ಯಾರೂ ಕೂಡ ಕಾನೂನು ಕೈಗೆ ತಗೋಬಾರದು. ಸೈಬರ್ ಕ್ರೈಂಗೆ ದೂರು ಕೊಡಬಹುದಿತ್ತು. ಜೀವ ಹಾಳ ಮಾಡೋ ಕೆಲಸ ಮಾಡಬಾರದು. ಸಿನಿಮಾ ನಟನಾಗಿ ಒಬ್ಬರ ಜೀವನ ಹಾಳು ಮಾಡ್ತೀದಿರಿ ಅಂದ್ರೆ ಇದು ಅಪರಾಧ. ರೇಣುಕಾಸ್ವಾಮಿ ಕುಟುಂಬ ಬೀದಿಗೆ ಬಿದ್ದಿದೆ. ಸಿನಿಮಾ ನಟ ಇರಲಿ, ಯಾರೆ ಇರಲಿ, ಒಂದೇ ಟ್ರೀಟಮೆಂಟ್ ಇರಬೇಕು. ಯಾರೂ ದೊಡ್ಡವರಲ್ಲ: ಬೆಳಗಾವಿ ಬಿಜೆಪಿ ಸಂಸದ ಜಗದೀಶ್ ಶೆಟ್ಟರ್
ಹುಬ್ಬಳ್ಳಿ(ಜೂ.16): ಗ್ಯಾರಂಟಿ ಯೋಜನೆ ಜಾರಿ ತರಲು ರಾಜ್ಯ ಸರ್ಕಾರದ ಖಜಾನೆ ಬಹುತೇಕ ಹಣ ಖರ್ಚಾಗುತ್ತದೆ. ದಿನನಿತ್ಯದ ಆಡಳಿತ ವ್ಯವಸ್ಥೆ ಕುಸಿದು ಹೋಗಿದೆ. ಇವತ್ತು ಜನ ಸಾಮಾನ್ಯರ ಜೇಬಿಗೆ ಕೈ ಹಾಕೋ ಕೆಲಸ ಆಗಿದೆ. ನೀವು ಈ ರೀತಿ ಬೆಲೆ ಏರಿಕೆ ಮಾಡೋ ಬದಲು ಗ್ಯಾರಂಟಿ ನಿಲ್ಲಿಸಬಹುದು. ತಕ್ಷಣ ಬೆಲೆ ಏರಿಕೆ ವಾಪಸ್ ಪಡಿಬೇಕು. ಇಲ್ಲದಿದ್ದರೆ ಜನ ರೊಚ್ಚಿಗೆದ್ದು ದಂಗೆ ಏಳೋ ಪರಸ್ಥಿತಿ ಬರತ್ತದೆ. ಬೆಲೆ ಏರಿಕೆ ವಾಪಸ್ ಪಡೆಯದೆ ಹೋದ್ರೆ ಬಿಜೆಪಿ ಹೋರಾಟ ಮಾಡತ್ತೆ. ನಾಳೆ ರಾಜ್ಯಾದ್ಯಂತ ನಮ್ಮ ರಾಜ್ಯಾಧ್ಯಕ್ಷರು ಹೋರಾಟಕ್ಕೆ ಕರೆ ನೀಡಿದ್ದಾರೆ ಎಂದು ಬೆಳಗಾವಿ ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್ ಅವರು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅರ್ಥ ಮಾಡಿಕೊಳ್ಳಬೇಕು. ಬೇರೆ ರಾಜ್ಯಕ್ಕೆ ಹೋಲಿಸಿದ್ರೆ ಕರ್ನಾಟಕದಲ್ಲಿ ಬೆಲೆ ಏರಿಕೆಯಾಗಿದೆ. ನಮ್ಮ ಕರ್ನಾಟಕ ಜನ ಬೇರೆ ರಾಜ್ಯಕ್ಕೆ ಹೋಗಿ ಪೆಟ್ರೋಲ್ ಡಿಸೇಲ್ ತರೋ ಕೆಲಸ ಆಗತ್ತೆ. ಖಜಾನೆ ಖಾಲಿಯಾಗಿ ಮುಂದೆ ಸರ್ಕಾರಿ ನೌಕರಿ ಮಾಡೋರಿಗೆ ಸಂಬಳ ಕೊಡೋಕೆ ಆಗಲ್ಲ. ಬಹಳ ಅನುಭವಿ ಎಂದು ಸಿದ್ದರಾಮಯ್ಯ ಹೇಳ್ತಾರೆ. ವಾಸ್ತವವನ್ನ ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
undefined
ಮರ್ಡರ್ ಕೇಸಲ್ಲಿ ಅರೆಸ್ಟ್: ದರ್ಶನ್‌ಗೆ ಬಿಟ್ಟೂ ಬಿಡದೆ ಬೆನ್ನು ಹತ್ತಿದೆಯಾ 'ಡೆವಿಲ್' ಚಿತ್ರ?
ಬಿಎಸ್‌ವೈ ಮೇಲೆ ರಾಜ್ಯ ಸರ್ಕಾರದ ಷಡ್ಯಂತ್ರ
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರ ಮೇಲೆ ರಾಜ್ಯ ಸರ್ಕಾರ ಷಡ್ಯಂತ್ರ ಮಾಡಿದೆ. ಗೃಹ ಸಚಿವರೇ ಅದನ್ನು ಗಂಭೀರವಾಗಿ ತಗೆದುಕೊಳ್ಳಬಾರದು ಎಂದು ಹೇಳಿದ್ರು, ನಾಗೇಂದ್ರ ಹಗರಣದಲ್ಲಿ ಮುಖ್ಯಮಂತ್ರಿಗಳ ಹೆಸರು ಬರೋ ಹಾಗೆ ಆಯ್ತು. ಇದನ್ನು ಡೈವರ್ಟ್ ಮಾಡಲು ಯಡಿಯೂರಪ್ಪ ಅರೆಸ್ಟ್ ಮಾಡಲು ಮುಂದಾಗಿದ್ರು. ಇದು ಷಡ್ಯಂತ್ರವಾಗಿದೆ. ಇವತ್ತು ಹೈಕೋರ್ಟ್‌ನಲ್ಲಿ ನ್ಯಾಯ ಸಿಕ್ಕಿದೆ. ಕಾಂಗ್ರೆಸ್ ನಿಂದ ದ್ವೇಷದ ರಾಜಕಾರಣ ನಡಿತೀದೆ. ದ್ವೇಷದ ರಾಜಕರಣ ನಿಲ್ಲಬೇಕು. ಯಡಿಯೂರಪ್ಪ ನವರ ಮೇಲೆ ಮಾಡಿದ ಕುತಂತ್ರ, ಅಕ್ಷಮ್ಯ ಅಪರಾಧ ಎಂದ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.
ಹೆಣ್ಣು, ಹೆಂಡದ ಚಟದಿಂದ ದರ್ಶನ್ ವಿಲನ್ ಆಗಿದ್ದಾನೆ! ಶಿಷ್ಯನ ನಡವಳಿಕೆಗೆ ಕೋಪಗೊಂಡ ಗುರು!
ನನ್ನನ್ನ ಮಂತ್ರಿ ಮಾಡಬೇಕು ಬೇಡ್ವೋ ಅನ್ನೋದು ಪ್ರಧಾನಿ ತೀರ್ಮಾನ
ನನ್ನನ್ನ ಮಂತ್ರಿ ಮಾಡಬೇಕು ಬೇಡ್ವೋ ಅನ್ನೋದು ಪ್ರಧಾನಿ ನರೇಂದ್ರ ಮೋದಿ ಅವರು ತೀರ್ಮಾನ ಮಾಡ್ತಾರೆ. ಬೆಳಗಾವಿಗೆ ಸ್ಪರ್ಧೆ ಮಾಡಿ ಅಂದ್ರು, ನಾನು ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದೇನೆ. ಬೆಳಗಾವಿಯಲ್ಲಿ ನಾನು ಈಗಾಗಲೇ ಕೆಲಸ ಶುರು ಮಾಡಿದ್ದೇನೆ. ನನಗೆ ಸಚಿವ ಸ್ಥಾನ ತಪ್ಪಿದೆ ಎಂದು ಹೇಳಲ್ಲ. ಯಾಕಂದ್ರೆ ಸಂಸದನಾಗಿದ್ದೇನೆ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ರೇಣುಕಾಸ್ವಾಮಿ ಕೊಲೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಜಗದೀಶ್ ಶೆಟ್ಟರ್ ಅವರು, ಯಾರೂ ಕೂಡ ಕಾನೂನು ಕೈಗೆ ತಗೋಬಾರದು. ಸೈಬರ್ ಕ್ರೈಂಗೆ ದೂರು ಕೊಡಬಹುದಿತ್ತು. ಜೀವ ಹಾಳ ಮಾಡೋ ಕೆಲಸ ಮಾಡಬಾರದು. ಸಿನಿಮಾ ನಟನಾಗಿ ಒಬ್ಬರ ಜೀವನ ಹಾಳು ಮಾಡ್ತೀದಿರಿ ಅಂದ್ರೆ ಇದು ಅಪರಾಧ. ರೇಣುಕಾಸ್ವಾಮಿ ಕುಟುಂಬ ಬೀದಿಗೆ ಬಿದ್ದಿದೆ. ಸಿನಿಮಾ ನಟ ಇರಲಿ, ಯಾರೆ ಇರಲಿ, ಒಂದೇ ಟ್ರೀಟಮೆಂಟ್ ಇರಬೇಕು. ಯಾರೂ ದೊಡ್ಡವರಲ್ಲ ಎಂದ ಹೇಳಿದ್ದಾರೆ.