Muslim Population: ರಾಜ್ಯದಲ್ಲಿ ಮುಸ್ಲಿಮರ ಸಂಖ್ಯೆ ಶೇ.90ರಷ್ಟು ಏರಿಕೆ: ಜಾತಿವಾರು ಹೆಚ್ಚಳ ಹೇಗಿದೆ? ವರದಿಯ ಫುಲ್ ಡಿಟೇಲ್ಸ್​

Published : Apr 23, 2025, 12:01 PM ISTUpdated : Apr 23, 2025, 01:10 PM IST
Muslim Population: ರಾಜ್ಯದಲ್ಲಿ ಮುಸ್ಲಿಮರ ಸಂಖ್ಯೆ ಶೇ.90ರಷ್ಟು ಏರಿಕೆ: ಜಾತಿವಾರು ಹೆಚ್ಚಳ ಹೇಗಿದೆ? ವರದಿಯ ಫುಲ್ ಡಿಟೇಲ್ಸ್​

ಸಾರಾಂಶ

ಕಳೆದ 30 ವರ್ಷಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಮುಸ್ಲಿಮರ ಜನಸಂಖ್ಯೆ ಶೇ.೯೦ಕ್ಕೂ ಹೆಚ್ಚು ಏರಿಕೆಯಾಗಿದೆ. ವೀರಶೈವ-ಲಿಂಗಾಯತರ ಜನಸಂಖ್ಯಾ ಬೆಳವಣಿಗೆ ಕೇವಲ ಶೇ.8.5ರಷ್ಟಿದ್ದು, 1984ರಲ್ಲಿ ಶೇ.17ರಷ್ಟಿದ್ದ ಪಾಲು 2015ರಲ್ಲಿ ಶೇ.11ಕ್ಕೆ ಇಳಿದಿದೆ. ಮೀಸಲಾತಿಗಾಗಿ ಲಿಂಗಾಯತರು ಬೇರೆ ಗುರುತುಗಳನ್ನು ಬಳಸುತ್ತಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.

ರಾಜ್ಯದಲ್ಲಿ  ಜಾತಿಗಣತಿ ವಿಚಾರ ತಾರಕ್ಕೇರಿರುತ್ತಲೇ ದಿನಕ್ಕೊಂದು ತಿರುವು ಪಡೆಯುತ್ತಿರುವ ನಡುವೆಯೇ ಈಗ ಇನ್ನೊಂದು ವರದಿಯು ಬಯಲಾಗಿದೆ. ಸಮಗ್ರ' ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಬಂದಿರುವ ವರದಿ ಇದಾಗಿದ್ದು, ಈ ವರದಿಯ ಪ್ರಕಾರ ಕರ್ನಾಟಕದಲ್ಲಿ   ಪರಿಶಿಷ್ಟ ಜಾತಿ ಮತ್ತು ಮುಸ್ಲಿಮರ ಜನಸಂಖ್ಯೆಯು ಶೇಕಡಾ 90ಕ್ಕಿಂತಲೂ  ಹೆಚ್ಚು ಏರಿಕೆಯಾಗಿದೆ. ಕಳೆದ 30 ವರ್ಷಗಳಲ್ಲಿ ಈ ದಿಢೀರ್​ ಏರಿಕೆ ಕಂಡಿದೆ.   ಈ ವರದಿಯಲ್ಲಿ ಉಲ್ಲೇಖಿಸಿರುವಂತೆ,  ವೀರಶೈವ-ಲಿಂಗಾಯತರು 1984 ರಿಂದ ಒಂದೇ ಅಂಕಿಯ ಬೆಳವಣಿಗೆಯನ್ನು ಕಂಡಿದ್ದಾರೆ. 1984ರಲ್ಲಿ ವೆಂಕಟಸ್ವಾಮಿ ಆಯೋಗ ನಡೆಸಿದ್ದ ಸಮೀಕ್ಷೆಯ ಅನ್ವಯ ಹೇಳುವುದಾದರೆ,  61 ಲಕ್ಷ ಜನರಿದ್ದ ವೀರಶೈವ ಲಿಂಗಾಯತರು ಆ ಸಮಯದಲ್ಲಿ ಮೊದಲ ಸ್ಥಾನದಲ್ಲಿದ್ದರು. ಆದರೆ, 2015ರ ಕಾಂತರಾಜು ಆಯೋಗದ ಸಮೀಕ್ಷೆ ಪ್ರಕಾರ 66 ಲಕ್ಷ ಜನಸಂಖ್ಯೆ ಇರುವ ವೀರಶೈವ ಲಿಂಗಾಯತರು ಮೂರನೇ ಸ್ಥಾನಕ್ಕೆ ಕುಸಿದಿದ್ದರು.  ಇವರ ಜನಸಂಖ್ಯೆ ವೃದ್ಧಿ ಕೇವಲ 8.50ರಷ್ಟಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ. ಇದರ ಅರ್ಥ 1984 ರಲ್ಲಿ, ವೀರಶೈವ-ಲಿಂಗಾಯತ ಸಮುದಾಯವು ರಾಜ್ಯದ ಜನಸಂಖ್ಯೆಯ ಸುಮಾರು 17% ರಷ್ಟಿತ್ತು; 2015 ರ ಹೊತ್ತಿಗೆ, ಅದರ ಪಾಲು 11% ಕ್ಕೆ ಇಳಿದಿದೆ ಎಂದು ವರದಿ ಹೇಳಿದೆ. 


ಅದರಂತೆಯೇ, 57 ಲಕ್ಷವಿದ್ದ ಪರಿಶಿಷ್ಟ ಜಾತಿ ಸಮುದಾಯ 30 ವರ್ಷದಲ್ಲಿ ಒಂದು ಕೋಟಿಯಾಗಿದ್ದು ಶೇಕಡಾ 90ರಷ್ಟು ಜನಸಂಖ್ಯೆ ವೃದ್ಧಿಯಾಗಿದೆ. ಇನ್ನೂ ಮುಸ್ಲಿಮರು ಕೂಡಾ 1984ರಲ್ಲಿ ಕರ್ನಾಟಕದಲ್ಲಿ   39 ಲಕ್ಷ ಜನರಿದ್ದರು. ಆದರೆ, ಇವರ ಸಂಖ್ಯೆ ಕಾಂತರಾಜು ಆಯೋಗದ ವರದಿ ಪ್ರಕಾರ 76 ಲಕ್ಷವಾಗಿದೆ. ಅಂದರೆ, ಶೇಕಡಾ 94 ರಷ್ಟು ಜನಸಂಖ್ಯೆ ಹೆಚ್ಚಾಗಿದೆ ಎಂದು ವರದಿ ಉಲ್ಲೇಖಿಸಿದೆ. ವೆಂಕಟಸ್ವಾಮಿ ಆಯೋಗವು 1984 ರಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಿತು, ಇದು ರಾಜ್ಯದ 3.61 ಕೋಟಿ ಜನಸಂಖ್ಯೆಯ 91% ಅನ್ನು ಒಳಗೊಂಡಿದೆ. ವೀರಶೈವ-ಲಿಂಗಾಯತರು ಮೊದಲ ಸ್ಥಾನದದಲ್ಲಿದ್ದರೆ, ನಂತರ ಪರಿಶಿಷ್ಟ ಜಾತಿಗಳು ಮತ್ತು ಒಕ್ಕಲಿಗರು. ಮುಸ್ಲಿಮರು ನಾಲ್ಕನೇ ಸ್ಥಾನ ಪಡೆದರು. ಕುರುಬರು ಮತ್ತು ಬ್ರಾಹ್ಮಣರು ಕೊನೆಯವರು. 2015 ರ ಸಮೀಕ್ಷೆಯಲ್ಲಿ, ಪರಿಶಿಷ್ಟ ಜಾತಿಗಳು ಏಕೈಕ ಅತಿದೊಡ್ಡ ಬಣವಾಗಿದ್ದು, ನಂತರದ ಸ್ಥಾನ ಮುಸ್ಲಿಮರದ್ದು.  ವೀರಶೈವ-ಲಿಂಗಾಯತರು ಮೂರನೇ ಸ್ಥಾನ ಪಡೆದರು. ನಂತರ ಒಕ್ಕಲಿಗರು, ಕುರುಬರು ಮತ್ತು ಬ್ರಾಹ್ಮಣರು. 

ಗರ್ಭಿಣಿ ಮುಸ್ಲಿಂ ಮಹಿಳೆಯ ಪ್ರಾಣ ಕಾಪಾಡಿದ ಗಣಪ! ಮಗುವಿಗೂ ಗಣೇಶನ ಹೆಸರೇ...

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ ಎಸ್ ದ್ವಾರಕನಾಥ್ ಅವರ ಪ್ರಕಾರ, ವೀರಶೈವ-ಲಿಂಗಾಯತರು ಹೆಚ್ಚಿನ ಮೀಸಲಾತಿ ಪಡೆಯಲು ತಮ್ಮ ಸಮುದಾಯದ ಸದಸ್ಯರು ಬೇರೆ ಗುರುತನ್ನು ಆದ್ಯತೆ ನೀಡಿದ್ದರಿಂದ "ಹಿನ್ನಡೆ"ಯನ್ನು ಎದುರಿಸಿದರು ಎಂದಿದ್ದಾರೆ. ಅವರ ಪ್ರಕಾರ, "ಪ್ರವರ್ಗ-3B ಅಡಿಯಲ್ಲಿ ಬರುವ ಸದರ್ ಲಿಂಗಾಯತರು ಇದ್ದಾರೆ, ಇದು 5% ಮೀಸಲಾತಿಯನ್ನು ಹೊಂದಿದೆ. ಪ್ರವರ್ಗ-2A ಅಡಿಯಲ್ಲಿ ಬರುವ ಹಿಂದೂ ಸದರ್ ಗಳು ಇದ್ದಾರೆ, ಇದು 15% ಮೀಸಲಾತಿಯನ್ನು ಹೊಂದಿದೆ. ಮೀಸಲಾತಿಗಾಗಿ, ಜನರು ಲಿಂಗಾಯತ ನಾಮಕರಣವನ್ನು ಬಳಸುವ ಬದಲು ತಮ್ಮನ್ನು ಹಿಂದೂ ಸದರ್, ಹಿಂದೂ ಗಾಣಿಗ, ಹಿಂದೂ ಮಡಿವಾಳ ಎಂದು ಗುರುತಿಸಿಕೊಳ್ಳಲು ಪ್ರಾರಂಭಿಸಿದರು ಎಂದಿದ್ದಾರೆ.

ರಾಮಕೃಷ್ಣ ಹೆಗ್ಡೆ ಸರ್ಕಾರವು ಏಪ್ರಿಲ್ 1983 ರಲ್ಲಿ ವೆಂಕಟಸ್ವಾಮಿ ಆಯೋಗವನ್ನು ನೇಮಿಸಿತು ಮತ್ತು ಅದರ ವರದಿಯನ್ನು ಮಾರ್ಚ್ 1986 ರಲ್ಲಿ ಸಲ್ಲಿಸಲಾಯಿತು. ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ಪ್ರತಿಭಟನೆಯ ನಡುವೆ ಹೆಗ್ಡೆ ಸರ್ಕಾರ ವರದಿಯನ್ನು ತಿರಸ್ಕರಿಸಿತು.

ಒಂದೇ ಮಂಟಪದಲ್ಲಿ ಹಿಂದೂ- ಮುಸ್ಲಿಂ ಸ್ನೇಹಿತರ ಮದ್ವೆ: ಎಲ್ಲರ ಗಮನ ಸೆಳೀತಿದೆ ವಿಶೇಷ ಆಹ್ವಾನ ಪತ್ರಿಕೆ...
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!