ಜನರು ಪ್ರತಿಭಟಿಸುವ ಮೂಲಕ ಸರ್ಕಾರ ಎಚ್ಚರಿಸುವ ಕೆಲಸ ಮಾಡಬೇಕು. ಗ್ಯಾರಂಟಿ ಮುಂದುವರೆಸಲು ಬೆಲೆ ಏರಿಕೆ ಮಾಡಿದ್ದಾಗಿ ಕಾಂಗ್ರೆಸ್ ಸಚಿವರೇ ಒಪ್ಪಿಕೊಂಡಿದ್ದಾರೆ. ಜನರಿಂದಲೇ ದುಡ್ಡು ವಸೂಲಿ ಮಾಡಿ ಜನರಿಗೆ ನೀಡಲು ಮುಂದಾಗಿದ್ದಾರೆ. ಯಾರದ್ದೋ ಯಾರಿಗೋ ದಾನ ಮಾಡ್ತಾರೆ ಎಂಬ ಗಾದೆ ಇದ್ಯಲ್ಲ ಹಾಗೇ ಆಯ್ತು ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ
ಮಂಡ್ಯ(ಜೂ.16): ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಬೆಲೆ ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ, ಜೆಡಿಎಸ್ ಪ್ರತಿಭಟನೆ ಮಾಡುವುದಕ್ಕಿಂತ ಸರ್ಕಾರದ ದುರಾಡಳಿತದ ವಿರುದ್ಧ ಜನರೆ ದಂಗೆ ಏಳಬೇಕು ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಇಂದು(ಭಾನುವಾರ) ಆದಿಚುಂಚನಗಿರಿಯಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು, ಜನರು ಪ್ರತಿಭಟಿಸುವ ಮೂಲಕ ಸರ್ಕಾರ ಎಚ್ಚರಿಸುವ ಕೆಲಸ ಮಾಡಬೇಕು. ಗ್ಯಾರಂಟಿ ಮುಂದುವರೆಸಲು ಬೆಲೆ ಏರಿಕೆ ಮಾಡಿದ್ದಾಗಿ ಕಾಂಗ್ರೆಸ್ ಸಚಿವರೇ ಒಪ್ಪಿಕೊಂಡಿದ್ದಾರೆ. ಜನರಿಂದಲೇ ದುಡ್ಡು ವಸೂಲಿ ಮಾಡಿ ಜನರಿಗೆ ನೀಡಲು ಮುಂದಾಗಿದ್ದಾರೆ. ಯಾರದ್ದೋ ಯಾರಿಗೋ ದಾನ ಮಾಡ್ತಾರೆ ಎಂಬ ಗಾದೆ ಇದ್ಯಲ್ಲ ಹಾಗೇ ಆಯ್ತು ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಅಣ್ಣತಮ್ಮಂದಿರ ದೃಷ್ಟಿ ಈಗ ಚನ್ನಪಟ್ಟಣದ ಮೇಲೆ: ಕೇಂದ್ರ ಸಚಿವ ಕುಮಾರಸ್ವಾಮಿ
ಇಂದು ಕಾಲಭೈರವನ ದರ್ಶನ ಮಾಡಿ ಶ್ರೀ ಆಶೀರ್ವಾದ ಪಡೆದಿದ್ದೇನೆ. ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಸಿಗುವಂತೆ ಕೋರಿಕೆ ಮಾಡಿಕೊಂಡಿದ್ದೇನೆ. ಒಕ್ಕಲಿಗ ಸಮಾಜ ಹಾಗೂ ರಾಜ್ಯಕ್ಕೆ ಗೌರವ ತರುವಂತೆ ಕೆಲಸ ಮಾಡಲು ಶಕ್ತಿ ಕೊಡುವಂತೆ ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ. ಕೇಂದ್ರ ಸರ್ಕಾರದಲ್ಲಿ 2 ಕಠಿಣ ಇಲಾಖೆ ಸಿಕ್ಕಿದೆ. ರಾಜ್ಯಕ್ಕೆ ಉತ್ತಮ ಕೊಡುಗೆ ನೀಡವ ಅವಕಾಶವೂ ಸಿಕ್ಕಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.