 6ರಿಂದ ರಾತ್ರಿ 8ರವರೆಗೆ ವಾಹನ ಸಂಚಾರ ವ್ಯವಸ್ಥೆಯಲ್ಲಿ ತಾತ್ಕಾಲಿಕವಾಗಿ ಕೆಲ ಬದಲಾವಣೆ ತಂದಿದ್ದಾರೆ. ಪ್ರಮುಖವಾಗಿ ಬೆಂಗಳೂರು ಸಂಪರ್ಕಿಸುವ ನಾಲ್ಕು ಪ್ರಮುಖ ರಸ್ತೆಗಳ ಸಂಚಾರ ಮಾರ್ಗ ಬದಲಾವಣೆಯ ವಿವರ ಇಲ್ಲಿದೆ. 

Aero India 2023: 'ಏರೋ ಇಂಡಿಯಾ 2023'ದಲ್ಲಿ ಅಮೆರಿಕದ ಅತಿ ದೊಡ್ಡ ನಿಯೋಗ ಭಾಗಿ

ಬೆಂಗಳೂರಿಗೆ ಆಗಮಿಸುವ ಮಾರ್ಗಗಳ ಸಂಚಾರ ನಿಷೇಧ:
* ಬಳ್ಳಾರಿ ರಸ್ತೆಯಲ್ಲಿ - ಮೇಕ್ರಿ ಸರ್ಕಲ್ ನಿಂದ ಎಂ ವಿಐಟಿ ಗೇಟ್ ವರೆಗೂ ಎರಡೂ ದಿಕ್ಕಿನಲ್ಲಿ ನಿಷೇಧ ( ಬಿಎಂಟಿಸಿ ಕೆಎಸ್ ಆರ್ ಟಿಸಿ ಹೊರತುಪಡಿಸಿ ) 
* ಗೊರಗುಂಟೆಪಾಳ್ಯದಲ್ಲಿ ಹೆಬ್ಬಾಳ - ಹೆಣ್ಣೂರು ಕ್ರಾಸ್ ವರೆಗೆ ಎರಡೂ ದಿಕ್ಕಿನಲ್ಲಿ ಸಂಚಾರ ಮಾಡುವಂತಿಲ್ಲ.
* ನಾಗವಾರ ಜಂಕ್ಷನ್ ನಿಂದ - ಥಣಿಸಂದ್ರ ಮುಖ್ಯರಸ್ತೆ - ಬಾಗಲೂರು ಮುಖ್ಯರಸ್ತೆ - ರೇವಾ ಕಾಲೇಜ್ ಜಂಕ್ಷನ್ ವರೆಗೆ ಸಂಚಾರ ನಿಷೇಧ
* ಬೆಂಗಳೂರು ತುಮಕೂರು ರಸ್ತೆಯಲ್ಲಿ  ಚಿಕ್ಕಬಾಣಾವರ ಕಡೆಯಿಂದ ಹೆಸರಘಟ್ಟ - ಯಲಹಂಕ ರಸ್ತೆಯಲ್ಲಿ ನಿಷೇಧ 

ಪರ್ಯಾಯ ಮಾರ್ಗಗಳು 
* ಚಿಕ್ಕಬಳ್ಳಾಪುರ ಕಡೆಯಿಂದ ಬರುವ ವಾಹನಗಳು ದೇವನಹಳ್ಳಿಯಿಂದ ದೊಡ್ಡಬಳ್ಳಾಪುರ - ದಾಬಸ್ ಪೇಟೆ ಮೂಲಕ ಸಂಚರಿಸವುದು.
* ಕೆ ಆರ್ ಪುರಂ - ಹೊಸೂರು - ಚೆನ್ನೈ - ಬೆಂಗಳೂರು ಮಾರ್ಗದ ಮುಖಾಂತರ ಹೊಸಕೋಟೆ ರಸ್ತೆಯಲ್ಲಿ ಸಂಚರಿಸುವುದು.
* ತುಮಕೂರು ರಸ್ತೆಯಿಂದ ಬರುವ ವಾಹನಗಳು - ಸಿಎಂಟಿಐ ಜಂಕ್ಷನ್ ನಲ್ಲಿ ಬಲ ತಿರುವು ಪಡೆದು - ಸುಮನಹಳ್ಳಿ - ನಾಯಂಡಹಳ್ಳಿ ಸರ್ಕಲ್ - ಕನಕಪುರ ರಸ್ತೆ ಮೂಲಕ ಸಂಚಾರ ಮಾಡಬೇಕು.

ಏರೋ ಇಂಡಿಯಾ: ರಕ್ಷಣಾ ಕಂಪನಿ ಸಿಇಒಗಳ ಜೊತೆ 13ಕ್ಕೆ ಸಚಿವರ ಸಭೆ

ಪಾರ್ಕಿಂಗ್ ನಿಷೇಧಿತ ಏರಿಯಾಗಳು 
* ನಾಗೇನಹಳ್ಳಿ ಗೇಟ್ ನಿಂದ ಗಂಟಿಗಾಟನಹಳ್ಳಿ ಮಾರ್ಗವಾಗಿ - ಬಳ್ಳಾರಿ ರಸ್ತೆಯ ಎರಡೂ ಬದಿ ಪಾರ್ಕಿಂಗ್ ನಿಷೇಧ 
* ಮೇಕ್ರಿ ಸರ್ಕಲ್ ನಿಂದ ದೇವನಹಳ್ಳಿವರೆಗೆ ಎರಡು ಬದಿ ಪಾರ್ಕಿಂಗ್ ನಿಷೇಧ 
* ಗೊರಗುಂಟೆಪಾಳ್ಯದಿಂದ - ಹೆಣ್ಣೂರು ಕ್ರಾಸ್ ಜಂಕ್ಷನ್ ವರೆಗೆ ಎರಡೂ ಬದಿ ನಿಷೇಧ 
* ಬಾಗಲೂರು ಮುಖ್ಯ ರಸ್ತೆಯಿಂದ - ರೇವಾವರೆಗೆ ಎರಡೂ ಬದಿ 
* ನಾಗವಾರ ಜಂಕ್ಷನ್ ನಿಂದ ಬಾಗಲೂರು ಜಂಕ್ಷನ್ ವರೆಗೆ ಪಾರ್ಕಿಂಗ್ ನಿಷೇಧ.. 
* ಫೆಬ್ರವರಿ 13 ರಿಂದ ಏರ್ ಶೋ ಇರುವ ಎಲ್ಲಾ ದಿನವೂ ಈ ನಿಯಮ ಅನ್ವಯ 
* ಬೆಳಗ್ಗೆ 6 ರಿಂದ ರಾತ್ರಿ 8 ಗಂಟೆವರೆಗೆ ನಿಯಮ ಅನ್ವಯ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ
ರಾಜ್ಯದಲ್ಲಿ 2.84 ಲಕ್ಷ ಸರ್ಕಾರಿ ಹುದ್ದೆ ಖಾಲಿ: 24,300 ಹುದ್ದೆ ಭರ್ತಿಗೆ ಅಂಕಿತ! ಇಲಾಖಾವಾರು ಮಾಹಿತಿ ಇಲ್ಲಿದೆ!