
ಬೆಂಗಳೂರು (ಮಾ.18): ರೋಗಿಗಳ ಆರೋಗ್ಯ ತಪಾಸಣೆಯ ಸ್ಯಾಂಪಲ್‌ಗಳನ್ನು ಆಸ್ಪತ್ರೆಯಿಂದ ಪ್ರಯೋಗಾಲಯಕ್ಕೆ ರವಾನಿಸಲು ನಾರಾಯಣ ಹೆಲ್ತ್ ಸಮೂಹವು ಡ್ರೋನ್ ಬಳಕೆಯನ್ನು ಆರಂಭಿಸಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾರಾಯಣ ಹೆಲ್ತ್‌ನ ಸಂಸ್ಥಾಪಕ ಡಾ. ದೇವಿ ಪ್ರಸಾದ್ ಶೆಟ್ಟಿ, ಏರ್‌ಬೌಂಡ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಡ್ರೋನ್ ಮೂಲಕ ಚಂದಾಪುರದ ನಾರಾಯಣ ಹೆಲ್ತ್ ಕ್ಲಿನಿಕ್‌ನಿಂದ 4 ಕಿ.ಮೀ ದೂರದ ಎಲೆಕ್ಟ್ರಾನಿಕ್ ಸಿಟಿಯ ನಾರಾಯಣ ಹೆಲ್ತ್ ಸಿಟಿಯಲ್ಲಿರುವ ಕೇಂದ್ರ ಪ್ರಯೋಗಾಲಯಕ್ಕೆ 10 ನಿಮಿಷಗಳ ಒಳಗೆ ಸ್ಯಾಂಪಲ್‌ಗಳನ್ನು ರವಾನಿಸಲಾಗುತ್ತದೆ ಎಂದರು.
ಎರಡು ತಿಂಗಳಿಂದ ಪ್ರಾಯೋಗಿಕವಾಗಿ ಡ್ರೋನ್ ಬಳಕೆ ಆರಂಭಿಸಲಾಗಿದ್ದು, 700ಕ್ಕೂ ಹೆಚ್ಚು ಬಾರಿ ಡ್ರೋನ್ 40 ಸ್ಯಾಂಪಲ್‌ಗಳೊಂದಿಗೆ ಹಾರಾಟ ನಡೆಸಿದೆ. ಮುಂದಿನ ದಿನಗಳಲ್ಲಿ ಬನಶಂಕರಿ ಮತ್ತು ಎಲೆಕ್ಟ್ರಾನಿಕ್ ಸಿಟಿ ನಡುವೆ ಈ ಸೇವೆ ಆರಂಭಿಸುವ ಉದ್ದೇಶವಿದೆ ಎಂದು ಶೆಟ್ಟಿ ತಿಳಿಸಿದರು.
ಏರ್‌ಬೌಂಡ್ ಸಂಸ್ಥಾಪಕ ನಮನ್ ಪುಷ್ಪ್ ಮಾತನಾಡಿ, ನಗರದ ಟ್ರಾಫಿಕ್‌ನಲ್ಲಿ ಸ್ಯಾಂಪಲ್ ಸಾಗಣೆಗೆ ಸಮಯ ತೆಗೆದುಕೊಳ್ಳುತ್ತದೆ. ಆದರೆ, ಡ್ರೋನ್ ಮೂಲಕ ಕೆಲವೇ ನಿಮಿಷಗಳಲ್ಲಿ ಸಾಗಿಸಬಹುದು ಎಂದರು.
ಒಂದೂವರೆ ಕೆ.ಜಿ ತೂಕದ ಡ್ರೋನ್, 1 ಕೆ.ಜಿ ತೂಕದ ಸ್ಯಾಂಪಲ್ ಅನ್ನು ಸಾಗಣೆ ಮಾಡಬಲ್ಲದು. 120 ಅಡಿ ಎತ್ತರದವರೆಗೆ ಹಾರಾಡುವ ಡ್ರೋನ್ ಅನ್ನು ಏರ್‌ಬೌಂಡ್ ಸಿಬ್ಬಂದಿಯೇ ನಿರ್ವಹಿಸುತ್ತಾರೆ. ಹಗಲು ವೇಳೆ ಮಾತ್ರ ಇದು ಕಾರ್ಯಾಚರಣೆ ನಡೆಸುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ