ಬೆಂಗಳೂರು ಸ್ಟಾರ್‌ ಹೋಟೆಲ್‌ಗಳು ಬಹುತೇಕ ಭರ್ತಿ: ಈ ನಾಲ್ಕು ದಿನ ಹೋಟೆಲ್‌ ರೂಮು ಸಿಗೊಲ್ಲ

By Sathish Kumar KH  |  First Published Feb 9, 2023, 12:17 PM IST

ಬೆಂಗಳೂರಿನಲ್ಲಿ ನಡೆಯಲಿರೋ ಏರ್ ಶೋ-2023 ಹಾಗೂ ಜಿ-20 ಶೃಂಗಸಭೆ ಹಿನ್ನಲೆಯಲ್ಲಿ ಸಿಲಿಕಾನ್‌ ಸಿಟಿಯಲ್ಲಿರುವ ಬಹುತೇಕ ಹೋಟೆಲ್‌ ಬುಕಿಂಗ್‌ ಭರ್ತಿಯಾಗಿವೆ.


ಬೆಂಗಳೂರು (ಫೆ.09): ಬೆಂಗಳೂರಿನಲ್ಲಿ ನಡೆಯಲಿರೋ ಏರ್ ಶೋ-2023 ಹಾಗೂ ಜಿ-20 ಶೃಂಗಸಭೆ ಹಿನ್ನಲೆಯಲ್ಲಿ ಸಿಲಿಕಾನ್‌ ಸಿಟಿಯಲ್ಲಿರುವ ಬಹುತೇಕ ಹೋಟೆಲ್‌ಳಿಗೆ ಭಾರಿ ಪ್ರಮಾಣದಲ್ಲಿ ಬೇಡಿಕೆ ಬಂದಿದೆ. ಈಗಾಗಲೇ ನಾಲ್ಕು ದಿನಗಳ ಮುಂಚೆಯೇ ಬಹುತೇಕ ಹೋಟೆಲ್ ಬುಕಿಂಗ್‌ ಭರ್ತಿಯಾಗಿವೆ.

ಕೋವಿಡ್‌ ನಂತರದ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಹೋಟೆಲ್‌ ಉದ್ಯಮಗಳಿಗೆ ಭಾರಿ ಪ್ರಮಾಣದಲ್ಲಿ ಚೇತರಿಕೆ ಕಂಡುಬಂದಿದೆ. ಕಳೆದ ಮೂರು ವರ್ಷಗಳಲ್ಲಿ ಕೋವಿಡ್‌ ನಂತರ ಬೆಂಗಳೂರಿನಲ್ಲಿ ಫೆ.13ರಿಂದ ಫೆ.17ರವರೆಗೆ ನಡೆಯಲಿರುವ 14ನೇ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಹಾಗೂ ಜಿ-20 ಶೃಂಗಸಭೆ ಕಾರ್ಯಕ್ರಮಗಳಿಗೆ ಆತಿಥ್ಯವಹಿಸಿದೆ. ಜಿ-20 ಕೆಲವು ಸಮ್ಮೇಳನಗಳು ಬೆಂಗಳೂರಿನಲ್ಲಿ ಆಯೋಜನೆ ಮಾಡಲಾಗುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗಮಿಸುವ ಉದ್ಯಮಿಗಳಿಗೆ ಹಾಗೂ ಗಣ್ಯರಿಗೆ ತಂಗಲು ಅನುಕೂಲ ಆಗುವಂತೆ ಹೋಟೆಲ್‌ಗಳನ್ನು ಬುಕಿಂಗ್‌ ಮಾಡಲಾಗಿದೆ. ಒಂದೇ ಅವಧಿಯಲ್ಲಿ ಎರಡು ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಹೋಟೆಲ್‌ಗಳ ಬುಂಕಿಗ್ ಭರ್ತಿಯಾಗುವೆ ಎಂದು ತಿಳಿದುಬಂದಿದೆ. 

Tap to resize

Latest Videos

ಇನ್ಮುಂದೆ ಈ ದೇಶಗಳ ಪ್ರವಾಸಿಗರು ಸಹ ಭಾರತದಲ್ಲಿ ಯುಪಿಐ ಮೂಲಕ ಪೇಮೆಂಟ್‌ ಮಾಡಬಹುದು..!

ಡೈನಾಮಿಕ್‌ ಹೋಟೆಲ್‌ಗಳ ರೂಮ್‌ ಬಾಡಿಗೆ ಹೆಚ್ಚಳ: ಇನ್ನು ಬೆಂಗಳೂರಿನಲ್ಲಿ ಸುಮಾರು 65 ಫೈವ್‌ಸ್ಟಾರ್‌ ಹೋಟೆಲ್‌ಗಳಿದ್ದು ಎಲ್ಲ ಹೋಟೆಲ್‌ಗಳಲ್ಲಿ ರೂಮುಗಳು ಭರ್ತಿಯಾಗಿವೆ. ಇನ್ನು ತ್ರಿಸ್ಟಾರ್‌ ಹೋಟೆಲ್‌ಗಳಲ್ಲಿಯೂ ಹೋಟೆಲ್‌ ರೂಮುಗಳು ಶೇ.80 ಬುಕಿಂಗ್‌ ಪೂರ್ಣಗೊಂಡಿವೆ. ಇನ್ನು ಡೈನಾಮಿಕ್‌ ಕ್ಲಾಸ್‌ ಹೋಟೆಲ್‌ಗಳ ರೂಮುಗಳ ಬಾಡಿಗೆ ದರವನ್ನು ಕೂಡ ಈಗ ಸ್ವಲ್ಪ ಪ್ರಾಣದಲ್ಲಿ ಹೆಚ್ಚು ಮಾಡಲಾಗಿದೆ. ಆದರೂ, ಹೋಟೆಲ್‌ಗಳ ರೂಮುಗಳಿಗೆ ಭಾರಿ ಬೇಡಿಕೆ ಇರುವ ಹಿನ್ನೆಲೆಯಲ್ಲಿ ದುಬಾರಿ ಬಾಡಿಗೆಗೂ ಕೂಡ ಗ್ರಾಹಕರು ಆಗಮಿಸುತ್ತಿದ್ದಾರೆ ಎಂದು ಬೆಂಗಳೂರು ಮಹಾನಗರ ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ತಿಳಿಸಿದ್ದಾರೆ.

ನೇರ ಬರುವ ಗ್ರಾಹಕರಿಗೆ ರೂಮ್‌ ಲಭ್ಯವಿಲ್ಲ: ರಾಜಧಾನಿಯ ಹೋಟೆಲ್ ಗಳಿಗೆ ಹೆಚ್ಚಿದ ಬೇಡಿಕೆ ಬಂದಿದೆ. ಆದ್ದರಿಂದ ಬೆಂಗಳೂರಿನ ಬಹುತೇಕ ಹೋಟೆಲ್  ರೂಂಗಳು ಭರ್ತಿಯಾಗಿವೆ. ಬೆಂಗಳೂರಿನಲ್ಲಿ‌ ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ಏರ್ ಶೋ ನಡೆಯುತ್ತದೆ. ಹೀಗಾಗಿ ಪಂಚತಾರ, ತ್ರಿ ಸ್ಟಾರ್ ಹೋಟೆಲ್ ಗಳು ಬಹುತೇಕ ಫುಲ್ ಆಗಿವೆ. ಹೊರ ರಾಜ್ಯ ಹಾಗೂ ವಿದೇಶಗಳಿಂದ ಗಣ್ಯರು ಆಗಮಿಸಲಿದ್ದು ಹೋಟೆಲ್ ರೂಮ್‌ಗಳು ಈಗ ಬುಕಿಂಗ್‌ ಮಾಡಲು ಲಭ್ಯ ಇಲ್ಲದಂತಾಗಿವೆ. ಇನ್ನು ಅಡ್ವಾನ್ಸ್‌ ಬುಕಿಂಗ್‌ ಮಾಡದೇ ಹೋಟೆಲ್‌ನಲ್ಲಿ ಬಂದು ಉಳಿದುಕೊಳ್ಳುತ್ತಿದ್ದ ಗ್ರಾಹಕರಿಗೆ ಈಗ ಅವಕಾಶ ಇಲ್ಲದಂತಾಗಿದೆ.

ವಿದೇಶಿಗರಿಗೂ ಯುಪಿಐ ಪಾವತಿಗೆ ಅವಕಾಶ: ಭಾರತಕ್ಕೆ ಭೇಟಿ ನೀಡುವವರು ದೇಶದಲ್ಲಿ ಶಾಪಿಂಗ್ ಮಾಡಲು ಯುಪಿಐ ಅಥವಾ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಗೆ ಪ್ರವೇಶ ಹೊಂದಿರುತ್ತಾರೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮುಖ್ಯಸ್ಥ ಶಕ್ತಿಕಾಂತ ದಾಸ್ ಬುಧವಾರ ಮಾಹಿತಿ ನೀಡಿದ್ದಾರೆ. ಪ್ರಾರಂಭದಲ್ಲಿ ಫೆ.13ರಿಂದ ಫೆ.17ರವರೆಗೆ ನಡೆಯಲಿರುವ ಜಿ - 20 ಶೃಂಗ ಸಭೆಗೆ ಆಗಮಿಸುವ ದೇಶಗಳ ಪ್ರವಾಸಿಗರಿಗೆ ಹಾಗೂ ಕೆಲವು ವಿಮಾನ ನಿಲ್ದಾಣಗಳಿಗೆ ಆಗಮಿಸುವವರಿಗೆ ಮಾತ್ರ ಯುಪಿಐ ಪಾವತಿಗಳನ್ನು ಮಾಡಲು ಅನುಮತಿಸಲಾಗುತ್ತಿದೆ. 

Bengaluru: ಏರ್‌ ಶೋ ಸಂದರ್ಭದಲ್ಲಿ ತುರ್ತು ಪರಿಸ್ಥಿತಿ ಎದುರಿಸಲು ‘ಜಿಯೋಸ್ಪೇಷಿಯಲ್‌’ ತಂತ್ರ!

ಭಾರತದ ಆದಾಯ ಬಳಕೆಗೆ ಸುವರ್ಣಾವಕಾಶ: ಶೃಂಗಸಭೆಗೆ ಆಗಮಿಸುವ 10 ದೇಶಗಳಲ್ಲಿನ ಅನಿವಾಸಿ ಭಾರತೀಯರು (NRIಗಳು) ತಮ್ಮ ಭಾರತದ ಫೋನ್ ಸಂಖ್ಯೆಯನ್ನು ಅವಲಂಬಿಸದೆಯೇ ವಹಿವಾಟುಗಳಿಗಾಗಿ ಯುಪಿಐ ಸೇವೆಗಳನ್ನು ಬಳಸಬಹುದು. ಸಿಂಗಾಪುರ, ಅಮೆರಿಕ (ಯುಎಸ್), ಆಸ್ಟ್ರೇಲಿಯಾ, ಕೆನಡಾ, ಹಾಂಗ್ ಕಾಂಗ್, ಓಮನ್, ಕತಾರ್, ಸೌದಿ ಅರೇಬಿಯಾ, ಯುಎಇ ಮತ್ತು ಯುಕೆ ಸೇರಿ 10 ದೇಶಗಳಿಗೆ ಅವಕಾಶ ನೀಡಲಾಗಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ ಪ್ರಕಾರ, ಅಂತಾರಾಷ್ಟ್ರೀಯ ಮೊಬೈಲ್ ಸಂಖ್ಯೆಗಳೊಂದಿಗೆ NRE/NRO (ನಾನ್‌ ರೆಸಿಡೆಂಟ್‌ ಎಕ್ಸ್‌ಟರ್ನಲ್‌ ಮತ್ತು ನಾನ್ ರೆಸಿಡೆಂಟ್ ಆರ್ಡಿನರಿ) ಖಾತೆಗಳು ಯುಪಿಐ ಬಳಸಿ ವಹಿವಾಟು ನಡೆಸಬಹುದು. ಎನ್‌ಆರ್‌ಇ ಖಾತೆಯು ಎನ್‌ಆರ್‌ಐಗಳಿಗೆ ವಿದೇಶಿ ಗಳಿಕೆಯನ್ನು ಭಾರತಕ್ಕೆ ವರ್ಗಾಯಿಸಲು ಸಹಾಯ ಮಾಡುತ್ತದೆ. ಆದರೆ ಎನ್‌ಆರ್‌ಒ ಖಾತೆಯು ಭಾರತದಲ್ಲಿ ಗಳಿಸಿದ ಆದಾಯವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

click me!