ಮೆಟ್ರೋದಲ್ಲಿ ಕುಳಿತು ಬಾಯಿಗೆ ವಿಮಲ್ ಹಾಕಿಕೊಂಡ ಪ್ರಯಾಣಿಕ; ಗುಟ್ಕಾ ಬ್ಯಾನ್ ಮಾಡಿದ ಬಿಎಂಆರ್‌ಸಿಎಲ್

Published : Apr 23, 2025, 01:09 PM ISTUpdated : Apr 23, 2025, 01:31 PM IST
ಮೆಟ್ರೋದಲ್ಲಿ ಕುಳಿತು ಬಾಯಿಗೆ ವಿಮಲ್ ಹಾಕಿಕೊಂಡ ಪ್ರಯಾಣಿಕ; ಗುಟ್ಕಾ ಬ್ಯಾನ್ ಮಾಡಿದ ಬಿಎಂಆರ್‌ಸಿಎಲ್

ಸಾರಾಂಶ

ಮೆಟ್ರೋದಲ್ಲಿ ವಿಮಲ್ ಪಾನ್ ಮಸಾಲಾ ಜಗಿಯುವ ವಿಡಿಯೋ ವೈರಲ್ ಆದ ಬಳಿಕ, ಬಿಎಂಆರ್‌ಸಿಎಲ್ ತಂಬಾಕು ಉತ್ಪನ್ನ ಸೇವನೆಗೆ ದಂಡ ವಿಧಿಸಲು ನಿರ್ಧರಿಸಿದೆ. ಗಸ್ತು ಹೆಚ್ಚಿಸಿ, ಕಣ್ಗಾವಲು ಬಲಪಡಿಸಲಾಗುವುದು. ಲೋಹಶೋಧಕಗಳಿಂದ ಪತ್ತೆ ಸಾಧ್ಯವಿಲ್ಲದ್ದರಿಂದ, ಆಗಾಗ್ಗೆ ತಪಾಸಣೆ ನಡೆಸಲಾಗುವುದು. ಜಾಗೃತಿ ಅಭಿಯಾನ ಆರಂಭಿಸಿ, ₹500 ರಿಂದ ₹3000 ವರೆಗೆ ದಂಡ ವಿಧಿಸಲಾಗುವುದು.

ಬೆಂಗಳೂರು (ಏ.23): ಬೆಂಗಳೂರಿನ ನಮ್ಮ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಕಣ ಕಣದಲ್ಲಿಯೂ ಕೇಸರಿ ಎಂದು ಜಾಹೀರಾತು ಪ್ರದರ್ಶನ ಮಾಡುವ ವಿಮಲ್ ಪಾನ್ ಮಸಾಲಾವನ್ನು ಬಾಯಿಗೆ ಹಾಕಿಕೊಂಡು ಜಗಿಯುವ ವಿಡಿಯೋ ವೈರಲ್ ಆಗಿದೆ. ಇದರ ಬೆನ್ನಲ್ಲಿಯೇ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಮೆಟ್ರೋ ಆವರಣ ಮತ್ತು ಮೆಟ್ರೋ ರೈಲಿನ ಒಳಗೆ ಅಗಿಯಬಹುದಾದ ತಂಬಾಕು ಆಧರಿತ ಉತ್ಪನ್ನಗಳನ್ನು (ಗುಟ್ಕಾ ಅಥವಾ ಪಾನ್ ಮಸಾಲಾದಂತಹ ವಸ್ತುಗಳು) ಸೇವಿಸುವ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ದಂಡ ವಿಧಿಸುವ ನಿರ್ಧಾರ ಕೈಗೊಂಡಿಗೆ.

ಮೆಟ್ರೋ ನಿಲ್ದಾಣಗಳು ಮತ್ತು ರೈಲುಗಳಲ್ಲಿ ಪ್ರಯಾಣಿಕರು ಗುಟ್ಕಾ  ಮತ್ತು ಪಾನ್ ಮಸಾಲಾದಂತಹ ತಂಬಾಕು ಆಧರಿತ ಅಗಿಯಬಹುದಾದ ಉತ್ಪನ್ನಗಳನ್ನು ಜಗಿದು ಉಗುಳುವ ಬಗ್ಗೆ ಸಾರ್ವಜನಿಕ ದೂರುಗಳು ಹೆಚ್ಚಾಗುತ್ತಿವೆ. ಈ ಸಮಸ್ಯೆಯ ಪರಿಹಾರಕ್ಕಾಗಿ ಮತ್ತು ಮೆಟ್ರೋ ಆವರಣದಲ್ಲಿ ಉಗುಳುವುದು ಮತ್ತು ಕಸ ಹಾಕುವುದನ್ನು ತಪ್ಪಿಸುವುದಕ್ಕಾಗಿ, ಜನದಟ್ಟಣೆ ಇಲ್ಲದ ಸಮಯಗಳಲ್ಲಿ ಗಸ್ತು ತಿರುಗುವುದನ್ನು ಬಲಪಡಿಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ.

ಈಗ ಎಲ್ಲಾ ರೈಲುಗಳು ಮತ್ತು ಮೆಟ್ರೋ ನಿಲ್ದಾಣಗಳಲ್ಲಿ ಕಣ್ಣಾವಲು ಹೆಚ್ಚಿಸುವ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ತಪ್ಪಿತಸ್ಥ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ನಿಯಮಗಳ ಪ್ರಕಾರ ದಂಡ ವಿಧಿಸಲಾಗುವುದು. ಅಂತಹ ವಸ್ತುಗಳನ್ನು ಲೋಹ ಶೋಧಕಗಳ ಮೂಲಕ ಪತ್ತೆಹಚ್ಚಲು ಸಾಧ್ಯವಾಗದ ಕಾರಣ, ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಅನುಮಾನ ಬಂದ ಜಾಗಗಳಲ್ಲಿ ಆಗಾಗ್ಗೆ ತಪಾಸಣೆಗಳನ್ನು ಜಾರಿಗೆ ತರಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ.

ಇದನ್ನೂ ಓದಿ: ಮಟ್ರೋದಲ್ಲಿ ಯುವತಿ ಕೂಗಾಟ, ಚೀರಾಟ ಕೇಳಿ ಹೌಹಾರಿದ ಪ್ರಯಾಣಿಕರು; ಏನ್ ಮಾಡಿದ್ರೂ ತಣ್ಣಗಾಗದ ಹುಡ್ಗಿ

ಅಂತಹ ಪ್ರಯಾಣಿಕರನ್ನು ಸೂಕ್ಷಂಮ ರೀತಿಯಲ್ಲಿ ಗಮನಿಸಲು ಜೊತೆಗೆ ಜನರೊಂದಿಗೆ ಈ ಕುರಿತು ಸಂವೇದನಾಶೀಲ ನಡವಳಿಕೆ ಹೊಂದಿರುವುದರ ಬಗ್ಗೆ ಪ್ಲಾಟ್‌ಫಾರ್ಮ್ ಭದ್ರತಾ ಸಿಬ್ಬಂದಿಗೆ ತರಬೇತಿ ನೀಡಲಾಗುವುದು. ಪ್ರಯಾಣಿಕರ ನಡವಳಿಕೆಯನ್ನು ಗಮನಿಸುವುದರ ಜೊತೆಗೆ ಯಾವುದೇ ಉಲ್ಲಂಘನೆಗಳನ್ನು ಗಮನಿಸಿದ ಕೂಡಲೇ ಸಂಬಧಿಸಿದ ಪ್ಲಾಟ್‌ಫಾರ್ಮ್ ಭದ್ರತಾ ಸಿಬ್ಬಂದಿಗೆ ಎಚ್ಚರಿಕೆ ನೀಡಲು ಕೇಂದ್ರ ಭದ್ರತಾ ಕಣ್ಣಾವಲು ಕೊಠಡಿಗೆ ಈಗಾಗಲೇ ಸೂಚನೆ ನೀಡಲಾಗಿದೆ.

ಹೆಚ್ಚುವರಿಯಾಗಿ, ಎಲ್ಲ ಮೆಟ್ರೋ ಪ್ರಯಾಣಿಕರಿಗೆ ಸ್ವಚ್ಛ ಮತ್ತು ಹೆಚ್ಚು ಆಹ್ಲಾದಪೂರ್ಣ ಪ್ರಯಾಣಾನುಭವದ ಖಾತ್ರಿಮಾಡಿಕೊಳ್ಳಲು, ಮೆಟ್ರೋ ಆವರಣದಲ್ಲಿ ಅಗಿಯಬಹುದಾದ ತಂಬಾಕು ಆಧರಿತ ಉತ್ಪನ್ನಗಳನ್ನು ಬಳಸದಂತೆ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸಲು ವ್ಯಾಪಕ ಜಾಗೃತಿ ಅಭಿಯಾನಗಳನ್ನು ಪ್ರಾರಂಭಿಸುವುದರ ಬಗ್ಗೆ ಬಿಎಂಆರ್‌ಸಿಎಲ್ ಯೋಜನೆ ಕೈಗೊಂಡಿದೆ. ಇನ್ನು ದಂಡದ ಪ್ರಮಾಣ ₹500 ರಿಂದ ₹3000 ವರೆಗೆ ಆಗಿರಬಹುದು.

ವಿಮಲ್ ಪಾನ್ ಮಸಾಲಾ ಅಗಿಯುವ ವಿಡಿಯೋ ವೈರಲ್: 

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ @karnatakaportf ಎಂಬ ಖಾತೆಯಿಂದ ನಮ್ಮ ಮೆಟ್ರೋ ರೈಲಿನಲ್ಲಿ ಪ್ರಯಾಣಿಕರೊಬ್ಬರು ವಿಮಲ್ ಪಾನ್ ಮಸಾಲಾವನ್ನು ಬಾಯಿಗೆ ಹಾಕಿಕೊಂಡು ಜಗಿಯುವಂತಹ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ಜೊತೆಗೆ, ಸಾರ್ವಜನಿಕ ಸಾರಿಗೆಯು ನಮ್ಮ ನಾಗರಿಕ ಪ್ರಜ್ಞೆಯ ಪ್ರತಿಬಿಂಬವಾಗಿದೆ, ಪಾನ್ಮಸಾಲದಿಂದ ಅಗಿಯಲು, ಉಗುಳಲು ಮತ್ತು ಕಲೆ ಹಾಕಲು ಅಲ್ಲ. ದುರದೃಷ್ಟವಶಾತ್, ನಮ್ಮ ಮೆಟ್ರೋ ನಿಧಾನವಾಗಿ ಆಧುನಿಕ ಬೆಂಗಳೂರಿನ ಸಂಕೇತದಿಂದ ಗುಟ್ಕಾ ಕಲೆ ಮತ್ತು ಕಸದ ಕ್ಯಾನ್ವಾಸ್ ಆಗಿ ಬದಲಾಗುತ್ತಿದೆ ಏಕೆಂದರೆ ಇಂತಹ ಜನರಿಂದಾಗಿ. 

ಇದನ್ನೂ ಓದಿ: ಬೆಂಗಳೂರು ಮೆಟ್ರೋ 13 ವರ್ಷ ಸೇವೆಯಲ್ಲಿ 3ನೇ ಅತ್ಯಧಿಕ ಪ್ರಯಾಣಿಕ ಸಂಚಾರ ದಾಖಲೆ!

ಇದು ಕೇವಲ ನೈರ್ಮಲ್ಯದ ಬಗ್ಗೆ ಅಲ್ಲ, ಹಂಚಿಕೆಯ ಸಾರ್ವಜನಿಕ ಸ್ಥಳಗಳಿಗೆ ಮೂಲಭೂತ ಗೌರವದ ಬಗ್ಗೆ. ಮೆಟ್ರೋ ನಿಲ್ದಾಣಗಳು ಮತ್ತು ಬೋಗಿಗಳು ನಿಮ್ಮ ಸ್ಥಳೀಯ ಪಾನ್ ಅಂಗಡಿಯಲ್ಲ. ವಿಶ್ವ ದರ್ಜೆಯ ಮೆಟ್ರೋ ವ್ಯವಸ್ಥೆಯಲ್ಲಿ ನಾವು ಮೂಲಭೂತ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗದಿದ್ದರೆ, ಅದು ನಾಗರಿಕರಾಗಿ ನಮ್ಮ ಬಗ್ಗೆ ಏನು ಹೇಳುತ್ತದೆ? ನಾಗರಿಕ ಪ್ರಜ್ಞೆ ಎಲ್ಲಿದೆ? ನಾವು ಜನರನ್ನು ಸಾರ್ವಜನಿಕವಾಗಿ ಉಗುಳಬೇಡಿ ಎಂದು ಏಕೆ ಕೇಳಬೇಕು? ಈ ಬಗ್ಗೆ ಬಿಎಂಆರ್‌ಸಿಎಲ್ ಕಟ್ಟುನಿಟ್ಟಾಗಿ ಮತ್ತು ತ್ವರಿತವಾಗಿ ಕಾರ್ಯನಿರ್ವಹಿಸಬೇಕು. ಭಾರಿ ದಂಡಗಳು, ಉತ್ತಮ ಕಣ್ಗಾವಲು ಮತ್ತು ಗಂಭೀರ ಜಾರಿ ಮಾಡಬೇಕು. ಮೆಟ್ರೋ ಪ್ರವೇಶಗಳಲ್ಲಿ ಪಾನ್ ಮಸಾಲ ಸ್ಕ್ಯಾನರ್‌ಗಳು ಅಳವಡಿಕೆ ಮಾಡಬೇಕು ಎಂದು ಆಗ್ರಹಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Justice for Bongo: ಮಗು ಹುಟ್ಟಿದ್ದಕ್ಕೆ ಸಾಕಿ ಸಲುಹಿದ ಶ್ವಾನ ಕೊಂದ್ರಾ ಪಾಪಿಗಳು? ಸಿಲಿಕಾನ್ ಸಿಟಿಯಲ್ಲಿ 'ಬೋಂಗೋ' ಸಾವಿನ ರೋಚಕ ಕಹಾನಿ!
ಸಿಎಂ ಸಿದ್ದರಾಮಯ್ಯನವರೇ ಮತಿಗೇಡಿಗಳಾಗಿ, ಆದ್ರೆ ಅಧಿಕಾರಕ್ಕಾಗಿ ಲಜ್ಜೆಗೇಡಿಗಳಾಗಬೇಡಿ-ಆರ್. ಅಶೋಕ್ ಟೀಕೆ